HOME » NEWS » Entertainment » HOSTEL HUDUGARU BEKAGIDDARE MOVIE TEASER WILL BE RELEASING BY PUNEETH RAJKUMAR ON 28TH JANUARY VB

ಸ್ಯಾಂಡಲ್​ವುಡ್​ನಲ್ಲಿ ಹಾಸ್ಟೆಲ್ ಹುಡುಗರು ಹಾವಳಿ: ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಪುನೀತ್ ರಾಜ್​ಕುಮಾರ್

ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡ ಮಾಡಿರುವ ಒಂದು ವಿಡಿಯೋ ಸ್ಯಾಂಡಲ್​ವುಡ್​ನಲ್ಲಿ ಈವರೆಗೆ ಯಾರೂ ಮಾಡಿಲ್ಲದಂತಿದೆ.

news18-kannada
Updated:January 25, 2021, 3:12 PM IST
ಸ್ಯಾಂಡಲ್​ವುಡ್​ನಲ್ಲಿ ಹಾಸ್ಟೆಲ್ ಹುಡುಗರು ಹಾವಳಿ: ಪೋಸ್ಟರ್ ರಿಲೀಸ್ ಮಾಡಲಿದ್ದಾರೆ ಪುನೀತ್ ರಾಜ್​ಕುಮಾರ್
Hostel hudugaru bekagiddar
  • Share this:
ಚಂದನವನದಲ್ಲಿ ಕಳೆದ ಒಂದು ವರ್ಷದಿಂದ ಹೊಸಬರ ಹೊಸತನದ ಸಿನಿಮಾಗಳು ಸಖತ್ ಸದ್ದು ಮಾಡುತ್ತಿದೆ. ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ಥಿಯೇಟರ್​ಗೆ ಲಗ್ಗೆಯಿಟ್ಟು ಯಶಸ್ಸು ಗಳಿಸುವಲ್ಲಿ ಹೊಸಬರ ಪಾಲು ತುಸು ಹೆಚ್ಚಾಗುತ್ತಿದೆ. ಸದ್ಯ ಇದೇ ಸಾಲಿಗೆ ಮತ್ತೊಂದು ಸಿನಿಮಾ ಸೇರುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಹೌದು, ಅದೇ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಎಂಬ ಸಿನಿಮಾ.

ವಿಶಿಷ್ಟ ಟೈಟಲ್​ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶನ ಮಾಡಿದ್ದು, ವರುಣ್ ಕುಮಾರ್ ಹಾಗೂ ಪ್ರಜ್ವಲ್ ಗೌಡ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಇಂಪಾನ್ ಸಂಗೀತವಿದೆ. ಇದೊಂದು ಪಕ್ಕಾ ಹುಡುಗರ ಕಾಮಿಡಿ ಸಿನಿಮಾವಾಗಿದ್ದು, ಲಾಕ್  ಡೌನ್ ಮುಗಿದ ತಕ್ಷಣ ಮಾಡಿದ‌ ಮೊದಲ‌ ಚಿತ್ರವೂ ಹೌದು.

Salaga Title Song: ಕಿಚ್ಚು ಹಚ್ಚುತ್ತಿದೆ ದುನಿಯಾ ವಿಜಯ್​ ಅಭಿನಯದ ಸಲಗ ಚಿತ್ರದ ಟೈಟಲ್​ ಟ್ರ್ಯಾಕ್​ನ ಲಿರಿಕಲ್​ ವಿಡಿಯೋ ..!

ಆದರೆ ಇದರ ಪೋಸ್ಟರ್ ಅನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಜನವರಿ 28 ರಂದು ಬಿಡುಗಡೆ ಮಾಡಲಿದ್ದಾರೆ ಎಂಬ ಮಾಹಿತಿಯಷ್ಟೆ ತಿಳಿದಿದೆ. ಎಲ್ಲ ಯುವ ಪ್ರತಿಭೆಗಳು ಸೇರಿ ಹೊಸಬರ ತಂಡವೇ ಈ ಸಿನಿಮಾ ಮಾಡಿದ್ದರೂ ಇದರ ಕ್ರಿಯೇಟಿವ್ ಪ್ರಚಾರದಿಂದಾಗಿ ಸಾಕಷ್ಟು ಗಮನ ಸೆಳೆಯುತ್ತಿದೆ.

ಇದಕ್ಕೆ ಪ್ರಮುಖ ಕಾರಣ ಬಿಡುಗಡೆ ಆಗಿರುವ ಸಿನಿಮಾದ ಒಂದು ತುಣುಕು. ಪೋಸ್ಟರ್ ಬಿಡುಗಡೆ ಬಗ್ಗೆ ಚಿತ್ರತಂಡ ಮಾಡಿರುವ ಒಂದು ವಿಡಿಯೋ ಸ್ಯಾಂಡಲ್​ವುಡ್​ನಲ್ಲಿ ಈವರೆಗೆ ಯಾರೂ ಮಾಡಿಲ್ಲದಂತಿದೆ. ಇಂತಹ ಹೊಸ ಪ್ರಯತ್ನಕ್ಕೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಕೈ ಹಾಕಿದೆ. ಮೊನಾಲಿಸಾ ಸೇರಿದಂತೆ ಪ್ರಸಿದ್ಧ ಕಲಾತ್ಮಕ ಚಿತ್ರಗಳು ಪರಸ್ಪರ ಸಂಭಾಷಣೆ ನಡೆಸುತ್ತಿರುವಂತೆ ಮಾಡಿ ಪೋಸ್ಟರ್ ಅನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡುತ್ತಿರುವ ಮಾಹಿತಿ ಬಿಚ್ಚಿಟ್ಟಿದೆ.



ಈ ವಿಡಿಯೋದಲ್ಲಿ ಮತ್ತೊಂದು ಅಚ್ಚರಿ ಪಡುವಂತಹ ವಿಷಯವೇನೆಂದರೆ ಇದು ‘ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಸಿನಿಮಾ’ ಎಂಬ ಕ್ರಿಯೇಟಿವ್ ಅಡಿಬರಹವನ್ನ ನೀಡಿರುವುದು. ಹೀಗಾಗಿ ಈ ಪೋಸ್ಟರ್ ಬಗ್ಗೆ ನೆಟ್ಟಿಗರು ಭಾರೀ ಕುತೂಹಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಾಮಾಜಿಕ ತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದ್ದು, ಅಪ್ಪು ಬಿಡುಗಡೆ ಮಾಡಲಿರುವ ಪೋಸ್ಟರ್​ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.Malashree Ramu: ಮಗಳ ಜೊತೆ ಮ್ಯಾಚಿಂಗ್​​ ಟ್ಯಾಟೂ ಹಾಕಿಸಿಕೊಂಡ ನಟಿ ಮಾಲಾಶ್ರೀ..!​







ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡ ಬಿಡುಗಡೆ ಮಾಡಿರುವ ಈ ವಿಡಿಯೋಗೆ ಈಗಾಗಲೇ ಸ್ಯಾಂಡಲ್​ವುಡ್ ಮಂದಿ ತಲೆಬಾಗಿದ್ದಾರೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಸೇರಿದಂತೆ ಅನೇಕ ಸಿನಿಮಾ ತಾರೆಯರು ಈ ವಿಡಿಯೋವನ್ನು ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by: Vinay Bhat
First published: January 25, 2021, 2:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories