ನೀವು ಸರಿಯಾಗಿ ಗಮನಿಸಿ ನೋಡಿ ಗಂಡಸರು ಮತ್ತೊಬ್ಬ ಗಂಡಸಿಗೆ ಬೈಯುವಾಗ ಹೆಣ್ಣು ಮಕ್ಕಳನ್ನು ಬೈಯುತ್ತಾರೆ. ಕೆಲ ವರದಿಗಳ ಪ್ರಕಾರ ಶೇಕಡ 98ರಷ್ಟು ಗಂಡಸರು ಇದೇ ತಪ್ಪನ್ನ ಮಾಡುತ್ತಾರೆ. ಹೆಚ್ಚಿನ ಗಂಡಸರಿಗೆ ಕೋಪ ಬಂದಾಗ ಅಮ್ಮ ಮತ್ತು ಅಕ್ಕ ಹೀಗೆ ಮುಂತಾದ ಕೆಟ್ಟ ಪದಗಳು ಬಾಯಿಗೆ ಬರುತ್ತದೆ. ಇದು ಸಾಮಾನ್ಯವಾಗಿದೆ, ಅವರಿಗೆ ತಮ್ಮ ತಪ್ಪಿನ ಅರಿವೂ ಕೂಡ ಆಗುವುದಿಲ್ಲ. ಆದರೆ ಕೆಲವು ಜನರು ಮಾತ್ರ ಈ ತಪ್ಪುಗಳನ್ನು ಮಾಡುವುದಿಲ್ಲ. ಇನ್ನು ಈ ಕೆಟ್ಟ ಪದಗಳ ಬಳಕೆಯನ್ನು ಕಡಿಮೆ ಮಾಡಲು ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರ ತಂಡ ಹೊಸ ಪ್ರಯತ್ನ ಮಾಡಿದೆ.
ಹೆಣ್ಣು ಮಕ್ಕಳನ್ನು ನಿಂದಿಸದೆ ಬಳಸಬಹುದಾದ ಕರ್ನಾಟಕ ಬೈಗುಳಗಳ ಕೋಷ್ಟಕವನ್ನು ಬಿಡುಗಡೆ ಮಾಡಿದೆ, ಇನ್ನು ಯಾರಾದರೂ ಬೈಯಲು ಹೊಸ ಪದಗಳು ಸಿಗಲ್ಲ ಎಂದು ಯೋಚಿಸೋದು ಬೇಡಾ, A to Zವರೆಗೂ ಹೊಸ ರೀತಿಯ ಬೈಗುಳಗಳನ್ನು ಟೀಸರ್ ಮೂಲಕ ಚಿತ್ರ ತಂಡ ಕೊಟ್ಟಿದೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರತಂಡದೊಂದಿಗೆ ಕೈ ಜೋಡಿಸಿರುವ ಖಾಸಗಿ ಸುದ್ದಿ ವಾಹಿನಿ ಮುಖ್ಯಸ್ಥ ಎಚ್ಆರ್ ರಂಗನಾಥ್ ಸಹ ಹೊಸ ಬೈಗುಳವನ್ನು ಕರ್ನಾಟಕ ಜನತೆಗೆ ಬಿಡುಗಡೆ ಮಾಡಿದ್ದಾರೆ. ನಿಮಗೆ ಕೋಪ ಬಂದಾಗ 'ಪಟಾಳ್' ಎಂದು ಬೈಯಿರಿ, ಇದಕ್ಕೆ ಅರ್ಥ-ಪರ್ಥ ಇಲ್ಲ ಎಂದು ಹೊಸ ಪದವೊಂದನ್ನು ಜನತೆಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ:ಹೊಸ ಫೋಟೋಶೂಟ್ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ದೀಪಿಕಾ ದಾಸ್
ಇನ್ನು ಚಿತ್ರತಂಡ ವಿಚಾರಕ್ಕೆ ಬರುವುದಾದರೆ ಹೆಚ್ಚು ವಿಭಿನ್ನ ಆಲೋಚನೆಗಳನ್ನು ತಂಡ ಹೊಂದಿದೆ. ಮೊದಲಿನಿಂದಲೂ ಪ್ರತಿಯೊಂದು ಹಂತದಲ್ಲೂ ಬಹಳ ವಿಭಿನ್ನವಾಗಿ ಪ್ರಚಾರ ಮಾಡುತ್ತಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ಮತ್ತೊಂದು ಪ್ರಯತ್ನ ಇದಾಗಿದೆ. ಅಲ್ಲದೆ, ಈ ಟೀಸರ್ ಈಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಇದಕ್ಕೂ ಮುಂಚೆ ಕಿಚ್ಚ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಅವರು 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರದ ಪ್ರಚಾರದ ವಿಧಾನವನ್ನು ಹೊಗಳಿದ್ದರು, ಅಲ್ಲದೇ ಈ ತಂಡ ಬುರ್ಜ್ ಖಲೀಫಾ ಕಟ್ಟಡದ ಮೇಲಿಂದ ಟೀಸರ್ ಲಾಂಚ್ ಮಾಡ್ತೇವೆ ಎಂದು ಹೇಳಿ ಸುದ್ದಿ ಮಾಡಿದ್ದರು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರವನ್ನು ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಗುಲ್ಮೊಹರ್ ಫಿಲ್ಮ್ಸ್ ಮತ್ತು ವರುಣ್ ಸ್ಟುಡಿಯೋಸ್ ಬ್ಯಾನರ್ನಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. . ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಕೊರೊನಾ ಸಮಸ್ಯೆ ಇಲ್ಲದಿದ್ದಲ್ಲಿ ಈಗಾಗಲೇ ಚಿತ್ರ ತೆರೆಗೆ ಬರಬೇಕಿತ್ತು. ತಮ್ಮ ಟೀಸರ್ ಮೂಲಕ ಕೂತುಹಲ ಮೂಡಿಸಿರುವ ಚಿತ್ರಕ್ಕೆ ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದು ಬಿಡುಗಡೆಗೆ ಕಾಯುತ್ತಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ