ಸುದೀಪ್ ‘ದಬಂಗ್ 3’ ತಂಡ ಸೇರಿದ್ದು ಹೇಗೆ ಗೊತ್ತಾ?; ಬಾಲಿವುಡ್ ನಿರ್ಮಾಪಕನಿಂದ ಬಯಲಾಯ್ತು ರಹಸ್ಯ

Kichcha Sudeep: ಸಿನಿಮಾದ ಕೆಲ ಪ್ರಮುಖ ದೃಶ್ಯಗಳನ್ನು ಈಗಾಗಲೇ ಶೂಟ್​ ಮಾಡಲಾಗಿದೆಯಂತೆ. ಸುದೀಪ್​ ಈ ಪಾತ್ರವನ್ನು ತುಂಬಾನೇ ಉತ್ತಮವಾಗಿ ನಿರ್ವಹಿಸಿದ್ದಾರೆ ಎನ್ನುವುದು ಅರ್ಬಾಜ್​ ಅಭಿಪ್ರಾಯ.

Rajesh Duggumane | news18
Updated:August 3, 2019, 12:28 PM IST
ಸುದೀಪ್ ‘ದಬಂಗ್ 3’ ತಂಡ ಸೇರಿದ್ದು ಹೇಗೆ ಗೊತ್ತಾ?; ಬಾಲಿವುಡ್ ನಿರ್ಮಾಪಕನಿಂದ ಬಯಲಾಯ್ತು ರಹಸ್ಯ
ಸಲ್ಮಾನ್​ ಖಾನ್​
  • News18
  • Last Updated: August 3, 2019, 12:28 PM IST
  • Share this:
ಸಲ್ಮಾನ್​ ಖಾನ್​ ಅಭಿನಯದ​ ‘ದಬಂಗ್​ 3’ ಸಿನಿಮಾದಲ್ಲಿ ‘ಕಿಚ್ಚ’ ಸುದೀಪ್​ ಕೂಡ ನಟಿಸುತ್ತಿದ್ದು, ಈ ಚಿತ್ರಕ್ಕಾಗಿ ಕನ್ನಡಿಗರು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಈಗಾಗಲೇ ಶೂಟಿಂಗ್​ ಕೂಡ ಭರದಿಂದ ಸಾಗುತ್ತಿದೆ. ಈ ಮಧ್ಯೆ ಸಲ್ಮಾನ್​ ಖಾನ್​ ತಮ್ಮ ಹಾಗೂ ‘ದಬಂಗ್​ 3’ ನಿರ್ಮಾಪಕ ಅರ್ಬಾಜ್​ ಖಾನ್​ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

ಸುದೀಪ್​ ಕನ್ನಡ ಮಾತ್ರವಲ್ಲದೆ, ಟಾಲಿವುಡ್​ ಹಾಗೂ ಬಾಲಿವುಡ್​ಗಳಲ್ಲಿ ಬಣ್ಣ ಹಚ್ಚಿದ್ದಾರೆ. ತೆಲುಗಿನಲ್ಲಿ ತೆರೆಕಂಡ ‘ಈಗಾ’ ಚಿತ್ರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಇದಕ್ಕೆ ಸುದೀಪ್​ ನಟನೆ ಪ್ರಮುಖ ಕಾರಣ. ಅಮಿತಾಭ್​ ಸೇರಿ ದೊಡ್ಡ ದೊಡ್ಡ ಸ್ಟಾರ್​ಗಳ ಜೊತೆ ಸುದೀಪ್ ತೆರೆ ಹಂಚಿಕೊಂಡಿದ್ದಾರೆ. ಹಾಗಾಗಿ ಅವರಿಗೆ ‘ದಬಂಗ್​ 3’ ಚಿತ್ರದಲ್ಲಿ ಸ್ಥಾನ ದೊರಕಿತ್ತು ಎನ್ನಲಾಗಿದೆ.

ಸುದೀಪ್​ ‘ದಬಂಗ್​ 3’ ತಂಡ ಸೇರಿಕೊಂಡಿದ್ದು ಹೇಗೆ ಎನ್ನುವುದನ್ನು ಸ್ವತಃ ಅರ್ಬಾಜ್​ ಖಾನ್​ ಹೇಳಿಕೊಂಡಿದ್ದಾರೆ. ಅವರು ಹೇಳುವ ಪ್ರಕಾರ, ಈ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎನ್ನುವ ಪ್ರಶ್ನೆ ಮೂಡಿದಾಗ ಎಲ್ಲರಿಗೂ ನೆನಪಾಗಿದ್ದು ಸುದೀಪ್​ ಅಂತೆ.

ಇದನ್ನೂ ಓದಿ: ಬೆನ್ನು ನೋವಿನಿಂದ ವಿಶ್ರಾಂತಿಯಲ್ಲಿರುವ ಕಿಚ್ಚ: ದಬಂಗ್​ 3 ಚಿತ್ರೀಕರಣಕ್ಕೆ ಗೈರಾದ ಸುದೀಪ್​..!

“ನಮ್ಮ ಸಿನಿಮಾದ ಪ್ರಮುಖ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಮೂಡಿದಾಗ ನಿರ್ದೇಶಕ ಪ್ರಭುದೇವ ಸೇರಿ ಎಲ್ಲರ ತಲೆಯಲ್ಲೂ ಹೊಳೆದಿದ್ದು ಸುದೀಪ್​ ಹೆಸರು. ಹಾಗಾಗಿ ಅವರ ಜೊತೆ ಮಾತುಕತೆ ನಡೆಸಿದೆವು. ಸುದೀಪ್​ ಖುಷಿಯಿಂದ ಇದಕ್ಕೆ ಒಪ್ಪಿಕೊಂಡರು,” ಎನ್ನುತ್ತಾರೆ ಅರ್ಬಾಜ್​.

ಸಿನಿಮಾದ ಕೆಲ ಪ್ರಮುಖ ದೃಶ್ಯಗಳನ್ನು ಈಗಾಗಲೇ ಶೂಟ್​ ಮಾಡಲಾಗಿದೆಯಂತೆ. ಸುದೀಪ್​ ಈ ಪಾತ್ರವನ್ನು ತುಂಬಾನೇ ಉತ್ತಮವಾಗಿ ನಿರ್ವಹಿಸಿದ್ದಾರೆ ಎನ್ನುವುದು ಅರ್ಬಾಜ್​ ಅಭಿಪ್ರಾಯ. ಅವರು ಸುದೀಪ್​ ನಟನೆಯನ್ನು ತುಂಬಾನೇ ಶ್ಲಾಘಿಸಿದ್ದಾರೆ.

‘ದಬಂಗ್​ 3’ ಸಿನಿಮಾವನ್ನು ಪ್ರಭುದೇವ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ನಾಯಕ. ಸೋನಾಕ್ಷಿ ಸಿನ್ಹಾ ನಾಯಕಿ. ಅರ್ಬಾಜ್​ ಖಾನ್​ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಚುಲ್ಬುಲ್​ ಪಾಂಡೆ ಆಗಿ ಸಲ್ಲು ಕಾಣಿಸಿಕೊಳ್ಳುತ್ತಿದ್ದಾರೆ. ಸುದೀಪ್​ ನೆಗೆಟಿವ್​ ಪಾತ್ರ ನಿರ್ವಹಿಸಲಿದ್ದಾರಂತೆ. ಸುದೀಪ್​ ಈ ಮೊದಲು ಹಿಂದಿಯಲ್ಲಿ ‘ಫೂಂಕ್​’, ‘ಫೂಂಕ್​ 2’, ‘ರನ್​’ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದರು. ಸದ್ಯ, ಕನ್ನಡದಲ್ಲಿ 'ಪೈಲ್ವಾನ್​', 'ಕೊಟಿಗೊಬ್ಬ 3', ಅನೂಪ್​ ಭಂಡಾರಿ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಅವರು ಅಭಿನಯಿಸುತ್ತಿದ್ದಾರೆ.ಇದನ್ನೂ ಓದಿ: ದಬಂಗ್​ 3 ಚಿತ್ರದಲ್ಲಿ ಸುದೀಪ್​ ನಟಿಸೋದು ಖಚಿತ?; ಹೌದೆನ್ನುತ್ತಿವೆ ಈ ಟ್ವೀಟ್​ಗಳು

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ