Petromax: ಪೆಟ್ರೋಮ್ಯಾಕ್ಸ್‌ ಸಿನೆಮಾ ಕುರಿತು ಜನ ಹೇಳ್ತಿರೋದೇನು?

ಅನಾಥಾಶ್ರಮಗಳಲ್ಲಿ ಇರುವವರು ಮಾತ್ರ ಅನಾಥರಲ್ಲ. ಎಲ್ಲರೂ ಇದ್ದೂ ಒಂಟಿಯಾಗಿ ಇರುತ್ತಾರಲ್ಲ ಅವರು ನಿಜವಾದ ಅನಾಥರು ಎಂದು ಸಂಬಂಧಗಳ ಬಗ್ಗೆ ಎಚ್ಚರಿಸುತ್ತಾರೆ.

ಪೆಟ್ರೋಮ್ಯಾಕ್ಸ್‌

ಪೆಟ್ರೋಮ್ಯಾಕ್ಸ್‌

  • Share this:
ಸಿನಿಮಾ ಎಂದರೆ ಕೇವಲ ಮನರಂಜನೆ ಮಾತ್ರವಲ್ಲದೇ ನಿಜ ಜೀವನಕ್ಕೆ ಉತ್ತಮ ಮೌಲ್ಯಗಳನ್ನು ಜನ ಸಾಮಾನ್ಯರಿಗೆ ತಿಳಿಸುವುದು ಉತ್ತಮ ಸಿನಿಮಾ ಆಗುತ್ತದೆ. ಪ್ರತಿದಿನ ಒಂದೊಂದು ಸಿನಿಮಾ ತೆರೆ ಮೇಲೆ ವಿಜೃಂಭಿಸುತ್ತಲೆ ಇರುತ್ತವೆ. ಅದರಲ್ಲಿ ಕನ್ನಡ ಸಿನಿಮಾ ಪೆಟ್ರೋಮ್ಯಾಕ್ಸ್‌ (Petromax) ಸಿನಿಮಾ ಕುರಿತು ಈಗಲೂ ಜನ ಏನು ಹೇಳುತ್ತಿದ್ದಾರೆ? ಈ ಸಿನಿಮಾವು ಕೌಟುಂಬಿಕ ಮೌಲ್ಯಗಳು ಮತ್ತು ಸಂಬಂಧಗಳ ಕುರಿತಾದ ಚಲನಚಿತ್ರ ಆಗಿದ್ದು, ಮನುಷ್ಯ ಹೇಗೆ ಎರಡು ಮುಖವಾಡಗಳನ್ನು ಹಾಕಿಕೊಂಡು ಬದುಕು ನಡೆಸುತ್ತಾನೆ ಎಂಬುದರ ಚಿತ್ರಣವನ್ನು ಕಟ್ಟಿಕೊಡಲಾಗಿದೆ. ವಿಜಯ್ ಪ್ರಸಾದ್ ನಿರ್ದೇಶನದ, ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್‌ ಸಿನಿಮಾ ಜುಲೈ 15 ರಂದು ಬಿಡುಗಡೆ ಆಗಿತ್ತು.

ಸಿನಿಮಾ ಹೇಗಿದೆ?
ಗಂಭೀರ ಮತ್ತು ವಿಷಾದದ ಸಂಗತಿಗಳನ್ನು ಕೂಡ ತಮಾಷೆಯಾಗಿ ಹೇಗೆ ಹೇಳಬಹುದು ಎಂಬುದನ್ನು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಾವು ನೋಡಿರಬಹುದು. ನಿರ್ದೇಶಕ ವಿಜಯಪ್ರಸಾದ್‌ ಅವರ ಲೇಖನಿಯು ಸಾಕಷ್ಟು ತಮಾಷೆ ವಿಚಾರಗಳನ್ನು ಬರೆದಿದೆ ಎಂದು ಹೇಳಬಹುದು. ಪೋಲಿ ಕಪಿ ಮತ್ತು ಫಿಲಾಸಫಿ ಲೀವಿಂಗ್‌ ರಿಲೇಶನ್‌ಶಿಪ್‌ನಲ್ಲಿ ಇರುವುದರಿಂದ ಇಲ್ಲಿ ಚೇಷ್ಟೆ ಜಾಸ್ತಿ, ಕೀಟಲೆಯೇ ಆಸ್ತಿ ಎಂಬಂತಹ ಸಿನಿಮಾ ಇದಾಗಿದೆ. ಇವರ ‘ಸಿದ್ಲಿಂಗು’, ‘ನೀರ್‌ದೋಸೆ’ ನಂತರ ‘ಪೆಟ್ರೋಮ್ಯಾಕ್ಸ್‌’ನಲ್ಲೂ ಆ ಜಾದೂ ಮುಂದುವರಿದಿದೆ ಎಂದು ಹೇಳಬಹುದು.

ತಾರಾಗಣ: ನೀನಾಸಂ ಸತೀಶ್‌, ಹರಿಪ್ರಿಯಾ, ಕಾರುಣ್ಯ ರಾಮ್‌
ನಿರ್ದೇಶನ: ವಿಜಯ್‌ ಪ್ರಸಾದ್‌

ಸಂಬಂಧಗಳ ಬಗ್ಗೆ ಎಚ್ಚರಿಕೆ ನೀಡುವ ಸಿನೆಮಾ
ಪೆಟ್ರೋಮ್ಯಾಕ್ಸ್‌ ಸಿನಿಮಾ ನೋಡಿದ ಮೇಲೆ ವಿಜಯ್‌ ಪ್ರಸಾದ್‌ ಅವರ ಚಿತ್ರಗಳಲ್ಲಿ ಅದೇ ಸಾಮಾನ್ಯ ಡೈಲಾಗ್‌ಗಳು ಇರುತ್ತವೆ ಎಂದು ಮೇಲ್ನೋಟಕ್ಕೆ ಅನಿಸಿದರೂ ಕೂಡ ಜೀವನ, ಪ್ರೀತಿ, ಶುದ್ಧ ಮನಸ್ಸುಗಳು, ಅದ್ಭುತ ಸಂಬಂಧಗಳು, ಸಮಾಜದ ಬಗ್ಗೆ ಸಾಮಾನ್ಯ ಭಾಷೆಯಲ್ಲೇ ಹೇಳುತ್ತಾರೆ.

ಇದನ್ನೂ ಓದಿ: Samantha Ruth Prabhu: ಮತ್ತೆ ಸೂಪರ್ ಸಾಂಗ್​ಗೆ ಸೊಂಟ ಬಳುಕಿಸಲಿದ್ದಾರಂತೆ ಸಮಂತಾ

‘ಅನಾಥಾಶ್ರಮಗಳಲ್ಲಿ ಇರುವವರು ಮಾತ್ರ ಅನಾಥರಲ್ಲ. ಎಲ್ಲರೂ ಇದ್ದೂ ಒಂಟಿಯಾಗಿ ಇರುತ್ತಾರಲ್ಲ ಅವರು ನಿಜವಾದ ಅನಾಥರು’ ಎಂದು ಸಂಬಂಧಗಳ ಬಗ್ಗೆ ಎಚ್ಚರಿಸುತ್ತಾರೆ. ‘ಮಕ್ಕಳು ಇದ್ದರೂ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುವುದು ನಿಜವಾದ ಅಶ್ಲೀಲತೆ’ ಎಂದು ಸಮಾಜದ ಮತ್ತೊಂದು ಮುಖವನ್ನು ಇಲ್ಲಿ ವಿಷಾದದಿಂದ ತೋರಿಸಿಕೊಟ್ಟಿದ್ದಾರೆ.

ವೇಶ್ಯೆಯನ್ನೂ ಪ್ರೀತಿ- ಗೌರವದಿಂದ ನೋಡುವಷ್ಟು ಶುದ್ಧ ಸಿನಿಮಾ
‘ಅಕ್ಕ, ತಂಗಿ, ಅಮ್ಮ, ಹೆಂಡತಿ, ಗೆಳತಿ, ವೇಶ್ಯೆ ಹೀಗೆ ಎಲ್ಲರಲ್ಲೂ ಇರುವ ಮಮತೆಯನ್ನು ಪದಗಳಲ್ಲಿ ಹೇಳಲಾಗದು. ಅದು ಹೆಣ್ಣಿಗೆ ಇರುವ ಶಕ್ತಿ’ ಎನ್ನುತ್ತಾ ತಿರಸ್ಕೃತ ನೋಟ- ಮಾತುಗಳನ್ನು ಎದುರಿಸುವ ವೇಶ್ಯೆಯನ್ನೂ ಪ್ರೀತಿ- ಗೌರವದಿಂದ ನೋಡುವಷ್ಟು ಶುದ್ಧ ಸಿನಿಮಾ ಈ ‘ಪೆಟ್ರೋಮ್ಯಾಕ್ಸ್‌’ ಸಿನಿಮಾ ಎಂದರೆ ತಪ್ಪಾಗಲಾರದು, ಸಿನಿಮಾ ನೋಡಿದವರು ಈ ಸಿನಿಮಾ ಕೂಡ ಡಬಲ್‌ ಮೀನಿಂಗ್‌ ಸಿನಿಮಾ ಎಂದು ಹೇಳುತ್ತಿದ್ದರೂ, ಈ ‘ಪೆಟ್ರೋಮ್ಯಾಕ್ಸ್‌ ಎಂದರೆ ಬದುಕು ಮತ್ತು ಬೆಳಕನ್ನು ಹೊತ್ತಿರುವ ಸಿನಿಮಾ’ ಎಂದು ನಿರ್ದೇಶಕರು ಹೇಳುತ್ತಾರೆ.

ಇದನ್ನೂ ಓದಿ: Jennifer lopez: 20 ವರ್ಷಗಳ ನಂತರ ಅವನನ್ನೇ ಮದುವೆಯಾದ ಪಾಪ್ ತಾರೆ, ಜೆನಿಫರ್-ಬೆನ್ ಅಫ್ಲೆಕ್ ಪ್ರೇಮ್ ಕಹಾನಿ

ನಿರ್ದೇಶಕರ ಸಂಭಾಷಣೆಗಳ ಪ್ರತಿಭೆಗೆ ನೀನಾಸಂ ಸತೀಶ್‌, ನಾಗಭೂಷಣ್‌, ಅರುಣ್‌, ಹರಿಪ್ರಿಯಾ ಜೀವ ತುಂಬಿದ್ದಾರೆ. ಅದರಲ್ಲೂ ಕಾರುಣ್ಯ ರಾಮ್‌ ಅವರ ಪಾತ್ರದಿಂದ ಹೊರಡುವ ಪಂಚ್‌ ಮಾತುಗಳು ತುಂಬಾ ಮಜಾ ಕೊಡುತ್ತವೆ. ಹಿನ್ನೆಲೆ ಸಂಗೀತದಲ್ಲಿ ಅನೂಪ್‌ ಸೀಳಿನ್‌ ಅವರು ನಿರ್ದೇಶಕರ ಶ್ರಮಕ್ಕೆ ಸಾಥ್‌ ನೀಡುತ್ತಾರೆ.
Published by:Ashwini Prabhu
First published: