ಬಿಗ್​ ಬಾಸ್​ನಲ್ಲಿ ಗೆದ್ದ 50 ಲಕ್ಷವನ್ನು ಶಶಿ ಕುಮಾರ್ ಏನು ಮಾಡಲಿದ್ದಾರೆ? ಇಲ್ಲಿದೆ ಉತ್ತರ!

ನಾನು ಬರಿಗೈಯಲ್ಲಿ ಈ ಹಂತಕ್ಕೆ ಬಂದಿದ್ದೇನೆ. ಒಬ್ಬರಿಗೆ ಸಹಾಯ ಮಾಡಲು ಹಣವನ್ನು ನೀಡಿದರೆ ಅದು ಅವರಿಗೆ ಮಾತ್ರ ಸಹಾಯ ಮಾಡಿದಂತಾಗುತ್ತದೆ.

zahir | news18
Updated:January 28, 2019, 6:09 PM IST
ಬಿಗ್​ ಬಾಸ್​ನಲ್ಲಿ ಗೆದ್ದ 50 ಲಕ್ಷವನ್ನು ಶಶಿ ಕುಮಾರ್ ಏನು ಮಾಡಲಿದ್ದಾರೆ? ಇಲ್ಲಿದೆ ಉತ್ತರ!
ಶಶಿ ಕುಮಾರ್
  • News18
  • Last Updated: January 28, 2019, 6:09 PM IST
  • Share this:
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ನಿರೂಪಕರಾಗಿರುವ ಬಿಗ್​ ಬಾಸ್​ಗೆ ತೆರೆ ಬಿದ್ದಿದೆ. ಪ್ರತಿ ಸೀಸನ್​ನಂತೆ ಇಲ್ಲಿ​ ಗೆದ್ದ ಸ್ಪರ್ಧಿಗೆ 50 ಲಕ್ಷ ಬಹುಮಾನ ಸಿಗುತ್ತದೆ. ಈ ಬಾರಿ ಬೃಹತ್​ ಬಹುಮಾನ ಮತ್ತು ಚಾಂಪಿಯನ್​ ಪಟ್ಟ ಮಾಡರ್ನ್​ ರೈತ ಶಶಿ ಕುಮಾರ್​ಗೆ ದಕ್ಕಿದೆ. ಆದರೆ ಪ್ರತಿ ಬಾರಿಯಂತೆ ಈ ಬಾರಿ ಕೂಡ ಗೆದ್ದ ಹಣವನ್ನು ವಿನ್ನರ್​ ಏನು ಮಾಡಲಿದ್ದಾರೆ ಎಂಬ ಕುತೂಹಲಕಾರಿ ಪ್ರಶ್ನೆ ಪ್ರೇಕ್ಷಕರಲ್ಲಿತ್ತು. ಅದಕ್ಕೂ ಯುವ ರೈತ ಶಶಿ ತೆರೆ ಎಳೆದಿದ್ದಾರೆ.

ಬಿಗ್​ ಬಾಸ್​ 6 ವಿನ್ನರ್​ ಆಗಿರುವ ಶಶಿ ತನಗೆ ಸಿಕ್ಕಿರುವ 50 ಲಕ್ಷ ಬಹುಮಾನದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆ ಬಳಸುವುದಾಗಿ ತಿಳಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಅನ್ನದಾತರಿಗಾಗಿ ಈ ಹಣವನ್ನು ವಿನಿಯೋಗಿಸುವುದಾಗಿ ಶಶಿ ಹೇಳಿದ್ದಾರೆ.

ನಾನೊಬ್ಬ ಸಾಮಾನ್ಯ ರೈತ. ಬಿಗ್​ ಬಾಸ್​ ಮನೆಯೊಳಗೆ ತಾನು ಸಾಮಾನ್ಯನಾಗಿ ಹೋಗಿದ್ದೆ. ಈಗ ವಿನ್ನರ್​ ಆಗಿರುವುದಕ್ಕೆ 50 ಲಕ್ಷ ರೂ, ಸಿಕ್ಕಿದೆ. ಇಷ್ಟೊಂದು ಹಣವನ್ನು ನಾನು ಯಾವತ್ತೂ ನೋಡಿರಲಿಲ್ಲ. ಬಂದಿರುವ ಎಲ್ಲ ಹಣವನ್ನು ನಾನು ದಾನ ಮಾಡ್ತೀನಿ ಎಂದು ಹೇಳುವುದಿಲ್ಲ. ಏಕೆಂದರೆ ನಾನೊಬ್ಬ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಐವತ್ತು ಲಕ್ಷ ಎಂಬುದು ಎಷ್ಟು ದೊಡ್ಡ ಮೊತ್ತ ಎಂಬುದರ ಬಗ್ಗೆ ಚೆನ್ನಾಗಿ ಅರಿವಿದೆ.

ನಾನು ಬರಿಗೈಯಲ್ಲಿ ಈ ಹಂತಕ್ಕೆ ಬಂದಿದ್ದೇನೆ. ಒಬ್ಬರಿಗೆ ಸಹಾಯ ಮಾಡಲು ಹಣವನ್ನು ನೀಡಿದರೆ ಅದು ಅವರಿಗೆ ಮಾತ್ರ ಸಹಾಯ ಮಾಡಿದಂತಾಗುತ್ತದೆ. ಹೀಗಾಗಿಯೇ ಒಂದಷ್ಟು ಯುವಕರಿಗೆ ಈ ಹಣದಲ್ಲಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಲು ಪ್ರಯತ್ನ ಮಾಡುತ್ತೇನೆ. ನನ್ನ ದೇಶದ ರೈತರಿಗೆ ಹೊಸ ತಂತ್ರಜ್ಞಾನದ ಅಗತ್ಯವಿದೆ. ಹೀಗಾಗಿಯೇ ನಮ್ಮ ಅನ್ನದಾತರು ಕಷ್ಟಪಡುವಂತಾಗಿದೆ. ಹೀಗಾಗಿಯೇ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಯುವಕರಿಗೆ ಅಗ್ರಿಕಲ್ಚರ್ ಮತ್ತು ಫಾರ್ಮಿಂಗ್ ಬಗ್ಗೆ ತಿಳಿಸಲು ಈ ಬಹುಮಾನ ಮೊತ್ತವನ್ನು ಉಪಯೋಗಿಸುವುದಾಗಿ ಶಶಿ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ವಿನ್ನರ್​ ಶಶಿ ಕುಮಾರ್: ಜನರ ಹೃದಯ ಗೆದ್ದಿರುವುದು ನವೀನ್ ಸಜ್ಜು!

ಈ ಮೂಲಕ ಒಬ್ಬ ಆಧುನಿಕ ರೈತ ಏನೆಲ್ಲಾ ಯೋಚಿಸಬಹುದು ಮತ್ತು ಯಾವ ರೀತಿಯಾಗಿ ರೈತರಿಗೆ ಸಹಾಯ ಮಾಡಬಹುದು ಎಂಬ ಹೊಸ ಕನಸಿನಲ್ಲಿದ್ದಾರೆ ಬಿಗ್​ ಬಾಸ್​ ವಿನ್ನರ್ ಶಶಿ ಕುಮಾರ್.

ಇದನ್ನೂ ಓದಿ: ಲಕ್ಷ ಲಕ್ಷ ಸಂಬಳ ಬಿಟ್ಟು ಬಿಗ್​ ಬಾಸ್​ನಲ್ಲಿ 50 ಲಕ್ಷ ಗೆದ್ದ ಶಶಿ ಕುಮಾರ್​!
First published:January 28, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ