ಬಾಲಿವುಡ್ ನಲ್ಲಿ (Bollywood) ಕೆಲವು ನಟ ಮತ್ತು ನಟಿಯರು ಸದಾ ಯಾವುದಾದರೊಂದು ಕಾರಣಕ್ಕೆ ಸುದ್ದಿಯಲ್ಲಿರುವುದನ್ನು ನಾವು ನೋಡಿದ್ದೇವೆ. ಆದರೆ ಗಾಯಕರು ಸುದ್ದಿಯಲ್ಲಿರುವುದು ತೀರಾ ಕಡಿಮೆ, ಅದರಲ್ಲೂ ತಮ್ಮ ಗಾಯನದ (Singing) ವಿಚಾರವನ್ನು ಬಿಟ್ಟು, ಬೇರೆ ವಿಚಾರಗಳಿಗೆ ಅಂತ ಹೇಳಿದ್ರೆ ತೀರಾ ಅಪರೂಪ. ಆದರೆ ಇಲ್ಲೊಬ್ಬ ಗಾಯಕ ಮಾತ್ರ ಸದಾ ಒಳ್ಳೆಯ ಕಾರಣಕ್ಕಿಂತ ಹೆಚ್ಚು ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಸದಾ ವಿವಾದದಲ್ಲಿ ಸಿಲುಕಿಕೊಳ್ಳುತ್ತಿರುವ ಗಾಯಕ ಹನಿ ಸಿಂಗ್
ಆ ಗಾಯಕ ಬೇರೆ ಯಾರೂ ಅಲ್ಲ, ಅವರೇ ಯೋ ಯೋ ಹನಿ ಸಿಂಗ್ ಎಂದು ಕರೆಯಲ್ಪಡುವ ಹನಿ ಸಿಂಗ್.
ಇವರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ. ಒಮ್ಮೆ ತಮ್ಮ ಮಾಜಿ ಪತ್ನಿ ಶಾಲಿನಿ ತಲ್ವಾರ್ ಅವರೊಂದಿಗಿನ ವಿಚ್ಛೇದನದ ವಿಷಯಕ್ಕೆ ಆದರೆ, ಇನ್ನೊಮ್ಮೆ ಅವರ ಹಾಡುಗಳಲ್ಲಿ ಆಕ್ಷೇಪಾರ್ಹ ಸಾಹಿತ್ಯವನ್ನು ಬಳಸುವುದರಿಂದ ಅಂತ ಹೇಳಬಹುದು.
ಇದಷ್ಟೇ ಅಲ್ಲದೆ, ಈ 39 ವರ್ಷದ ಗಾಯಕ ಹನಿ ಸಿಂಗ್, ಆಲ್ಕೋಹಾಲ್ ಅಥವಾ ಮಾದಕ ದ್ರವ್ಯ ಸೇವನೆಯ ವ್ಯಸನಕ್ಕಾಗಿಯೂ ಸಹ ಅನೇಕ ಬಾರಿ ಒಂದರ ನಂತರ ಒಂದರಂತೆ ವಿವಾದಕ್ಕೆ ಸಿಲುಕುತ್ತಲೇ ಇದ್ದಾರೆ ಅಂತ ಹೇಳಬಹುದು.
ಕೆಟ್ಟ ಸಮಯದಲ್ಲಿ ಸಹಾಯಕ್ಕೆ ಬಂದ ಬಾಲಿವುಡ್ ನಟಿ
ಬಾಲಿವುಡ್ ಹಂಗಾಮಾ ಜೊತೆಗಿನ ಇತ್ತೀಚಿನ ಸಂವಾದದಲ್ಲಿ, ಗಾಯಕನು ತನ್ನ ಜೀವನದಲ್ಲಿನ ಕೆಟ್ಟ ಸಮಯವನ್ನು ಹೇಗೆ ನಿಭಾಯಿಸಿದರು ಎಂಬುದರ ಬಗ್ಗೆ ಮಾತನಾಡಿದ್ದಾರೆ.
ತನಗೆ ಬೈಪೋಲಾರ್ ಡಿಸಾರ್ಡರ್ ಇರುವುದು ಪತ್ತೆಯಾದಾಗ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ದೆಹಲಿಯಲ್ಲಿ ವೈದ್ಯರನ್ನು ಸೂಚಿಸಿದರು. ಅಂತಿಮವಾಗಿ ಅವರು ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು ಎಂದು ಗಾಯಕ ಹೇಳಿದರು.
ಇದನ್ನೂ ಓದಿ: Ram Charan: 30 ವರ್ಷಗಳ ಕುಟುಂಬ ವೈರತ್ವ! Jr. NTR - ರಾಮ್ ಚರಣ್ ಹೇಳಿದ್ದಿಷ್ಟು
ಇಷ್ಟೇ ಅಲ್ಲದೆ ಬಾಲಿವುಡ್ ನ ಜನಪ್ರಿಯ ನಟರಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಸಹ ಹನಿ ಸಿಂಗ್ ಗೆ ಆಗಾಗ ಫೋನ್ ಕರೆ ಮಾಡಿ ಆರೋಗ್ಯವನ್ನು ವಿಚಾರಿಸುತ್ತಿದ್ದರಂತೆ.
ಆದರೆ ಕೆಲವೊಮ್ಮೆ ತಾನೆಷ್ಟು ಕೆಟ್ಟ ಸ್ಥಿತಿಯಲ್ಲಿದ್ದನೆಂದರೆ ಯಾರೊಂದಿಗೂ ಫೋನ್ನಲ್ಲಿ ಸರಿಯಾಗಿ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಖುದ್ದು ಹನಿ ಸಿಂಗ್ ಹೇಳಿಕೊಂಡಿದ್ದಾರೆ.
ಮಾಧ್ಯಮಗಳಿಗೆ ತನ್ನ ಹೊಸ ಗೆಳತಿಯನ್ನು ಪರಿಚಯಿಸಿದ ಹನಿ ಸಿಂಗ್
ಹನಿ ಸಿಂಗ್ ಈಗ ತುಂಬಾನೇ ಚೇತರಿಸಿಕೊಂಡಿದ್ದು ಉತ್ತಮವಾದ ಸ್ಥಾನದಲ್ಲಿದ್ದಾರೆ ಮತ್ತು ವಾಸ್ತವವಾಗಿ ಮತ್ತೆ ಪ್ರೀತಿಯನ್ನು ಕಂಡು ಕೊಂಡಿದ್ದಾರೆ.
ಕಳೆದ ವರ್ಷ ಅವರು ಮಾಡೆಲ್ ಗೆಳತಿ ಟೀನಾ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಿದರು. ಕಾರ್ಯಕ್ರಮವೊಂದರಲ್ಲಿ ಟೀನಾ ಅವರನ್ನು ಮಾಧ್ಯಮಗಳಿಗೆ ಪರಿಚಯಿಸಿದ ಅವರು "ನನ್ನ ಗೆಳತಿ ಟೀನಾ ಇಲ್ಲಿದ್ದಾಳೆ. ಅವಳು ನನಗೆ ಹನಿ 3.0 ಎಂಬ ಹೆಸರನ್ನು ನೀಡಿದ್ದಾಳೆ” ಎಂದು ಹೇಳಿದ್ದರು.
ರ್ಯಾಪ್ ಗಳ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಏನ್ ಹೇಳಿದ್ರು ಹನಿ?
ಯೋ ಯೋ ಹನಿ ಸಿಂಗ್ ಇತ್ತೀಚೆಗೆ ಭಾರತದಲ್ಲಿ ರ್ಯಾಪ್ ಗಳ ಹೆಚ್ಚುತ್ತಿರುವ ಜನಪ್ರಿಯತೆಯ ಬಗ್ಗೆ ಸಹ ಈ ಸಂದರ್ಶನದಲ್ಲಿ ಮಾತನಾಡಿದರು. ಅವರ ಪ್ರಕಾರ, ರಾಗಗಳಿಗೆ ವ್ಯತಿರಿಕ್ತವಾಗಿ ಭಾರತವು ರ್ಯಾಪ್ ಅನ್ನು ಸ್ವೀಕರಿಸಲು ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಅವುಗಳಿಗೆ ಯಾವುದೇ ಪ್ರಮಾಣವಿಲ್ಲ. ಕಳೆದ 70-80 ವರ್ಷಗಳಿಂದ, ನಮ್ಮ ಭಾರತೀಯ ಜನರು ಮೆಲೋಡಿ ಹಾಡುಗಳಿಗೆ ಅಡಿಕ್ಟ್ ಆಗಿದ್ದಾರೆ ಎಂದು ರ್ಯಾಪರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ