ಕಳೆದ ವಾರ, ಟ್ವಿಟರ್ ವ್ಯಕ್ತಿಗಳಲ್ಲಿ ಒಬ್ಬರಾದ ದಿವಂಗತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಪ್ರೊಫೈಲ್‌ನಲ್ಲಿ ಇದ್ದಕ್ಕಿದ್ದಂತೆ ಬ್ಲೂ ಟಿಕ್ ಮಾಯವಾಗಿತ್ತು. ಅನೇಕ ಸೆಲೆಬ್ರಿಟಿಗಳು ಚಂದಾದಾರರಾಗದೆ ಬ್ಲೂ ಟಿಕ್ (Twitter Blue Tick) ಹೇಗೆ ಪಡೆದರು ಎಂದು ಟ್ವಿಟರ್‌ಗೆ ಸಾರ್ವಜನಿಕವಾಗಿ ಕೇಳಿದ್ದಾರೆ. ಇದೀಗ ಭಾರತದ ಮಾಜಿ ಟ್ವಿಟರ್ ಮುಖ್ಯಸ್ಥರು ಸಹ ಸುಶಾಂತ್ ಸಿಂಗ್ ರಜಪೂತ್ ಅವರ ಖಾತೆಯನ್ನು ಮಾತ್ರವಲ್ಲದೆ, ಅವರ ಫೋನ್ ಸಂಖ್ಯೆಯನ್ನು ಸಹ ಇತ್ತೀಚೆಗೆ ಪರಿಶೀಲಿಸಲಾಗಿದೆ. ಅದು ಹೇಗೆ ಎಂದು ಎಲಾನ್ ಮಸ್ಕ್ (Elon Musk) ಅವರನ್ನು ಪ್ರಶ್ನಿಸಿದ್ದಾರೆ.
ಮನೀಶ್ ಮಹೇಶ್ವರಿ ಟ್ವೀಟ್ ವೈರಲ್
ಟ್ವಿಟರ್, ಪರಂಪರೆಯ ಬ್ಲೂ ಟಿಕ್ ಅನ್ನು ತೆಗೆದುಹಾಕಿತು. ಜಗತ್ತಿನಾದ್ಯಂತ ಪ್ರಸಿದ್ಧ ವ್ಯಕ್ತಿಗಳು ಬ್ಲೂ ಟಿಕ್ ಕಳೆದುಕೊಂಡಿದ್ದರಿಂದ ಟ್ವಿಟರ್‌ನಲ್ಲಿ ಅವ್ಯವಸ್ಥೆ ಉಂಟಾಗಿತ್ತು. ಇದರ ಪರಿಣಾಮವಾಗಿ, ಹೊಸ ಟ್ವಿಟರ್ ಬ್ಲೂ ಯೋಜನೆಯಡಿಯಲ್ಲಿ ಬ್ಲೂ ಟಿಕ್‌ಗಳನ್ನು ಅನೇಕ ಖಾತೆಗಳಿಗೆ ನಿಗೂಢವಾಗಿ ನೀಡಲಾಗಿತ್ತು. ನಿಧನರಾದ ಅನೇಕ ಸೆಲೆಬ್ರಿಟಿಗಳ ಖಾತೆಗಳಿಗೆ ಪರಿಶೀಲಿಸಲಾದ ಬ್ಲೂ ಟಿಕ್‌ಗಳನ್ನು ಸಹ ನೀಡಲಾಗಿದ್ದು, ಟ್ವಿಟರ್‌ನ ಈ ನಡೆ ಮುಜಗರಕ್ಕೆ ಈಡಾಗಿದೆ.
ಟ್ವಿಟರ್ ಬ್ಲೂಟಿಕ್ ಅನ್ನು ಪರಿಶೀಲಿಸಿದ ಫೋನ್ ಸಂಖ್ಯೆಯ ಮೂಲಕ ಮಾತ್ರ ಪಡೆಯಲಾಗುತ್ತದೆ ಮತ್ತು ಸತ್ತವರ ಸಂಪರ್ಕ ಪ್ರವೇಶವನ್ನು ಹೊಂದಲು ಯಾವುದೇ ಮಾರ್ಗವಿಲ್ಲ, ಆದರೂ ಸತ್ತವರ ಖಾತೆಯಲ್ಲಿ ಬ್ಲೂ ಟಿಕ್ ಕಾಣಿಸಿಕೊಂಡಿದೆ ಅದು ಹೇಗೆ ಸಾಧ್ಯ? ಅಂತಾ ಸೋಶಿಯಲ್ ಮೀಡಿಯಾದಲ್ಲಿ ಟ್ವಿಟರ್ ಅವಸ್ಥೆಯನ್ನು ಟ್ರೋಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಕಿಚ್ಚನ ಬಿಗ್ ಅನೌನ್ಸ್‌ಮೆಂಟ್! ಹೊಸ ಸಿನಿಮಾ ಬಗ್ಗೆ ಮಾಹಿತಿ
ಸುಶಾಂತ್ ಸಿಂಗ್ ಟ್ವಿಟರ್ ಅಕೌಂಟ್ಗೆ ಮರಳಿ ಬಂದ ಬ್ಲೂಟಿಕ್
"ಸುಶಾಂತ್ ಸಿಂಗ್ ರಜಪೂತ್ (ಮತ್ತು ಇತರ ಮೃತ ಸೆಲೆಬ್ರಿಟಿಗಳು) ತಮ್ಮ ಟ್ವಿಟರ್ ಖಾತೆಯಲ್ಲಿ ಇದ್ದಕ್ಕಿದ್ದಂತೆ ಬ್ಲೂ ಟಿಕ್ ಅನ್ನು ಪಡೆದುಕೊಂಡಿದ್ದಾರೆ. ಈ ಬ್ಲೂ ಟಿಕ್ ಅನ್ನು ಪಡೆಯಲು ಮೊದಲು ನಿಮ್ಮ ಫೋನ್ ಸಂಖ್ಯೆಗಳನ್ನು ಪರಿಶೀಲಿಸಲಾಗುತ್ತದೆ, ಆದರೆ ಮೃತ ಸೆಲೆಬ್ರಿಟಿಗಳ ಫೋನ್ ಸಂಖ್ಯೆಗಳನ್ನು ಹೇಗೆ ಪರಿಶೀಲಿಸಲಾಗಿದೆ. ಇದು ನಿಜಕ್ಕೂ ಅಚ್ಚರಿ ಎಂದು ಮನೀಶ್ ಮಹೇಶ್ವರಿ ಟ್ವೀಟ್ ಮಾಡಿದ್ದಾರೆ.
ಈ ಬ್ಲೂ ಟಿಕ್ ವಿಚಾರವಾಗಿ ಎಲಾನ್ ಮಸ್ಕ್ ಸುಳ್ಳು ಹೇಳುತ್ತಿದ್ದಾರಾ, ಇಲ್ಲಾ ಸತ್ತವರು ಅವರ ಜೊತೆಯೇ ಫೋನ್ ತೆಗೆದುಕೊಂಡು ಹೋಗುವ ಮಾರ್ಗ ಕೊಂಡುಕೊಂಡಿದ್ದಾರಾ ಎಂದು ಮಹೇಶ್ವರಿ ಟ್ವಿಟರ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಎಲಾನ್ ಮಸ್ಕ್ ಟ್ವೀಟ್‌ಗೆ ಪ್ರತಿಕ್ರಿಯಿಸದಿದ್ದರೂ, ಸತ್ತ ಸೆಲೆಬ್ರಿಟಿಗಳ ಖಾತೆಯು ನೀಲಿ ಟಿಕ್‌ನೊಂದಿಗೆ ಮತ್ತೆ ಕಾಣಿಸಿಕೊಂಡ ಏಕೈಕ ಪ್ರಕರಣವಲ್ಲ.ಬಾಸ್ಕೆಟ್‌ಬಾಲ್ ಆಟಗಾರ ಕೋಬ್ ಬ್ರ್ಯಾಂಟ್ ಮತ್ತು ಪ್ಯಾಂಥರ್ಸ್ ತಾರೆ ಚಾಡ್ವಿಕ್ ಬೋಸ್‌ಮನ್ ಅವರ ಖಾತೆಗಳು ಸಹ ನೀಲಿ ಟಿಕ್ ಅನ್ನು ಹೊಂದಿದೆ.
ಟ್ವಿಟರ್ ಘೋಷಣೆ
ಸಾಮಾಜಿಕ ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಜನರು ಚಂದಾದಾರಿಕೆಗೆ ಪಾವತಿಸದಿದ್ದರೂ ಸಹ ಒಂದು ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚಿನ ಅನುಯಾಯಿಗಳನ್ನು ತಲುಪಿದರೆ ಅವರಲ್ಲಿ ಅನೇಕರಿಗೆ ಬ್ಲೂ ಟಿಕ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ಟ್ವೀಟರ್ ಘೋಷಿಸಿತ್ತು.
ಇತರ ಸಲೆಬ್ರಿಟಿಗಳಿಗೂ ಬ್ಲೂ ಟಿಕ್ ವಾಪಾಸ್
ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್, ಮತ್ತು ಅಮಿತಾಭ್ ಬಚ್ಚನ್ ಸೇರಿದಂತೆ ಕೆಲವು ಪ್ರಸಿದ್ಧ ಭಾರತೀಯ ವ್ಯಕ್ತಿಗಳು ತಮ್ಮ ಬ್ಲೂ ಟಿಕ್ ಗುರುತುಗಳನ್ನು ಮರಳಿ ಪಡೆದಿದ್ದಾರೆ. ಕಳೆದ ವಾರ, ಟ್ವಿಟರ್ ಸರ್ಕಾರ, ಸೆಲೆಬ್ರಿಟಿಗಳು, ವ್ಯಾಪಾರ ಮುಖಂಡರು ಮತ್ತು ರಾಜಕಾರಣಿಗಳ ಖಾತೆಯಿಂದ ಟ್ವಿಟರ್ ಬ್ಲೂ ಟಿಕ್ ಮಾರ್ಕ್ ಅನ್ನು ತೆಗೆದುಹಾಕಿದೆ.
ಟ್ವಿಟರ್‌ನ ಹೊಸ ನಿಯಮ ಏನು?
ನೀವು ಟ್ವಿಟರ್ ಬ್ಲೂ ಟಿಕ್ ಮಾರ್ಕ್ ಅನ್ನು ಪಡೆಯಲು ಬಯಸಿದರೆ ನೀವು ಟ್ವಿಟರ್ ಅಪ್ಲಿಕೇಶನ್‌ನ ಚಂದಾದಾರಿಕೆಯನ್ನು ಖರೀದಿಸಬೇಕು. ಅದು ಭಾರತದಲ್ಲಿ ಕಂಪ್ಯೂಟರ್ ಚಂದಾದಾರಿಕೆಯು ತಿಂಗಳಿಗೆ 650 ರೂ ಹಾಗೂ ಮೊಬೈಲ್‌ಗಳಲ್ಲಿ ವೈಯಕ್ತಿಕ ಬಳಕೆದಾರ ಖಾತೆಗಳಿಗಾಗಿ 900 ರೂ ಬೆಲೆಯನ್ನು ಟ್ವಿಟರ್ ನಿಗದಿಪಡಿಸಿದೆ.
ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಟ್ವೀಟ್ ವೈರಲ್
ಟ್ವಿಟರ್ ಇಂಡಿಯಾದ ಮಾಜಿ ಮುಖ್ಯಸ್ಥ ಮನೀಶ್ ಮಹೇಶ್ವರಿ ಟ್ವೀಟ್ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು. ಇದು ಹಲವಾರು ಲೈಕ್‌ಗಳನ್ನು ಪಡೆದುಕೊಂಡಿದೆ ಹಾಗೂ ಹಲವರು ಕಾಮೆಂಟ್‌ಗಳನ್ನು ಸಹ ಮಾಡಿದ್ದಾರೆ.
ಮನೀಶ್ ಮಹೇಶ್ವರಿ ಟ್ವೀಟ್ ಪ್ರತಿಕ್ರಿಯಿಸಿದ ಒಬ್ಬ ಟ್ವಿಟರ್ ಬಳಕೆದಾರರು ದಯವಿಟ್ಟು ಸುಶಾಂತ್ ಸಿಂಗ್ ರಜಪೂತ್ ಅವರ ಪ್ರಸ್ತಾಪವನ್ನು ಮಾಡಬೇಡಿ. ದಯವಿಟ್ಟು ಅವರಿಗೆ ಶಾಂತಿ ಕೋರಿ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಟ್ವಿಟರ್ ಬ್ಲೂ ಟಿಕ್ ವಿಚಾರ ನಿಜಕ್ಕೂ ಗೊಂದಲಮಯವಾಗಿದೆ ಎಂದು ಹೇಳಿದ್ದಾರೆ. ಕೆಲ ಬಳಕೆದಾರರು ಟ್ವಿಟರ್‌ನ ಬೇಜಾವಬ್ದಾರಿ ತನಕ್ಕೆ ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ