HOME » NEWS » Entertainment » HOW MEGHANA RAJ WIFE OF CHIRANJEEVI SARJA CRIED AND HOW DHRUVA SARJA SOLACE HER HERE IS THE STORY HK

ನನ್ನ ಕೈ ಬಿಡಬೇಡಿ ಎಂದು ಚಿರು ಶವದ ಮುಂದೆ ಕಂಬನಿ ಮಿಡಿದ ಹೆಂಡತಿ ಮೇಘನಾ ರಾಜ್

ಇನ್ನೇನು ಮೃತದೇಹ ಮಣ್ಣು ಮಾಡುವ ಸಂದರ್ಭದಲ್ಲಿಯಂತೂ ಗಂಡನ ಮೃತದೇಹದ ಬಳಿ ಬಂದು ಹೆಂಡತಿ‌ ಮೇಘನಾ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಂಥವರ ಮನವನ್ನೂ ಕಲಕುತ್ತಿತ್ತು

news18-kannada
Updated:June 9, 2020, 2:33 PM IST
ನನ್ನ ಕೈ ಬಿಡಬೇಡಿ ಎಂದು ಚಿರು ಶವದ ಮುಂದೆ ಕಂಬನಿ ಮಿಡಿದ ಹೆಂಡತಿ ಮೇಘನಾ ರಾಜ್
ಮೇಘನಾರಾಜ್​
  • Share this:
ಬೆಂಗಳೂರು(ಮೇ.09): 'ನೀವೆಲ್ಲ ನನ್ನ ಕೈ ಬಿಡಬೇಡಿ. ಎಲ್ಲರೂ ನನ್ನ ಜೊತೆಗಿರಿ' ಎಂದು ಭಾವುಕಳಾಗಿ ಮೇಘನಾರಾಜ್ ಗಂಡ ಚಿರಂಜಿವಿ ಸರ್ಜಾ ಮೃತದೇಹದ ಮುಂದೆ ಹೇಳುತ್ತಿದ್ದ ತಾಯಿಯಂಥ ಅತ್ತಿಗೆಯನ್ನು ಮೈದುನ ಧೃವ ಸರ್ಜಾ ನಾವಿದ್ದೀರಿ, ಧೈರ್ಯವಾಗಿರಿ,‌ ನಮ್ಮ ಜೊತೆ ಇರಿ ಎಂದು ಸಮಾಧಾನ ಮಾಡುತ್ತಿದ್ದ! ಸಾಯುವ ವಯಸ್ಸೇ ಆಲ್ಲದ ಹೊತ್ತಿನಲ್ಲಿ ಮೊನ್ನೆ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ 39 ರ ಹರೆಯದ ಚಿರಂಜೀವಿ ಸರ್ಜಾ ನಿನ್ನೆ ಕನಕಪುರ ರಸ್ತೆಯ ನೆಲಗುಳಿ ಗ್ರಾಮದ ತಮ್ಮನ ಫಾರ್ಮ್ ಹೌಸ್ ನಲ್ಲಿ ಮಣ್ಣಲ್ಲಿ ಮಣ್ಣಾಗಿ ಲೀನವಾದರು. ಆದರೆ ಅವರ ನೆನಸಿಕೊಂಡು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳ ಕಣ್ಣೀರು ಹಾಕುತ್ತಿದ್ದ ದೃಶ್ಯ ಎಂಥವರ ಮನಕಲಕುವಂತೆ ಮಾಡುತ್ತಿತ್ತು. ಅಂತ್ಯಕ್ರಿಯೆ ಬಂದವರೆಲ್ಲ 'ಛೆ ಹೀಗಾಗಬಾರದಿತ್ತು. ಸಾಯುವ ವಯಸ್ಸೇ ಅಲ್ಲ, ಎಂಥ ಒಳ್ಳೆಯ ಹುಡುಗ, ನಟ' ಎಂದು ಮಮ್ಮಲ ಮರಗುತ್ತಿದ್ದರು.

ಅದರಲ್ಲೂ ಗಂಡನ ಮೃತದೇಹದ ಮುಂದೆ ಕುಳಿತಿದ್ದ ಹೆಂಡತಿ ಮೇಘನಾರಾಜ್ ಪರಿಸ್ಥಿತಿ ನೋಡುತ್ತಿದ್ದರೆ ಎಂಥವರು ಸಹ ಅಯ್ಯೋ ಪಾಪ ಎಂದು ಕಣ್ಣೀರು ಹಾಕುತ್ತಿದ್ದರು.ಅಳು, ಮೌನ ಮತ್ತು ಧ್ಯಾನ!ಅಂತ್ಯಕ್ರಿಯೆ ಉದ್ದಕ್ಕೂ ಹೆಂಡತಿ ಮೇಘನಾರಾಜ್ ಅಳು, ಮೌನ, ಧ್ಯಾನ ಅವರನ್ನು ಆವರಿಸಿಕೊಂಡಿದ್ದರು. ಅವರಿಗೆ ಅವರೇ ಅದೆಷ್ಟು ಸಮಾಧಾನ ಮಾಡಿಕೊಂಡರೂ ಗಂಡ ಇನ್ನಿಲ್ಲ ಎನ್ನುವ ಸತ್ಯ ಅರಿತು ಮತ್ತೆ ಮತ್ತೆ ಕಣ್ಣಲ್ಲಿ ನೀರಿ ಧಾರೆಯಾಗಿ ಹರಿದುಬರುತ್ತಿತ್ತು.

ಗಂಡ ಚಿರಂಜೀವಿ ಸರ್ಜಾ ಮೃತದೇಹ ಅಂತ್ಯಕ್ರಿಯೆ ಮುಗಿಯುವವರೆಗೂ ಹೆಚ್ಚು ಮೌನಕ್ಕೆ ಶರಣಾದ ಮೇಘನಾ ಎಷ್ಟು ತಡೆಯಹಿಡಿದರೂ ಅಳು ಮತ್ತೆ ಮತ್ತೆ ಬರುತ್ತಿತ್ತು. ಇನ್ನೇನು ಮೃತದೇಹ ಮಣ್ಣು ಮಾಡುವ ಸಂದರ್ಭದಲ್ಲಿಯಂತೂ ಗಂಡನ ಮೃತದೇಹದ ಬಳಿ ಬಂದು ಹೆಂಡತಿ‌ ಮೇಘನಾ ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದ ದೃಶ್ಯ ಎಂಥವರ ಮನವನ್ನೂ ಕಲಕುತ್ತಿತ್ತು. ಅಂತ್ಯಕ್ರಿಯೆ ನೋಡಲು ಮುಗಿಬಿದ್ದ ಅಭಿಮಾನಿಗಳು ನಟ ಚಿರಂಜೀವಿ ಸರ್ಜಾ ನಿಧನ ಹಿನ್ನೆಲೆ ಅಂತ್ಯಕ್ರಿಯೆ ನೋಡಲು ಕೊರೋನಾ ಸಂಕಷ್ಟದಲ್ಲಿ ಜನರು, ಅಭಿಮಾನಿಗಳು ಮುಗಿಬಿದ್ದಿದ್ದರು.

ನಿನ್ನೆ ಬೆಳಗ್ಗೆ ಬೆಂಗಳೂರಿನ ಚಿರು ನಿವಾಸದಿಂದ ಆಗಮಿಸಿದ ಪಾರ್ಥೀವ ಶರೀರ ವಾಹನ ನೋಡಲು ಜನರು ರಸ್ತೆಯುದ್ದಕ್ಕೂ ನಿಂತ ದೃಶ್ಯಗಳು ಕಂಡು ಬಂದವು. ಕನಕಪುರದ ನೆಲಗುಳಿ ಗ್ರಾಮದವರೆಗೆ ಅಲ್ಲಲ್ಲಿ ಚಿರು ಭಾವಚಿತ್ರ ಪೋಸ್ಟರ್ ಅಂಟಿಸಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದರು. ಅಂತ್ಯಸಂಸ್ಕಾರ ಮಾಡುವ ಜಾಗದಲ್ಲಿಯಂತೂ ಸಾಕಷ್ಟು ಪೊಲೀಸ್ ಬಿಗಿಭದ್ರತೆಯಿದ್ದರೂ  ಫಾರ್ಮ್ ಹೌಸ್ ಸುತ್ತಲೂ ಕಡೆಯಿಂದ ಜನರು, ಸ್ಥಳೀಯರು, ಅಭಿಮಾನಿಗಳು ಆಗಮಿಸುತ್ತಿದ್ದರು. ಅದೆಷ್ಟೇ ಪೊಲೀಸರು ಬಂದೋಬಸ್ತ್ ಮಾಡಿದರೂ ಜನರು ಮುಗಿಬಿದ್ದು ತನ್ನ ನೆಚ್ಚಿನ ನಟ ಅಂತ್ಯಸಂಸ್ಕಾರದಲ್ಲಿ ಲಾಠಿ ರುಚಿ ತರಿಸಿಕೊಂಡೂ ಅಂತಿಮ ನಮನ ಸಲ್ಲಿಸಿದರು.

ಇದನ್ನೂ ಓದಿ : ಚಿರು ಹಾಲು- ತುಪ್ಪ ಕಾರ್ಯದಲ್ಲಿ ಗಂಡನನ್ನು ನೆನೆದು ಮತ್ತೆ ಕಣ್ಣೀರಿಟ್ಟ ಮೇಘನಾ

ಚಿರು ಸರ್ಜಾ ಅಂತ್ಯಸಂಸ್ಕಾರ ಹಿನ್ನೆಲೆ ಕನಕಪುರ ರಸ್ತೆ ಫುಲ್ ಟ್ರಾಫಿಕ್ ಜಾಮ್ ಆಗಿತ್ತು. ಲಾಕ್ ಡೌನ್ ಸಡಲಿಕೆ ಬಳಿಕವೂ ಬೆಂಗಳೂರು ಕನಕಪುರ ರೋಡ್ ವಾಹನಗಳಿಂದ ಕೆಲ ಗಂಟೆಗಳ ಕಾಲ ಫುಲ್ ಜಾಮ್ ಆಗಿತ್ತು. ಕನಕಪುರದ ನೆಲಗುಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ಹಿನ್ನೆಲೆ ಸಾವಿರಾರು ವಾಹನಗಳಲ್ಲಿ ಗಣ್ಯರು, ಚಿತ್ರನಟರು, ಅಭಿಮಾನಿಗಳು ಆಗಮಿಸಿದ್ದರು. ಇದರಿಂದ ಆರು ಕಿಲೋಮೀಟರ್ ಗೂ ಹೆಚ್ಚು ರಸ್ತೆಯುದ್ದಕ್ಕೂ ವಾಹನಗಳು ಟ್ರಾಫಿಕ್ ಕಿರಿಕಿರಿ ಉಂಟಾಯಿತು. ಬೆಂಗಳೂರು ಕಡೆಗೆ ತೆರಳುವ ವಾಹನಗಳು ಹಲವು ಗಂಟೆ ನಿಂತಲ್ಲೇ ನಿಂತ ದೃಶ್ಯ ಕಂಡು ಬಂದಿತು.
First published: June 9, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories