Sudeep: ಕಿಚ್ಚ ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?

Sudeep: ಸುಮ್ಮನೇ ಯಾವುದೋ ವಿಷಯಕ್ಕಾಗಿ ನಾನು ಜಗಳಕ್ಕಿಳಿಯುವವನಲ್ಲ, ಎದುರಾಳಿ ಸ್ಟ್ರಾಂಗ್ ಆಗಿದ್ದಾಗ ಮಾತ್ರ ನಾನು ಪಟ್ಟು ಹಾಕುತ್ತೇನೆ ಅಂತ ತಮ್ಮದೇ ಪೈಲ್ವಾನ್ ಸ್ಟೈಲ್​ನಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಸುದೀಪ್, ಸ್ಟಾರ್ ನಟರಿಗೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದರಾ..? ಅದು ಯಾವ ಸ್ಟಾರ್​ ನಟನಿಗೆ ಅನ್ನೋ ಅನುಮಾನದ ಲೆಕ್ಕಾಚಾರಗಳೂ ಶುರುವಾಗಿವೆ. 

Anitha E | news18
Updated:August 13, 2019, 1:15 PM IST
Sudeep: ಕಿಚ್ಚ ಸುದೀಪ್​ ಖಾರವಾಗಿ ಬರೆದ ಟ್ವೀಟ್​ ಯಾವ ಸ್ಟಾರ್​ ನಟನಿಗೆ ಗೊತ್ತಾ..?
ಸುದೀಪ್​ ಹಾಗೂ ದರ್ಶನ್​
Anitha E | news18
Updated: August 13, 2019, 1:15 PM IST
- ಅನಿತಾ ಈ, 

ಕಿಚ್ಚ ಸುದೀಪ್​ ಸುಖಾ​ಸುಮ್ಮನೆ ಸುದ್ದಿಗಾಗಿ ಮನಸ್ಸಿಗೆ ಬಂದಂತೆ ಮಾತನಾಡುವ ವ್ಯಕ್ತಿಯಲ್ಲ. ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವ ವ್ಯಕ್ತಿತ್ವವೂ ಅವರದಲ್ಲ. ಆದರೆ ಅವರು ನಿನ್ನೆ ಮಾಡಿರುವ ಟ್ವೀಟ್​ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹಾಟ್​ ಟಾಪಿಕ್​ ಆಗಿ ಚರ್ಚೆಯಾಗುತ್ತಿದೆ.

ಅವರು ಮಾಡಿರುವ ಟ್ವೀಟ್​ ಬಗ್ಗೆ ನಿನ್ನೆಯೇ ಬರೆದಿದ್ದೇವೆ. ಆದರೆ ಈ ಟ್ವೀಟ್​ ಈಗ ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಅದು ಸುದೀಪ್​ ಹೀಗೆ ಬರೆದದ್ದು ಯಾರಿಗೆ ಅಂತ..? ಹೌದು, ಸುದೀಪ್​ ಗಂಡಸುತನದ ಬಗ್ಗೆ ಬರೆದಿದ್ದಾದರೂ ಯಾರಿಗೆ ಅನ್ನೋ ಚರ್ಚೆ ಈಗ ಆರಂಭವಾಗಿದೆ.

Kiccha sudeep
Kiccha sudeep


ಸುದೀಪ್ ಮಾಡಿರುವ ಟ್ವೀಟ್‍ನ ಅರ್ಥ, 'ನಿಜವಾದ ಪುರಷನಿಗೆ ಮದ್ಯ ಬೇಕಾಗಿಲ್ಲ ಮತ್ತು ಸೂರ್ಯ ಮುಳುಗುತ್ತಿದ್ದಂತೆ ಆತ ಗಂಡಸಾಗುತ್ತಾನೆ....' ಎಂದು ಬರೆದು ಅದರ ಜೊತೆಗೆ ಒಂದು ಫೋಟೋವನ್ನೂ ಟ್ವೀಟ್ ಮಾಡಿದ್ದಾರೆ. ಆ ಫೋಟೋದಲ್ಲಿರೋ ಶೀರ್ಷಿಕೆ ಮತ್ತೇನನ್ನೋ ಹೇಳುವಂತಿದೆ.

Read a beautiful line somewhere,,'ಸುಮ್ಮನೇ ಯಾವುದೋ ವಿಷಯಕ್ಕಾಗಿ ನಾನು ಜಗಳಕ್ಕಿಳಿಯುವವನಲ್ಲ, ಎದುರಾಳಿ ಸ್ಟ್ರಾಂಗ್ ಆಗಿದ್ದಾಗ ಮಾತ್ರ ನಾನು ಪಟ್ಟು ಹಾಕುತ್ತೇನೆ' ಅಂತ ತಮ್ಮದೇ 'ಪೈಲ್ವಾನ್' ಸ್ಟೈಲ್​ನಲ್ಲಿ ಟ್ವೀಟ್ ಮಾಡಿದ್ದಾರೆ. ಇದು ಸುದೀಪ್, ಸ್ಟಾರ್ ನಟರಿಗೆ ಪರೋಕ್ಷವಾಗಿ ಬಿಸಿ ಮುಟ್ಟಿಸಿದರಾ..? ಅದು ಯಾವ ಸ್ಟಾರ್​ ನಟನಿಗೆ ಅನ್ನೋ ಅನುಮಾನದ ಲೆಕ್ಕಾಚಾರಗಳೂ ಶುರುವಾಗಿವೆ. 

ಇದನ್ನೂ ಓದಿ: ರಾಕಿಂಗ್​ ಸ್ಟಾರ್​ ಯಶ್​ ಬದಲು ಪೂರಿ ಜಗನ್ನಾಥ್​ ಜತೆ ಕೈ ಜೋಡಿಸಿದ ವಿಜಯ್​ ದೇವರಕೊಂಡ..!

ಕಳೆದ ಕೆಲ ದಿನಗಳಿಂದ ಡಿಬಾಸ್​ ದರ್ಶನ್​ ಹಾಗೂ ಅವರ ಹೆಂಡತಿ ವಿಜಯಲಕ್ಷ್ಮಿ ಅವರ ನಡುವೆ ಜಗಳವಾಗಿದ್ದು, ಅವರು ಕುಡಿದ ಅಮಲಿನಲ್ಲಿ ಹೆಂಡತಿಗೆ ಮನ ಬಂದಂತೆ ಹೊಡೆದಿದ್ದಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಸುದೀಪ್​ ಅವರು ಬರೆದಿರುವ ಟ್ವೀಟ್​ಗೆ ಅವರ ಅಭಿಮಾನಿಗಳು ಡಿಬಾಸ್​ ದರ್ಶನ್​ ಅವರ ಹೆಸರನ್ನು ಲಿಂಕ್​ ಮಾಡಿ ಬರೆಯುತ್ತಿದ್ದಾರೆ.

  'ರಾಬರ್ಟ್' ಸಿನಿಮಾದ ನಿರ್ಮಾಪಕರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್​ ಬಗ್ಗೆ ಮಾತನಾಡಿದ್ದಕ್ಕೆ ಈ ಪೋಸ್ಟ್​ ಎಂದು ಹೇಳಲಾಗುತ್ತಿದೆ. ​ಏನೇ ಆಗಲಿ ಸುದೀಪ್​ ಮಾಡಿರುವ ಒಂದು ಟ್ವೀಟ್​ ಈಗ ಸ್ಯಾಂಡಲ್​ವುಡ್​ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದು ಯಾರಿಗಾಗಿ ಬರೆದ ಸಾಲುಗಳು ಅನ್ನೋದು ಮಾತ್ರ ಕಿಚ್ಚನಿಗೆ ಗೊತ್ತು.

 

Kim Kardashian: ಪಡ್ಡೆಗಳ ನಿದ್ದೆಗೆಡಿಸಿದೆ ಅಮೆರಿಕದ ಟಾಪ್​ ರಿಯಾಲಿಟಿ ಸ್ಟಾರ್​ ಕಿಮ್​ ಕರ್ದಾಷಿಯನ್​ರ ಹಾಟ್​ ಚಿತ್ರಗಳು..!


 
First published:August 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...