Pawandeep Rajan: ಇಂಡಿಯನ್ ಐಡಲ್ 12 ಸ್ಪರ್ಧೆಗಳಿಗೆ ಹೃತ್ತಿಕ್ ರೋಷನ್ ಕುಟುಂಬದಿಂದ ಚಿನ್ನದ ಸರ ಉಡುಗೊರೆ

Hrithik Roshan: ನನಗೆ ಬಹಳ ಸಂತೋಷವಾಗಿದೆ. ನನ್ನ ಸಂತೋಷವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸಿದ್ದೇನೆ.  ಇದು ಒಂದು ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ. ಎಂದಿದ್ದಾರೆ.

ಹೃತಿಕ್ ಕುಟುಂಬದ ಜೊತೆ ಪವನ್ ದೀಪ್ ರಾಜನ್

ಹೃತಿಕ್ ಕುಟುಂಬದ ಜೊತೆ ಪವನ್ ದೀಪ್ ರಾಜನ್

  • Share this:
ಇಂಡಿಯನ್ ಐಡಲ್ 12 (Indian Idol 12)ವಿಜೇತ ಪವನ್ ದೀಪ್ ರಾಜನ್(Pawandeep Rajan) ಮತ್ತು ರನ್ನರ್ ಅಪ್ ಅರುಣಿತಾ ಕಂಜಿಲಾಲ್ ರಿಯಾಲಿಟಿ ಶೊ ಅಭಿಮಾನಿಗಳ ನೆಚ್ಚಿನ ಜೋಡಿ.ಕಾರ್ಯಕ್ರಮದಲ್ಲಿ ಅವರ ಅದ್ಭುತ  ಪ್ರದರ್ಶನ ಮತ್ತು ಅವರ ಜೋಡಿಗೆ ಪ್ರತಿಯೊಬ್ಬರು ಮನಸೋತಿದ್ದಾರೆ.  ಇಂಡಿಯನ್ ಐಡಲ್ 12 ಮುಗಿದ ನಂತರ, ಇಬ್ಬರನ್ನು ವಿವಿಧ ಕಾರ್ಯಕ್ರಮಗಳು ಮತ್ತು ರಿಯಾಲಿಟಿ ಶೋಗಳಿಗೆ  ಸಹ ಆಹ್ವಾನಿಸಲಾಗಿದೆ. ಇತ್ತೀಚೆಗೆ, ಇವರಿಬ್ಬರು ಬಾಲಿವುಡ್ ನಟ ಹೃತಿಕ್ ರೋಷನ್(Hrithk Roshan) ಮತ್ತು ಅವರ ತಂದೆ ರಾಕೇಶ್ ರೋಷನ್ (Rakesh Roshan)ಮತ್ತು ತಾಯಿ  ಪಿಂಕಿ ರೋಷನ್ ಅವರನ್ನು ಮುಂಬೈನ ತಮ್ಮ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ತಮ್ಮ ಭೇಟಿಯ ಬಗ್ಗೆ ಹಂಚಿಕೊಂಡ ಪವನ್ ದೀಪ್, ರಾಜನ್ ರಾಕೇಶ್ ಜಿ ಮತ್ತು ಪಿಂಕಿ ಜೀ ಇಬ್ಬರೂ ನಮ್ಮನ್ನ ನೋಡಿ ನಿಜವಾಗಿಯೂ ಭಾವುಕರಾದರು ಮತ್ತು ನಮ್ಮಿಬ್ಬರನ್ನು ಅಪ್ಪಿಕೊಂಡು ಅಭಿನಂದನೆ ತಿಳಿಸಿದ್ದಾರೆ. ನಮಗೂ ಸಂತೋಷವಾಯಿತು.  ನಾವು ಕೆಲವು ಹಾಡುಗಳನ್ನು  ಅವರಿಗಾಗಿ ಹಾಡಿದ್ದೇವೆ ಮತ್ತು ಅವರು ನಮ್ಮ ಹಾಡುಗಳನ್ನು ಆನಂದಿಸಿದ್ದಾರೆ ಎಂದಿದ್ದಾರೆ. ಅಲ್ಲದೇ ಹೃತಿಕ್ ರೋಷನ್ ತಾಯಿ ಪವನ್ ದೀಪ್ ಅವರಿಗೆ ರುದ್ರಾಕ್ಷಿ ಇರುವ  ಚಿನ್ನದ ಸರವನ್ನು ಮತ್ತು ಲಕ್ಷ್ಮಿ ದೇವಿಯ ನಾಣ್ಯಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಪವನ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಸೋನಿ ಟಿವಿಯಲ್ಲಿ 'ದಿ ಗ್ರೇಟೆಸ್ಟ್ ಫಿನಾಲೆ ಎವರ್  ಎಂದು ಬಿರುದು ಪಡೆದ  12 ಗಂಟೆಗಳ ಸಂಗೀತ ಸಂಭ್ರಮದ ಕೊನೆಯ ಸ್ಪರ್ಧೆಯಲ್ಲಿ  ಪವನ್ ದೀಪ್ ರಾಜನ್ ಇಂಡಿಯನ್ ಐಡಲ್ 12 ರ ವಿಜೇತರಾಗಿ ಟ್ರೋಫಿ ಮುಡುಗೇರಿಸಿಕೊಂಡಿದ್ದಾರೆ. ಅನು ಮಲಿಕ್, ಹಿಮೇಶ್ ರೇಶಮಿಯಾ ಮತ್ತು ಸೋನು ಕಕ್ಕರ್ ತೀರ್ಪುಗಾರರಾಗಿದ್ದ ಈ ಇಂಡಿಯನ್ ಐಡಲ್ ಸೀಸನ್ 12 ರ ಪ್ರಶಸ್ತಿಯನ್ನು ಗೆದ್ದಿರುವುದನ್ನ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಪವನ್ ಹೇಳಿದ್ದಾರೆ.

ಇದನ್ನೂ ಓದಿ: ಇಷ್ಟು ದಿನ ಆಯಿತು, ಯಾವುದೇ ಕಾಂಟ್ರವರ್ಸಿ ಇಲ್ಲ... ಹೇಗನಿಸುತ್ತಿದೆ: ಕಪಿಲ್ ಶರ್ಮಾ ತಮಾಷೆಗೆ ಕಂಗನಾ ಪ್ರತಿಕ್ರಿಯೆ

ನನಗೆ ಬಹಳ ಸಂತೋಷವಾಗಿದೆ. ನನ್ನ ಸಂತೋಷವನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನನ್ನ ನಾನು ತುಂಬಾ ಅದೃಷ್ಟಶಾಲಿ ಎಂದು ಭಾವಿಸಿದ್ದೇನೆ.  ಇದು ಒಂದು ಜವಾಬ್ದಾರಿ ಎಂದು ತಿಳಿದುಕೊಂಡಿದ್ದೇನೆ. ನನ್ನ ಸಂಗೀತದ ಕಲಿಕೆಯನ್ನು ಮುಂದುವರೆಸಿಕೊಂಡು ಹೋಗುತ್ತದೆ. ಈ ಗೆಲುವು  ನನಗೆ ಕೆಲಸ ಮಾಡಲು ಆತ್ಮವಿಶ್ವಾಸವನ್ನು  ಹೆಚ್ಚು ಮಾಡಿದೆ. ಆಡಿಷನ್ ಸಮಯದಲ್ಲಿ ನಾನು ತುಂಬಾ ನರ್ವಸ್ ಆಗಿದ್ದೆ, ನಾನು ಕೂಡ ಆಯ್ಕೆಯಾಗುವುದಿಲ್ಲ ಎಂದು ಭಾವಿಸಿದ್ದೆ. ಆದರೆ  ರಿಯಾಲಿಟಿ ಶೋ ಪ್ರಯಾಣ ಚೆನ್ನಾಗಿತ್ತು. ನಾನು ತೀರ್ಪುಗಾರರು ಮತ್ತು ನನ್ನ ತಂಡದಿಂದ ಸಾಕಷ್ಟು ಕಲಿತಿದ್ದೇನೆ. ಇಂಡಿಯನ್ ಐಡಲ್ ನನ್ನ ಕನಸುಗಳಿಗೆ ಸೇತುವೆಯಂತೆ ಕೆಲಸ ಮಾಡಿದೆ. ಇದು ನನ್ನ ಜೀವನದ ಅವಿಸ್ಮರಣೀಯ ದಿನ.  ಅಭಿಮಾನಿಗಳು ನನಗೆ ಬಹಳ ಪ್ರೀತಿಯನ್ನು ನೀಡಿದ್ದಾರೆ. ಇದು ನನಗೆ ಒಳ್ಳೆಯ ಅವಕಾಶ ಎಂದು ನಾನು ಭಾವಿಸುತ್ತೇನೆ ಎಂದು ರಾಜನ್  ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಸ್ಪರ್ಧೆಯಲ್ಲಿ  ವಿಜೇತನಾದ ಗಾಯಕನಿಗೆ ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್ ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಿಂದ 25 ಲಕ್ಷ ರೂಗಳ ಚೆಕ್ ಅನ್ನು ನೀಡಲಾಗಿದೆ. ಫೈನಲಿಸ್ಟ್‌ಗಳಾದ ಅರುಣಿತಾ ಕಂಜಿಲಾಲ್ ಮತ್ತು ಸಾಯ್ಲಿ ಕಾಂಬ್ಳೆ ಅವರನ್ನು ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಎಂದು ಘೋಷಣೆ ಮಾಡಲಾಗಿತ್ತು. ಅವರಿಗೆ ತಲಾ 5 ಲಕ್ಷ ರೂ ನೀಡಲಾಗಿದೆ. ಮೂರನೇ ಮತ್ತು ನಾಲ್ಕನೇ ರನ್ನರ್ಸ್ ಅಪ್, ಮೊಹ್ಮದ್. ಡ್ಯಾನಿಶ್ ಮತ್ತು ನಿಹಾಲ್ ತೌರೋ ಅವರಿಗೆ ತಲಾ 3 ಲಕ್ಷ ರೂ ನೀಡಲಾಗಿದೆ.
Published by:Sandhya M
First published: