Pavitra Lokesh: ಪವಿತ್ರಾ ಲೋಕೇಶ್‌ಗೆ ಸೌಂದರ್ಯ, ಪ್ರತಿಭೆ ಇದ್ದರೂ ಅಂದು ಸಿಗಲಿಲ್ಲ ಅವಕಾಶ! ಇಂದು ಪರಭಾಷೆಯಲ್ಲಿ ಇವರೇ ಸ್ಟಾರ್ ಅಮ್ಮ!

ಪವಿತ್ರಾ ಲೋಕೇಶ್ ಪಾತ್ರಗಳ ಆಯ್ಕೆಯಲ್ಲಿ ಎಡವಿದ್ರು. ತಂದೆಯಿಲ್ಲದೇ ಇಡೀ ಮನೆ ಜವಾಬ್ದಾರಿ ಹೊರಬೇಕಾದ ಪರಿಸ್ಥಿತಿ ಇದ್ದಿದ್ರಿಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡರು. ಕೆಲವು ಗ್ಲಾಮರಸ್ ಪಾತ್ರಕ್ಕೂ ಬಣ್ಣ ಹಚ್ಚಿದ್ರು. ಆದರೆ ಅವು ಕ್ಲಿಕ್ ಆಗಲೇ ಇಲ್ಲ. ನಿಧಾನಕ್ಕೆ ಕನ್ನಡದ ಹೀರೋಗಳು, ನಿರ್ದೇಶಕ, ನಿರ್ಮಾಪಕರು ಪವಿತ್ರಾರನನ್ನು ಮರೆತರು. ಕನ್ನಡಿಗರ ನೆನಪಿನಿಂದ ಪವಿತ್ರಾ ಲೋಕೇಶ್ ಮರೆಯಾದರು.

ನಟಿ ಪವಿತ್ರಾ ಲೋಕೇಶ್

ನಟಿ ಪವಿತ್ರಾ ಲೋಕೇಶ್

  • Share this:
ನಟಿ ಪವಿತ್ರಾ ಲೋಕೇಶ್ (Actress Pavitra Lokesh) ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇರುತ್ತೆ. ಕನ್ನಡದ ಖ್ಯಾತ ಪೋಷಕ ನಟ (Supporting Actor) ಮೈಸೂರು ಲೋಕೇಶ್‌ (Mysore Lokesh) ಅವರ ಪುತ್ರಿ. ಸೌಂದರ್ಯ, ಅಭಿನಯ ಪ್ರತಿಭೆ ಜೊತೆ ಖ್ಯಾತ ನಟಿಯರಿಗೆ ಇರಬೇಕಾದ ಎಲ್ಲಾ ಅರ್ಹತೆಯೂ ಪವಿತ್ರಾ ಲೋಕೇಶ್ ಅವರಿಗಿತ್ತು. ಆದರೆ ಕನ್ನಡ ಚಿತ್ರರಂಗದಲ್ಲಿ (Kannada Film Industry) ಮಾತ್ರ ಪವಿತ್ರಾ ಲೋಕೇಶ್‌ಗೆ ಅವಕಾಶಗಳು ಸಿಗಲೇ ಇಲ್ಲ. ಸಿಕ್ಕ ಸಣ್ಣ ಪುಟ್ಟ ಪಾತ್ರಗಳೆಲ್ಲ (Character) ಅವರ ಹೊಟ್ಟೆಪಾಡಿಗಾಗಿ ಮಾಡಿದ್ದಾಗಿತ್ತೇ ಹೊರತು, ಅವರೊಳಗಿನ ನಟಿಯನ್ನು ಗುರುತಿಸುವ ಕೆಲಸ ಆಗಲೇ ಇಲ್ಲ. ಇಂತ ಪವಿತ್ರಾ ಲೋಕೇಶ್ ಈಗ ಪರಭಾಷೆಯಲ್ಲಿ ‘ಸ್ಟಾರ್’ ಅಮ್ಮನಾಗಿ (Star Mother) ಮಿಂಚುತ್ತಿದ್ದಾರೆ.

ಪೋಷಕ ನಟನ ಮಗಳಾದರೂ ಸಿಗಲೇ ಇಲ್ಲ ಅವಕಾಶ

ಪವಿತ್ರಾ ಲೋಕೇಶ್ ತಂದೆ ಮೈಸೂರು ಲೋಕೇಶ್ ಕನ್ನಡ ಚಿತ್ರರಂಗದಲ್ಲಿ ಆಗಲೇ ಸಾಕಷ್ಟು ಹೆಸರು ಮಾಡಿದ್ದರು. ಹೀಗಾಗಿ ಅವರ ಮಗಳು ಪವಿತ್ರಾ ಲೋಕೇಶ್ ಸುಲಭವಾಗೇ ಚಿತ್ರರಂಗಕ್ಕೆ ಬರಬಹುದಿತ್ತು. ಜೊತೆಗೆ ನಟಿಯರಿಗೆ ಇರಬೇಕಾದ ಸೌಂದರ್ಯ, ಅಭಿನಯ ಪ್ರತಿಭೆ ಕೂಡ ಅವರಿಗಿತ್ತು. ಆದರೆ ಇಲ್ಲಿ ಲೆಕ್ಕಾಚಾರ ಉಲ್ಟಾ ಆಗಿತ್ತು. ನಿನ್ನೆ ಮಗಳು ನಟಿಯಾಗ್ತಾಳೆ, ಆಕೆಯನ್ನು ಸಿನಿಮಾ ರಂಗಕ್ಕೆ ಕರ್ಕೊಂಡು ಬಾ ಎಂದವರು ಎಷ್ಟೋ ಜನ. ಆದರೆ ಅವಕಾಶ ಕೊಟ್ಟವರು ಯಾರೂ ಇಲ್ಲ.

ಅಂಬರೀಶ್‌ ಸಹಾಯದಿಂದ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಪವಿತ್ರಾ

ಹೀಗೆ ಚಿತ್ರರಂಗಕ್ಕೆ ಪವಿತ್ರಾ ಲೋಕೇಶ್ ಬರುವ ಮುನ್ನವೇ ತಂದೆ ಮೈಸೂರು ಲೋಕೇಶ್ ಪ್ರಾಣ ಕಳೆದುಕೊಂಡಿದ್ದರು. ಖ್ಯಾತ ಕಂಠದಾನ ಕಲಾವಿದೆ ಜೊತೆಗಿನ ಸ್ನೇಹದಿಂದಾಗಿ ಅವರ ಇಮೇಜ್‌ಗೂ ಧಕ್ಕೆಯಾಗಿತ್ತು. ಇಂತ ಸಂದರ್ಭದಲ್ಲಿ ಪವಿತ್ರಾ ಚಿತ್ರರಂಗಕ್ಕೆ ಬರುವುದು ದೂರದ ಮಾತಾಯಿತು. ಆದರೆ ಅವರನ್ನು ಚಿತ್ರರಂಗಕ್ಕೆ ಕರೆತಂದಿದ್ದು ಖ್ಯಾತ ನಟ, ರೆಬೆಲ್ ಸ್ಟಾರ್ ಅಂಬರೀಶ್.

ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ ರೆಬೆಲ್ ಸ್ಟಾರ್

ಹೌದು ಅಬಂರೀಶ್, ಪವಿತ್ರಾ ಲೋಕೇಶ್‌ ಅವರೊಳಗಿದ್ದ ನಟಿಯನ್ನು ಗುರುತಿಸಿದ್ರು. ಸಿನಿಮಾದಲ್ಲಿ ನಟಿಸುವಂತೆ ಅವರಿಗೆ ಸಲಹೆ ನೀಡಿದ್ರು. ಪುಕ್ಕಟ್ಟೆ ಸಲಹೆ ಅಷ್ಟನ್ನೇ ಕೊಡಲಿಲ್ಲ, ಬದಲಾಗಿ ಮಿಸ್ಟರ್ ಅಭಿಷೇಕ್ ಎಂಬ ತಮ್ಮ ಸಿನಿಮಾದಲ್ಲಿ ನಟಿಸುವ ಅವಕಾಶ ನೀಡಿದ್ರು. 1995ರಲ್ಲಿ ತೆರೆಕಂಡ ಮಿಸ್ಟರ್ ಅಭಿಷೇಕ್ ಪವಿತ್ರಾ ಲೋಕೇಶ್ ಅಭಿನಯದ ಮೊದಲ ಸಿನಿಮಾ.

ಇದನ್ನೂ ಓದಿ: Pavitra Lokesh - ಸುಚೇಂದ್ರ ಪ್ರಸಾದ್​ ದಾಂಪತ್ಯದಲ್ಲಿ ಬಿರುಕು ಮೂಡಿದ್ಯಾಕೆ? ಆ ಒಂದು ಸಣ್ಣ ತಪ್ಪು ಇಷ್ಟಕ್ಕೆಲ್ಲಾ ಕಾರಣನಾ?

ಅವಕಾಶ ಸಿಕ್ಕಿದರೂ ಪ್ರತಿಭೆ ಗುರುತಿಸದ ಚಿತ್ರರಂಗ

ಮೊದಲ ಸಿನಿಮಾ ಅಷ್ಟೇನೂ ಹೆಸರು ಮಾಡಲಿಲ್ಲ. ಆದರೆ ಪವಿತ್ರಾ ಲೋಕೇಶ್ ಎಂಬ ನಟಿ ಕನ್ನಡ ಚಿತ್ರರಂಗದ ನಟರು, ನಿರ್ದೇಶಕ, ನಿರ್ಮಾಪಕರ ಕಣ್ಣಿಗೆ ಬಿದ್ದರು. ಮಿಸ್ಟರ್ ಅಭಿಷೇಕ್ ಆದ ಮೇಲೆ ಸುಮಾರು 6ರಿಂದ 7 ಕನ್ನಡ ಸಿನಿಮಾಗಳಲ್ಲಿ ಪವಿತ್ರಾ ಲೋಕೇಶ್ ನಟಿಸಿದ್ರು. ಆದ್ರೆ ಯಾವುದೂ ಪವಿತ್ರಾ ಲೋಕೇಶ್‌ ಅವರ ಸಿನಿ ಬದುಕಿಗೆ ಸಹಾಯ ಮಾಡಲೇ ಇಲ್ಲ.

ಪಾತ್ರಗಳ ಆಯ್ಕೆಯಲ್ಲಿ ಎಡವಿದ ಪವಿತ್ರಾ ಲೋಕೇಶ್

ಹೌದು ಪವಿತ್ರಾ ಲೋಕೇಶ್ ಪಾತ್ರಗಳ ಆಯ್ಕೆಯಲ್ಲಿ ಎಡವಿದ್ರು. ತಂದೆಯಿಲ್ಲದೇ ಇಡೀ ಮನೆ ಜವಾಬ್ದಾರಿ ಹೊರಬೇಕಾದ ಪರಿಸ್ಥಿತಿ ಇದ್ದಿದ್ರಿಂದ ಸಿಕ್ಕ ಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡರು. ಕೆಲವು ಗ್ಲಾಮರಸ್ ಪಾತ್ರಕ್ಕೂ ಬಣ್ಣ ಹಚ್ಚಿದ್ರು. ಆದರೆ ಅವು ಕ್ಲಿಕ್ ಆಗಲೇ ಇಲ್ಲ. ನಿಧಾನಕ್ಕೆ ಕನ್ನಡದ ಹೀರೋಗಳು, ನಿರ್ದೇಶಕ, ನಿರ್ಮಾಪಕರು ಪವಿತ್ರಾರನನ್ನು ಮರೆತರು. ಕನ್ನಡಿಗರ ನೆನಪಿನಿಂದ ಪವಿತ್ರಾ ಲೋಕೇಶ್ ಮರೆಯಾದರು.

ಸಂಸಾರ ಸಾಗಿಸಲು ಕೆಲಸಕ್ಕೆ ಸೇರಿದ್ದ ಪವಿತ್ರಾ

ಮೊದಲೇ ಹೇಳಿದಂತೆ ತಂದೆ ತೀರಿಕೊಂಡಿದ್ದರಿಂದ ಅಮ್ಮ ಹಾಗೂ ತಮ್ಮನನ್ನು ಸಾಕಬೇಕಾದ ಅನಿವಾರ್ಯತೆ ಪವಿತ್ರಾ ಲೋಕೇಶ್ ಅವರಿಗಿತ್ತು. ಇತ್ತ ಚಿತ್ರರಂಗದ ಬಾಗಿಲೂ ಬಂದ್ ಆಗಿತ್ತು. ಹೀಗಾಗಿ ಅವರಿಗೆ ಕೆಲಸ ಮಾಡೋದು ಅನಿವಾರ್ಯವಾಯಿತು. ಇದೇ ಕಾರಣಕ್ಕೆ ಪವಿತ್ರಾ ಲೋಕೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಮಾನಸ ಸಂಪನ್ಮೂಲ ವಿಭಾಗದಲ್ಲಿ ಅಸಿಸ್ಟಂಟ್ ಎಚ್‌ಆರ್ ಆಗಿ ಕೆಲಸಕ್ಕೆ ಸೇರಿಕೊಂಡರು.

ಮನೆಯಲ್ಲಿ ತೀರದ ಕಷ್ಟ, ಬಿಎಂಟಿಸಿ ಬಸ್‌ನಲ್ಲಿ ಓಡಾಟ

ಕಂಪನಿಯಲ್ಲಿ ಬಂದ ಕಾಸು ಸಂಸಾರ ಸಾಗಿಸೋಕೆ ಸಾಲುತ್ತಿರಲಿಲ್ಲ. ಹೀಗಾಗಿ ಪವಿತ್ರಾ ಲೋಕೇಶ್ ಜೀವನ ಕಷ್ಟವಾಯ್ತು. ಪೋಷಕ ನಟನ ಮಗಳಾಗಿದ್ದವಳು, ತಾನೂ ನಟಿಯಾಗಿದ್ದವಳು ಅನಿವಾರ್ಯವಾಗಿ ಬಿಎಂಟಿಸಿ ಬಸ್‌ಗಳಲ್ಲಿ ಓಡಾಡುವಂತೆ ಆಯಿತು. ಸುಮಾರು 1 ವರ್ಷಗಳ ಕಾಲ ಆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ ಪವಿತ್ರಾ ಲೋಕೇಶ್, ಆಗೆಲ್ಲ ಬಿಎಂಟಿಸಿ ಬಸ್‌ಗಳಲ್ಲೇ ಓಡಾಡುತ್ತಿದ್ದರು.

ಮತ್ತೆ ಚಿತ್ರರಂಗಕ್ಕೆ ಕರೆತಂದ ನಾಗಾಭರಣ

ಖ್ಯಾತ ನಿರ್ದೇಶಕ ಟಿ.ಎಸ್. ನಾಗಾಭರಣ ಅವರು 1996ರಲ್ಲಿ ಬಿಡುಗಡೆಯಾದ ಅವರ ಮೆಗಾ ಹಿಟ್ ಸಿನಿಮಾ ಜನುಮದ ಜೋಡಿಯಲ್ಲಿ ನಟಿಸಲು ಪವಿತ್ರಾ ಲೋಕೇಶ್ ಅವರಿಗೆ ಅವಕಾಶ ನೀಡಿದರು. ಅಲ್ಲಿಂದ ಮತ್ತೆ ಪವಿತ್ರಾ ಲೋಕೇಶ್ ಸಿನಿ ಜರ್ನಿ ಶುರುವಾಯ್ತು. ಅಲ್ಲಿಂದ ಹಲವು ಸಿನಿಮಾಗಳಲ್ಲಿ ಎರಡನೇ ನಾಯಕಿಯಾಗಿ, ಹಾಸ್ಯ ಕಲಾವಿದೆಯಾಗಿ ನಟಿಸಿದರು.

ಗಾಡ್ ಫಾದರ್‌ ಇಲ್ಲದ್ದರಿಂದ ಸಿಕ್ಕ ಪಾತ್ರಗಳಲ್ಲೆಲ್ಲ ನಟಿಸಿದೆ

2006ರಲ್ಲಿ ಸಂದರ್ಶನವೊಂದರಲ್ಲಿ ಈ ಹಂತದ ಬಗ್ಗೆ ಮಾತನಾಡಿದ್ದ ಪವಿತ್ರಾ ಲೋಕೇಶ್, "ನಾನು ಎಂದಿಗೂ ಆರಾಮದಾಯಕ ಜೀವನ ಕಳೆದಿರಲಿಲ್ಲ. ನಾನು ಏಕಾಂಗಿಯೆಂದು ಭಾವಿಸಿದ್ದೇನೆ. ಆದರೆ ನಾಗಾಭರಣ ಅವರು ಒತ್ತಾಯಿಸಿದಾಗ ನಾನು ಒಂದು ನಿರ್ಣಯ ತೆಗೆದುಕೊಳ್ಳಲೇ ಬೇಕಾಯಿತು. ಪೂರ್ವಸಿದ್ಧತೆ ಇಲ್ಲದಿದ್ದರೂ ನಾನು ಚಲನಚಿತ್ರಗಳನ್ನು ನನ್ನ ವೃತ್ತಿಜೀವನವನ್ನಾಗಿ ಸ್ವಿಕರಿಸಲು ನಿರ್ಧರಿಸಿದೆ. ಹೀಗೆ ನಿರ್ಧಾರಕ್ಕೆ ಧುಮುಕುವ ಏಕೈಕ ಕಾರಣವೆಂದರೆ ನನ್ನ ಪರಿಸ್ಥಿತಿ. ಗಾಡ್ ಫಾದರ್ ಅಥವಾ ಮಾರ್ಗದರ್ಶಿ ಇಲ್ಲದೆ ಹೀಗೆಯೇ ಮುಂದುವರೆಯುವುದು ಕಠಿಣವಾಗಿದೆ. ಆದ್ದರಿಂದ ನಾನು ಸಿಕ್ಕ ಪ್ರತಿ ಚಿತ್ರದಲ್ಲಿಯೂ ಅಭಿನಯಿಸುತ್ತೇನೆ." ಎಂದು ಹೇಳಿದ್ದರು.

ಕಿರುತೆರೆಯಲ್ಲೂ ಅಭಿನಯ

ಇದಾದ ಬಳಿಕ ದೂರದರ್ಶನ, ಅಂದಿನ ಈಟಿವಿ ಕನ್ನಡ ಸೇರಿದಂತೆ ಹಲವು ವಾಹಿನಿಗಳ ಧಾರಾವಾಹಿಗಳಲ್ಲಿ ಅಭಿನಯಿಸಿದರು. ಪಕ್ಕದ ತೆಲುಗು, ತಮಿಳು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾದರು. ತೆಲುಗು ಧಾರಾವಾಹಿಗಳಿಂದ ಖ್ಯಾತಿ ಪಡೆದ ಪವಿತ್ರಾ ಲೋಕೇಶ್, ಅಲ್ಲಿಂದ ತೆಲುಗು ಸಿನಿಮಾ ಇಂಡಸ್ಟ್ರಿಗೆ ಜಿಗಿದರು. ಸ್ಟಾರ್ ಅಮ್ಮನಾಗಿ ಭಡ್ತಿ ಪಡೆದರು.

ತೆಲುಗು ಸಿನಿಮಾಗಳಲ್ಲಿ ಇವರೇ ಸ್ಟಾರ್ ಅಮ್ಮ!

ಹೌದು, ಪವಿತ್ರಾ ಲೋಕೇಶ್ ಈಗ ತೆಲುಗು ಸಿನಿರಂಗದ ಅತ್ಯಂತ ಬೇಡಿಕೆಯ ಪೋಷಕ ನಟಿ. ಬಹುತೇಕ ಸ್ಟಾರ್‌ ಸಿನಿಮಾಗಳಲ್ಲಿ ಇವರಿಗೆ ಅಮ್ಮನ ರೋಲ್ ಖಾಯಂ ಆಗಿ ಇದ್ದೇ ಇರುತ್ತದೆ. ಅಲ್ಲು ಅರ್ಜುನ್, ಮಹೇಶ್ ಬಾಬು ಸೇರಿದಂತೆ ಸ್ಟಾರ್ ನಟರ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ಇದನ್ನೂ ಓದಿ: Pavitra Lokesh ಮದುವೆಯಾಗಿರುವ ಆ ನಟನ ಆಸ್ತಿ 6000 ಕೋಟಿಯಂತೆ! ಆತನಿಗೆ ಇದು ನಾಲ್ಕನೇ ಮದುವೆ

ಈಗ ಕನ್ನಡ ಚಿತ್ರರಂಗದಲ್ಲೂ ಅವಕಾಶ

ಇಷ್ಟಾದ ಬಳಿಕ ಕನ್ನಡ ಚಿತ್ರರಂಗ ಈಗ ಇವರನ್ನು ಗುರುತಿಸುತ್ತಿದೆ. ಇಂದು ಕನ್ನಡದ ಹಲವು ಸಿನಿಮಾಗಳಲ್ಲೂ ಪವಿತ್ರಾ ಲೋಕೇಶ್ ನಟಿಸುತ್ತಿದ್ದಾರೆ. ಈಗಾಗಲೇ ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಯ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 2006ರಲ್ಲಿ ತೆರೆಕಂಡ ಕನ್ನಡದ ನಾಯಿ ನೆರಳು ಸಿನಿಮಾದ ಅಭಿನಯಕ್ಕಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿದೆ. ತೆಲುಗಿನಲ್ಲೂ ಪ್ರತಿಷ್ಠಿತ ಪ್ರಶಸ್ತಿಗಳು ಪವಿತ್ರಾ ಲೋಕೇಶ್ ಮುಡಿಗೇರಿವೆ.
Published by:Annappa Achari
First published: