2013 ರಲ್ಲಿ ರಿಲೀಸ್ ಆದ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶನದ ಚೆನ್ನೈ ಎಕ್ಸ್‌ಪ್ರೆಸ್ (Chennai Express) ಚಿತ್ರದ ಲುಂಗಿ ಡ್ಯಾನ್ಸ್ (Lungi Dance) ಹಾಡು ಇಂದಿಗೂ ಫೇಮಸ್. ಅಂದಿನ ಆ ಸೂಪರ್ ಹಿಟ್ ಸಾಂಗ್ ಕೇಳಿದರೆ ಇಂದಿಗೂ ಮಕ್ಕಳು ಖುಷಿಯಿಂದ ಕುಣಿಯುತ್ತಾರೆ. ಈ ಮಧ್ಯೆ ನಟ ಶಾರುಖ್ ಖಾನ್‌ಗೆ (Shah Rukh Khan) ಮೊದಲು ಈ ಸಾಂಗ್ ಇಷ್ಟ ಆಗಿರಲಿಲ್ಲ ಎಂದು ಗಾಯಕ ಹನಿ ಸಿಂಗ್ (Honey Singh) ಹೇಳಿದ್ದಾರೆ. ಅಲ್ಲದೇ ಶಾರುಖ್ ತಮ್ಮ ಜೀವನದ ಕಷ್ಟದ ಹಂತದಲ್ಲಿ ಅವರಿಗೆ ಸಹಾಯ ಮಾಡಿದ್ದಾಗಿ ನೆನಪಿಸಿಕೊಂಡಿದ್ದಾರೆ.
ಇತ್ತೀಚಿಗೆ ನೀಡಿದ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಹನಿ ಸಿಂಗ್ ಲುಂಗಿ ಡ್ಯಾನ್ಸ್ ಬಗ್ಗೆ ನೆನಪುಗಳನ್ನು ಹಂಚಿಕೊಂಡಿದ್ದಾರೆ. ರ‍್ಯಾಪರ್ ಹನಿ ಸಿಂಗ್ ಯಾವಾಗಲೂ ಇಂಗ್ಲೀಷ್ ವಾಕ್ಯಗಳನ್ನು ಬಳಸಿ ಹಾಡು ಮಾಡುತ್ತಾರೆ ಅಥವಾ ಇವರ ಹಾಡುಗಳಲ್ಲಿ ಹೆಚ್ಚು ಇಂಗ್ಲೀಷ್ ಶಬ್ದಗಳಿರುತ್ತವೆ. ಇಂತಹ ಹಾಡನ್ನು ಕೇಳಿದ ಶಾರುಖ್ ಖಾನ್ ನನಗೆ ಕರೆ ಮಾಡಿ ಇಂಥದ್ದೇ “ಅಂಗ್ರೇಜಿ ಬೀಟ್”ನಂತಹ ಹಾಡನ್ನು ಮಾಡಿಕೊಂಡುವಂತೆ ಹೇಳಿದ್ದರು ಎಂದು ಹನಿ ಸಿಂಗ್ ಹೇಳಿದ್ದಾರೆ.
ಇಷ್ಟವಾಗದಿದ್ದರೆ ಸಿಂಗಲ್ ಆಗಿ ರಿಲೀಸ್ ಮಾಡುತ್ತೇನೆ ಎಂದಿದ್ದೆ!
ಶಾರುಖ್ ಖಾನ್ ನಮ್ಮನ್ನು ಕರೆಯಿಸಿಕೊಂಡಾಗ ನಾನು “ನಿಮ್ಮ ಚಿತ್ರದ ವೈಬ್ ಏನು’ ಎಂದೆ. ಅವರು ತಮ್ಮ ಚಿತ್ರದ ಬಗ್ಗೆ 3 ಗಂಟೆಗಳ ಕಾಲ ಹೇಳಿದರು. ನಾನು ಅವರಿಗಾಗಿ ಏನಾದರೂ ವಿಶೇಷವಾದ್ದದನ್ನು ರಚಿಸುತ್ತೇನೆ ಎಂದು ಹೇಳಿದ್ದೆ. ಆದರೆ ನನ್ನ ಲುಂಗಿ ಡ್ಯಾನ್ಸ್ ಹಾಡು ಅವರಿಗೆ ಮೊದಲು ಇಷ್ಟವಾಗಲಿಲ್ಲ.
ಇದನ್ನೂ ಓದಿ: ಈ ಸೌತ್ ನಟಿಯರನ್ನು ಬ್ಲ್ಯಾಕ್ ಡ್ರೆಸ್ನಲ್ಲಿ ನೋಡಿದ್ರೆ ಕಳೆದೋಗ್ಬಿಡ್ತೀರಾ!
“ಆದರೆ ನನಗೆ ಗೊತ್ತಿತ್ತು ಅದು ಸೂಪರ್ ಹಿಟ್ ಆಗುತ್ತದೆ ಎಂದು. ಅದಕ್ಕಾಗಿ ನಿಮಗೆ ಬೇಕಾದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ನಾನು ಅದನ್ನು ಸಿಂಗಲ್ ಆಗಿ ಬಿಡುಗಡೆ ಮಾಡುತ್ತೇನೆ” ಎಂದು ನಾನು ಅವರಿಗೆ ಹೇಳಿದ್ದೆ. ಇದನ್ನು ಎಸ್‌ಆರ್‌ಕೆ ಮತ್ತು ದೀಪಿಕಾ ಪಡುಕೋಣೆ ಮೇಲೆ ಚಿತ್ರಿಸಲಾಗಿತ್ತು. ಆದರೆ ನಂತರದಲ್ಲಿ ಶಾರುಖ್ ಅವರು ಚೆನ್ನೈ ಎಕ್ಸ್‌ಪ್ರೆಸ್‌ಗಾಗಿ ಆ ಹಾಡನ್ನು ಬಳಸಿದರು. ಅದು ಬ್ಲಾಕ್ ಬಸ್ಟರ್ ಆಯಿತು ಎಂದು ಹನಿಸಿಂಗ್ ಹೇಳಿದ್ದಾರೆ.
ಇಬ್ಬರೂ ರಜನಿಕಾಂತ್ ದೊಡ್ಡ ಅಭಿಮಾನಿಗಳು
ಅಲ್ಲದೇ ಶಾರುಖ್ ಖಾನ್, “ರಜನಿ ಸರ್‌ಗೆ ಇದು ತುಂಬಾ ಸೂಕ್ತವಾಗಿದೆ. ನಮ್ಮಲ್ಲಿರುವ ಶ್ರೇಷ್ಠ ನಟರೊಬ್ಬರ ಅಭಿಮಾನಿಯಾಗಿ ನಾನು ಅದರ ಭಾಗವಾಗಲು ಬಯಸುತ್ತೇನೆ” ಎಂದು ಒಪ್ಪಿಕೊಂಡರು.
ಅಲ್ಲದೇ ದೀಪಿಕಾ ಪಡುಕೋಣೆ ಕೂಡ ನನ್ನ ಕೋರಿಕೆಯ ಮೇರೆಗೆ, ಹಾಡಿನ ಭಾಗವಾಗಲು ಸಂತೋಷದಿಂದ ಒಪ್ಪಿಕೊಂಡರು. ಏಕೆಂದರೆ ಅವರು ಕೂಡ ರಜನಿ ಸರ್ ಅವರ ದೊಡ್ಡ ಅಭಿಮಾನಿ ಎಂಬುದಾಗಿ ಹನಿಸಿಂಗ್ ಹೇಳಿದ್ದಾರೆ.
ವರ್ಷದ ಹಿಂದೆ ಭವಿಷ್ಯ ನುಡಿದಿದ್ದೆ
ಈ ಹಿಂದಿನ ಸಂದರ್ಶವೊಂದರಲ್ಲಿ ಹನಿ ಸಿಂಗ್, ತಾವು ಶಾರುಖ್ ಜೊತೆಗೆ ಹೇಗೆ ಕೆಲಸ ಮಾಡಿದ್ದೇನೆ ಎಂಬುದನ್ನು ನೆನಪಿಸಿಕೊಂಡಿದ್ದರು. “2012 ರಲ್ಲಿ, ನಾನು, ಸೇಹಿತ ಅಲ್ಫಾಜ್ ಜೊತೆಗೆ ಭಾರತ ಪ್ರವಾಸ ಮಾಡುತ್ತಿದ್ದೆ. ಅಲ್ಲಿ ಅವರು ನನ್ನ ದೊಡ್ಡ ಪೋಸ್ಟರ್ ಅನ್ನು ಹಾಕಿದ್ದರು. ಅಲ್ಲಿಯೇ ಶಾರುಖ್ ಖಾನ್ ಚಿತ್ರದ ಪೋಸ್ಟರ್ ಕೂಡ ಇತ್ತು. ಆ ಪೋಸ್ಟರ್ ನನ್ನ ಪೋಸ್ಟರ್ ಗಿಂತ ಚಿಕ್ಕದಾಗಿತ್ತು. ಅಲ್ಫಾಜ್ ಅದನ್ನು ತೋರಿಸಿದ್ದರೆ ನಾನು, ಇನ್ನು ಒಂದು ವರ್ಷದ ನಂತರ ಈ ವ್ಯಕ್ತಿ ನಮ್ಮನ್ನು ಅವನ ಮನೆಗೆ ಕರೆಯುತ್ತಾರೆ ಎಂದಿದ್ದೆ. ನಾನು ಹೇಳಿದಂತೆಯೇ ಆಯಿತು. ಹಾಗೆ ಆದಾಗ ಅಲ್ಫಾಜ್ ಆಶ್ಚರ್ಯಚಕಿತರಾಗಿದ್ದರು” ಎಂದು ಸಿಂಗ್ ಹೇಳಿದರು.
ಇದೇವೇಳೆ ಶಾರುಖ್ ಕೂಡ ತನಗೆ ತುಂಬಾ "ಆತ್ಮಗೌರವ" ಇದೆ ಎಂದು ಒಮ್ಮೆ ಹೇಳಿದ್ದರು ಎಂಬುದಾಗಿ ಹನಿಸಿಂಗ್ ನೆನಪಿಸಿಕೊಂಡಿದ್ದರು.
ಇನ್ನು, ಗಾಯಕ ಹನಿ ಸಿಂಗ್, ತಮ್ಮ ಜೀವನದ ಮೇಲೆ ಹೊಸ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರವೊಂದು ಹೊರಬರುತ್ತಿದೆ ಎಂದು ಬಹಿರಂಗಪಡಿಸಿದ್ದಾರೆ. ಇನ್ನೂ ಹೆಸರಿಡದದ ಚಲನಚಿತ್ರವನ್ನು ಸಿಖ್ಯಾ ಎಂಟರ್‌ಟೈನ್‌ಮೆಂಟ್‌ನ ಗುನೀತ್ ಮೊಂಗಾ ನಿರ್ಮಿಸಿದ್ದಾರೆ. ಅವರು ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಇನ್ನು, ಪ್ರಸ್ತುತ ಹನಿ ಸಿಂಗ್ ತನ್ನ ಹೊಸ ಸಿಂಗಲ್ 'ನಾಗನ್' ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ