New Movies: ವರ್ಷಾಂತ್ಯಕ್ಕೆ ಬರಲಿವೆ ಸ್ಟಾರ್ ನಟರ ಸಿನಿಮಾಗಳು.. ಕನ್ನಡ ಚಿತ್ರಗಳ ಜೊತೆ ಪರಭಾಷೆ ಸಿನಿಮಾಗಳ ಫೈಟ್, ಫುಲ್ ಲಿಸ್ಟ್ ಇಲ್ಲಿದೆ

December Movie release : ಇನ್ನು ಒಟಿಟಿಯಲ್ಲಿ ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆಯಾದ ಬಳಿಕ ಭರ್ಜರಿ ಸಕ್ಸಸ್ ಪಡೆದುಕೊಂಡಿರುವ ಡಾಲಿ ಧನಂಜಯ ಅವರ ಬಡವ ರಾಸ್ಕಲ್ ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆಯಾಗಲಿದೆ.. ಅದೇ ದಿನ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾ ಕೂಡಾ ತೆರೆಕಾಣಲಿದೆ. ಹೀಗಾಗಿ ಡಿಸೆಂಬರ್ 24ರಂದು ಧನಂಜಯ ಹಾಗೂ ನಿಖಿಲ್ ನಡುವೆ ನಡೆಯಲಿದೆ..

ಸಿನಿಮಾ

ಸಿನಿಮಾ

  • Share this:
    ಕೊರೊನಾ ( Corona )ಚಿತ್ರೋದ್ಯಮ( Film industry)ಅನುಭವಿಸಿದ ಸಂಕಷ್ಟ ಅಷ್ಟಿಷ್ಟಲ್ಲ.. ಕಳೆದೆರಡು ವರ್ಷಗಳಿಂದ ಆರ್ಭಟ ಮೆರೆಯುತಲಿರುವ ಕೊರೋನಾ ಮಹಾಮಾರಿ ಅದೆಷ್ಟೋ ಜನ ಚಿತ್ರಕಲಾವಿದರ ( Film artist )ಬದುಕು ಕಸಿದುಕೊಂಡಿದೆ..ಅದೆಷ್ಟೋ ಸಿನಿಮಾ ಮಂದಿರಗಳು ( Theatres)ಬಾಗಿಲು ಮುಚ್ಚುವಂತೆ ಮಾಡಿದೆ.. ಆದರೆ ಕೆಲವರು ಮಾತ್ರ ಯಾವ ಕೊರೋನಾ ಮಹಾಮಾರಿಗೆ ಬೆದರದೆ ಮುನ್ನುಗ್ಗಿ ಸಿನಿಮಾಗಳನ್ನು ಮಾಡಿ ಜನರ ಮುಂದೆ ಇಡುತ್ತಿದ್ದಾರೆ.. ಹೀಗಾಗಿಯೇ ಸರ್ಕಾರ( Government) ಸಿನಿಮಾ ಮಂದಿರಗಳನ್ನು ತೆರೆಯಲು ಅನುಮತಿ ನೀಡಿದ ಬಳಿಕ ತಮ್ಮ ಸಿನಿಮಾಗಳನ್ನು ಪ್ರೇಕ್ಷಕರ( audience) ಮುಂದೆ ತರುತ್ತಿದ್ದಾರೆ. ಅದರಂತೆಯೇ ಕೆಲವು ಸಿನಿಮಾಗಳು ಸಿನಿಮಾ ಮಂದಿರದಲ್ಲಿ ಬಿಡುಗಡೆಯಾದರೆ, ಇನ್ನು ಕೆಲವು ಸಿನಿಮಾಗಳು ಒಟಿಟಿಯಲ್ಲಿ ( OTT platform)ಬಿಡುಗಡೆಯಾಗಿ ಲಾಭ ಗಳಿಸಿಕೊಂಡಿದೆ.. ಸದ್ಯ ಡಿಸೆಂಬರ್ ಗೆ ಕಾಲಿಡಲು ಕೆಲವೇ ದಿನಗಳು ಬಾಕಿ ಇರುವುದರಿಂದ ಹಲವಾರು ಸಿನಿಮಾ ತಂಡಗಳು ತಮ್ಮ ಸಿನಿಮಾಗಳನ್ನು ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ..

    ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿವೆ ಸಾಲುಸಾಲು ಕನ್ನಡ ಸಿನಿಮಾ

    ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಸಾಕಷ್ಟು ಒಳ್ಳೆಯ ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಶಿವರಾಜ್ ಕುಮಾರ್, ಸುದೀಪ್, ದುನಿಯಾ ವಿಜಯ್‌ ಅಂಥಹಾ ಸ್ಟಾರ್ ನಟರ ಸಿನಿಮಾಗಳು ಸಹ ಈ ಎರಡು ತಿಂಗಳ ಅವಧಿಯಲ್ಲಿ ಬಿಡುಗಡೆ ಆಗಿವೆ. 'ರತ್ನನ್ ಪ್ರಪಂಚ' ಸಿನಿಮಾ ನೇರ ಒಟಿಟಿಗೆ ಬಿಡುಗಡೆ ಆಗಿ ಹಿಟ್ ಸಹ ಎನಿಸಿಕೊಂಡಿದ್ದು ವಿಶೇಷ. ಹೀಗಾಗಿ ವರ್ಷದ ಕೊನೆಯಲ್ಲಿ ಉತ್ತಮ ಲಾಭ ಮಾಡುವ ನಿರೀಕ್ಷೆಯಿಂದ ಸಾಲುಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗಲಿವೆ

    ಇದನ್ನೂ ಓದಿ :ದ್ವೇಷ ಗೆದ್ದಿದೆ, ಕಲಾವಿದ ಸೋತಿದ್ದಾನೆ ಎಂದ ಸ್ಟ್ಯಾಂಡ್ ಅಪ್ ಕಾಮಿಡಿಯನ್

    ಡಿಸೆಂಬರ್ ನಲ್ಲಿ ಖಾತೆ ತೆರೆಯಲಿರುವ ಮದಗಜ

    ಟ್ರೇಲರ್‌, ಪೋಸ್ಟರ್‌ನಿಂದ ಗಮನ ಸೆಳೆದಿರುವ ಸಿನಿಮಾ ಮದಗಜ.. ಶ್ರೀಮುರಳಿ ನಟನೆಯ ಸಿನಿಮಾ ಡಿಸೆಂಬರ್ ತಿಂಗಳ 3 ರಂದು ಬಿಡುಗಡೆಯಾಗಲಿದೆ.. ಈ ಸಿನಿಮಾವನ್ನು ಮಹೇಶ್ ನಿರ್ದೇಶನ ಮಾಡಿದ್ರೆ ಉಮಾಪತಿ ನಿರ್ಮಾಪಕರಾಗಿದ್ದಾರೆ.ಇನ್ನು ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿ. ಜಗಪತಿ ಬಾಬು ವಿಲನ್.

    ಡಿ.10 ರಂದು ಭಾರೀ ಪೈಪೋಟಿ..

    ಡಿಸೆಂಬರ್ 10ಕ್ಕೆ ಕನ್ನಡ ಚಿತ್ರರಂಗದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಆ ದಿನದಂದು ಮೂರು ಪ್ರಮುಖ ಕನ್ನಡ ಸಿನಿಮಾ ಬಿಡುಗಡೆ ಆಗಲಿವೆ. ಶರಣ್ ನಟನೆಯ ಅವತಾರ ಪುರುಷ, ಪ್ರೇಮ್, ರಚಿತಾ ರಾಮ್, ಅಜಯ್ ರಾವ್ ನಟನೆಯ ಲವ್ ಯೂ ರಚ್ಚು . ರವಿಚಂದ್ರನ್ ನಟನೆಯ 'ದೃಶ್ಯ 2' ಸಿನಿಮಾ ಸಹ ಡಿಸೆಂಬರ್ 10ರಂದೇ ಬಿಡುಗಡೆ ಆಗಲಿದೆ.

    ಕ್ರಿಸ್ಮಸ್ ನಲ್ಲಿ ನಿಖಿಲ್ ಹಾಗೂ ಡಾಲಿ ಧನಂಜಯ್ ಫೈಟ್

    ಇನ್ನು ಒಟಿಟಿಯಲ್ಲಿ ರತ್ನನ್ ಪ್ರಪಂಚ ಸಿನಿಮಾ ಬಿಡುಗಡೆಯಾದ ಬಳಿಕ ಭರ್ಜರಿ ಸಕ್ಸಸ್ ಪಡೆದುಕೊಂಡಿರುವ ಡಾಲಿ ಧನಂಜಯ ಅವರ ಬಡವ ರಾಸ್ಕಲ್ ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆಯಾಗಲಿದೆ.. ಅದೇ ದಿನ ನಿಖಿಲ್ ಕುಮಾರಸ್ವಾಮಿ ನಟನೆಯ ರೈಡರ್ ಸಿನಿಮಾ ಕೂಡಾ ತೆರೆಕಾಣಲಿದೆ. ಹೀಗಾಗಿ ಡಿಸೆಂಬರ್ 24ರಂದು ಧನಂಜಯ ಹಾಗೂ ನಿಖಿಲ್ ನಡುವೆ ನಡೆಯಲಿದೆ..

    ಇದನ್ನೂ ಓದಿ :83 ಸಿನಿಮಾದ ಟೀಸರ್ ಝಲಕ್ ಗೆ ಅಭಿಮಾನಿಗಳು ಫಿದಾ

    ಕನ್ನಡದ ಸಿನಿಮಾ ಜೊತೆ ಪರಭಾಷೆಯ ಚಿತ್ರಗಳ ಫೈಟ್

    ಇನ್ನು ಕನ್ನಡ ಸಿನಿಮಾ ಮಾತ್ರವಲ್ಲದೆ ತೆಲುಗು ತಮಿಳು ಮಲಯಾಳಂ ಹಿಂದಿ ಸೇರಿ ಹಲವು ಭಾಷೆಗಳ ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗಲಿದೆ.. ಸ್ಟಾರ್ ನಟರ ಈ ಸಿನಿಮಾಗಳಿಗಾಗಿ ಹಲವುದಿನಗಳಿಂದ ಅಭಿಮಾನಿಗಳು ಕಾದು ಕುಳಿತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂ ಸಿನಿಮಾ 'ಮರಕ್ಕರ್'. ಮೋಹನ್‌ಲಾಲ್ ನಟಿಸಿರುವ ಈ ಸಿನಿಮಾವು ಡಿಸೆಂಬರ್ 02ರಂದು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ಇನ್ನು ಡಿಸೆಂಬರ್ 17ಕ್ಕೆ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್ ನಟನೆಯ 'ಪುಷ್ಪ' ಸಿನಿಮಾವು ಕನ್ನಡ, ತೆಲುಗು ಭಾಷೆಗಳಲ್ಲಿ ರಾಜ್ಯದಲ್ಲಿ ಬಿಡುಗಡೆ ಆಗಲಿದೆ. ರಣ್ವೀರ್ ಸಿಂಗ್ ನಟನೆಯ '83' ಡಿಸೆಂಬರ್ 24ಕ್ಕೆ ಬಿಡುಗಡೆ ಆದರೆ ನಾನಿ, ಸಾಯಿ ಪಲ್ಲವಿ, ಕನ್ನಡಗಿ ಕೃತಿ ಶೆಟ್ಟಿ ನಟನೆಯ 'ಶ್ಯಾಮ್ ಸಿಂಘ ರಾಯ್' ಸಿನಿಮಾ ಡಿಸೆಂಬರ್ 24ಕ್ಕೆ ಬಿಡುಗಡೆ ಆಗಲಿದೆ..ಇನ್ನು ಈ ಸಿನಿಮಾಗಳು ಕನ್ನಡಕ್ಕೆ ಡಬ್ ಆಗಲಿವೆ.
    Published by:ranjumbkgowda1 ranjumbkgowda1
    First published: