ದಂಡ ವಿಧಿಸುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳಿ: ಮುಖ್ಯಮಂತ್ರಿಗೆ ಫೈನ್ ಪ್ರಶ್ನೆ ಎಸೆದ ಕನ್ನಡ ನಟಿ

ಕುಡಿದು ಚಾಲನೆ ಮಾಡಿದರೆ 10 ಸಾವಿರ, ಸಿಗ್ನಲ್ ಜಂಪ್ ಮಾಡಿದರೆ 5 ಸಾವಿರ, ವಾಹನ ಓಡಿಸುವಾಗ ಮೊಬೈಲ್ ಬಳಸಿದರೆ 5 ಸಾವಿರ, ಸೀಟ್ ಬೆಲ್ಟ್​ ಧರಿಸದಿದ್ದರೆ 10 ಸಾವಿರ ಹೀಗೆ ದಂಡ ಪಟ್ಟಿ ದೊಡ್ಡದಾಗೇ ಬೆಳೆಯುತ್ತದೆ.

zahir | news18-kannada
Updated:September 6, 2019, 5:40 PM IST
ದಂಡ ವಿಧಿಸುವ ಮುನ್ನ ಇದನ್ನು ಖಚಿತಪಡಿಸಿಕೊಳ್ಳಿ: ಮುಖ್ಯಮಂತ್ರಿಗೆ ಫೈನ್ ಪ್ರಶ್ನೆ ಎಸೆದ ಕನ್ನಡ ನಟಿ
Sonu gowda
  • Share this:
ಸ್ಯಾಂಡಲ್​ವುಡ್ ನಟಿ ಶೃತಿ ರಾಮಕೃಷ್ಣ ಅಂದರೆ ತುಸು ಯೋಚಿಸಬೇಕಾಗಬಹುದು. ಆದರೆ ಸೋನು ಗೌಡ ಅಂತೇಳಿದರೆ 'ಇಂತಿ ನಿನ್ನ ಪ್ರೀತಿಯ' ಚಿತ್ರದ ಮುದ್ದು ಮುಖದ ಚೆಲುವೆಯೊಬ್ಬಳು ಕಣ್ಮುಂದೆ ಬರುತ್ತಾರೆ. ಇನ್ನಷ್ಟು ಹತ್ತಿರದ ನೆನಪು ಬೇಕಿದ್ದರೆ ಉಪೇಂದ್ರ ಅಭಿನಯದ ಇತ್ತೀಚಿನ ಸೂಪರ್ ಹಿಟ್ 'ಐ ಲವ್​ ಯೂ' ಚಿತ್ರದಲ್ಲಿನ ಗೌರಿಯನ್ನು ನೆನಪಿಸಿಕೊಳ್ಳಬಹುದು. ಹೌದು, ಅದ್ಭುತ ಅಭಿನಯದ ಮೂಲಕ ತಮಿಳು, ಮಲಯಾಳಂನಲ್ಲಿ ಅವಕಾಶ ಗಿಟ್ಟಿಸಿಕೊಂಡ ಸೋನು ಗೌಡ ಅವರ ಬಗ್ಗೆ ಇಷ್ಟೊಂದು ಪೀಠಿಕೆ ಯಾಕೆ ಅಂತೀರಾ? ವಿಷಯ ಇರುವುದೇ ಇಲ್ಲಿ.

ಕೆಲ ದಿನಗಳ ಹಿಂದೆ ಸರ್ಕಾರ ನೂತನ ಸಾರಿಗೆ ಸಂಚಾರ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮದಂತೆ ತಪ್ಪು ಮಾಡಿದವರು ದುಬಾರಿ ಫೈನ್ ಕಟ್ಟಬೇಕಾಗುತ್ತದೆ. ಅಂದರೆ ಕುಡಿದು ಚಾಲನೆ ಮಾಡಿದರೆ 10 ಸಾವಿರ, ಸಿಗ್ನಲ್ ಜಂಪ್ ಮಾಡಿದರೆ 5 ಸಾವಿರ, ವಾಹನ ಓಡಿಸುವಾಗ ಮೊಬೈಲ್ ಬಳಸಿದರೆ 5 ಸಾವಿರ, ಸೀಟ್ ಬೆಲ್ಟ್​ ಧರಿಸದಿದ್ದರೆ 10 ಸಾವಿರ ಹೀಗೆ ದಂಡ ಪಟ್ಟಿ ದೊಡ್ಡದಾಗೇ ಬೆಳೆಯುತ್ತದೆ.

ಈ ಹೊಸ ನಿಯಮದ ದಂಡ ಶುಲ್ಕದ ಪೋಸ್ಟ್​ವೊಂದನ್ನು ನಟಿ ಸೋನು ಗೌಡ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ನಲ್ಲಿ ಫೈನ್ ರೇಟ್​ ಜೊತೆಗೆ ಬೈಕ್ ಸವಾರನೊಬ್ಬ ಬೀಳುತ್ತಿರುವ ಚಿತ್ರ ಕೂಡ ಇದೆ. ಇದನ್ನು ಮುಖ್ಯಮಂತ್ರಿ ಅವರ ಅಧಿಕೃತ ಖಾತೆಗೆ ಟ್ಯಾಗ್ ಮಾಡಿರುವ ಸೋನು, ರಸ್ತೆ ಗುಂಡಿಗಳನ್ನು ಮುಚ್ಚದಿರುವ ಸರ್ಕಾರಕ್ಕೆ ಎಷ್ಟು ದಂಡ ವಿಧಿಸಬೇಕೆಂದು ಪ್ರಶ್ನಿಸಿದ್ದಾರೆ. ಅಲ್ಲದೆ ಸಂಚಾರಿ ನಿಯಮವನ್ನು ಜಾರಿಗೆ ತರುವ ಮೊದಲು ಉತ್ತಮ ರಸ್ತೆ ನಿರ್ಮಾಣ ಮಾಡಿ. ಸಾಮಾನ್ಯ ಜನರ ದುಡಿಮೆಯನ್ನು ದಂಡದ ರೂಪದಲ್ಲಿ ಪಡೆದು ಅವರ ಜೀವನವನ್ನು ಹಾಳುಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.

ಸೋನು ಗೌಡ ಮಾಡಿರುವ ಈ ಟ್ವೀಟ್ ಇದೀಗ ಭಾರೀ ವೈರಲ್ ಆಗಿದ್ದು, ಅನೇಕರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಈ ಹಿಂದೆ ಕೂಡ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಕಲಾವಿದ ಬಾದಲ್ ನಂಜುಂಡಸ್ವಾಮಿ ಕೈಗೊಳ್ಳುವ ಪೈಟಿಂಗ್ ಅಭಿಯಾನಕ್ಕೂ ಸೋನು ಕೈ ಜೋಡಿಸಿದ್ದರು. ನಗರದ ರಸ್ತೆ ಗುಂಡಿಯಲ್ಲಿ ಪ್ರತ್ಯಕ್ಷರಾದ ಮತ್ಸ್ಯ ಕನ್ಯೆ ಎಂಬ ಬಾದಲ್​ ಕಾನ್ಸೆಪ್ಟ್​ಗೆ ಸೋನು ಗೌಡ ಸಾಥ್ ನೀಡಿದ್ದರು.​ 
First published: September 6, 2019, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading