• Home
  • »
  • News
  • »
  • entertainment
  • »
  • Gandhadagudi Review: ಹುಟ್ಟಿದ ಮೇಲೆ ಸಾಯಲೇಬೇಕು, ಸಾಯೋದ್ರೊಳಗೆ ಗಂಧದಗುಡಿ ನೋಡ್ಲೇಬೇಕು! ಪರಮಾತ್ಮನ ಸಾಹಸಕ್ಕೆ ಫ್ಯಾನ್ಸ್ ಫಿದಾ

Gandhadagudi Review: ಹುಟ್ಟಿದ ಮೇಲೆ ಸಾಯಲೇಬೇಕು, ಸಾಯೋದ್ರೊಳಗೆ ಗಂಧದಗುಡಿ ನೋಡ್ಲೇಬೇಕು! ಪರಮಾತ್ಮನ ಸಾಹಸಕ್ಕೆ ಫ್ಯಾನ್ಸ್ ಫಿದಾ

ಪುನೀತ್‌ ರಾಜ್‌ಕುಮಾರ್ ಅಭಿನಯದ ಗಂಧದಗುಡಿ

ಪುನೀತ್‌ ರಾಜ್‌ಕುಮಾರ್ ಅಭಿನಯದ ಗಂಧದಗುಡಿ

ಪರಮಾತ್ಮನ ನೋಡಿದ ಪುಳಕ, ಪ್ರಕೃತಿ ಸೌಂದರ್ಯದ ಅಭಿಷೇಕ! ಗಂಧದಗುಡಿ ಕಂಪು, ವಿ ಲವ್ ಯೂ ಅಪ್ಪು.. ಇದು ಗಂಧದಗುಡಿ ನೋಡಿದ ಅಭಿಮಾನಿಗಳ ಅಭಿಪ್ರಾಯ...

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಗಂಧದಗುಡಿ… (Gandhadagudi) ಬರೀ ಸಿನಿಮಾವಲ್ಲ (Cinema)… ಅದು ಒಂದು ಮನಸ್ಸು ಮುಟ್ಟುವ ಚಿತ್ತಾರ.. ಗಂಧದಗುಡಿ ಬರೀ ಸಿನಿಮಾವಲ್ಲ ಅದು ಭಾವನಾತ್ಮಕ ವಿಚಾರ.. ಗಂಧದಗುಡಿ ಬರೀ ಡಾಕ್ಯುಮೆಂಟರಿಯಲ್ಲ (Documentary) ಅದು ದೊಡ್ಮನೆ ಹುಡುಗನ ಪ್ರಕೃತಿ ಪ್ರೇಮದ ಪರಿ… ಹೌದು ಚಂದನವನದ ಬಹು ನಿರೀಕ್ಷಿತ ಗಂಧದಗುಡಿ ಕಂಪು ಬೀರಲು ಆರಂಭಿಸಿದೆ. ಇಂದು ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ರಾಜ್ಯಾದ್ಯಂತ ಗಂಧದಗುಡಿ ಪ್ರೀಮಿಯರ್ ಶೋ (Premier Show) ನಡೆದಿದೆ. ಪುನೀತ್ ರಾಜ್‌ಕುಮಾರ್ ಕುಟುಂಬ ಸದಸ್ಯರು ಮಾತ್ರವಲ್ಲ, ಚಿತ್ರರಂಗ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಿನಿಮಾ ನೋಡಿ ಕಣ್ತುಂಬಿಕೊಂಡಿದ್ದಾರೆ. ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳು ಗಂಧದಗುಡಿ ನೋಡಿ ಮನತುಂಬಿಕೊಂಡಿದ್ದಾರೆ. ವಿದೇಶದಲ್ಲಿ ಇರುವ ಅನಿವಾಸಿ ಕನ್ನಡಿಗರೂ ಗಂಧಗಗುಡಿ ಕಂಪಿಗೆ ಮಾರು ಹೋಗಿದ್ದಾರೆ.


ಹ್ಯಾಟ್ಸ್ ಆಫ್ ಎಂದ ಅಭಿಮಾನಿಗಳು


ಗಂಧದಗುಡಿಯನ್ನು ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಪರಮಾತ್ಮನ ದರ್ಶನ ಮಾಡಿ, ಭಾವುಕರಾಗಿದ್ದಾರೆ. ಉತ್ತರ ಕನ್ನಡ, ಚಾಮರಾಜನರಗ ಸೇರಿದಂತೆ ದಟ್ಟಕಾಡಿನ ನಡುವೆ ಪವರ್ ಸ್ಟಾರ್ ಓಡಾಡುವ ಪರಿಗೆ ದಂಗಾಗಿದ್ದಾರೆ.ಟ್ವಿಟರ್‌ನಲ್ಲಿ ಅಭಿಮಾನಿಗಳ ಭಾವುಕ ಪೋಸ್ಟ್


ಪ್ರೀಮಿಯರ್ ಶೋನಲ್ಲಿ ಗಂಧದಗುಡಿ ನೋಡಿದ ಪ್ರೇಕ್ಷಕರು ಪುನೀತ್ ಸಾಹಸಕ್ಕೆ ಫಿದಾ ಆಗಿದ್ದಾರೆ. ಮ್ಯಾನ್ ಆಫ್ ಮಿಲಿಯನ್ ಹಾರ್ಟ್, ಸೆಲಬ್ರೇಷನ್ ಕಿಂಗ್ ಅಂತೆಲ್ಲ ಅಪ್ಪುವನ್ನು ಹೊಗಳುತ್ತಿದ್ದಾರೆ. ವಿ ಮಿಸ್ ಯೂ ಅಪ್ಪು ಅಂತ ಭಾವುಕ ಪೋಸ್ಟ್ ಹಾಕುತ್ತಿದ್ದಾರೆ.


ಇದನ್ನೂ ಓದಿ: Puneeth Rajkumar on Gandhadagudi: ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ! ಗಂಧದಗುಡಿ ಕುರಿತು ಟ್ವೀಟ್ ಮಾಡಿದ ಅಪ್ಪು!


ಅಪ್ಪು ನೋಡಿದ ದೊಡ್ಮನೆ ಸದಸ್ಯರು


ಒರಾಯಿನ್ ಮಾಲ್‌ನಲ್ಲಿ ಸೆಲಬ್ರಿಟಿ ಪ್ರೀಮಿಯರ್ ಶೋ ಆರಂಭವಾಗಿದೆ. ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ದೊಡ್ಮನೆ ಸದಸ್ಯರೆಲ್ಲ ಆಗಮಿಸಿ, ಸಿನಿಮಾ ನೋಡಿದ್ರು. ಪುನೀತ್ ರಾಜ್‌ಕುಮಾರ್ ಕಿರಿಯ ಪುತ್ರಿ, ರಾಘವೇಂದ್ರ ರಾಜ್‌ಕುಮಾರ್ ಪುತ್ರರು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪವರ್ ಸ್ಟಾರ್‌ ಕಣ್ತುಂಬಿಕೊಂಡ ಸೆಲಬ್ರಿಟಿಗಳು


ಇನ್ನು ಪವರ್ ಸ್ಟಾರ್ ಕಣ್ತುಂಬಿಸಿಕೊಳ್ಳಲು ಸೆಲಬ್ರಿಟಿಗಳ ದೊಡ್ಡ ದಂಡೇ ಬಂದಿತ್ತು. ಚಿತ್ರ ನಟಿ ರಮ್ಯಾ, ಇನ್ಫೋಸಿಸ್‌ನ ಸುಧಾ ಮೂರ್ತಿ, ನಟಿ ನಿಶ್ವಿಕಾ ನಾಯ್ಡು ಸೇರಿದಂತೆ ಹಲವು ನಟ ನಟಿಯರು ಆಗಮಿಸಿದ್ದರು. ಇನ್ನು ಇಡೀ ಕಾಂತಾರಾ ಚಿತ್ರತಂಡ ಗಂಧದಗುಡಿ ಪ್ರೀಮಿಯರ್ ಶೋಗೆ ಆಗಮಿಸಿ, ಸಿನಿಮಾ ವೀಕ್ಷಿಸಿದೆ.


ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ


ಹೌದು, ಗಂಧದಗುಡಿ ಸಿನಿಮಾದ ಕುರಿತಂತೆ ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ... Looking forward to see you all in the theaters ಬರೆದು, ಜೊತೆಗೆ ಹಾರ್ಟ್ ಸಿಂಬಲ್ ಹಾಕಿ ಟ್ವೀಟ್ ಮಾಡಲಾಗಿದೆ.


ಇದನ್ನೂ ಓದಿ: Puneeth Rajkumar Gandhadagudi: ದೊಡ್ಮನೆ ಹುಡುಗನಿಗಾಗಿ ಮಿಡಿದ ಅನಿವಾಸಿ ಭಾರತೀಯರ ಮನ, ಅಮೆರಿಕಾ-ದುಬೈನಲ್ಲೂ ಗಂಧದ ಗುಡಿ ಪ್ರದರ್ಶನ!


ಅಪ್ಪು ಟ್ವೀಟ್ಗೆ ಫ್ಯಾನ್ಸ್ ಫಿದಾ!


ಅಪ್ಪು ನಿಧನದ ನಂತ್ರ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಟ್ವೀಟರ್ ಖಾತೆಯಿಂದ ಇಂದೇ  ಟ್ವೀಟ್ ಮಾಡಲಾಗಿದೆ. ಕಳೆದ ವರ್ಷ ಅಕ್ಟೋಬರ್‌ 26 ಕ್ಕೆ ಗಂಧದಗುಡಿ ಅಪ್ಡೇಟ್ ಬಗ್ಗೆ ಅಪ್ಪು ಟ್ವೀಟ್ ಮಾಡಿದ್ರು.  ಅಪ್ಪು ಆ ಟ್ವೀಟ್ ಮಾಡಿದ ಮೂರು ದಿನಕ್ಕೆ ನಮ್ಮನ್ನು ಅಗಲಿದ್ದರು. ಇನ್ನು ಕೊನೆಯದಾಗಿ ಶಿವರಾಜ್‌ಕುಮಾರ್ ಅಭಿನಯದ ಭಜರಂಗಿ 2 ಸಿನಿಮಾದ ಕುರಿತಂತೆ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದರು.  ಅಪ್ಪು ಈಗ ಮತ್ತೆ ಅದೇ ಗಂಧದಗುಡಿಗಾಗಿ ಪುನೀತ್ ರಾಜ್ ಕುಮಾರ್ ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡವಾಗಿದ್ದು,  ಅಪ್ಪು ಜೀವಂತ ಅಂತ ಫ್ಯಾನ್ಸ್ ಭಾವುಕರಾಗಿದ್ದಾರೆ.

Published by:Annappa Achari
First published: