War 2: ವಾರ್ 2 ಚಿತ್ರದಲ್ಲಿ ಟೈಗರ್- ಹೃತಿಕ್​ ರೋಷನ್​: ಮತ್ತೊಮ್ಮೆ ಒಂದಾದ ಗುರು-ಶಿಷ್ಯರು

ವಾರ್ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ನನ್ನ ಪಾತ್ರ ಸತ್ತಿದ್ದು, ಅದಕ್ಕೆ ಹೇಗೆ ಮರುಜೀವ ನೀಡುತ್ತಾರೆ ಎನ್ನುತ್ತೀರಾದರೆ, ನನ್ನ ಪಾತ್ರದ ಮೃತದೇಹವನ್ನು ನೀವು ಸಿನಿಮಾದಲ್ಲಿ ನೋಡಿದ್ರಾ? ಅದಕ್ಕೇ ಹೇಳುತ್ತಿರುವುದು ನಮ್ಮಿಬ್ಬರನ್ನೂ ಮತ್ತೆ ತೆರೆಯ ಮೇಲೆ ತರುವುದಕ್ಕೆ ಕಥೆಯಲ್ಲಿ ಸಾಕಷ್ಟು ಅವಕಾಶಗಳಿವೆ` ಎಂದು ವಾರ್ 2 ಮುಂದೆ ಸೆಟ್ಟೇರುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ ಟೈಗರ್ ಶ್ರಾಫ್.

ವಾರ್​ 2 ಸಿನಿಮಾದಲ್ಲಿ ಹೃತಿಕ್​ ಹಾಗೂ ಟೈಗರ್​ ಶ್ರಾಫ್​

ವಾರ್​ 2 ಸಿನಿಮಾದಲ್ಲಿ ಹೃತಿಕ್​ ಹಾಗೂ ಟೈಗರ್​ ಶ್ರಾಫ್​

  • Share this:
ವಾರ್... 2019ರಲ್ಲಿ ರಿಲೀಸ್ ಆದ ಸೂಪರ್​ ಹಿಟ್​ ಸಿನಿಮಾ. ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿದ್ದ ಈ ಆ್ಯಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಬಾಲಿವುಡ್ ಸೂಪರ್​ಸ್ಟಾರ್ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ತೆರೆ ಮೇಲೆ ಗುರು-ಶಿಷ್ಯರಾಗಿ ಕಾಣಿಸಿಕೊಂಡಿದ್ದ ಈ ಜೋಡಿ, ಆಫ್ ಸ್ಕ್ರೀನ್‍ನಲ್ಲೂ ಗುರು-ಶಿಷ್ಯರಂತೆ ಇರುತ್ತಾರಂತೆ. ಅದಂರೆ ನಿಜ ಜೀವನದಲ್ಲೂ ಹೃತಿಕ್ ರೋಷನ್ ಅವರನ್ನು ಟೈಗರ್ ಶ್ರಾಫ್ ಗುರು ಎನ್ನುತ್ತಾರೆ.  ಸದ್ಯದ ಮಾಹಿತಿ ಪ್ರಕಾರ ವಾರ್ 2 ಸೆಟ್ಟೇರುವ ಬಗ್ಗೆ ನಟ ಟೈಗರ್ ಶ್ರಾಫ್ ಭರವಸೆ ವ್ಯಕ್ತಪಡಿಸಿದ್ದಾರೆ. ಹೌದು, ಟೈಗರ್ ಶ್ರಾಫ್ ಇತ್ತೀಚೆಗಷ್ಟೇ ಈ ಕುರಿತ ಬ್ರೇಕಿಂಗ್ ಸುದ್ದಿ ನೀಡಿದ್ದಾರೆ. ಆದರೆ ಟೈಗರ್ ಶ್ರಾಫ್ ನಟಿಸಿದ್ದ ಖಾಲಿದ್ ಪಾತ್ರ ವಾರ್ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ಸಾಯುತ್ತೆ ಅಲ್ವಾ ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಆದರೆ ಅಲ್ಲೂ ಟ್ವಿಸ್ಟ್ ನೀಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಟೈಗರ್.

ವಾರ್ ಸೀಕ್ವೆಲ್ ಬಗ್ಗೆ ಮಾತನಾಡಿರುವ ಟೈಗರ್ ಶ್ರಾಫ್, `ವಾರ್ ನಾವು ಊಹಿಸಿದ್ದಕ್ಕಿಂತ  ಮತ್ತೊಂದು ಹಂತಕ್ಕೆ ಹೋಗಿತ್ತು ವಾರ್​ ಸಿನಿಮಾ. ಇನ್ನು ನನ್ನ ಐಡಲ್ ಹೃತಿಕ್ ರೋಷನ್ ಅವರ ಜೊತೆ ತೆರೆ ಹಂಚಿಕೊಂಡಿದ್ದ ಅನುಭವವಂತೂ ನಾನು ಜೀವನ ಪರ್ಯಂತ ಮರೆಯಲು ಸಾಧ್ಯವೇ ಇಲ್ಲ. ನನ್ನ ಜೀವನದಾದ್ಯಂತ ಅವರು ನನಗೆ ಸ್ಫೂರ್ತಿಯಾಗಿದ್ದಾರೆ. ಇನ್ನು ವಾರ್ ಚಿತ್ರದಲ್ಲಿ ಅವರೊಂದಿಗೆ ನಟಿಸಿದ್ದು, ಅವರ ಜತೆ ಕೆಲಸ ಮಾಡಿದ್ದು ನನಗೆ ಅವರಿಂದ ಹಲವು ವಿಷಯಗಳನ್ನು ಕಲಿಯಲು ಸಹಕಾರಿಯಾಗಿತ್ತು ಎಂದಿದ್ದಾರೆ ಟೈಗರ್​.


ಇನ್ನು ವಾರ್ ಚಿತ್ರದ ಕ್ಲೈಮ್ಯಾಕ್ಸ್‍ನಲ್ಲಿ ನನ್ನ ಪಾತ್ರ ಸತ್ತಿದ್ದು, ಅದಕ್ಕೆ ಹೇಗೆ ಮರುಜೀವ ನೀಡುತ್ತಾರೆ ಎನ್ನುತ್ತೀರಾದರೆ, ನನ್ನ ಪಾತ್ರದ ಮೃತದೇಹವನ್ನು ನೀವು ಸಿನಿಮಾದಲ್ಲಿ ನೋಡಿದ್ರಾ? ಅದಕ್ಕೇ ಹೇಳುತ್ತಿರುವುದು ನಮ್ಮಿಬ್ಬರನ್ನೂ ಮತ್ತೆ ತೆರೆಯ ಮೇಲೆ ತರುವುದಕ್ಕೆ ಕಥೆಯಲ್ಲಿ ಸಾಕಷ್ಟು ಅವಕಾಶಗಳಿವೆ` ಎಂದು ವಾರ್ 2 ಮುಂದೆ ಸೆಟ್ಟೇರುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ ಟೈಗರ್ ಶ್ರಾಫ್.


ಮತ್ತೊಂದೆಡೆ ವಾರ್ ಸಿನಿಮಾ ನಿರ್ಮಿಸಿದ್ದ ಯಶ್ ರಾಜ್ ಫಿಲ್ಮ್ಸ್ ಅವರೇ ವಾರ್ ಸೀಕ್ವೆಲ್​ ಬಗ್ಗೆ ಈಗಾಗಲೇ ಸಿದ್ಧತೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಹಾಗಂತ ಈ ವರ್ಷವೇ ವಾರ್ 2 ಶುರು ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ಈಗ ತುಂಬಾ ಬ್ಯುಸಿಯಾಗಿದ್ದಾರೆ. ಹೀರೋಪಂತಿ 2 ಸಿನಿಮಾದ ರಿಲೀಸ್ ದಿನಾಂಕ ಸಹ ಪ್ರಕವಾಗಿದೆ. ಇದೇ ವರ್ಷ ಡಿ. 3ಕ್ಕೆ ಈ ಚಿತ್ರ ರಿಲೀಸ್​ ಆಗಲಿದೆ.
ಟೈಗರ್ ಶ್ರಾಫ್ ಸದ್ಯ ಹೀರೋಪಂತಿ 2 ಹಾಗೂ ಭಾಗಿ 4 ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಮತ್ತೊಂದೆಡೆ ಹೃತಿಕ್ ರೋಷನ್ ಕ್ರಿಷ್ 4 ಹಾಗೂ ಫೈಟರ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿಯೇ ಹಾಗೇನಾದರೂ ವಾರ್ 2 ಸೆಟ್ಟೇರುತ್ತೆ ಅಂದರೂ 2022ರವರೆಗೂ ಕಾಯಲೇಬೇಕು.
Published by:Anitha E
First published: