ಈ ಊರಿನ ಎಲ್ಲಾ ಹೆಣ್ಮಕ್ಕಳ ನೆಮ್ಮದಿಗೆ ಕಾರಣ Shahrukh Khan, ಆದ್ರೆ ಅವ್ರು ಆತನನ್ನು ಎಂದೂ ಭೇಟಿಯಾಗಿಲ್ಲ, ಸಿನಿಮಾ ನೋಡಿಲ್ಲ!

Shah Rukh Khan : ಹೀಗಾಗಿ ಔಪಚಾರಿಕ ಪ್ರಶ್ನೆಗಳನ್ನು ಬದಿಗಿಟ್ಟು ಅವರೊಂದಿಗೆ ಸಾಮಾನ್ಯವಾಗಿ ಮಾತನಾಡಲು ಶರಣ್ಯಾ ಆರಂಭಿಸಿದರು. ಹೀಗೆ ಮಾತನಾಡುತ್ತಾ ಅವರ ಸಂಭಾಷಣೆಗಳು ಅವರ ಮೆಚ್ಚಿನ ನಟ ನಟಿಯರ ಕುರಿತಾಯಿತು. ಉತ್ತರ ಪ್ರದೇಶದಿಂದ ಆರಂಭಿಸಿ ಜಾರ್ಖಂಡ್‌ನ ಬುಡಕಟ್ಟು ಜನಾಂಗದವರೆಗೆ ಹೆಚ್ಚು ಆರಾಧಿಸುವ ವ್ಯಕ್ತಿಯೆಂದರೆ ಶಾರುಖ್ ಖಾನ್ ಎಂಬುದನ್ನು ಶರಣ್ಯಾ ಅರಿತುಕೊಂಡರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಹಮದಾಬಾದ್‌ನ ಅಗರ್‌ಬತ್ತಿ(Ahmedabad) ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯಾಗಿರಬಹುದು, ಉತ್ತರಪ್ರದೇಶದ(Uttara Pradesh) ರಾಮ್‌ಪುರದಿಂದ ಬಂದ ಯುವತಿ ರಾಜಸ್ಥಾನದ(Rajasthan) ಜೈಸಲ್ಮಾರ್‌ನಿಂದ ವಿಮಾನ ಪರಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿರಬಹುದು ಜೋರ್‌ಬಾಗ್ ದೆಹಲಿಯಲ್ಲಿ ಮುತ್ತುಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಹುಡುಗಿಯರು ಇವರೆಲ್ಲರೂ ಪಿತೃಪ್ರಭುತ್ವವಿರುವ ಕುಟುಂಬದಿಂದ ಹೊರಬಂದು ಆರ್ಥಿಕವಾಗಿ ಸಬಲೀಕರಣಗೊಂಡವರು ಇದರ ಜೊತೆಗೆ ಇವರಿಗೆಲ್ಲಾ ಆದರ್ಶಪ್ರಾಯರಾದವರು ಬಾಲಿವುಡ್ ಕಿಂಗ್‌ಖಾನ್ ಶಾರುಖ್‌ ಖಾನ್.

ಬಾಲಿವುಡ್‌ನ ತಾರೆಗೂ ಈ ಮಹಿಳೆಯರ ಸಬಲೀಕರಣಕ್ಕೂ ಯಾವ ಅಂಶಗಳು ಕಾರಣ ಎಂಬುದನ್ನು ವಿಶ್ವಬ್ಯಾಂಕ್‌ನ ಅರ್ಥಶಾಸ್ತ್ರಜ್ಞೆ ಹಾಗೂ 15 ವರ್ಷಗಳ ನುರಿತ ಅನುಭವವನ್ನು ಪಡೆದು ಲೇಖಕಿಯಾಗಿರುವ ಶರಣ್ಯಾ ಭಟ್ಟಾಚಾರ್ಯ ತಮ್ಮದೇ ನುಡಿಗಳಲ್ಲಿ ವ್ಯಾಖ್ಯಾನಿಸುತ್ತಾರೆ. ಶಾರುಖ್ ಖಾನ್‌ರಂತಹ ಒಬ್ಬ ಐಕಾನಿಕ್ ತಾರೆ ತಮ್ಮ ಆರ್ಥಿಕ ಸಂಕಷ್ಟಗಳನ್ನು ಹಾಗೂ ಪುರುಷರಲ್ಲಿ ಅವರು ನಿರೀಕ್ಷಿಸುವ ಅಂಶಗಳನ್ನು ಹಂಚಿಕೊಳ್ಳಲು ಪ್ರೇರೇಪಿಸಿತು ಎಂದು ಹೇಳುತ್ತಾರೆ.

ಮಹಿಳೆಯರಿಗೆ ಶಾರೂಖ್ ಖಾನ್ ಹೇಗೆ ಆದರ್ಶ?

ಒಬ್ಬ ಯುವ ಸಂಶೋಧಕಿಯಾಗಿ ಶರಣ್ಯ ಪಿತೃಪ್ರಧಾನ ವ್ಯವಸ್ಥೆಯಲ್ಲಿ ವೇತನ ಹಾಗೂ ಉದ್ಯೋಗದಲ್ಲಿ ಮಹಿಳೆಯರ ಭಾಗವಹಿಸುವಿಕೆಯ ಅಂಶಗಳನ್ನು ಕಲೆಹಾಕಿದಾಗ ಶಾರುಖ್ ಖಾನ್ ಇವರೆಲ್ಲರಿಗೆ ಪ್ರೇರಣೆಯಾಗಿರುವುದನ್ನು ಕಂಡುಕೊಂಡಿದ್ದಾರೆ.

ಶರಣ್ಯಾ ಹೇಳುವಂತೆ ಶಾರುಖ್ ಖಾನ್ ಮಹಿಳೆಯರ ಹೆಚ್ಚಿನ ವಿಚಾರ ಹಾಗೂ ಯೋಚನೆಗಳಲ್ಲಿ ನಿರ್ದಿಷ್ಟ ಪಾತ್ರವನ್ನು ವಹಿಸಿದ್ದಾರೆ. ಆದರ್ಶಪ್ರಾಯ ಪುರುಷನಂತೆ, ದೈನಂದಿನ ಹೋರಾಟಗಳಿಂದ ಪಾರುಮಾಡುವ ವ್ಯಕ್ತಿಯಂತೆ ಸೌಕರ್ಯವನ್ನು ಒದಗಿಸುವ ಮಹಾನ್‌ನಂತೆ ಬೇರೆ ಬೇರೆ ಆಯಾಮಗಳಲ್ಲಿ ಸ್ವಾವಲಂಬಿ ಮಹಿಳೆಯರಿಗೆ ಖಾನ್ ದಾರಿದೀಪವಾಗಿದ್ದಾರೆ.

ಇದನ್ನೂ ಓದಿ: Nick Jonas-Priyanka Chopra Divorce? ಈ ಕುರಿತಾಗಿ ನಟಿ ಹೇಳಿದ್ದೇನು ಗೊತ್ತಾ..?

ಶರಣ್ಯಾ ಅಗರ್‌ಬತ್ತಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರೊಂದಿಗೆ ಸಂದರ್ಶವನ್ನೇರ್ಪಡಿಸಿದ್ದರು ಅದಕ್ಕಾಗಿ ಪ್ರಶ್ನಾವಳಿಗಳನ್ನು ತಯಾರಿಸಿಕೊಂಡಿದ್ದರು ಆದರೆ ಶರಣ್ಯಾ ಪ್ರಶ್ನೆಗಳನ್ನು ಕೇಳತೊಡಗುತ್ತಿದ್ದಂತೆ ಅವರು ಆಕೆಯ ಮುಖವನ್ನೇ ನೋಡುತ್ತಿದ್ದರೇ ಹೊರತು ಒಂದು ಉತ್ತರವನ್ನು ನೀಡಿರಲಿಲ್ಲ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ. ತಮ್ಮ ಕಾರ್ಮಿಕ ಹಕ್ಕುಗಳಿಗಾಗಿ ಈ ಮಹಿಳೆಯರು ಹೋರಾಡುತ್ತಿದ್ದರೂ ತಮ್ಮ ನೈಜತೆಯ ಬಗ್ಗೆ ಅರಿತುಕೊಂಡಿದ್ದರು. ಹೊರಗಿನಿಂದ ಬಂದ ಸಂಶೋಧಕರು ಅವರಿಗೆ ಈ ಮೊದಲೇ ಗೊತ್ತಿರುವುದನ್ನು ತಿಳಿಸುವುದು ಅವರಿಗೆ ಬೇಕಿರಲಿಲ್ಲ.

ಹೀಗಾಗಿ ಔಪಚಾರಿಕ ಪ್ರಶ್ನೆಗಳನ್ನು ಬದಿಗಿಟ್ಟು ಅವರೊಂದಿಗೆ ಸಾಮಾನ್ಯವಾಗಿ ಮಾತನಾಡಲು ಶರಣ್ಯಾ ಆರಂಭಿಸಿದರು. ಹೀಗೆ ಮಾತನಾಡುತ್ತಾ ಅವರ ಸಂಭಾಷಣೆಗಳು ಅವರ ಮೆಚ್ಚಿನ ನಟ ನಟಿಯರ ಕುರಿತಾಯಿತು. ಉತ್ತರ ಪ್ರದೇಶದಿಂದ ಆರಂಭಿಸಿ ಜಾರ್ಖಂಡ್‌ನ ಬುಡಕಟ್ಟು ಜನಾಂಗದವರೆಗೆ ಹೆಚ್ಚು ಆರಾಧಿಸುವ ವ್ಯಕ್ತಿಯೆಂದರೆ ಶಾರುಖ್ ಖಾನ್ ಎಂಬುದನ್ನು ಶರಣ್ಯಾ ಅರಿತುಕೊಂಡರು.

ಶಾರುಖ್ ಅವರ ಚಿತ್ರಗಳನ್ನು ನೋಡದೇ ಇದ್ದರೂ ಅವರ ಪ್ರತಿಯೊಂದು ಸಂದರ್ಶನಗಳು, ಹಾಡುಗಳನ್ನು ಅತಿಯಾಗಿ ಮೆಚ್ಚಿಕೊಂಡಿರುವುದಾಗಿ ಕೂಡ ತಿಳಿಸಿದ್ದಾರೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 8% ಮಹಿಳೆಯರು ಮಾತ್ರವೇ ಪ್ರತಿ ತಿಂಗಳು ಚನಲಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದಾಗಿದೆ. ಅವರ ಆರ್ಥಿಕ ಹೋರಾಟಗಳಿಗೆ ಖಾನ್ ಮಾತುಗಳು ದೃಢವಾದ ತಳಪಾಯವನ್ನು ಹಾಕಿಕೊಟ್ಟಿದೆ ಎಂಬುದು ಶರಣ್ಯಾ ಅವರಿಗೆ ಅರಿವಾಯಿತು.

ಪುರುಷತ್ವದ ಕಲ್ಪನೆ ಹಾಗೂ ಆದರ್ಶ ಪುರುಷನ ಕಲ್ಪನೆಯನ್ನು ನಿರ್ಧರಿಸುವಲ್ಲಿ ಅವರಿಗೆ ನೆರವನ್ನು ನೀಡಿತು. ಉತ್ತರ ಪ್ರದೇಶದ ಮಹಿಳೆಯರು ಹೇಳುವಂತೆ ಅವರ ಸುತ್ತ ಮುತ್ತಲಿನ ಪುರುಷರು ಸಲ್ಮಾನ್ ಖಾನ್‌ರಂತೆ ಇದ್ದಾರೆ ಆದರೆ ಅವರು ಬಯಸುವುದು ಶಾರುಖ್ ಖಾನ್‌ರಂತಹ ಪುರುಷರನ್ನು ಎಂದು ತಿಳಿಸಿದ್ದಾರೆ. ಶಾರುಖ್ ಮಾಡುವಂತೆ ತಮ್ಮ ಜೀವನದಲ್ಲಿ ಕೂಡ ಪುರುಷರು ಅದೇ ರೀತಿಯ ಕಾರ್ಯಗಳನ್ನು ಮಾಡಬೇಕು ಎಂದು ಮಹಿಳೆಯರು ಬಯಸುತ್ತಾರೆ ಎಂಬುದಾಗಿ ಶರಣ್ಯಾ ಹೇಳುತ್ತಾರೆ. ಮಹಿಳೆಯರು ಮನೆಯಿಂದ ಹೊರಗೆ ಬಂದಾಗ ಹಾಗೂ ಸಮಾಜಕ್ಕೆ ಮಾಡಬಾರದೆಂದು ಹೇಳಿರುವ ತಮ್ಮ ಇಷ್ಟದ ಕೆಲಸಗಳನ್ನು ಮಾಡಿದಾಗ ಮಹಿಳೆಯರು ಪ್ರತ್ಯೇಕತೆಯನ್ನು ಎದುರಿಸುತ್ತಾರೆ. ಕಚೇರಿ ಹಾಗೂ ಅಡುಗೆಮನೆಯಂತಹ ಗೃಹಕೃತ್ಯದಲ್ಲಿ ಅವರು ಏಕಾಂಗಿಯಾಗಿದ್ದಾರೆ ಎಂಬುದಾಗಿ ಶರಣ್ಯಾ ತಿಳಿಸುತ್ತಾರೆ.

ಮನೆಗೆಲಸದಲ್ಲಿ ಪುರುಷರ ಸಹಾಯವನ್ನು ಪಡೆಯುವ ಮಹಿಳೆಯರ ವಿಷಯಕ್ಕೆ ಬಂದಾಗ ದಕ್ಷಿಣ ಕೊರಿಯಾ ಹಾಗೂ ಪಾಕಿಸ್ತಾನ ಸೇರಿದಂತೆ ಭಾರತವು ಜಾಗತಿಕವಾಗಿ ಐದನೇ ಪಟ್ಟಿಯಲ್ಲಿದೆ ಎಂದು ಶರಣ್ಯಾ ಹೇಳುತ್ತಾರೆ.ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಟ್ಟಾಚಾರ್ಯ ಅವರೊಂದಿಗೆ ಸಂವಾದ ನಡೆಸುತ್ತಿದ್ದ ಲೇಖಕ ಮನು ಪಿಳ್ಳೈ ಹೇಳುವಂತೆ, ಮನೆಯಿಂದ ಹೊರಬರಲು, ಕೆಲಸ ಮಾಡಲು ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಸ್ಥಾನವನ್ನು ಪಡೆಯಲು ಹೋರಾಡುವ ಮಹಿಳೆಯರು ಘನತೆ, ಗಡುವು ಹಾಗೂ ಮನೆಗೆಲಸದಲ್ಲಿ ಚಮತ್ಕಾರೀ ಕಲೆಯನ್ನು ಪ್ರದರ್ಶಿಸುತ್ತಾರೆ. ಚಿತ್ರಗಳಲ್ಲಿ ನಾಯಕಿ ಅಥವಾ ಯಾರಿಗಾದರೂ ಅಡುಗೆ ಮನೆಯಲ್ಲಿ ಸಹಾಯ ಮಾಡುವ ಅಥವಾ ಆಫ್ ಸ್ಕ್ರೀನ್‌ನಲ್ಲಿ ಪತ್ನಿಗೆ ಸಹಾಯ ಮಾಡುವ ಖಾನ್ ಅವರನ್ನು ವ್ಯಾಪಕವಾಗಿ ಪ್ರಸಿದ್ಧಿಗೊಳಿಸಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವ ದಿನದಂದು ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ನೀಡಿದ ಶಿಲ್ಪಾ

ಭಟ್ಟಾಚಾರ್ಯ ಅಭಿಪ್ರಾಯದಂತೆ ಪ್ರಸ್ತುತ ತಲೆಮಾರಿಗೆ ಶಾರುಖ್ ಖಾನ್ ಹೆಂಗರುಳುಳ್ಳ ವ್ಯಕ್ತಿ ಎಂಬುದು ಮನವರಿಕೆಯಾಗಿದೆ. ತಮ್ಮ ಜೀವನದಲ್ಲಿ ಶಾರುಖ್‌ರಂತಹ ವ್ಯಕ್ತಿ ಬರಬೇಕೆಂದು ಬಯಸುವುದಿಲ್ಲ. ಅವಕಾಶಗಳು, ಆದಾಯ ಗಳಿಸುವ ವಿಧಾನ ಹಾಗೂ ಸಂಭವನೀಯತೆಗಳ ಮೂಲಕ ಅವರಂತೆಯೇ ಆಗಲು ಬಯಸುತ್ತಾರೆ. ಇಂದು ಮಹಿಳೆಯರು ಪ್ರಿಯಾಂಕಾ ಹಾಗೂ ದೀಪಿಕಾರಂತೆಯೇ ಸ್ವಾವಲಂಬಿಗಳಾಗಲು ಪ್ರಸಿದ್ಧಿ ಪಡೆಯಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.
First published: