ಮುಂಬೈ: ನಮ್ಮ ದೇಶದಲ್ಲಿ ಈ ಸಿನಿಮಾ ನಟ-ನಟಿಯರು (Cinema Artist), ರಾಜಕಾರಿಣಿಗಳು (Political Leaders) ಮತ್ತು ಕ್ರಿಕೆಟ್ ಆಟಗಾರರು (Cricketers) ಹಣ ಸಂಪಾದಿಸಿದಷ್ಟು ಬಹುಶಃ ಬೇರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರು ಸಹ ಸಂಪಾದಿಸಲಿಕ್ಕಿಲ್ಲ. ಸಿನಿಮಾ ನಟ ಮತ್ತು ನಟಿಯರಿಗೆ ಮತ್ತು ಕ್ರಿಕೆಟ್ ಆಟಗಾರರಿಗೆ ತಮ್ಮ ಕ್ಷೇತ್ರದಲ್ಲಿ ಬರುವ ಗಳಿಕೆ ಬಿಟ್ಟು, ಟಿವಿ ಜಾಹೀರಾತುಗಳಿಂದಲೂ (TV Advertisement) ಸಹ ಕೋಟಿಗಟ್ಟಲೆ ಹಣ ಬಂದು ಅವರ ಸಂಪಾದನೆಗೆ ಸೇರಿಕೊಳ್ಳುತ್ತದೆ. ಇನ್ನೂ ರಾಜಕಾರಿಣಿಗಳಿಗಂತೂ ಲೆಕ್ಕವಿಲ್ಲದಷ್ಟು ಹಣ ಬಂದು ಅವರ ಮನೆ ಸೇರುತ್ತದೆ.
ಅದರಲ್ಲೂ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟಿ ಮತ್ತು ಕ್ರಿಕೆಟ್ ಆಟಗಾರ ಇಬ್ಬರು ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು ನೋಡಿ.
ಇಲ್ಲಿ ನಾವು ಯಾರ ಬಗ್ಗೆ ಮಾತಾಡಲು ಹೊರಟಿದ್ದೇವೆ ಅಂತ ಬಹುತೇಕರಿಗೆ ಈಗಾಗಲೇ ಗೊತ್ತಾಗಿರುತ್ತದೆ. ಹೌದು, ಇಲ್ಲಿ ನಾವು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಪ್ರತಿ ತಿಂಗಳಿಗೆ ಎಷ್ಟು ಹಣ ಸಂಪಾದಿಸ್ತಾರೆ ಅನ್ನೋದರ ಬಗ್ಗೆ ಮಾತನಾಡುತ್ತಿದ್ದೇವೆ.
ಒಟ್ಟು ಆಸ್ತಿಯ ಮೊತ್ತ ಕೇಳಿದರೆ ಶಾಕ್ ಆಗ್ತೀರಾ?
ನಟಿ ಅನುಷ್ಕಾ ಶರ್ಮಾ ಭಾರತೀಯ ಚಲನಚಿತ್ರೋದ್ಯಮದಲ್ಲಿ ತುಂಬಾನೇ ಚಿರಪರಿಚಿತ ಹೆಸರು. ತನ್ನ ನಟನಾ ಸಾಮರ್ಥ್ಯ ಮತ್ತು ಬೆರಗುಗೊಳಿಸುವ ನೋಟದಿಂದಾಗಿ ಅವರು ಬಾಲಿವುಡ್ನ ಅತ್ಯಂತ ಪ್ರೀತಿಪಾತ್ರ ಮತ್ತು ಪ್ರಸಿದ್ಧ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಆದರೆ ಅವರ ಪ್ರತಿಭೆ ಮಾತ್ರವೇ ಅವರನ್ನು ಮನೆಮಾತಾಗಲು ಸಹಾಯ ಮಾಡಿಲ್ಲ, ಬದಲಾಗಿ 255 ಕೋಟಿ ರೂಪಾಯಿಗಳ ಅವರ ಪ್ರಭಾವಶಾಲಿ ನಿವ್ವಳ ಮೌಲ್ಯವು ಅವರ ಯಶಸ್ಸು ಮತ್ತು ಕಠಿಣ ಪರಿಶ್ರಮಕ್ಕೆ ಪುರಾವೆಯಾಗಿದೆ.
ಮೇ 1 ರಂದು ಅನುಷ್ಕಾ ಶರ್ಮಾ 35ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ, ಅವರು ತಮ್ಮ ಚಿತ್ರಗಳಿಂದ ಈ ಕಿರಿಯ ವಯಸ್ಸಿನಲ್ಲಿ ಎಷ್ಟು ಹಣವನ್ನು ಸಂಪಾದಿಸುತ್ತಾರೆ ಅಂತ ಕೇಳಿದರೆ ಎಂತವರಾದರೂ ಒಂದು ಕ್ಷಣ ಶಾಕ್ ಆಗ್ತಾರೆ. ಅನುಷ್ಕಾ ತಮ್ಮ ಪ್ರತಿ ಚಿತ್ರಕ್ಕೆ ಪಡೆಯುವ ಸಂಭಾವನೆಯ ಬಗ್ಗೆ ನೋಡೋಣ ಬನ್ನಿ.
ಪ್ರತಿ ಚಿತ್ರಕ್ಕೆ 12-15 ಕೋಟಿ ರೂಪಾಯಿ
ನಟಿ ಅನುಷ್ಕಾ ಶರ್ಮಾ ಪ್ರತಿ ಚಿತ್ರಕ್ಕೆ 12-15 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿಯಾಗಿದೆ. ಇವರು ಬಾಲಿವುಡ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ.
ಅನುಷ್ಕಾ ಹಲವಾರು ವ್ಯವಹಾರಗಳನ್ನು ಪ್ರಾರಂಭಿಸಿದ ಯಶಸ್ವಿ ಉದ್ಯಮಿಯೂ ಹೌದು. ಅವರು ನಶ್ ಎಂಬ ತಮ್ಮದೇ ಆದ ಬಟ್ಟೆ ಅಂಗಡಿಯನ್ನು ಸಹ ಹೊಂದಿದ್ದಾರೆ.
ಜೊತೆಗೆ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಎಂಬ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ, ಇದು ಎನ್ಎಚ್ 10, ಫಿಲ್ಲೌರಿ ಮತ್ತು ಪರಿಯಂತಹ ಹಿಟ್ ಚಲನಚಿತ್ರಗಳನ್ನು ನಿರ್ಮಿಸಿದೆ.
ಅನುಷ್ಕಾ ಶರ್ಮಾ ಮಾಸಿಕ ಆದಾಯ
ಅನುಷ್ಕಾ ಅವರ ಮಾಸಿಕ ಆದಾಯ 1 ಕೋಟಿ ರೂಪಾಯಿ ಅಂತೆ. ನಟಿ ತಮ್ಮ ವಿವಿಧ ಆದಾಯ ಮೂಲಗಳಿಂದ ತಿಂಗಳಿಗೆ 1 ಕೋಟಿ ರೂಪಾಯಿ ಹಣವನ್ನು ಸಂಪಾದಿಸ್ತಾರಂತೆ. ಅವರು ಹಲವಾರು ಪ್ರಮುಖ ಬ್ರ್ಯಾಂಡ್ ಗಳ ಬ್ರಾಂಡ್ ಅಂಬಾಸಿಡರ್ ಕೂಡ ಆಗಿದ್ದಾರೆ.
ಅನುಷ್ಕಾ ಶರ್ಮಾ ಅವರ ನಟನಾ ಸಾಮರ್ಥ್ಯ, ಕೆಲಸದ ಪರ ಅವರಿಗಿರುವ ಸಮರ್ಪಣೆ ಮನೋಭಾವನೆ, ಅವರ ವ್ಯವಹಾರ ಚತುರತೆ, ಅವರನ್ನು ಮನರಂಜನಾ ಉದ್ಯಮದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯುವಂತೆ ಮಾಡಿದೆ. ಅವರ ಈ ಯಶೋಗಾಥೆ ದೇಶಾದ್ಯಂತ ಲಕ್ಷಾಂತರ ಯುವತಿಯರಿಗೆ ಸ್ಫೂರ್ತಿ ನೀಡುತ್ತದೆ.
ಇದನ್ನೂ ಓದಿ: Anushka Sharma: ಅನುಷ್ಕಾ-ಕೊಹ್ಲಿ ತಿಂದ ಮಸಾಲೆ ದೋಸೆ ಬೆಲೆ ಎಷ್ಟಿದೆ ಗೊತ್ತಾ?
ಇನ್ನೂ ಕೆಲಸದ ವಿಷಯಕ್ಕೆ ಬಂದರೆ ಅನುಷ್ಕಾ ಶರ್ಮಾ ಮುಂದಿನ ಗ್ಯಾಂಗ್ಸ್ಟರ್ ಕಾಮಿಡಿ 'ಕನೆಡಾ' ಚಿತ್ರದಲ್ಲಿ ದಿಲ್ಜಿತ್ ದೋಸಾಂಜ್ ಮತ್ತು ಅರ್ಜುನ್ ಕಪೂರ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ