KGF 2 ಡೈಲಾಗ್ ಕದ್ರಾ ಹಾಲಿವುಡ್​​ ಸಿನಿ ಮೇಕರ್ಸ್! ​ಹೌಸ್ ಆಫ್ ದಿ ಡ್ರ್ಯಾಗನ್ 2 ನೋಡಿದವರಿಗೆ ಶಾಕ್!?

ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿನ ಸಂಭಾಷಣೆಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಹಾಲಿವುಡ್ ಚಿತ್ರಗಳು ಸಹ ಅದನ್ನೇ ಕಾಪಿ ಮಾಡಲು ಪ್ರಯತ್ನಿಸುತ್ತಿವೆ. ಇತ್ತೀಚೆಗೆ ನೆಟಿಜನ್‌ಗಳು ಹೌಸ್ ಆಫ್ ದಿ ಡ್ರ್ಯಾಗನ್‌ನಲ್ಲಿ ಅಧ್ಯಾಯ 2 ವೆಬ್​ ಸರಣಿಯಲ್ಲಿ ಕೆಜಿಎಫ್‌ನ ಪ್ರಸಿದ್ಧ ಸಂಭಾಷಣೆಯನ್ನು ಕಂಡು ಹಿಡಿದಿದ್ದಾರೆ.

ಕೆಜಿಎಫ್​, ಹೌಸ್ ಆಫ್ ದಿ ಡ್ರ್ಯಾಗನ್

ಕೆಜಿಎಫ್​, ಹೌಸ್ ಆಫ್ ದಿ ಡ್ರ್ಯಾಗನ್

  • Share this:
ಬಾಲಿವುಡ್ ಚಿತ್ರಗಳು ಹಾಲಿವುಡ್ (Hollywood Movies)​ ಚಿತ್ರಗಳನ್ನು ರಿಮೇಕ್​ ಮಾಡಿದ್ದು, ಅಥವಾ ಹಾಲಿವುಡ್​ ಸಿನಿಮಾಗಳ ಸ್ಪೂರ್ತಿ ಪಡೆದು ಸಿನಿಮಾ ನಿರ್ಮಿಸಿರೋದನ್ನು ನಾವೆಲ್ಲರೂ ಕೇಳಿದ್ದೇವೆ ಹಾಗೂ ನೋಡಿದ್ದೇವೆ. ಆದ್ರೆ ಕನ್ನಡ ಸಿನಿಮಾ (Kannada Movie) ಸಂಭಾಷಣೆಯನ್ನು ಹಾಲಿವುಡ್ ಸಿನಿ ಮೇಕರ್ಸ್​ಗಳು ನಕಲು ಮಾಡಿದ್ದಾರೆ ಅಂದ್ರೆ ನೀವು ನಂಬ್ತೀರಾ? ಹೌದು ಅಂತಿದ್ದಾರೆ ನೆಟ್ಟಿಗರು, ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್ ಯಶ್ (Yash) ಅಭಿನಯದ ಕೆಜಿಎಫ್ ಚಾಪ್ಟರ್​ 2 (KGF Chapter 2) ಸೂಪರ್​ ಹಿಟ್​ ಚಿತ್ರವಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಅಲ್ಲದೇ ಕೆಜಿಎಫ್​ ಚಿತ್ರ ದೇಶ-ವಿದೇಶಗಳನ್ನು ಸದ್ದು ಮಾಡಿತ್ತು. ಆದ್ರೆ ಈಗ ಕೆಜಿಎಫ್​  ಸುದ್ದಿಯಾಗಿರೋದು ಬೇರೆಯದ್ದೇ ವಿಚಾರಕ್ಕೆ. ಕೆಜಿಎಫ್​ 2 ಚಿತ್ರದ ಸಂಭಾಷಣೆಯನ್ನು ಹಾಲಿವುಡ್​​  ಕದ್ದಿದ್ದಾರಂತೆ  ಹೌಸ್ ಆಫ್ ದಿ ಡ್ರ್ಯಾಗನ್ 2ನಲ್ಲಿ (House of the Dragon) ಸಂಭಾಷಣೆ ಕೆಜಿಎಫ್ ಸಂಭಾಷಣೆಯಂತೆ ಇದೇ ಅನ್ನೋದನ್ನು ನೆಟಿಜನ್​ಗಳು ಕಂಡು ಹಿಡಿದಿದ್ದಾರೆ.

ಹಾಲಿವುಡ್​ ಚಿತ್ರದಲ್ಲಿ  KGF 2  ಡೈಲಾಗ್​!?

ಕೆಜಿಎಫ್ ಚಾಪ್ಟರ್ 2 ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಒಟ್ಟಾರೆಯಾಗಿ 1200 ಕೋಟಿ ರೂ ಕಲೆಕ್ಷನ್‌ ಮಾಡಿ ಬಾಕ್ಸ್​ ಆಫೀಸ್ ಕೊಳ್ಳೇ ಹೊಡೆದಿತ್ತು. ಯಶ್ ನಟನೆಯ ಚಿತ್ರವು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಪ್ರಶಾಂತ್ ನೀಲ್ ಅವರ ಚಿತ್ರದಲ್ಲಿನ ಸಂಭಾಷಣೆಗಳು ಎಷ್ಟು ಶಕ್ತಿಯುತವಾಗಿವೆ ಎಂದರೆ ಹಾಲಿವುಡ್ ಚಿತ್ರಗಳು ಸಹ ಅದನ್ನೇ ಕಾಪಿ ಮಾಡಲು ಪ್ರಯತ್ನಿಸುತ್ತಿವೆ. ಇತ್ತೀಚೆಗೆ ನೆಟಿಜನ್‌ಗಳು ಹೌಸ್ ಆಫ್ ದಿ ಡ್ರ್ಯಾಗನ್‌ನಲ್ಲಿ ಅಧ್ಯಾಯ 2 ವೆಬ್​ ಸರಣಿಯಲ್ಲಿ ಕೆಜಿಎಫ್‌ನ ಪ್ರಸಿದ್ಧ ಸಂಭಾಷಣೆಯನ್ನು ಕಂಡು ಹಿಡಿದಿದ್ದಾರೆ.

ಟ್ವಿಟರ್​ನಲ್ಲಿ ಪೋಸ್ಟ್ ವೈರಲ್​

ಹೌಸ್ ಆಫ್ ದಿ ಡ್ರ್ಯಾಗನ್, ಅಭಿಮಾನಿಗಳು ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಗೇಮ್ ಆಫ್ ಥ್ರೋನ್ಸ್ ಪ್ರೀಕ್ವೆಲ್ ಆಗಸ್ಟ್ 22 ರಂದು ಇತ್ತೀಚಿಗೆ ರಿಲೀಸ್​ ಆಗಿದೆ. ಮೊದಲ ಸಂಚಿಕೆಯನ್ನು ವೀಕ್ಷಿಸಿದ ನಂತರ ನೆಟಿಜನ್‌ಗಳು ವೆಬ್ ಸರಣಿಯ ಕೆಲವು ಅಂಶಗಳನ್ನು ತೋರಿಸಿದರು.ಹೌಸ್ ಆಫ್ ದಿ ಡ್ರ್ಯಾಗನ್‌ನ ಸಂಭಾಷಣೆಯು ಯಶ್ ಅಭಿನಯದ ಕೆಜಿಎಫ್ 2 ನಿಂದ ಪ್ರೇರಿತವಾಗಿದೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ಇನ್ನು ಈ ಕುರಿತು ನೆಟ್ಟಿಗರಿಂದ ಕಾಮೆಂಟ್​ಗಳ ಸುರಿಮಳೆಯಾಗ್ತಿದೆ. ಗೇಮ್ ಆಫ್ ಥ್ರೋನ್ಸ್ ಪ್ರೀಕ್ವೆಲ್‌ನ ಮೊದಲ ಭಾಗದಲ್ಲಿ ಬಾಹುಬಲಿ ಡೈಲಾಗ್​ ನಕಲು ಮಾಡಲಾಗಿತ್ತು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಪ್ರೇಕ್ಷಕರು ಒಂದೊಂದು ಡೈಲಾಗ್​ನನ್ನು ಹೇಗೆಲ್ಲಾ ಸೂಕ್ಷ್ಮವಾಗಿ ನೋಡಿ ಕಂಡುಹಿಡಿಯುತ್ತಾರೆ ಅನ್ನೋದಕ್ಕೆ ಈ ಟ್ವೀಟ್​ಗಳೇ ಸಾಕ್ಷಿಯಾಗಿದೆ.

ಇದು ಕಾಕತಾಳೀಯವಾಗಿದ್ಯಾ?

ಇದು ಕಾಕತಾಳೀಯವಾಗಿಬಹುದು ಅಥವಾ ಗೇಮ್ ಆಫ್ ಥ್ರೋನ್ಸ್ ಪ್ರೀಕ್ವೆಲ್‌ನಲ್ಲಿ ಬಳಸಲಾದ ಸಂಭಾಷಣೆ ಕೆಜಿಎಫ್ ಸಂಭಾಷಣೆ ಹೋಲುವಂತೆ ಇರಬಹುದು. ಆದ್ರೆ ನೆಟ್ಟಿಗರ ಟ್ಟೀಟ್​ ನೋಡಿದರೆ ನಿಜಕ್ಕೂ ಕೆಜಿಎಫ್​ 2 ಸಂಭಾಷಣೆಯನ್ನು ಹಾಲಿವುಡ್ ವೆಬ್​ ಸರಣಿ ಮೇಕರ್ಸ್​ ಕದ್ದಿದ್ದಾರಾ ಅನ್ನೋ ಪ್ರಶ್ನೇ ಹುಟ್ಟುತ್ತದೆ.
Published by:Pavana HS
First published: