Lal Singh Chaddha: ಫಾರೆಸ್ಟ್ ಗಂಪ್‌ ಹಿಟ್​, ಲಾಲ್​ ಸಿಂಗ್​ ಫ್ಲಾಪ್​! ಆಮಿರ್​ ಖಾನ್​ ಇಲ್ಲೇ ಎಡವಿದ್ದು, ಸಿನಿಮಾ ಸೋಲಿಗೂ ಇದೇ ಕಾರಣ

ಲಾಲ್ ಸಿಂಗ್ ಚಡ್ಡಾ ಹಾಗೂ ಫಾರೆಸ್ಟ್ ಗಂಪ್‌ ಚಿತ್ರಗಳು ಸಮಾನ ಕಥಾಹಂದರವನ್ನು ಹೊಂದಿದ್ದರೂ ಕೆಲವೊಂದು ಸನ್ನಿವೇಶಗಳನ್ನು ಭಾರತೀಯ ನೆಲೆಗಟ್ಟಿಗೆ ಅನುಗುಣವಾಗಿ ಬದಲಾಯಿಸಲಾಗಿದೆ. ಇತಿಹಾಸವು ನಿರೂಪಣೆಗೆ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿಲ್ಲವಾದ್ದರಿಂದ, ಇದು ಕೆಲವು ಹೊಸ ವಿಷಯಾಧಾರಿತ ಸನ್ನಿವೇಶದೊಂದಿಗೆ ಕಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಸಿನೆಮಾ

ಲಾಲ್ ಸಿಂಗ್ ಚಡ್ಡಾ ಸಿನೆಮಾ

  • Share this:
ಬಾಲಿವುಡ್ ಮೆಗಾಸ್ಟಾರ್ ಆಮಿರ್ ಖಾನ್‌ (Aamir Khan) ಹಾಗೂ ಸೂಪರ್‌ಸ್ಟಾರ್ ನಿರ್ದೇಶಕ ಅದ್ವೈತ್ ಚಂದನ್ (Advait Chandan) ಸಾರಥ್ಯದಲ್ಲಿ ಮೂಡಿಬಂದಿರುವ ಲಾಲ್ ಸಿಂಗ್ ಚಡ್ಡಾ ಸಿನಿಮಾ ಟಾಮ್ ಹಾಂಕ್ಸ್‌ ಅಭಿನಯದ ಇಂಗ್ಲಿಷ್ ಚಿತ್ರವಾಗಿರುವ 'ಫಾರೆಸ್ಟ್ ಗಂಪ್‌'ನ (Forest Gump) ಹಿಂದಿ ಅವತರಣಿಕೆಯಾಗಿದೆ. ಆಮಿರ್ ಪ್ರೊಡಕ್ಶನ್ ಹೌಸ್ 'ಆಮಿರ್ ಖಾನ್‌ ಪ್ರೊಡಕ್ಶನ್' ಚಿತ್ರದ ನಿರ್ಮಾಣ ಹೊಣೆ ಹೊತ್ತಿದೆ. ಚಿತ್ರ ವಿಮರ್ಶಕರು ಲಾಲ್ ಸಿಂಗ್ ಚಡ್ಡಾ (Lal Singh Chaddha) ಸಿನಿಮಾವು ಇಂಗ್ಲಿಷ್ ಚಿತ್ರಕ್ಕಿಂತ ಉತ್ತಮವಾಗಿ ಮೂಡಿಬಂದಿದೆ ಎಂದು ಹೊಗಳಿದ್ದಾರೆ. ಲಾಲ್ ಸಿಂಗ್ ಚಡ್ಡಾ ಹಾಗೂ ಫಾರೆಸ್ಟ್ ಗಂಪ್‌ ಚಿತ್ರಗಳು ಸಮಾನ ಕಥಾಹಂದರವನ್ನು (Storyline) ಹೊಂದಿದ್ದರೂ ಕೆಲವೊಂದು ಸನ್ನಿವೇಶಗಳನ್ನು ಭಾರತೀಯ ನೆಲೆಗಟ್ಟಿಗೆ ಅನುಗುಣವಾಗಿ ಬದಲಾಯಿಸಲಾಗಿದೆ.

ಇತಿಹಾಸವು ನಿರೂಪಣೆಗೆ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿಲ್ಲವಾದ್ದರಿಂದ, ಇದು ಕೆಲವು ಹೊಸ ವಿಷಯಾಧಾರಿತ ಸನ್ನಿವೇಶದೊಂದಿಗೆ ಕಥೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತದೆ.

ಫಾರೆಸ್ಟ್ ಗಂಪ್‌ ಮತ್ತು ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿರುವ ಬದಲಾವಣೆಗಳು 
ಇಂಗ್ಲಿಷ್ ಚಿತ್ರದಲ್ಲಿ ನಾಯಕ ಗಂಪ್ ಅನ್ನು ಪೂರ್ವಕ್ಕೆ ಕಳುಹಿಸುವುದು ಇತಿಹಾಸ ಹಾಗೂ ಸಂಸ್ಕೃತಿಯ ಹೊಸ ರೂಪವನ್ನು ತೆರೆಯುತ್ತದೆ. ಹಿಂದಿ ಚಿತ್ರದಲ್ಲಿ ಅತುಲ್ ಕುಲಕರ್ಣಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿದ್ದು ಇಂಗ್ಲಿಷ್ ಅವತರಣಿಕೆಯಲ್ಲಿ ಚಾಕಲೇಟ್ ಬಾಕ್ಸ್ ಬಳಸಿದ್ದರೆ ಹಿಂದಿ ಭಾಷೆಯಲ್ಲಿ ಗೋಲ್ ಗಪ್ಪಾವನ್ನು ಬಳಸಲಾಗಿದೆ. ಒಟ್ಟಾರೆಯಾಗಿ ಚಿತ್ರದ ಮೂಲಾಂಶವನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ ಎಂದೇ ಹೇಳಬಹುದು.

ಚಂಡೀಗಢದ ಪ್ರಯಾಣಿಕರ ದೈನಂದಿನ ಜೀವನವನ್ನು ಚಿತ್ರದಲ್ಲಿ ಕಾಣಬಹುದಾಗಿದ್ದು ಖಾನ್ ಅವರ ಪಾತ್ರವು ಗಂಪ್‌ಗಿಂತ ಭಿನ್ನವಾಗಿದೆ ಎಂದೇ ಹೇಳಬಹುದು. ಆಮಿರ್ ಖಾನ್‌ ತಮ್ಮ ಪಾತ್ರಕ್ಕೆ ತಕ್ಕ ನ್ಯಾಯವನ್ನು ಒದಗಿಸಿರುವುದು ಕಂಡುಬಂದಿದೆ. ಆಮಿರ್ ಪ್ರಿಯತಮೆಯಾಗಿ (ರೂಪಾ) ಕರೀನಾ ಕಪೂರ್ ನಟಿಸಿದ್ದು ಇವರಿಬ್ಬರ ಬಂಧವನ್ನು ಬೇರ್ಪಡಿಸುವ ಕೆಲವೊಂದು ಪಿತೂರಿಗಳು, ಯೋಜನೆಗಳು ಹೀಗೆ ಎಲ್ಲಾ ಚಿತ್ರಗಳಲ್ಲಿ ಕಂಡುಬರುವ ಖಳನಾಯಕ ಅಂಶಗಳು ಚಿತ್ರದಲ್ಲಿ ಕಂಡುಬಂದಿದೆ.

ಅರ್ಥಪೂರ್ಣವಾದ ದೃಶ್ಯಗಳನ್ನೊಳಗೊಂಡ ಚಿತ್ರ
ಸೇನೆಯ ಫೋಟೋಶಾಟ್‌ಗಳು ನಿರೀಕ್ಷೆಗಿಂತ ಹೆಚ್ಚಾಗಿ ಚಿತ್ರದಲ್ಲಿ ಕಂಡುಬಂದಿದೆ. ಚಿತ್ರದಲ್ಲಿ ಲಾಲ್ ಸಿಂಗ್‌ನ ಪೂರ್ವಜರು ಹಲವಾರು ಗಡಿವಿವಾದಗಳಲ್ಲಿ ಪ್ರಾಣ ತೆತ್ತವರಾಗಿರುತ್ತಾರೆ. ನಾಯಕನು ಎರಡು ತತ್ವಗಳಲ್ಲಿ ಜೀವನ ನಡೆಸುವವನಾಗಿರುತ್ತಾನೆ ಒಂದು ವಿಪತ್ತನ್ನು ಎದುರಿಸುವುದು ಇಲ್ಲದಿದ್ದರೆ ವಿಪತ್ತಿನಿಂದ ದೂರವಿರಲು ಓಡುವುದು. ಕೆಲವೊಂದು ಸನ್ನಿವೇಶಗಳು ಪ್ರೇಕ್ಷಕರಲ್ಲಿ ಕಿರುನಗೆಯನ್ನು ಮೂಡಿಸುವಂತಿದೆ.

ಇದನ್ನೂ ಓದಿ:  Laal Singh Chaddha Controversy: ಲಾಲ್ ಸಿಂಗ್ ಚಡ್ಡಾ ಚಿತ್ರಕ್ಕೆ ವಿವಾದ ಎದುರಾಗಿದ್ದೇಕೆ? ಅಷ್ಟಕ್ಕೂ ಆ ಸಿನಿಮಾದಲ್ಲಿ ಏನಿದೆ?

ಚಿತ್ರದಲ್ಲಿ ಕೆಲವೊಂದು ದೃಶ್ಯಗಳು ಅರ್ಥಪೂರ್ಣವಾಗಿ ಮೂಡಿಬಂದಿದೆ. ಓಟದ ದೃಶ್ಯಗಳನ್ನು ಮೋಜಿನ ರೂಪದಲ್ಲಿ ಸೆರೆಹಿಡಿಯಲಾಗಿದೆ. ಖಾನ್ ಅವರ ಚಿತ್ರಗಳು ಒಂದಲ್ಲಾ ಒಂದು ರೀತಿಯ ವಿವಾದಕ್ಕೆ ಒಳಗಾದರೂ ಚಿತ್ರದಲ್ಲಿ ಯಾವುದಾದರೂ ಸಂದೇಶವನ್ನು ಪ್ರಸ್ತುತಪಡಿಸಲು ಅವರು ಮರೆಯುವುದಿಲ್ಲ.

ಅದ್ವೈತ್ ಚಂದನ್ ಅವರ ಸಿನಿಮಾವು ಫ್ಲ್ಯಾಶ್‌ಬ್ಯಾಕ್ ಒಳಗೊಂಡಿರುವ ನಿರ್ಮಾಣ, ಹಾಸ್ಯ, ಸಂಭಾಷಣೆಗಳಿಂದ ಭಿನ್ನವಾಗಿ ಫಾರೆಸ್ಟ್‌ ಗಂಪ್‌ಗಿಂತ ಪ್ರತ್ಯೇಕವಾಗಿ ನಿಂತಿದೆ. ರಾಬರ್ಟ್ ಝೆಮೆಕಿಸ್ ಅವರ 1994 ರ ಬ್ಲಾಕ್‌ಬಸ್ಟರ್‌ನಲ್ಲಿ ಟಾಮ್ ಹ್ಯಾಂಕ್ಸ್ ನಟಿಸಿದ್ದು ಅಮೇರಿಕಾದ ಐತಿಹಾಸಿಕ ನಾಗರಿಕ ಹಕ್ಕುಗಳ ಚಳುವಳಿ, ವಿಯೆಟ್ನಾಂ ಯುದ್ಧ ಮತ್ತು ವಾಟರ್‌ಗೇಟ್ ಹಗರಣದಂತಹ ಯುಗಕಾಲದ ಘಟನೆಗಳ ಮೇಲೆ ತಮಗೆ ಗೊತ್ತಿಲ್ಲದೆ ಪ್ರಭಾವ ಬೀರುವ ಪಾತ್ರವನ್ನು ತೆರೆಯ ಮೇಲೆ ತಂದಿದ್ದಾರೆ.

ಈ ಚಿತ್ರಕಥೆ ಯಾವೆಲ್ಲಾ ವಿಷಯಗಳನ್ನೊಳಗೊಂಡಿದೆ
ಹಿಂದಿ ರಿಮೇಕ್‌ನಲ್ಲಿ ಆಮಿರ್ ಖಾನ್‌ ಟಾಮ್ ಪಾತ್ರಕ್ಕೆ ಜೀವತುಂಬಿದ್ದು ಇಂಗ್ಲಿಷ್‌ನ ಅದೇ ಸಂಭಾಷಣೆಗಳನ್ನು ಚಿತ್ರದಲ್ಲಿ ಕಾಣಬಹುದು. ಅತುಲ್ ಕುಲಕರ್ಣಿಯವರ 164 ನಿಮಿಷಗಳ ಚಿತ್ರಕಥೆಯು 1970 ರಿಂದ 2018 ರವರೆಗೂ ವ್ಯಾಪಿಸಿದೆ. ಆಪರೇಶನ್ ಬ್ಲುಸ್ಟಾರ್, ಇಂದಿರಾ ಗಾಂಧಿಯವರ ಹತ್ಯೆಯ ನಂತರ ಸಿಖ್ಖರ ಹತ್ಯಾಕಾಂಡ, ರಾಮಮಂದಿರ ಚಳುವಳಿ, ಬಾಬರಿ ಮಸೀದಿ ಧ್ವಂಸ ಮತ್ತು ಕಾರ್ಗಿಲ್ ಯುದ್ಧ ಮೊದಲಾದ ಘಟನೆಗಳನ್ನು ಒಳಗೊಂಡಿದೆ.

ಲಾಲ್ ತನ್ನ ನೃತ್ಯ ಶೈಲಿಗಳನ್ನು ಚಲನಚಿತ್ರ ತಾರೆಗೆ ಕಲಿಸಿಕೊಡುತ್ತಾನೆ ಅಂತೆಯೇ ಕಾರ್ಗಿಲ್‌ ಯುದ್ಧದಲ್ಲಿ ಧೈರ್ಯದಿಂದ ಹೋರಾಡುತ್ತಾನೆ ಹಾಗೂ ಯಶಸ್ವಿ ಕಂಪನಿಯೊಂದನ್ನು ಸ್ಥಾಪಿಸುತ್ತಾನೆ. ಲಾಲ್ ಬಾಲರಾಜು (ನಾಗ ಚೈತನ್ಯ) ಮತ್ತು ಮೊಹಮ್ಮದ್ (ಮಾನವ್ ವಿಜ್) ರೊಂದಿಗೆ ಸ್ನೇಹ ಬೆಳೆಸುತ್ತಾನೆ ಆದರೆ ಅವನ ಬಾಲ್ಯದ ಗೆಳತಿ ರೂಪಾ (ಕರೀನಾ ಕಪೂರ್ ಖಾನ್) ರನ್ನು ಮದುವೆಯಾಗುವುದು ಅವನ ಏಕೈಕ ಮಹತ್ವಾಕಾಂಕ್ಷೆಯಾಗಿರುತ್ತದೆ.

ಇದನ್ನೂ ಓದಿ:  Aamir Khan: ಬಾಲಿವುಡ್ ಸಿನಿಮಾಗಳು ಸದ್ದು ಮಾಡದಿರಲು ಆಮಿರ್ ಖಾನ್ ಕಾರಣವಂತೆ, ಕರಣ್ ಜೋಹರ್ ಹೀಗೆ ಅಂದಿದ್ಯಾಕೆ?

ಒಟ್ಟಿನಲ್ಲಿ ಚಿತ್ರವು ನಿರ್ಣಾಯಕ ಬದಲಾವಣೆಗಳನ್ನು ಹೊರತುಪಡಿಸಿ ಮೂಲ ಕಥಾ ಹಂದರಕ್ಕೆ ನಿಷ್ಟವಾಗಿದೆ. ಚಿತ್ರದಲ್ಲಿ ಆಮಿರ್ ಖಾನ್‌ ಜೊತೆಗೆ ಕರೀನಾ ಕಪೂರ್ ಖಾನ್, ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಅಕ್ಕಿನೇನಿ ನಟಿಸಿದ್ದಾರೆ.
Published by:Ashwini Prabhu
First published: