• Home
  • »
  • News
  • »
  • entertainment
  • »
  • Shah Rukh Khan: ಶಾರುಖ್ ಖಾನ್ ಗೆ ಬಾದ್ ಷಾ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್​ ಕಹಾನಿ

Shah Rukh Khan: ಶಾರುಖ್ ಖಾನ್ ಗೆ ಬಾದ್ ಷಾ ಹೆಸರು ಬಂದಿದ್ದು ಹೇಗೆ? ಇಲ್ಲಿದೆ ಇಂಟ್ರಸ್ಟಿಂಗ್​ ಕಹಾನಿ

ಶಾರುಖ್ ಖಾನ್ ಅವರ ಅಶೋಕ ಸಿನೆಮಾ

ಶಾರುಖ್ ಖಾನ್ ಅವರ ಅಶೋಕ ಸಿನೆಮಾ

ಸಾಮಾನ್ಯವಾಗಿ ಈ ನಟರು ತಾವು ಅಭಿನಯಿಸಿದ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಚೆನ್ನಾಗಿ ಹಣ ಗಳಿಸಿದರೂ, ಹಣ ಗಳಿಸದೆ ಇದ್ದರೂ ತಮಗೆ ಬರಬೇಕಾದ ಹಣವನ್ನು ಚಿತ್ರ ತಯಾರಕರಿಂದ ಪಡೆದೇ ಪಡೆಯುತ್ತಾರೆ ಅಂತ ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಆದರೆ ಶಾರುಖ್ ಖಾನ್ ಮಾತ್ರ ತನ್ನ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸರಿಯಾಗಿ ಹಣ ಮಾಡದೆ ವೈಫಲ್ಯವನ್ನು ಕಂಡರೆ ತೀರಾ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲವಂತೆ. ಬದಲಾಗಿ, ಅಂತಹ ಚಿತ್ರಗಳಲ್ಲಿ ಹಣ ಹೂಡಿಕೆ ಮಾಡಿದವರಿಗೆ ಹಣವನ್ನು ಹಿಂದಿರುಗಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರಂತೆ.

ಮುಂದೆ ಓದಿ ...
  • Share this:

ಬಾಲಿವುಡ್ ನಲ್ಲಿ ‘ಬಾದ್ ಷಾ’ ಅಂತ ಹೇಳಿದರೆ ಸಾಕು ಸಿನಿ ರಸಿಕರಿಗೆ ಥಟ್ಟನೆ ಬಾಯಿಗೆ ಬರುವ ಹೆಸರು ಎಂದರೆ ನಟ ಶಾರುಖ್ ಖಾನ್ (Shah Rukh Khan) ಅವರದ್ದು. ಹೌದು.. ಬಾಲಿವುಡ್ ನ (Bollywood) ಬಾದ್ ಷಾ ಅಂತಾನೆ ಖ್ಯಾತಿ ಗಳಿಸಿರುವ ಶಾರುಖ್ ಗೆ ಈ ಹೆಸರು ಬಂದಿದ್ದು ಕೇವಲ ಅವರ ನಟನೆಯನ್ನು (Acting) ನೋಡಿ ಅಭಿಮಾನಿಗಳು ತೋರಿಸಿದ ಪ್ರೀತಿಯಿಂದ ಅಂತ ಹೇಳಿದರೆ ಅದು ಅರ್ಧ ಸತ್ಯ ಅಂತ ಅನ್ನಿಸಿಕೊಳ್ಳುತ್ತದೆ. ಹಾಗಾದರೆ ಪೂರ್ತಿ ಸತ್ಯ ಏನು ಅಂತೀರಾ? ಶಾರುಖ್ ಅವರ ಬುದ್ಧಿವಂತಿಕೆ, ಹಾಸ್ಯಪ್ರಜ್ಞೆ ಮತ್ತು ಚಿಂತನಶೀಲತೆಯಿಂದಾಗಿಯೂ ಸಹ ಇವರನ್ನು ನಿಜವಾಗಲೂ ‘ಬಾದ್ ಷಾ’ (Bad Shah) ಅಂತ ಕರೆಯುತ್ತಾರೆ.


ಚಿತ್ರ ಚೆನ್ನಾಗಿ ಹಣ ಮಾಡದಿದ್ದರೆ ಲಾಭದ ಪಾಲನ್ನು ತೊಗೋಳಲ್ವಂತೆ ಶಾರುಖ್
ಸಾಮಾನ್ಯವಾಗಿ ಈ ನಟರು ತಾವು ಅಭಿನಯಿಸಿದ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಚೆನ್ನಾಗಿ ಹಣ ಗಳಿಸಿದರೂ, ಹಣ ಗಳಿಸದೆ ಇದ್ದರೂ ತಮಗೆ ಬರಬೇಕಾದ ಹಣವನ್ನು ಚಿತ್ರ ತಯಾರಕರಿಂದ ಪಡೆದೇ ಪಡೆಯುತ್ತಾರೆ ಅಂತ ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ.


ಆದರೆ ಶಾರುಖ್ ಖಾನ್ ಮಾತ್ರ ತನ್ನ ಚಿತ್ರಗಳು ಗಲ್ಲಾ ಪೆಟ್ಟಿಗೆಯಲ್ಲಿ ಸರಿಯಾಗಿ ಹಣ ಮಾಡದೆ ವೈಫಲ್ಯವನ್ನು ಕಂಡರೆ ತೀರಾ ಮನಸ್ಸಿಗೆ ತೆಗೆದುಕೊಳ್ಳುವುದಿಲ್ಲವಂತೆ. ಬದಲಾಗಿ, ಅಂತಹ ಚಿತ್ರಗಳಲ್ಲಿ ಹಣ ಹೂಡಿಕೆ ಮಾಡಿದವರಿಗೆ ಹಣವನ್ನು ಹಿಂದಿರುಗಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರಂತೆ.


ಇದನ್ನೂ ಓದಿ: Dollu Movie: ನಿಮ್ಮ ಮನೆಗೇ ಬರುತ್ತಿದೇೆ ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ, ಅಮೆಜಾನ್ ಪ್ರೈಮ್‌ನಲ್ಲಿ ನೋಡಿ ಡೊಳ್ಳು!


2001 ರಲ್ಲಿ ತೆರೆಕಂಡ ಐತಿಹಾಸಿಕ ಚಿತ್ರ ‘ಅಶೋಕ’ ದ ಸೋಲಿನ ನಂತರ ಶಾರುಖ್ ನೀಡಿದ ಸಂದರ್ಶನವೊಂದರಲ್ಲಿ, ನಟ ತಮ್ಮ ಚಿತ್ರವು ಗಲ್ಲಾ ಪೆಟ್ಟಿಗೆಗಳಲ್ಲಿ ಉತ್ತಮವಾಗಿ ಹಣ ಮಾಡಲು ವಿಫಲವಾದರೆ, ಆ ಚಿತ್ರದ ಲಾಭದ ಪಾಲನ್ನು ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದರು.


‘ಅಶೋಕ’ ಚಿತ್ರದ ವೈಫಲ್ಯದ ಬಗ್ಗೆ ಶಾರುಖ್ ಹೇಳಿದ್ದೇನು?
ಸುದ್ದಿ ಮಾಧ್ಯಮದ ಜೊತೆಗೆ ಮಾತನಾಡಿದ ಶಾರುಖ್ “ನಾನು ಇತರರ ಹಣವನ್ನು ದುರುಪಯೋಗ ಪಡಿಸಿಕೊಳ್ಳುವುದಿಲ್ಲ" ಎಂದು ಹೇಳಿದ್ದರು. "ನಾನು ಆ ಚಿತ್ರವನ್ನು 500 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಬಹುದಿತ್ತು ಮತ್ತು ನನ್ನ ಹಣವನ್ನು ಮರಳಿ ಪಡೆಯಬಹುದಾಗಿತ್ತು, ಆದರೆ ನಾನು ಅದನ್ನು ಮಾಡಲು ಬಯಸಲಿಲ್ಲ” ಎಂದು ಖುದ್ದು ನಟ ಹೇಳಿಕೊಂಡಿದ್ದಾರೆ.


ಶಾರುಖ್ ಖಾನ್ ಅವರು ಆ ಚಿತ್ರದ ಮೂಲಕ ಸುಲಭವಾಗಿ ಹಣವನ್ನು ಗಳಿಸಬಹುದಾಗಿತ್ತು, ಆದರೆ ಅವರು ಅದನ್ನು ಮಾಡಲಿಲ್ಲ ಎಂದು ಹೇಳಿದರು. "ನಾನು ಸುಲಭವಾಗಿ ಹಣವನ್ನು ಗಳಿಸಬಹುದಾಗಿತ್ತು ಮತ್ತು ಬರುವ ಲಾಭದಿಂದ ನಾನು ಬಿಎಂಡಬ್ಲ್ಯೂ ಅನ್ನು ಖರೀದಿಸಬಹುದಾಗಿತ್ತು. ಆದರೆ ನನ್ನ ಬಳಿ ಈಗಾಗಲೇ ಬಿಎಂಡಬ್ಲ್ಯೂ ಇದೆ" ಎಂದು ನಟ ಹೇಳಿದ್ದರು.


ಹಣ ನೋಡಿ ಚಿತ್ರ ಮಾಡಲ್ವಂತೆ ಬಾದ್ ಷಾ
ವಾಸ್ತವವಾಗಿ, ಶಾರುಖ್ ಯಾವುದೇ ಚಲನಚಿತ್ರವನ್ನು ಅದರ ಆರ್ಥಿಕ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಂದಿಗೂ ಸಹಿ ಮಾಡಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಅವರ ದೃಷ್ಟಿಯಲ್ಲಿ, ಚಲನಚಿತ್ರವು ಲಕ್ಷ್ಮಿ ಮತ್ತು ಸರಸ್ವತಿ ದೇವಿಯ ಮಿಶ್ರಣ ಆಗಿದೆ ಮತ್ತು ಅವರು ಯಾವಾಗಲೂ ಸರಸ್ವತಿಯನ್ನು ಎಂದರೆ ಕಲೆಯನ್ನು ಹಿಂಬಾಲಿಸುತ್ತಾರೆ, ಲಕ್ಷ್ಮಿ ಎಂದರೆ ಹಣ ತಾನಾಗಿಯೇ ಹಿಂಬಾಲಿಸುತ್ತದೆ ಅಂತ ಶಾರುಖ್ ಅವರು ಹೇಳಿದ್ದರು.


"ಆ ಚಿತ್ರ ನನಗೆ ಇನ್ನೂ ವಿಭಿನ್ನವಾದ ಚಿತ್ರಗಳನ್ನು ಮಾಡುವ ಜವಾಬ್ದಾರಿಯನ್ನು ನೀಡಿತು ಮತ್ತು ನಾನು ಯಾವಾಗಲೂ ಬಿಹಾರದಲ್ಲಿ ಮತ್ತು ಬರ್ಮಿಂಗ್ಹ್ಯಾಮ್ ನ ಮುಖ್ಯವಾಹಿನಿಯ ಚಿತ್ರಮಂದಿರಗಳಲ್ಲಿ ಓಡುವಂತಹ ಭಾರತೀಯ ಚಲನಚಿತ್ರಗಳನ್ನು ಮಾಡಲು ನಾನು ಬಯಸುತ್ತೇನೆ" ಎಂದು ನಟ ಹೇಳಿದ್ದಾರೆ.


ಇದನ್ನೂ ಓದಿ:  Kantara-Rishab Shetty: ನಾನು ನನ್ನ ಮಗಳು! ರಾಧ್ಯ ಜೊತೆ ಫೋಟೋ ಹಂಚಿಕೊಂಡ ರಿಷಬ್


"ಜನರು ಚಿತ್ರಮಂದಿರದಿಂದ ಹೊರ ಬಂದಾಗ 'ಒಳ್ಳೆಯ ಚಿತ್ರ' ನೋಡಿದೆವು ಅಂತ ಹೇಳುವಂತೆ ಮಾಡುವ ಚಲನಚಿತ್ರವನ್ನು ಮಾಡಲು ನಾನು ಬಯಸುತ್ತೇನೆ” ಎಂದು ಹೇಳಿದ್ದರು. ಇನ್ನೂ ಈಗ ಕೆಲಸದ ವಿಷಯಕ್ಕೆ ಬಂದರೆ ನಟ ಶಾರುಖ್ ತಮ್ಮ ಮೂರು ಚಿತ್ರಗಳಾದ ಪಠಾನ್, ಡಂಕಿ ಮತ್ತು ಜವಾನ್ ಚಿತ್ರಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

Published by:Ashwini Prabhu
First published: