2021 ರ ಅಕ್ಟೋಬರ್ (October) ತಿಂಗಳಲ್ಲಿ ನಡೆದ ಕಾರ್ಡೆಲಿಯಾ ಡ್ರಗ್ಸ್ ಕೇಸ್ (Drugs Case) ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಹೌದು ಎಲ್ಲವೂ ಶಾಂತವಾಗಿದೆ ಅನ್ನೋವಷ್ಟರಲ್ಲಿ ಇತ್ತೀಚೆಗೆ ಸಿಬಿಐ ಅಧಿಕಾರಿಗಳು (CBI Officer) ಮುಂಬೈ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ವಲಯ ನಿರ್ದೇಶಕರಾಗಿದ್ದ ಐಆರ್‌ಎಸ್ ಅಧಿಕಾರಿ ಸಮೀರ್ ವಾಂಖೆಡೆ, ಎನ್‌ಸಿಬಿ ಅಧೀಕ್ಷಕ ವಿಶ್ವ ವಿಜಯ್ ಸಿಂಗ್, ಎನ್‌ಸಿಬಿಯ ಗುಪ್ತಚರ ಅಧಿಕಾರಿ ಆಶಿಶ್ ರಂಜನ್ ಮತ್ತು ಇಬ್ಬರು ನಾಗರಿಕರಾದ ಕೆ ಪಿ ಗೋಸಾವಿ ಮತ್ತು ಸ್ಯಾನ್ವಿಲ್ಲೆ ಆಡ್ರಿಯನ್ ಡಿಸೋಜಾ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಒಂದು ಸೆಲ್ಫಿ ಸಹ ಆನ್ಲೈನ್ ನಲ್ಲಿ ವೈರಲ್ ಆಗಿದೆ ನೋಡಿ.
ಇತ್ತೀಚೆಗೆ ವೈರಲ್ ಆದ ಸೆಲ್ಫಿಯಲ್ಲಿ ಯಾರೆಲ್ಲಾ ಇದ್ದಾರೆ ನೋಡಿ..
ಕಾರ್ಡೆಲಿಯಾದಲ್ಲಿ ಅರ್ಬಾಜ್ ಮರ್ಚೆಂಟ್ ನಿಂದ 6 ಗ್ರಾಂ ಚರಸ್ ವಶಪಡಿಸಿಕೊಂಡಿದ್ದಕ್ಕೆ ಸಾಕ್ಷಿಯಾಗಿದ್ದ ಗೋಸಾವಿ, ಆರ್ಯನ್ ಖಾನ್ ಅವರೊಂದಿಗೆ ಪೋಸ್ ನೀಡಿರುವುದನ್ನು ಈ ಸೆಲ್ಫಿಯಲ್ಲಿ ನಾವು ನೋಡಬಹುದು.
ಈ ಸೆಲ್ಫಿಯನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡುವ ಕೆಲವೇ ಕ್ಷಣಗಳ ಮೊದಲು, ಸುದ್ದಿ ಛಾಯಾಗ್ರಾಹಕರು, ಗೋಸಾವಿ ಆರ್ಯನ್ ಖಾನ್ ಅವರನ್ನು ತಮ್ಮ ವೈಯಕ್ತಿಕ ಕಾರಿನಲ್ಲಿ ಕರೆದೊಯ್ದು ಅವರನ್ನು ಮತ್ತು ಅರ್ಬಾಜ್ ಮರ್ಚೆಂಟ್ ಅವರನ್ನು ಬಲ್ಲಾರ್ಡ್ ಎಸ್ಟೇಟ್ ನಲ್ಲಿರುವ ಎನ್‌ಸಿಬಿ ಕಚೇರಿಗೆ ಕರೆದೊಯ್ಯುತ್ತಿರುವುದನ್ನು ರೆಕಾರ್ಡ್ ಮಾಡಿದ್ದಾರೆ.
ಶಾರುಖ್ ಅವರಿಂದ 25 ಕೋಟಿ ರೂಪಾಯಿ ಹಣ ಸುಲಿಗೆ ಮಾಡುವ ಪ್ಲ್ಯಾನ್ ಇತ್ತಂತೆ..
ಈ ಸೆಲ್ಫಿ ಶಾರುಖ್ ಮಗ ಆರ್ಯನ್ ಖಾನ್ ಅವರನ್ನು ಗೋಸಾವಿ ಅವರು ನಿರ್ವಹಿಸುತ್ತಿದ್ದು, ಎನ್‌ಸಿಬಿಯ ಭಾಗವಾಗಿದ್ದಾರೆ ಎಂಬ ಭಾವನೆಯನ್ನು ಸೃಷ್ಟಿಸುತ್ತವೆ, ಆದರೆ ವಾಸ್ತವವಾಗಿ ಗೋಸಾವಿ ಒಬ್ಬ ಡೀಲ್ ಮೇಕರ್ ಆಗಿದ್ದು, ಅವರ ವಿರುದ್ಧ ಪುಣೆಯಲ್ಲಿ ಈ ಹಿಂದೆ ವಂಚನೆ ಪ್ರಕರಣ ದಾಖಲಾಗಿತ್ತು ಎಂಬುದು ಸಿಬಿಐ ತಿಳಿಸಿದೆ.
ಕಾರ್ಡೆಲಿಯಾ ಪ್ರಕರಣದ ಕಾರ್ಯಾಚರಣೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದ ವಾಂಖೆಡೆಗೂ ಮತ್ತು ಈ ಗೋಸಾವಿಗೂ ಪರಿಚಯವಿದೆ.
ಈ ಪ್ರಕರಣದಲ್ಲಿ ತನ್ನ ಮಗನ ವಿರುದ್ಧ ಪ್ರಕರಣ ದಾಖಲಿಸದಿರಲು ಮುಂಬೈ ಎನ್‌ಸಿಬಿ ತಂಡವು ಶಾರುಖ್ ಖಾನ್ ಅವರಿಂದ 25 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಲು ಬಯಸಿತ್ತು ಮತ್ತು ಗೋಸಾವಿಯನ್ನು ಈ ಉದ್ದೇಶಕ್ಕಾಗಿ ಬಳಸಿದ್ದರು ಎಂದು ಸಿಬಿಐ ಹೇಳಿದೆ.
"ಸ್ವತಂತ್ರ ಸಾಕ್ಷಿ ಕೆ ಪಿ ಗೋಸಾವಿ ಅವರಿಗೆ ಆರೋಪಿಗಳೊಂದಿಗೆ ಹಾಜರಾಗಲು ಅವಕಾಶ ನೀಡಲಾಯಿತು ಮತ್ತು ಎನ್‌ಸಿಬಿ ಕಚೇರಿಗೆ ಬರಲು ಸಹ ಅನುಮತಿಸಲಾಯಿತು, ಇದು ನಿಯಮಗಳಿಗೆ ವಿರುದ್ಧವಾಗಿದೆ" ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ಈ ರೀತಿಯಾಗಿ ಕೆ ಪಿ ಗೋಸಾವಿ ಸೆಲ್ಫಿ ಕ್ಲಿಕ್ಕಿಸಿ ಆರೋಪಿಯ ವಾಯ್ಸ್ ನೋಟ್ ರೆಕಾರ್ಡ್ ಮಾಡಿದ್ದಾರೆ. ಆರೋಪಿ ಆರ್ಯನ್ ಖಾನ್ ಕುಟುಂಬದಿಂದ 25 ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡುವ ಪಿತೂರಿಯಲ್ಲಿ ಈ ಗೋಸಾವಿ ಮತ್ತು ಅವರ ಸಹಾಯಕ ಸಾನ್ವಿಲೆ ಡಿಸೋಜಾ ಮತ್ತು ಇತರರಿಗೆ ಈ ನಿಲುವು ಅವಕಾಶ ನೀಡಿತು.
ವಾಂಖೆಡೆ ವಿರುದ್ಧ ದಾಖಲಿಸಿದ ಸಿಬಿಐ ಎಫ್ಐಆರ್ ನಲ್ಲಿ ಗೋಸಾವಿ ಅವರಿಗೆ ಮುಕ್ತ ಅವಕಾಶ ನೀಡಿದ್ದರು, ಏಕೆಂದರೆ ಅವರು ಖಾನ್ ಕುಟುಂಬಕ್ಕೆ ಹಣದ ಬಗ್ಗೆ ಚರ್ಚಿಸಲು ಕರೆ ಮಾಡಿದಾಗ ಅದು ಸರಾಗವಾಗಿ ನಡೆಯಲಿ ಎಂಬ ಉದ್ದೇಶ ಇದರಲ್ಲಿ ಅಡಕವಾಗಿತ್ತು.
ಆದರೆ, ಗೋಸಾವಿಯ ಸೆಲ್ಫಿ ಪಿತೂರಿಗಾರರ ಮೇಲೆ ಪರಿಣಾಮ ಬೀರಿತು. ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರು ಎನ್‌ಸಿಬಿ ಕಚೇರಿಯೊಳಗೆ ಗೋಸಾವಿ ಅವರ ಉಪಸ್ಥಿತಿಯನ್ನು ಮೊದಲು ಪ್ರಶ್ನೆ ಮಾಡಿದರು.
ಈ ಸೆಲ್ಫಿ ಬಗ್ಗೆ ಏನ್ ಹೇಳ್ತಾರೆ ನೋಡಿ ಎನ್‌ಸಿಪಿ ನಾಯಕ ನವಾಬ್ ಮಲಿಕ್..
ತನ್ನ ಅಳಿಯನನ್ನೂ ಎನ್‌ಸಿಬಿ ಸಿಲುಕಿಸಿದೆ ಎಂದು ಹೇಳಿಕೊಂಡ ಮಲಿಕ್, ತನಿಖಾ ಸಂಸ್ಥೆಯ ಅಧಿಕಾರಿಯೊಬ್ಬರು ಅಂತಹ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಸಾರ್ವಜನಿಕಗೊಳಿಸುವುದು ಅತ್ಯಂತ ಅಸಾಮಾನ್ಯ ಎಂದು ಹೇಳಿದ್ದಾರೆ.
ಆರ್ಯನ್ ಖಾನ್ ಅವರೊಂದಿಗಿನ ಸೆಲ್ಫಿಯಲ್ಲಿರುವ ವ್ಯಕ್ತಿಯ ಬಗ್ಗೆ ತಮ್ಮದೇ ಆದ ತನಿಖೆಯನ್ನು ಪ್ರಾರಂಭಿಸಿದರು. ಅಕ್ಟೋಬರ್ 6, 2021 ರಂದು ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ, ಎನ್‌ಸಿಪಿ ನಾಯಕ ಗೋಸಾವಿ ಎನ್‌ಸಿಬಿಯೊಂದಿಗೆ ಇರಲಿಲ್ಲ ಮತ್ತು ವಾಸ್ತವವಾಗಿ ವಾಂಖೆಡೆ ಕರೆದ ಸ್ವತಂತ್ರ ಸಾಕ್ಷಿಯಾಗಿದ್ದರು ಎಂದು ಬಹಿರಂಗಪಡಿಸಿದರು.
ವಾಂಖೆಡೆ ಕರೆ ಮಾಡಿದ ಎರಡನೇ ಸ್ವತಂತ್ರ ಸಾಕ್ಷಿ ಮುಂಬೈ ಬಿಜೆಪಿ ಕಾರ್ಯಕರ್ತ ಮನೀಶ್ ಭಾನುಶಾಲಿ ಎಂದು ಮಲಿಕ್ ಬಹಿರಂಗ ಪಡಿಸಿದ್ದಾರೆ ಮತ್ತು ಎನ್‌ಸಿಬಿ ದಾಳಿಯು ಅವರ ಸುಳಿವಿನ ಆಧಾರದ ಮೇಲೆ ನಡೆದಿದೆ ಎಂದು ಕ್ಯಾಮೆರಾದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣಗಿಂತ ನಾನೇನು ಕಡಿಮೆ ಇಲ್ಲ; ಆಕೆಗಿಂತ ನಾನೇ ಬೆಸ್ಟ್ ಎಂದಿದ್ಯಾಕೆ ನಟಿ ಐಶ್ವರ್ಯಾ?
ಮಲಿಕ್ ಅವರು ಬಹಿರಂಗಪಡಿಸಿದ ಅನೇಕ ವಿಚಾರಗಳು ಮತ್ತು ಹಲವಾರು ಘಟನೆಗಳಿಗೆ ನಾಂದಿ ಹಾಡಿದವು, ಇದರ ಪರಿಣಾಮವಾಗಿ ಆರ್ಯನ್ ಖಾನ್ ವಿರುದ್ಧದ ಎಲ್ಲಾ ಆರೋಪಗಳನ್ನು ಕೈಬಿಡಲಾಯಿತು, ಆದರೆ ಅವರು ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು.
ನಂತರ, ಗೋಸಾವಿಯ ಚಾಲಕ ಪ್ರಭಾಕರ್ ಸೈಲ್ ಕೂಡ ಗೋಸಾವಿ ಮತ್ತು ಸಮೀರ್ ವಾಂಖೆಡೆ ಅವರು ರೂಪಿಸಿದ ಪಿತೂರಿ ಬಗ್ಗೆ ಅಫಿಡವಿಟ್ ಸಲ್ಲಿಸಿದರು. ಇದಾದ ಸ್ವಲ್ಪ ಸಮಯದ ನಂತರ ಹೃದಯಾಘಾತದಿಂದ ಸೈಲ್ ನಿಧನರಾದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ