News18 India World Cup 2019

'ಸೈರಾಟ್​' ಚಿತ್ರದ ದುಂಡು ಕೆನ್ನೆ ಸುಂದರಿ ಈಗ ಹೇಗಿದ್ದಾರೆ ಗೊತ್ತಾ?

news18
Updated:August 13, 2018, 9:07 PM IST
'ಸೈರಾಟ್​' ಚಿತ್ರದ ದುಂಡು ಕೆನ್ನೆ ಸುಂದರಿ ಈಗ ಹೇಗಿದ್ದಾರೆ ಗೊತ್ತಾ?
news18
Updated: August 13, 2018, 9:07 PM IST
-ನ್ಯೂಸ್ 18 ಕನ್ನಡ

ಮುಂಬೈ (ಆಗಸ್ಟ್13): ಮರಾಠಿಯ 'ಸೈರಾಟ್' ಅಥವಾ ಕನ್ನಡದ 'ಮನಸು ಮಲ್ಲಿಗೆ' ಚಿತ್ರವನ್ನು ನೋಡಿದವರಿಗೆ ರಿಂಕು ರಾಜ್​ಗುರು ಮುಖ ಚಿರಪರಿಚಿತ. ಚಿತ್ರದಲ್ಲಿ ಮನೋಜ್ಞ ಅಭಿನಯ ಮತ್ತು ಬುಲೆಟ್​ ಓಡಿಸುವ ಮೂಲಕ ಆರ್ಚಿ ಅಲಿಯಾಸ್ ರಿಂಕು ಎಲ್ಲರ ಮನಗೆದ್ದಿದ್ದರು. 'ಮನಸು ಮಲ್ಲಿಗೆ'ಯ ದುಂಡು ಕೆನ್ನೆಯ ನಾಯಕಿ ಸದ್ಯ 'ಕಾಗರ್' ಎಂಬ ಮರಾಠಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ರಿಂಕು ಮಾಡಿದ ನೃತ್ಯದ ವಿಡಿಯೋವೊಂದು ಸಖತ್ ವೈರಲ್​ ಆಗಿತ್ತು. ಮಕರಂದ್ ಮಾನೆ ನಿರ್ದೇಶನದ ಹೊಸ ಚಿತ್ರಕ್ಕಾಗಿ ಮುದ್ದು ಮುಖದ ರಿಂಕು ಬಳುಕುವ ಬಳ್ಳಿಯಾಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಎಲ್ಲರೂ ಆಶ್ಚರ್ಯಚಕಿತರಾಗುವಂತೆ  ದೇಹ ತೂಕ ಇಳಿಸಿ ಮತ್ತಷ್ಟು ಸುಂದರಿಯಾಗಿರುವ ರಿಂಕು ತಮ್ಮ ದೇಹ ಸೌಂದರ್ಯದ ಗುಟ್ಟನ್ನು ನ್ಯೂಸ್ 18 ಜೊತೆ ಹಂಚಿಕೊಂಡಿದ್ದಾರೆ.ಸೈರಾಟ್​ ಚಿತ್ರದ ಬಳಿಕ ನಾನು ಸ್ವಲ್ಪ ದಪ್ಪಗಾಗಿದ್ದೆ. 10ನೇ ತರಗತಿ ಪರೀಕ್ಷೆ ಬೇರೆ ಇದ್ದುದರಿಂದ ಅತ್ತ ಕಡೆ ಗಮನ ಹರಿಸಿದ್ದೆ. ಆದರೆ ದೇಹ ತೂಕ ಹೆಚ್ಚುತ್ತಿರುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದರಿತ ಮೇಲೆ ದೇಹ ದಂಡಿಸಲು ನಿರ್ಧರಿಸಿದೆ ಎಂದು ರಿಂಕು ಚೆಂದುಳ್ಳಿ ಚೆಲುವೆಯಾಗಲು ಇರುವ ಕಾರಣವನ್ನು ತಿಳಿಸಿದರು.ತೂಕ ಕಡಿಮೆ ಮಾಡಲೇನೊ ನಿರ್ಧರಿಸಿದೆ. ಆದರೆ ಅದಕ್ಕಾಗಿ ನಾನೇ ಮನಸ್ಸು ಮಾಡಬೇಕಿತ್ತು. ಆದರೆ 'ಮನಸ್ಸು ಮಲ್ಲಿಗೆ'ಯ ಬೆಡಗಿಯ ನಿರ್ಧಾರ ಗಟ್ಟಿಯಾಗಿತ್ತು. ಅವರೇ ಹೇಳುವಂತೆ ಇದಕ್ಕಾಗಿ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ವ್ಯಾಯಾಮ ಮಾಡುತ್ತಿದ್ದರು. ಮೊದಲು ವಾಕಿಂಗ್​ಗೆ ಹೋದರೆ ನಂತರ ವಿವಿಧ ರೀತಿಯ ವ್ಯಾಯಾಮ ಮಾಡುತ್ತಿದ್ದೆ. ಅಷ್ಟೇ ಅಲ್ಲದೆ ಆಹಾರ ಬಗ್ಗೆಯು ವಿಶೇಷ ಕಾಳಜಿವಹಿಸಿದ್ದೆ. ಬೆಳಿಗ್ಗೆ ಮತ್ತು ಸಂಜೆ ಸಲಾಡ್​ಗಳನ್ನು ತಿನ್ನುತ್ತಿದ್ದೆ. ಸಿಹಿ ಪ್ರಿಯಳಾಗಿದ್ದ ನಾನು ಸಂಪೂರ್ಣ ಸಿಹಿ ತಿಂಡಿಗಳಿಂದ ದೂರವಿದ್ದೆ. ಮೊದಲು ಕಷ್ಟವಾಗುತ್ತಿದ್ದಾರೂ ಬಳಿಕ ಮನೆಯವರ ಸಹಕಾರದಿಂದ ಎಲ್ಲವೂ ಸಲೀಸಾಯಿತು.ರಿಂಕು ತನ್ನ ದೇಹ ತೂಕವನ್ನು ಇಳಿಸಿಕೊಳ್ಳಲು ಯಾವುದೇ ತರಬೇತುದಾರರ ಸಹಾಯ ಪಡೆಯಲಿಲ್ಲ. ಫಿಟ್​ನೆಸ್​ಗಾಗಿ ತಾಯಿ ಸಹಾಯ ಮಾಡಿದರು. ಅವರ ನಿರ್ದೇಶನದಂತೆ ಆಹಾರ ಪದ್ದತಿಯಲ್ಲಿ ಬದಲಾವಣೆ ಮಾಡಿದೆ. ಹೀಗಾಗಿ ಕೇವಲ ಎರಡರಿಂದ ಮೂರು ತಿಂಗಳೊಳಗೆ 12.ಕೆ.ಜಿ ತೂಕ ಕಡಿಮೆ ಮಾಡಲು ಸಹಾಯವಾಯಿತು ಎಂದರು. ಇದರ ನಡುವೆ  ದಕ್ಷಿಣ ಭಾರತದ ಸಿನಿಮಾದಲ್ಲೂ ಅಭಿನಯಿಸಿದ ರಿಂಕು ವಿಭಿನ್ನ ಭಾಷೆಯ ಸಿನಿಮಾದಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಅದರಲ್ಲೂ ದಕ್ಷಿಣ ಭಾರತದ ಹೆಚ್ಚಿನವರು 'ಸೈರಾಟ್' ಸಿನಿಮಾವನ್ನು ನೋಡಿರುವುದಾಗಿ ತಿಳಿಸಿದ್ದರು ಎಂದು ಖುಷಿ ಹಂಚಿಕೊಂಡರು.'ಸೈರಾಟ್' ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆದ ಒಂದು ಚಿತ್ರವಾಗಿದ್ದು, ಇದರ ಯಶಸ್ಸಿನ ಬಗ್ಗೆ ಕೇಳಿದಾಗ, ಮೊದಮೊದಲು ನನಗೆ ಕಷ್ಟವಾಗುತ್ತಿತ್ತು ಆದರೆ ಬಳಿಕ ಅನೇಕ ಜನರನ್ನು ಭೇಟಿಯಾಗುವುದು ಖುಷಿ ಕೊಡಲಾರಂಭಿಸಿತು. ಗ್ರಾಮಸ್ಥರನ್ನು ಭೇಟಿಯಾದಾಗ ಅವರು ನನ್ನನ್ನು ಗ್ರಾಮದ ಅತಿಥಿಯಾಗಿ ಬರ ಮಾಡಿಕೊಳ್ಳುತ್ತಾರೆ. ಅದರಲ್ಲೂ ಕೆಲವರು ನನಗೆ ಚಿತ್ರಗಳನ್ನು ಆರಿಸಿಕೊಳ್ಳುವಾಗ ಹೆಚ್ಚು ಗಮನಹರಿಸಿ  ಎಂದೇಳುವಾಗ ಅವರ ಕಾಳಜಿ ಕಾಣಿಸುತ್ತದೆ. 'ಕಾಗರ್'​ ಸಿನಿಮಾದಲ್ಲಿ ನಾನು ಬಿಲ್ಲುಗಾರ್ತಿಯ ಪಾತ್ರ ಮಾಡುತ್ತಿದ್ದೇನೆ ಎಂಬುದನ್ನು 'ಸೈರಾಟ್' ಬೆಡಗಿ ಬಹಿರಂಗ ಪಡಿಸಿದರು.  ಈ ಸಿನಿಮಾ ದೀಪಾವಳಿಗೆ ತೆರೆಗೆ ಬರಲಿದ್ದು, ಇದು ರಿಂಕುವಿನ ಮತ್ತೊಂದು ಸೂಪರ್ ಹಿಟ್​ ಚಿತ್ರವಾಗುವ ನಿರೀಕ್ಷೆಯಿದೆ.
First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...