ಬಾಲಿವುಡ್ ನಟ-ನಟಿಯರು (Bollywood Actress) ತಮ್ಮ ಫಿಟ್‌ನೆಸ್ ಕಾಯ್ದುಕೊಳ್ಳುವಲ್ಲಿ ಸಾಕಷ್ಟು ಕಾಳಜಿ ವಹಿಸುತ್ತಾರೆ. ಆರೋಗ್ಯ ಹಾಗೂ ಫಿಟ್‌ನೆಸ್‌ಗೆ ವಿಶೇಷ ಗಮನ ನೀಡುವ ಸೆಲೆಬ್ರಿಟಿಗಳು ಸರಿಯಾದ ಆಹಾರ ಕ್ರಮವನ್ನು ಪಾಲಿಸುತ್ತಾರೆ. ಅಲ್ಲದೇ ವ್ಯಾಯಾಮವನ್ನು ಯಾವತ್ತೂ ತಪ್ಪಿಸೋದಿಲ್ಲ. ಅಂದಹಾಗೆ ಶ್ರದ್ಧಾ ಕಪೂರ್ (Shraddha Kapoor) ಬಾಲಿವುಡ್‌ನ ಬೇಡಿಕೆಯ ನಟಿ. ಸಖತ್ ಸ್ಲಿಮ್ ಆಗಿರುವ ಈ ಆಶಿಕಿ ಹೀರೋಯಿನ್ ಬ್ಯೂಟಿ ಸೀಕ್ರೆಟ್ ಏನು? ಅವರು ಏನನ್ನು ತಿಂತಾರೆ? ಎಷ್ಟು ತಿಂತಾರೆ? ಯಾವ ವ್ಯಾಯಾಮ ಮಾಡ್ತಾರೆ? ಅವರ ಲೈಫ್‌ಸ್ಟೈಲ್ ಹೇಗಿರುತ್ತೆ? ಅವರ ಫಿಟ್‌ನೆಸ್ (Fitness) ಮಂತ್ರವೇನು ಅನ್ನೋದನ್ನು ನೋಡೋಣ.
ಸಖತ್ ಫುಡಿ ಶ್ರದ್ಧಾ:
ಬಾಲಿವುಡ್‌ನ ಸ್ಲಿಮ್ ಬ್ಯೂಟಿ ಶ್ರದ್ಧಾ ಕಪೂರ್‌ಗೆ ತಿನ್ನೋದು ಅಂದ್ರೆ ಸಖತ್ ಇಷ್ಟವಂತೆ. ಅವರು ಜಂಕ್ ಫುಡ್ ಕೂಡ ಇಷ್ಟಪಟ್ಟು ತಿಂತಾರಂತೆ. ಅದರಲ್ಲೂ ವೆರೈಟಿ ಕೇಕ್, ಸ್ಟ್ರೀಟ್ ಫುಡ್, ಫ್ರೈಸ್, ಜಿಲೇಬಿ ಅಂದ್ರೆ ಅವ್ರಿಗೆ ತುಂಬಾ ಇಷ್ಟ. ಅದೆಲ್ಲವನ್ನೂ ಅವರು ಆರಾಮಾಗಿ ತಿಂತಾರಂತೆ.
ಆದ್ರೆ ಇಷ್ಟೆಲ್ಲ ತಿಂದರೂ ಅವ್ರು ಹೇಗೆ ಅಷ್ಟು ಫಿಟ್ ಆಂಡ್ ಫೈನ್ ಆಗಿ ಬಳುಕುವ ಬಳ್ಳಿಯಂತಿದ್ದಾರೆ ಅನ್ನೋದು ಇಟೆರೆಸ್ಟಿಂಗ್.
ಎಲ್ಲವೂ ಮಿತಿಯಲ್ಲಿ:
ಅತಿಯಾದರೆ ಅಮೃತವೂ ವಿಷ ಅನ್ನೋ ಗಾದೆ ಆಹಾರದ ವಿಷಯದಲ್ಲಂತೂ ನೂರಕ್ಕೆ ನೂರರಷ್ಟು ನಿಜ. ಇಷ್ಟ ಎಂದು ಯಾವುದನ್ನೇ ಆಗಲಿ ಮಿತಿಮೀರಿ ತಿಂದರೆ ಆರೋಗ್ಯ ಕೆಟ್ಟಿತು ಅಂತಾನೇ ಲೆಕ್ಕ.
ಶ್ರದ್ಧಾ ಕಪೂರ್ ಅವರು ಇಷ್ಟ ಪಡುವಂಥ ಬಹಳಷ್ಟು ತಿಂಡಿಗಳನ್ನು ತಿಂತಾರೆ. ಆದ್ರೆ ಎಲ್ಲವೂ ಮಿತಿಯಲ್ಲಿಯೇ ಇರುತ್ತೆ. ಅವರು ಯಾವುದೇ ಆಹಾರವನ್ನಾಗಲಿ ಸ್ವಲ್ಪ ಸ್ವಲ್ಪವೇ ತಿನ್ನುತ್ತಾರಂತೆ. ಹೊಟ್ಟೆ ಬಿರಿಯುವಂತೆ ಯಾವುದನ್ನೂ ತಿನ್ನೋದಿಲ್ಲ ಅನ್ನೋದೇ ಅವರ ಫಿಟ್‌ನೆಸ್ ಸೀಕ್ರೇಟ್.
ಶ್ರದ್ಧಾ ಊಟದ ಸಮಯ:
ಅವರು ಬೆಳಗಿನ ತಿಂಡಿಯನ್ನು ಎಂದಿಗೂ ತಪ್ಪಿಸೋದಿಲ್ಲ. ಹಾಗೆಯೇ ರಾತ್ರಿ ಊಟವನ್ನು ಬಹಳ ಬೇಗನೇ ಮಾಡಿರುತ್ತಾರಂತೆ. ಇದರಿಂದ ತಿಂದ ಊಟ ಚೆನ್ನಾಗಿ ಜೀರ್ಣವಾಗಿ ಚೆನ್ನಾಗಿ ನಿದ್ದೆ ಬರುತ್ತದೆ.
ಕಾರ್ಡಿಯೋ ತಪ್ಪಿಸೋದಿಲ್ಲವಂತೆ:
ಕಾರ್ಡಿಯೋ ವ್ಯಾಯಾಮ ಮಾಡೋದ್ರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಅಲ್ಲದೇ ಕ್ಯಾಲರಿ ಬರ್ನ್ ಮಾಡಲು ಇದು ಅತ್ಯುತ್ತಮ ವ್ಯಾಯಾಮದ ವಿಧ ಅಂತ ಹೇಳಲಾಗುತ್ತದೆ. ಹಾಗಾಗಿ ಸೈಕ್ಲಿಂಗ್, ಯೋಗ, ರನ್ನಿಂಗ್ ಹೀಗೆ ಯಾವುದನ್ನು ಮಾಡಿದರೂ ಅವರು ಕಾರ್ಡಿಯೋ ತಪ್ಪಿಸೋದಿಲ್ಲ ಅಂತ ಹೇಳಲಾಗುತ್ತದೆ.
ಯೋಗ ಮುಖ್ಯ ಅಂತಾರೆ ನಟಿ:
ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ನೀಡುವಂಥ ಯೋಗ ತುಂಬಾ ಮುಖ್ಯ ಅನ್ನೋದು ಶ್ರದ್ಧಾ ಕಪೂರ್ ಅಭಿಪ್ರಾಯ.ಯೋಗ ದೇಹವನ್ನು ಮತ್ತಷ್ಟು ಫ್ಲೆಕ್ಸಿಬಲ್ ಮಾಡುತ್ತೆ. ಜೊತೆಗೆ ಬಹಳಷ್ಟು ಧನಾತ್ಮಕತೆಯನ್ನು ನಮ್ಮಲ್ಲಿ ತುಂಬುತ್ತದೆ ಅಂತಾರೆ ಶ್ರದ್ಧಾ. ಹಾಗಾಗಿ ಯೋಗ ಮಾಡೋದನ್ನು ಯಾವತ್ತಿಗೂ ಅವರು ಮಿಸ್ ಮಾಡೋದಿಲ್ಲವಂತೆ.
ಡಾನ್ಸ್ ಮಾಡುವುದು ಇಷ್ಟ:
ನಾನು ಇಷ್ಟು ಆರೋಗ್ಯಕರವಾಗಿರಲು ಕಾರಣ ಡಾನ್ಸ್. ನಾನು ನೃತ್ಯವನ್ನು ಬಹಳ ಇಷ್ಟ ಪಡುತ್ತೇನೆ ಎಂಬುದಾಗಿ ಶ್ರದ್ಧಾ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು.
ಸ್ವಿಮ್ಮಿಂಗ್:
ಸ್ವಿಮ್ಮಿಂಗ್ ಮಾಡೋದು ಆರೋಗ್ಯಕ್ಕೆ ಒಳ್ಳೆಯದು. ಇದು ದೇಹವನ್ನು ಹಾಗೂ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ. ಇದು ಸ್ನಾಯುಗಳನ್ನು ಬಲಗೊಳಿಸುತ್ತದೆ. ಶ್ರದ್ಧಾ ಕಪೂರ್‌ಗೆ ಸ್ವಿಮ್ಮಿಂಗ್ ಮಾಡೋದು ಅಂದ್ರೆ ತುಂಬಾ ಇಷ್ಟವಂತೆ. ಈಜುವುದರಿಂದ ತುಂಬಾ ರಿಫ್ರೆಶ್ ಆಗುತ್ತೇವೆ. ಅಲ್ಲದೇ ಕ್ಯಾಲೋರೀಸ್ ಬರ್ನ್ ಮಾಡೋಕೆ ಇದು ಬೆಸ್ಟ್ ಅಂತಾರೆ.
ತೂ ಜೂಟಿ ಮೈ ಮಕ್ಕರ್ :
ಅಂದಹಾಗೆ ಶ್ರದ್ಧಾ ಕಪೂರ್ ಮುಂದಿನ ಚಿತ್ರ 'ತೂ ಜೂಟಿ ಮೈ ಮಕ್ಕರ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶ್ರದ್ಧಾಗೆ ಜೊತೆಯಾಗಿ ನಟ ರಣಬೀರ್ ಕಪೂರ್ ನಟಿಸುತ್ತಿದ್ದಾರೆ. ಅಲ್ಲದೇ ಶ್ರದ್ಧಾ ನಟಿಸಿರುವ 'ನೋ ಮೀನ್ಸ್ ನೋ' ಚಿತ್ರ ಇದೇ ಮೇ ತಿಂಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ