• Home
  • »
  • News
  • »
  • entertainment
  • »
  • Bollywood Actress: ಮಮ್ಮಿ ಆದ್ರೂ ಡಮ್ಮಿ ಆಗದ ಹೀರೋಯಿನ್‌ಗಳಿವರು! ಇವರ ಸೌಂದರ್ಯದ ಗುಟ್ಟು ಗೊತ್ತಾ?

Bollywood Actress: ಮಮ್ಮಿ ಆದ್ರೂ ಡಮ್ಮಿ ಆಗದ ಹೀರೋಯಿನ್‌ಗಳಿವರು! ಇವರ ಸೌಂದರ್ಯದ ಗುಟ್ಟು ಗೊತ್ತಾ?

ಬಾಲಿವುಡ್​ ತಾರೆಯರು

ಬಾಲಿವುಡ್​ ತಾರೆಯರು

ಮಗುವಿಗೆ ಜನ್ಮ ನೀಡಿದ ನಂತರ ತಾಯಂದಿರು ಆ ನವಜಾತ ಶಿಶುವನ್ನು ನೋಡಿಕೊಳ್ಳುವ ಕೆಲಸದಲ್ಲಿ ತುಂಬಾನೇ ಬ್ಯುಸಿ ಆಗುವುದರಿಂದ ತಮ್ಮ ದೇಹ ತೂಕದ ಕಡೆಗೆ ಗಮನ ನೀಡುವುದು ಕ್ರಮೇಣವಾಗಿ ಕಡಿಮೆಯಾಗುತ್ತದೆ.

  • Trending Desk
  • 5-MIN READ
  • Last Updated :
  • Share this:

ಸಾಮಾನ್ಯವಾಗಿ ಮಹಿಳೆಯರಿಗೆ ಗರ್ಭಧಾರಣೆಯ (Pregnancy) ನಂತರ ದೇಹದಲ್ಲಿನ ತೂಕವು ಹೆಚ್ಚಾಗುತ್ತದೆ. ಮಗುವಿಗೆ ಜನ್ಮ ನೀಡಿದ ನಂತರ ತಾಯಂದಿರು ಆ ನವಜಾತ ಶಿಶುವನ್ನು(Newborn) ನೋಡಿಕೊಳ್ಳುವ ಕೆಲಸದಲ್ಲಿ ತುಂಬಾನೇ ಬ್ಯುಸಿ (Busy)  ಆಗುವುದರಿಂದ ತಮ್ಮ ದೇಹ ತೂಕದ ಕಡೆಗೆ ಗಮನ ನೀಡುವುದು ಕ್ರಮೇಣವಾಗಿ ಕಡಿಮೆಯಾಗುತ್ತದೆ. ಆದರಲ್ಲೂ ಈ ಸಿನೆಮಾ ನಟಿಯರಿಗಂತೂ ಗರ್ಭಧಾರಣೆಯ ನಂತರ ತಮ್ಮ ಫಿಟ್ನೆಸ್ (Fitness) ಅನ್ನು ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಸುಂದರವಾದ ನಟಿಯರು ತಮ್ಮ ಗರ್ಭಧಾರಣೆಯ ನಂತರ ಹೇಗಾಗಿದ್ದಾರೆ ಅಂತ ಸಹ ನೋಡಲು ಅಭಿಮಾನಿಗಳಿಗೆ ತುಂಬಾನೇ ಕುತೂಹಲವಿರುತ್ತದೆ. ಅವರು ತಮ್ಮ ಗರ್ಭಧಾರಣೆಯ ಸಮಯದಲ್ಲಿ ತೂಕವನ್ನು ಹೆಚ್ಚಿಸಿಕೊಂಡರೂ, ಅವರು ತಮ್ಮ ಮಗುವಿಗೆ ಜನ್ಮ ನೀಡಿದ ಕೆಲವೇ ತಿಂಗಳುಗಳಲ್ಲಿ ಮರಳಿ ಮುಂಚೆ ಇದ್ದಂತಹ ಆಕಾರಕ್ಕೆ ಬಹುಬೇಗನೆ ಬರುತ್ತಾರೆ ಅಂತ ಹೇಳಬಹುದು.


ಅದರಲ್ಲೂ ಕೆಲವು ನಟಿಯರು ತಮ್ಮ ಗರ್ಭಧಾರಣೆಯ ನಂತರದಲ್ಲಿ ಬಹುಬೇಗನೆ ತೂಕವನ್ನು ಇಳಿಸಿಕೊಂಡು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದ ಉದಾಹರಣೆಗಳು ಸಾಕಷ್ಟಿವೆ ಅಂತ ಹೇಳಬಹುದು.


ಆಲಿಯಾ ಭಟ್


ಆಲಿಯಾ ಮತ್ತು ರಣಬೀರ್ ಅವರು ಇದೇ ವರ್ಷದ ನವೆಂಬರ್ 6 ರಂದು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ನಟಿ ಆಲಿಯಾ ಇತ್ತೀಚೆಗೆ ತನ್ನ ಮಗಳ ಜನನದ ನಂತರ ಮೊದಲ ಬಾರಿಗೆ ಹೊರ ಬಂದರು.


ನೀಲಿ-ಬಣ್ಣದ ಫ್ಲೇರ್ಡ್ ಜೀನ್ಸ್ ಮತ್ತು ಶ್ರಗ್ ನೊಂದಿಗೆ ಕಪ್ಪು ಒಳ ಜೋಡಿಯನ್ನು ಧರಿಸಿದ್ದ ನಟಿ ಎಂದಿನಂತೆ ಅದ್ಭುತವಾಗಿಯೇ ಕಾಣುತ್ತಿದ್ದರು. ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ತಕ್ಷಣ, ಅಭಿಮಾನಿಗಳಿಂದ ಕಾಮೆಂಟ್ ಗಳು ಹರಿದು ಬಂದವು.


ಇದನ್ನೂ ಓದಿ: ರೂಪೇಶ್ ರಾಜಣ್ಣನ ಗಡ್ಡ ತೆಗೆದಿದ್ದೇಕೆ ಸಂಬರ್ಗಿ? ರಾಜ್ಯಾದ್ಯಂತ ಈಗ ಇದೇ ಬ್ರೇಕಿಂಗ್ ನ್ಯೂಸ್!


ಹೆರಿಗೆಯಾದ ಒಂದು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿಯೇ ಆಲಿಯಾ ಅವರು ತೂಕ ಕಡಿಮೆ ಮಾಡಿಕೊಂಡು ಫಿಟ್ ಆಗಿರುವುದನ್ನು ನೋಡಿ ನೆಟ್ಟಿಗರು ತುಂಬಾನೇ ಶ್ಲಾಘಿಸಿದ್ದಾರೆ.


ಕರೀನಾ ಕಪೂರ್ ಖಾನ್


ನಟಿ ಕರೀನಾ ಕಪೂರ್ ಖಾನ್ ಅವರು ತನ್ನ ಮೊದಲ ಗರ್ಭಧಾರಣೆಯ ಸಮಯದಲ್ಲಿ ಸಾಮಾಜಿಕ ವಲಯವನ್ನು ಆಳಿದ ರೀತಿಯಿಂದ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದರು. ಸುಂದರವಾದ ನಟಿ ಗರ್ಭಧಾರಣೆಯ ಸಮಯದಲ್ಲಿ ತೂಕವನ್ನು ಹೆಚ್ಚು ಮಾಡಿಕೊಂಡಿದ್ದರು.


ಆದರೆ ತನ್ನ ಮೊದಲ ಮಗು ತೈಮೂರ್ ಅಲಿ ಖಾನ್ ಗೆ ಜನ್ಮ ನೀಡಿದ ಕೇವಲ ಮೂರು ತಿಂಗಳಲ್ಲಿಯೇ ಕರೀನಾ ಸುಮಾರು 16 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು. ನಟಿ ಸಮತೋಲಿತ ಆಹಾರ ಮತ್ತು ವ್ಯಾಯಾಮದ ಕಡೆಗೆ ಹೆಚ್ಚಿನ ಗಮನವನ್ನು ನೀಡಿದರು.


ಬೆಬೊ, ತನ್ನ ಎರಡನೇ ಗರ್ಭಧಾರಣೆಯ ತಿಂಗಳುಗಳಲ್ಲಿ ಯೋಜಿತ ತಾಲೀಮುಗಳು ಮತ್ತು ಯೋಗದೊಂದಿಗೆ ತೂಕವನ್ನು ಕಳೆದುಕೊಂಡಳು. ಫಿಟ್ ತಾಯಿಯಾಗಲು ಬಯಸುವ ಕರೀನಾ, ತಾನು ಕಾಣುವ ರೀತಿಗಾಗಿ ತನ್ನನ್ನು ತಾನು ಹೆಚ್ಚು ಒತ್ತಡಕ್ಕೆ ಗುರಿ ಮಾಡಿಕೊಳ್ಳುವುದಿಲ್ಲ ಎಂದು ಸುದ್ದಿ ಪೋರ್ಟಲ್ ಗೆ ತಿಳಿಸಿದರು.


ಸೋನಂ ಕಪೂರ್


ಪ್ರಸ್ತುತ ತಾಯ್ತನದ ವೈಭವದಲ್ಲಿ ಮುಳುಗಿರುವ ಸೋನಂ ಕಪೂರ್, ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ತನ್ನ ಸ್ಟೈಲಿಶ್ ನೋಟದಿಂದ ಎಲ್ಲರ ಮನಗೆದ್ದರು.
ಪೇಸ್ಟಲ್ ಗ್ರೀನ್ ಮಿನಿ ಡ್ರೆಸ್ ನಲ್ಲಿ ಮ್ಯಾಚಿಂಗ್ ಬ್ಲೇಜರ್ ಮತ್ತು ಲಾಂಗ್ ಕೋಟ್ ಧರಿಸಿದ್ದ ಸೋನಂ ಎಂದಿನಂತೆ ಫಿಟ್ ಆಗಿ ಕಾಣುತ್ತಿದ್ದರು. ಸೋನಂ ತನ್ನ ಮಗ ವಾಯುವಿಗೆ ಜನ್ಮ ನೀಡಿದ ಕೇವಲ ನಾಲ್ಕು ತಿಂಗಳ ನಂತರ ತನ್ನ ಮೊದಲಿದ್ದ ದೇಹದ ಆಕಾರಕ್ಕೆ ಮರಳಿರುವುದನ್ನು ನೋಡಿ ಅಭಿಮಾನಿಗಳು ಆಶ್ಚರ್ಯಚಕಿತರಾದರು.


ಅನುಷ್ಕಾ ಶರ್ಮಾ


2021 ರಲ್ಲಿ ನಟಿ ಅನುಷ್ಕಾ ಅವರು ವಮಿಕಾ ಎಂಬ ಮಗಳಿಗೆ ಜನ್ಮ ನೀಡಿದರು. ಈ ನಟಿಯು ತಾನು ಕಾಣುವ ರೀತಿಯನ್ನು ಹೇಗೆ ಸ್ವೀಕರಿಸುವುದು ಅಂತ ತುಂಬಾನೇ ಚಿಂತೆಯಲ್ಲಿದ್ದರಂತೆ.


ಪ್ರಸವಾನಂತರದ ದೇಹವನ್ನು ಬಹುತೇಕರು ದ್ವೇಷಿಸುತ್ತಾರೆ ಮತ್ತು ತೂಕ ಸಹ ಹೆಚ್ಚಾಗುತ್ತದೆ. ಆದಾಗ್ಯೂ, ನಟಿ ಕಡಿಮೆ ಸಮಯದಲ್ಲಿಯೇ ತನ್ನ ತೂಕವನ್ನು ಇಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ವಮಿಕಾಗೆ ಜನ್ಮ ನೀಡಿದ ಎರಡು ತಿಂಗಳೊಳಗೆ ಅನುಷ್ಕಾ ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದರು. ಈಗ ಅನುಷ್ಕಾ ಮೊದಲಿನಂತೆ ಫಿಟ್ ಆಗಿ ಕಾಣುತ್ತಿದ್ದಾರೆ.


ಶಿಲ್ಪಾ ಶೆಟ್ಟಿ


ನಟಿ ಶಿಲ್ಪಾ ಶೆಟ್ಟಿ ಆಗಾಗ್ಗೆ ತನ್ನ ಯೋಗ, ವರ್ಕೌಟ್ ಸೆಷನ್ ಗಳು ಮತ್ತು ಡಯಟ್ ಸಲಹೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ಪ್ರೇರೇಪಿಸುವುದನ್ನು ಕಾಣಬಹುದು.


ನಟಿ ತನ್ನ ಗರ್ಭಾವಸ್ಥೆಯಲ್ಲಿ 32 ಕೆಜಿ ತೂಕವನ್ನು ಮತ್ತು ಮಗುವಿನ ಜನನದ ನಂತರ ಎರಡು ಕಿಲೋಗಳಷ್ಟು ಹೆಚ್ಚು ತೂಕವನ್ನು ಹೆಚ್ಚಿಸಿಕೊಂಡಿದ್ದರು ಎಂದು ವರದಿಯಾಗಿತ್ತು. ಆದಾಗ್ಯೂ, ಅವಳು ತನ್ನ ಮಗ ವಿಯಾನ್ ಹುಟ್ಟಿದ ಮೂರು ತಿಂಗಳ ನಂತರ ಸುಮಾರು 21 ಕಿಲೋಗಳಷ್ಟು ತೂಕವನ್ನು ಕಡಿಮೆ ಮಾಡಿಕೊಂಡರು.

First published: