ದೇಶದಾದ್ಯಂತ ದಿ ಕೇರಳ ಸ್ಟೋರಿ (The Kerala Story) ಬಗ್ಗೆಯೇ ಬಾರೀ ಚರ್ಚೆ ಆಗುತ್ತಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಟೀಸರ್ (Teaser) ಮೂಲಕ ವಿವಾದದ ಸುಳಿಯಲ್ಲಿ ಸಿಲುಕಿತ್ತು. ರಿಲೀಸ್ ಆದ ಬಳಿಕ ದಿ ಕೇರಳ ಸ್ಟೋರಿ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿ ಬಂದಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ (Collection) ಕೂಡ ಮಾಡ್ತಿದೆ. ಬಾಲಿವುಡ್ ನಟಿ ಅದಾ ಶರ್ಮಾ (Adah Sharma), ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾಗಾಗಿ ನಟಿ ಎಷ್ಟು ಕೋಟಿ ಸಂಭಾವನೆ ಪಡೆದಿದ್ದಾರೆ ಗೊತ್ತಾ?
ದಿ ಕೇರಳ ಸ್ಟೋರಿ 40 ಕೋಟಿ ಬಜೆಟ್ ಸಿನಿಮಾ
ಬಾಲಿವುಡ್ ನಟಿ ಅದಾ ಶರ್ಮಾ ನಟಿಸಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದು, ಈ ಚಿತ್ರ ಸತ್ಯ ಘಟನೆಗಳನ್ನು ಆಧರಿಸಿದೆ ಎಂದು ಹೇಳಲಾಗಿದೆ. ಏಪ್ರಿಲ್ 5 ರಂದು ಬಿಡುಗಡೆಯಾದ ದಿ ಕೇರಳ ಸ್ಟೋರಿ ಸಿನಿಮಾ, ಮಾಸ್ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಸಿನಿಮಾವನ್ನು 40 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ.
ಅದಾ ಶರ್ಮಾ ಪಡೆದ ಸಂಭಾವನೆ ಎಷ್ಟು?
ದಿ ಕೇರಳ ಸ್ಟೋರಿ ಸಿನಿಮಾವನ್ನು ನಟಿ ಅದಾ ಶರ್ಮಾ ಪಾತ್ರದ ಮೇಲೆಯೇ ರಚಿಸಲಾಗಿದೆ. ಈ ಸಿನಿಮಾಗಾಗಿ ನಟಿ ಅದಾ ಇತರೆ ನಟರಿಗಿಂತ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರಂತೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಲು ನಟಿ 1 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇತರೆ ನಟರು ಪಡೆದ ಸಂಭಾವನೆ ಎಷ್ಟು?
ಅದಾ ಶರ್ಮಾ ಅವರಲ್ಲದೆ, ದಿ ಕೇರಳ ಸ್ಟೋರಿ ಚಿತ್ರದಲ್ಲಿ ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ ಇವರೆಲ್ಲಾ ಚಿತ್ರಕ್ಕಾಗಿ ತಲಾ 30 ಲಕ್ಷ ರೂ. ಇತರೆ ಪಾತ್ರಧಾರಿಗಳಿಗೆ ಸಂದಾಯ ಮಾಡಿರುವ ಹಣದಲ್ಲಿ ವಿಜಯ್ ಕೃಷ್ಣ 25 ಲಕ್ಷ, ಪ್ರಣಯ್ ಪಚೌರಿ 20 ಲಕ್ಷ, ಪ್ರಣವ್ ಮಿಶ್ರಾ 15 ಲಕ್ಷ ರೂ ಸಂಭಾವನೆ ಪಡೆದಿದ್ದಾರಂತೆ.
ಬ್ರೈನ್ ವಾಶ್ ಮಾಡಿ ಮತಾಂತರ
ಇದು ಕೇರಳದ ನೈಜ ಕಥೆಯನ್ನು ಆಧರಿಸಿದೆಯಂತೆ. ಕೇರಳದ ಹಾಸ್ಟೆಲ್‌ನಲ್ಲಿ ವಾಸಿಸುವ ನಾಲ್ವರು ಹಿಂದೂ ಕಾಲೇಜು ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸುವಂತೆ ಬ್ರೈನ್‌ವಾಶ್ ಮಾಡುತ್ತಾರೆ. ಬಳಿಕ ಅವರನ್ನು ಭಯೋತ್ಪಾದಕ ಸಂಘಟನೆ-ಐಸಿಸ್ ಬಲವಂತವಾಗಿ ತಳ್ಳುತ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ.
ದಿ ಕೇರಳ ಸ್ಟೋರಿ ರಿಲೀಸ್ಗೂ ಮುನ್ನವೇ ಸಿನಿಮಾ ತಡೆ ಕೋರಿ ಕೆಲವರು ಕೋರ್ಟ್ ಮೆಟ್ಟಿಲೇರಿದ್ರು. ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಚಿತ್ರಕ್ಕೆ ಯಾವುದೇ ಆಕ್ಷೇಪಣೆ ಮಾಡದೇ ಸಿನಿಮಾ, ಚಿತ್ರಮಂದಿರಗಳಲ್ಲಿ ಸುಗಮ ಬಿಡುಗಡೆಗೆ ಅನುಮತಿ ನೀಡಿತು. ಲವ್ ಜಿಹಾದ್ ಮತ್ತು ಇಸ್ಲಾಮಿಕ್ ಮತಾಂತರ ಸೇರಿದಂತೆ ವಿವಾದಾತ್ಮಕ ಮತ್ತು ಗಂಭೀರ ವಿಷಯಗಳ ಕುರಿತು ಚಿತ್ರ ನಿರ್ಮಾಣವಾಗಿದೆ.
ಇದನ್ನೂ ಓದಿ: The Kerala Story: ವಿವಾದದ ನಡುವೆ ಭರ್ಜರಿ ಕಲೆಕ್ಷನ್ ಮಾಡಿದ ದಿ ಕೇರಳ ಸ್ಟೋರಿ, 3ನೇ ದಿನಕ್ಕೆ ಕೋಟಿ ಕೋಟಿ ಗಳಿಕೆ!
ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್
ದಿ ಕೇರಳ ಸ್ಟೋರಿ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ದಿ ಕೇರಳ ಸ್ಟೋರಿ ಸಿನಿಮಾ ರಿಲೀಸ್ ಆದ ಮೊದಲ ದಿನ 8.03 ಕೋಟಿ ರೂಪಾಯಿ ಗಳಿಸಿದೆ. ಎರಡನೇ ದಿನ 11.22 ಕೋಟಿ ರೂಪಾಯಿ ಬಾಚಿಕೊಂಡಿದ್ದು, 3ನೇ ದಿನ 16 ಕೋಟಿ ರೂಪಾಯಿಗಳಿಸಿದೆ. ಅಲ್ಲಿಗೆ, ಈ ಸಿನಿಮಾದ ಒಟ್ಟು ಕಲೆಕ್ಷನ್ 35.25 ಕೋಟಿ ರೂಪಾಯಿ ಆಗಿದೆ. ಟ್ರೈಲರ್ ಮೂಲಕವೇ ವಿವಾದ ಸೃಷ್ಟಿಸಿದ್ದ ಈ ಸಿನಿಮಾ ಬಿಡುಗಡೆಗೆ ವಿಶೇಷವಾಗಿ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ