'RRR' ಪ್ರಮೋಷನ್, ಪೋಸ್ಟರ್​​ಗೆ ಎಷ್ಟು ಖರ್ಚಾಗಿದೆ? ಈ ಹಣದಲ್ಲಿ ಇನ್ನೊಂದು ಚಿತ್ರ ಮಾಡಬಹುದಿತ್ತು!

ಜೂನಿಯರ್ NTR, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯದ RRR ಬಿಗ್ ಬಜೆಟ್ ಸಿನಿಮಾವಾಗಿದ್ದು, ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಛದಲ್ಲಿ ಸಿದ್ಧವಾಗಿದೆ.

RRR ಸಿನಿಮಾ

RRR ಸಿನಿಮಾ

 • Share this:
  ಒಂದು ಸಿನಿಮಾ (Cinema) ತೆರೆಗೆ ಬರಲು ಅದಕ್ಕೆ ಪ್ರಚಾರದ ಅಗತ್ಯ ಇರುತ್ತದೆ. ಈಗೆಲ್ಲಾ ಸಿನಿಮಾ ಕ್ಷೇತ್ರವು ಚಿತ್ರವನ್ನು ಅದ್ಧೂರಿಯಾಗಿ ತೆರೆಗೆ ತರುವುದರ ಜೊತೆ ಪೂರ್ವ ಪ್ರಚಾರವೂ ಅಷ್ಟೇ ಅದ್ಧೂರಿಯಾಗಿರುತ್ತದೆ. ಪ್ರೇಕ್ಷಕರಿಗೆ ಸಿನಿಮಾ ತೆರೆಗೆ ಬರುತ್ತಿದೆ ಎನ್ನುವ ವಿಚಾರವನ್ನು ತಲುಪಿದರೆ ಮಾತ್ರ ಸಿನಿಮಾ ನೋಡೋಕೆ ಪ್ರೇಕ್ಷಕರು ಚಿತ್ರ ಮಂದಿರಕ್ಕೆ ಬರುತ್ತಾರೆ. ಈ ಕಾರಣಕ್ಕೆ ದೊಡ್ಡ ನಿರ್ಮಾಪಕರು ಸಿನಿಮಾಗೆ ಮಾತ್ರವಲ್ಲ, ಪ್ರಮೋಷನ್‌ಗೂ ಸಾಕಷ್ಟು ಖರ್ಚು ಮಾಡುತ್ತಾರೆ. ಈಗ ಟಾಲಿವುಡ್‌ನಲ್ಲಿ ಸಿದ್ಧವಾಗಿರುವ ಸ್ಟಾರ್ ನಿರ್ದೇಶಕ ರಾಜಮೌಳಿ ( SS Rajamouli) ಸಾರಥ್ಯದ ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಭಿನಯದ ಆರ್ ಆರ್ ಆರ್ ಚಿತ್ರವು ತನ್ನ ಪೋಸ್ಟರ್‌ಗಳಿಗೆ (RRR Poster) ಕೋಟಿಗಟ್ಟಲೆ ಹಣ ವ್ಯಯಿಸಿದೆ ಎಂದು ಮೂಲಗಳು ತಿಳಿಸಿವೆ. ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'RRR' ಸಿನಿಮಾವನ್ನು ಚಿತ್ರ ರಸಿಕರು ಕಾತುರದಿಂದ ಎದುರು ನೋಡುವಂತಾಗಿದೆ. ಬಾಹುಬಲಿ ಸಿನಿಮಾ ಬಳಿಕ ರಾಜಮೌಳಿ ನಿರ್ದೇಶಿಸಿದ ಸಿನಿಮಾ ಇದಾಗಿದ್ದು ಭಾರಿ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

  ಇದನ್ನೂ ಓದಿ: Radhe Shyam Collection: ಪ್ರಭಾಸ್ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ನೋಡಿ..

  400 ಕೋಟಿ ರೂ, ಬಜೆಟ್​​ 

  ಜೂನಿಯರ್ NTR, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯದ RRR ಬಿಗ್ ಬಜೆಟ್ ಸಿನಿಮಾವಾಗಿದ್ದು, ಬರೋಬ್ಬರಿ 400 ಕೋಟಿ ರೂಪಾಯಿ ವೆಚ್ಛದಲ್ಲಿ ಸಿದ್ಧವಾಗಿದೆ. ಪ್ರೊಮೋ, ಪೋಸ್ಟರ್‌ಗೂ ಕೋಟಿಗಟ್ಟಲೇ ವ್ಯಯಿಸಿದೆ. ‘RRR’ ಸಿನಿಮಾ ಜನವರಿ 7ರಂದು ತೆರೆಗೆ ಬರಲು ಸಿದ್ಧತೆ ನಡೆಸಿತ್ತು. ಆದರೆ ಕೊರೋನಾ ಕಾರಣದಿಂದ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಜ.7ರ ಬಿಡುಗಡೆ ಮುನ್ನ ಪ್ರೀ-ರಿಲೀಸ್ ಕಾರ್ಯಕ್ರಮಕ್ಕಾಗಿ ಸಕಲ ಸಿದ್ಧತೆ ಮಾಡಿಕೊಂಡಿತ್ತು. ಅದಕ್ಕಾಗಿ ಕೋಟಿ ಮೌಲ್ಯದ ಬಜೆಟ್ ಪ್ಲ್ಯಾನ್ ಮಾಡಿತ್ತು.

  RRR ಪ್ರೋಮೋಗಳಿಗೆ ಎಷ್ಟು ಖರ್ಚಾಗಿದೆ ಗೊತ್ತಾ?

  S.S ರಾಜಮೌಳಿಯವರ RRR ಅನ್ನು ಜನವರಿ 7ರಂದು ಬಿಡುಗಡೆಗಾಗಿ ಪ್ರಚಾರ ಮಾಡಲು ಸರಿಸುಮಾರು 18 ಕೋಟಿ- 20 ಕೋಟಿ ರೂ. (180 ಮಿಲಿಯನ್‌ ರೂ. ನಿಂದ 200 ಮಿಲಿಯನ್ ರೂ. ) ಖರ್ಚು ಮಾಡಲಾಗಿದೆ. ಈ ಬಗ್ಗೆ ಹೈದರಾಬಾದ್‌ನ ಮೂಲಗಳು ತಿಳಿಸಿವೆ. "ನಿರ್ಮಾಪಕರಿಂದ ಹಿಡಿದು ನಟರವರೆಗೂ ಪ್ರಾಜೆಕ್ಟ್‌ನ ಪ್ರತಿಯೊಬ್ಬರ ಬೆಂಬಲವೂ ಚಿತ್ರಕ್ಕೆ ಇತ್ತು. ಆದರೆ ಕೊರೋನಾ ಪರಿಸ್ಥಿತಿಯಿಂದಾಗಿ ರಾಜಮೌಳಿ ಚಿತ್ರ ಬಿಡುಗಡೆಯಿಂದ ಹಿಂದೆ ಸರಿಯಬೇಕಾಯಿತು ಎಂದು ಮೂಲಗಳು ತಿಳಿಸಿವೆ.

  2 ಕೋಟಿ  - 3 ಕೋಟಿ

  ಮುಂಬೈ ಹಾಗೂ ಚೆನ್ನೈನಲ್ಲಿ ದೊಡ್ಡ ಮಟ್ಟದಲ್ಲಿ ಪ್ರೀ-ರಿಲೀಸ್ ಇವೆಂಟ್ ನಡೆಸಿತ್ತು. ಪ್ರಚಾರ ಅಭಿಯಾನವು RRR ನ ಇಬ್ಬರು ಪ್ರಮುಖ ನಟರಾದ ರಾಮಚರಣ್ ತೇಜ ಮತ್ತು NTR ಜೂನಿಯರ್ ಅಭಿಮಾನಿಗಳನ್ನು ಆಂಧ್ರಪ್ರದೇಶದ ಹೊರಗಿನ ಪ್ರಚಾರ ಕಾರ್ಯಕ್ರಮಗಳಿಗೆ ಸಾಗಿಸಲು 2 ಕೋಟಿ ರೂ. - 3 ಕೋಟಿ (Rs 20 ಮಿಲಿಯನ್ ನಿಂದ 3 ಮಿಲಿಯನ್) ಬಜೆಟ್ ಅನ್ನು ಒಳಗೊಂಡಿತ್ತು.

  ಇದನ್ನೂ ಓದಿ: Gangubai Kathiawadi: 100 ಕೋಟಿ ಕ್ಲಬ್ ಸೇರಿದ 'ಗಂಗೂಬಾಯಿ'! ಇದುವರೆಗೂ ಸಿನಿಮಾ ಗಳಿಸಿದ್ದೆಷ್ಟು?

  ಎಲ್ಲದಕ್ಕೂ ಚೆಲ್ಲಾಡಿದ್ದಾರೆ ಹಣ..? 

  ಒಂದು ಮೂಲದ ಪ್ರಕಾರ ರಾಮ್ ಚರಣ್ ಮತ್ತು ಎನ್‌ಟಿಆರ್ ಆಂಧ್ರಪ್ರದೇಶ ಮತ್ತು ತೆಲಂಗಾಣದ ಹೊರಗೆ ಕನಿಷ್ಠ ಅಭಿಮಾನಿಗಳನ್ನು ಹೊಂದಿದ್ದಾರೆಂದು ರಾಜಮೌಳಿ ತಿಳಿದಿದ್ದಾರೆ. ಮುಂಬೈ ಮತ್ತು ಆಂಧ್ರದ ಹೊರಗಿನ ಇತರ ನಗರಗಳಲ್ಲಿ ಮಾಧ್ಯಮ/ಮಾರ್ಕೆಟಿಂಗ್ ಕಾರ್ಯಕ್ರಮಗಳಿಗಾಗಿ, ಅಭಿಮಾನಿಗಳನ್ನು ಐಷಾರಾಮಿ ಹೋಟೆಲ್‌ಗಳಲ್ಲಿ ಇರಿಸಲಾಯಿತು. ಇವರುಗಳನ್ನು ಚಪ್ಪಾಳೆ, ಹುರಿದುಂಬಿಸಲು ಮತ್ತು ಶಿಳ್ಳೆ ಹೊಡೆಯುವುದಕ್ಕಾಗಿ ಅಭಿಮಾನಿಗಳಿಗೆ ಆತಿಥ್ಯ ನೀಡಲಾಗಿತ್ತು.

  ನೈಜ ಘಟನೆ ಆಧರಿಸಿ ‘ಆರ್‌ಆರ್‌ಆರ್‌’ ಸಿನಿಮಾ ತಯಾರಾಗುತ್ತಿದೆ. ದೇಶಭಕ್ತಿಯ ಕಥಾ ಹಂದರವನ್ನು ಹೊಂದಿರುವ ಈ ಚಿತ್ರದಲ್ಲಿ ಜೂ. ಎನ್‌ಟಿಆರ್ ಕೋಮರಂ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಾಮ್ ಚರಣ್ ತೇಜ ಅಲ್ಲುರಿ ಸೀತಾರಾಮ ರಾಜು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. RRR ಚಿತ್ರವು ಅತೀ ಹೆಚ್ಚು ಬಂಡವಾಳ ಹೂಡಿದ ಚಿತ್ರವಾಗಿದ್ದುಈಗಾಗಲ್ಲೇ ಚಿತ್ರ ದೇಶದೆಲ್ಲೆಡೆ ಪ್ರೀ ರಿಲೀಸ್ ಪ್ರಮೋಶನ್ ಮೂಲಕ ಸಾಕಷ್ಟು ಪ್ರಚಾರ ಗಿಟ್ಟಿಸಿಕೊಂಡಿದೆ. RRR ಚಿತ್ರವು ಇದೇ ಮಾರ್ಚ್ 25 ರಂದು ಬಿಡುಗಡೆಯಾಗಲಿದ್ದು, ಚಿತ್ರದ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಆವೃತ್ತಿಗಳು ZEE5 ನಲ್ಲಿ ಲಭ್ಯವಿರುತ್ತವೆ. ಇದು ಹಿಂದಿ, ಪೋರ್ಚುಗೀಸ್, ಕೊರಿಯನ್, ಟರ್ಕಿಶ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತದೆ.
  Published by:Kavya V
  First published: