• Home
  • »
  • News
  • »
  • entertainment
  • »
  • Fighter: ಹೃತಿಕ್​ ರೋಷನ್- ದೀಪಿಕಾ ಪಡುಕೋಣೆ ಅಭಿನಯದ ಫೈಟರ್​ ಸಿನಿಮಾದ ರಿಲೀಸ್​ ದಿನಾಂಕ ಫಿಕ್ಸ್​

Fighter: ಹೃತಿಕ್​ ರೋಷನ್- ದೀಪಿಕಾ ಪಡುಕೋಣೆ ಅಭಿನಯದ ಫೈಟರ್​ ಸಿನಿಮಾದ ರಿಲೀಸ್​ ದಿನಾಂಕ ಫಿಕ್ಸ್​

ಫೈಟರ್​ ಸಿನಿಮಾದಲ್ಲಿ ಹೃತಿಕ್ ಹಾಗೂ ದೀಪಿಕಾ

ಫೈಟರ್​ ಸಿನಿಮಾದಲ್ಲಿ ಹೃತಿಕ್ ಹಾಗೂ ದೀಪಿಕಾ

Hrithik Roshan - Deepika Padukone: ದೊಡ್ಡ ಬಜೆಟ್​ನ ಅದ್ಧೂರಿ ಸಿನಿಮಾ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರತಂಡ ಸಹ ಈಗ ರಿಲೀಸ್ ದಿನಾಂಕ ಫಿಕ್ಸ್​ ಮಾಡಿದೆ. ಹೌದು, ಗಣರಾಜ್ಯೋತ್ಸವದಂದು ಫೈಟರ್​ ಸಿನಿಮಾ ರಿಲೀಸ್ ಆಗಲಿದೆ.

  • Share this:

ದೀಪಿಕಾ ಪಡುಕೋಣೆ  (Deepika Padukone) ಹಾಗೂ ಹೃತಿಕ್ ರೋಷನ್  (Hrithik Roshan)​ಅಭಿನಯದ ಬಹುನಿರೀಕ್ಷಿತ ಸಿನಿಮಾ ಫೈಟರ್ (Fighter)​. ಇದೇ ಮೊದಲಬಾರಿಗೆ ಈ ಚಿತ್ರದಲ್ಲಿ ಈ ಜೋಡಿ ಒಟ್ಟಿಗೆ ನಟಿಸುತ್ತಿದ್ದಾರೆ.  ನಿರ್ದೇಶಕ ಸಿದ್ಧಾರ್ಥ್​ ಆನಂದ್​ ಅವರ ಬಿಗ್ ಬಜೆಟ್​ನ ಫೈಟರ್​ ಚಿತ್ರ ವೀಕ್ಷಕರಿಗೆ ಭರ್ಜರಿ ಆ್ಯಕ್ಷನ್​ ನೀಡಲಿದೆ. ಇತ್ತೀಚೆಗಷ್ಟೆ ಈ ಸಿನಿಮಾದ ಚಿತ್ರೀಕರಣ ಆರಂಭವಾಗಲಿರುವ ಬಗ್ಗೆ ಸುದ್ದಿ ಹೊರ ಬಿದ್ದಿತ್ತು. ಇನ್ನು ಈ ಸಿನಿಮಾದ ಟೈಟಲ್​ ಪ್ರಕಟಿಸಿದಾಗಲೇ ಈ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿತ್ತು. ಅಲ್ಲದೆ ಹೃತಿಕ್ ಹಾಗೂ ದೀಪಿಕಾ ಪಡುಕೋಣೆ ಕಾಂಬಿನೇಷನ್​ ಎಂದ ಮೇಲೆ ಕೇಳಬೇಕಾ..? ಅಭಿಮಾನಿಗಳು ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಕಾತರರಾಗಿದ್ದಾರೆ. 


ಈ ದೊಡ್ಡ ಬಜೆಟ್​ನ ಅದ್ಧೂರಿ ಸಿನಿಮಾ ನೋಡಲು ವೀಕ್ಷಕರು ಕಾಯುತ್ತಿದ್ದಾರೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಚಿತ್ರತಂಡ ಸಹ ಈಗ ರಿಲೀಸ್ ದಿನಾಂಕ ಫಿಕ್ಸ್​ ಮಾಡಿದೆ. ಹೌದು, ಗಣರಾಜ್ಯೋತ್ಸವದಂದು ಫೈಟರ್​ ಸಿನಿಮಾ ರಿಲೀಸ್ ಆಗಲಿದೆ. ಆದರೆ ಅದು 2022ರಲ್ಲಿ ಅಲ್ಲ. ಬದಲಾಗಿ 2023ರ ಗಣರಾಜ್ಯೋತ್ಸವಕ್ಕೆ ಫೈಟರ್​ ತೆರೆ ಮೇಲೆ ಫೈಟ್ ಮಾಡಲಿದ್ದಾನೆ.

Hritthik Roshaan, Deepika Padukone, war, bang bang, fighter, release date, first aerial action film, ಹೃತಿಕ್ ರೋಷನ್ ದೀಪಿಕಾ ಪಡುಕೋಣೆ, ಫೈಟರ್, ಬಾಲಿವುಡ್, Bollywood, Deepika Padukone, Fighter Movie, Hrithik Roshan, Siddarth anand, Hrithik Roshan and Deepika Padukones Film Fighter to Arrive on Republic Day ae
ಫೈಟರ್​ ಸಿನಿಮಾದಲ್ಲಿ ಹೃತಿಕ್ ಹಾಗೂ ದೀಪಿಕಾ


. ಈ ಚಿತ್ರತಂಡ ನೀಡಿದ್ದ ಮಾಹಿತಿ ಪ್ರಕಾರ 2022ರಲ್ಲಿ ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ ಕೊರೋನಾ ಲಾಕ್​ಡೌನ್​ನಿಂದಾಗಿ ಶೂಟಿಂಗ್ ಅನ್ನು ಮುಂದೂಲಾಗಿತ್ತು. ಇತ್ತೀಚೆಗಷ್ಟೆ ಈ ಸಿನಿಮಾದ ಶೂಟಿಂಗ್​ಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಹೃತಿಕ್ ಒಂದು ಪೋಸ್ಟ್​ ಮಾಡುವ ಮೂಲಕ ಸಿನಿಮಾ ಸೆಟ್ಟೇರಿದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಬಾಲಿವುಡ್​ ಹಂಕ್​ ಹೃತಿಕ್​ ರೋಷನ್  ಅವರ ಹುಟ್ಟುಹಬ್ಬದಂದು ಫೈಟರ್​ ಸಿನಿಮಾದ ಟೈಟಲ್​ ಲಾಂಚ್​ ಮಾಡಲಾಗಿತ್ತು.  ಹೃತಿಕ್ ರೋಷನ್ ಅವರು 47ನೇ ವಸಂತಕ್ಕೆ ಕಾಲಿಟ್ಟ ದಿನದಂದು ಫೈಟರ್​ ಸಹ ಹುಟ್ಟಿಕೊಂಡ. ಈ ಸಿನಿಮಾದಲ್ಲಿ ಮೈ ನವಿರೇಳಿಸುವ ಆ್ಯಕ್ಷನ್​ ಸೀಜಕೆನ್ಸ್​ಗಳಿರಲಿವೆಯಂತೆ. ಜೊತೆಗೆ ವೈಮಾನಿಕಾ ಸಾಹಸ ದೃಶ್ಯಗಳನ್ನೂ ಈ ಸಿನಿಮಾದಲ್ಲಿ ಪ್ಲಾನ್ ಮಾಡಲಾಗಿದೆಯಂತೆ.


ಇದನ್ನೂ ಓದಿ: Nabha Natesh: ಸೀರೆಗೂ ಸೈ, ತುಂಡುಡುಗೆಯೂ ಜೈ ಅಂತಾರೆ ಕನ್ನಡದ ನಟಿ ನಭಾ ನಟೇಶ್​..!


ಮಾರ್​ ಫ್ಲಿಕ್ಸ್​ ಪಿಕ್ಚರ್ಸ್​ ಬ್ಯಾನರ್​ ಅಡಿ ನಿರ್ಮಾಣವಾಗುತ್ತಿರುವ ಫೈಟರ್​ ಚಿತ್ರ ಮುಂದಿನ ವರ್ಷ ಸೆ.30ಕ್ಕೆ ತೆರೆ ಕಾಣಲಿದೆ ಎಂದು ಚಿತ್ರತಂಡ ಪ್ರಕಟಿಸಿತ್ತು. ಹೃತಿಕ್​ ಅಭಿನಯದ ಹಿಟ್ ಸಿನಿಮಾ ವಾರ್​ ಅನ್ನು ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್​ ಅವರೇ ಫೈಟರ್​ಗೂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.


ಇದನ್ನೂ ಓದಿ: Kangana Ranaut: ಲೇಸ್ ಬ್ರಾಲೆಟ್​ ಡ್ರೆಸ್​ನಲ್ಲಿ ಕಂಗನಾ: ಧಾಕಡ್​ ಸಿನಿಮಾದ ಪಾರ್ಟಿ ಫೋಟೋಗಳು ವೈರಲ್​


ಹೃತಿಕ್​ ರೋಷನ್​ ಕ್ರಿಷ್​ 4 ಹಾಗೂ ಧೂಮ್​ ಸರಣಿಯ 4ನೇ ಸಿನಿಮಾದಲ್ಲೂ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ವಾರ್ ಚಿತ್ರದ ಸೀಕ್ವಲ್​ ಹಾಗೂ ಒಂದು ಹಾಲಿವುಡ್ ಚಿತ್ರವೂ ಹೃತಿಕ್​ ಕೈಲಿದೆಯಂತೆ.

ಇದನ್ನೂ ಓದಿ: ಯಶ್​-ರಾಧಿಕಾ ಜೀವನದ ವಿಶೇಷ ದಿನ: ವಿಡಿಯೋ ಹಂಚಿಕೊಂಡ ನಟಿ ಅಭಿಮಾನಿಗಳಿಗೆ ಹೇಳಿದ್ದು ಹೀಗೆ..!

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ. ಹೀಗಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್​​ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ನಿತ್ಯ ಹೊರಗೆ ಹೋದರೆ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಮನೆಗೆ ಬಂದ ಕೂಡಲೆ ಕೈ ತೊಳೆಯುವುದನ್ನು ಮರೆಯಬೇಡಿ. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

Published by:Anitha E
First published: