War Movie: ಬಿ-ಟೌನ್​, ಟಾಲಿವುಡ್​, ಕಾಲಿವುಡ್​ನಲ್ಲಿ ವಾರ್​: ಯುದ್ಧಕ್ಕೆ ನಿಂತ ಹೃತಿಕ್​-ಟೈಗರ್​ ಶ್ರಾಫ್​..!

War Movie: ಯಶ್​ ರಾಜ್​​ ಫಿಲ್ಸ್ಮ್​ ನಿರ್ಮಾಣದ ವಾರ್​ ಸಿನಿಮಾದಲ್ಲಿ ಹೃತಿಕ್​ ಹಾಗೂ ಟೈಗರ್​ ಶ್ರಾಫ್​ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಸಿದ್ಧಾರ್ಥ್​ ಆನಂದ್​ ನಿರ್ದೇಶನದ ಈ ಸಿನಿಮಾ ಅಕ್ಟೋಬರ್​ 2ಕ್ಕೆ ತೆರೆ ಕಾಣಲಿದೆ.

Anitha E | news18
Updated:August 12, 2019, 3:58 PM IST
War Movie: ಬಿ-ಟೌನ್​, ಟಾಲಿವುಡ್​, ಕಾಲಿವುಡ್​ನಲ್ಲಿ ವಾರ್​: ಯುದ್ಧಕ್ಕೆ ನಿಂತ ಹೃತಿಕ್​-ಟೈಗರ್​ ಶ್ರಾಫ್​..!
ವಾರ್​ ಸಿನಿಮಾದ ಪೋಸ್ಟರ್​
  • News18
  • Last Updated: August 12, 2019, 3:58 PM IST
  • Share this:
ದಕ್ಷಿಣ ಭಾರತದ ಸಿನಿಮಾಗಳನ್ನ ರಿಮೇಕ್​ ಮಾಡುತ್ತಿದ್ದ ಬಾಲಿವುಡ್​ ಮಂದಿ ಈಗ ಅವರಿಗಾಗಿಯೇ ಚಿತ್ರಗಳನ್ನು ಮಾಡುವತ್ತ ಮುಖ ಮಾಡುತ್ತಿದ್ದಾರೆ. ಹೌದು, ಹಿಂದಿ ಸಿನಿಮಾಗಳನ್ನು ಆಂಧ್ರ ಹಾಗೂ ತಮಿಳುನಾಡಿನಲ್ಲಿ ಬೇರೆಯವರು ಡಬ್​ ಮಾಡಿ ಬಿಡುಗೆಡೆ ಮಾಡಲಾಗುತ್ತಿತ್ತು. ಆದರೆ ಈಗ ಬಿ-ಟೌನ್​ನ ನಿರ್ಮಾಪಕರೇ ಸಿನಿಮಾಗಳನ್ನು ಡಬ್​ ಮಾಡಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ.

ಯಶ್​ ರಾಜ್​​ ಫಿಲ್ಸ್ಮ್​ ನಿರ್ಮಾಣದ 'ವಾರ್​' ಸಿನಿಮಾದಲ್ಲಿ ಹೃತಿಕ್​ ಹಾಗೂ ಟೈಗರ್​ ಶ್ರಾಫ್​ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಸಿದ್ಧಾರ್ಥ್​ ಆನಂದ್​ ನಿರ್ದೇಶನದ ಈ ಸಿನಿಮಾ ಅಕ್ಟೋಬರ್​ 2ಕ್ಕೆ ತೆರೆ ಕಾಣಲಿದೆ.

Hrithik Roshan and Tiger Shroff Look Ready for an Epic Fight in New War Poster
'ವಾರ್​' ಚಿತ್ರದ ಹಿಂದಿ ಪೋಸ್ಟರ್​


ಈ ಸಿನಿಮಾವನ್ನು ಹಿಂದಿ ಸೇರಿದಂತೆ ಮೂರು ಭಾಷೆಗಳಲ್ಲಿ ನಿರ್ಮಿಸಲಾಗುತ್ತಿದೆ. ಜುಲೈ 14ರಂದು ಈ ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು, ಈಗ ಇದರ ಪೋಸ್ಟರ್​ ರಿಲೀಸ್​ ಮಾಡಲಾಗಿದೆ.

ಇದನ್ನೂ ಓದಿ: ಲೀಕ್​ ಆಯ್ತು 'ಕೂಲಿ ನಂ 1' ಚಿತ್ರದಲ್ಲಿ ವರುಣ್-ಸಾರಾರ ಫಸ್ಟ್​ಲುಕ್​..!

ಹಿಂದಿಯ ಜತೆಗೆ ತೆಲುಗು ಹಾಗೂ ತಮಿಳು ಪೋಸ್ಟರ್​ ಅನ್ನೂ ಚಿತ್ರತಂಡ ಬಿಡುಗಡೆ ಮಾಡಿದೆ. ಅದನ್ನು ಖ್ಯಾತ ಸಿನಿಮಾ ವ್ಯವಹಾರಗಳ ವಿಶ್ಲೇಷಕ ತರನ್​ ಆದರ್ಶ್​ ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿ ವಾಣಿ ಕಪೂರ್​ ಅಭಿನಯಿಸಿದ್ದು, ಅಶುತೋಶ್​ ರಾಣಾ, ಅನುಪ್ರಿಯಾ ಗೋಯೆಂಕ್​ ಹಾಗೂ ದೀಪಾನ್ನಿತಾ ಶರ್ಮಾ ಸಹ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ: ವೈರಲ್​ ಆಗುತ್ತಿದೆ ರಾಕಿಂಗ್​ ಗಂಡನ ತಾಳಕ್ಕೆ ಕುಣಿದ ರಾಧಿಕಾ ಪಂಡಿತ್ ವಿಡಿಯೋ​..!

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!

First published: August 12, 2019, 3:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading