ಏಪ್ರಿಲ್​ 14ಕ್ಕೆ ಬರ್ತಾರೆ ರಾಕಿಭಾಯ್​, ಅಧೀರ: ಗೆಟ್​ ರೆಡಿ ಎಂದ ಹೊಂಬಾಳೆ ಪ್ರೊಡಕ್ಷನ್​!

ಹೊಂಬಾಳೆ ಪ್ರೊಡಕ್ಷನ್ 'ಸಲಾಂ ರಾಕಿ ಭಾಯ್ ವಿಡಿಯೋ ಸಾಂಗ್' ಅನ್ನು ಬಿಡುಗಡೆ ಮಾಡಿದೆ. 'ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ? ಸಲಾಮ್ ರಾಕಿ ಭಾಯ್' ಎಂಬ ಅಡಿಬರಹದೊಂದಿಗೆ ವಿಡಿಯೋ ಸಾಂಗ್ ಕುರಿತು ಹೊಂಬಾಳೆ ಪ್ರೊಡಕ್ಷನ್ ‘ಕೂ’ ಮಾಡಿದೆ.

ಕೆಜಿಎಫ್​ 2

ಕೆಜಿಎಫ್​ 2

  • Share this:
ರಾಕಿಂಗ್ ಸ್ಟಾರ್ ಯಶ್ (Rocking star Yash) ಅವರ ಕೆಜಿಎಫ್ 1 (KGF 1) ಮಾಡಿದ ಅಬ್ಬರ ನಮ್ಮೆಲ್ಲರಿಗೂ ಗೊತ್ತಿದೆ. ‌ಇದೀಗ ಪಾರ್ಟ್ 2 ಮೂಲಕ ಅದೇ ಅಬ್ಬರ ಮುಂದುವರಿಸೋಕೆ ರಾಕಿ ಭಾಯ್ ಸಜ್ಜಾಗಿದ್ದು, ಅದಕ್ಕೆ ಮುನ್ನಡಿಯಾಗಿ ಹೊಂಬಾಳೆ ಪ್ರೊಡಕ್ಷನ್ 'ಸಲಾಂ ರಾಕಿ ಭಾಯ್ ವಿಡಿಯೋ ಸಾಂಗ್' ಅನ್ನು ಬಿಡುಗಡೆ ಮಾಡಿದೆ.'ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ? ಸಲಾಮ್ ರಾಕಿ ಭಾಯ್' ಎಂಬ ಅಡಿಬರಹದೊಂದಿಗೆ ವಿಡಿಯೋ ಸಾಂಗ್ ಕುರಿತು ಹೊಂಬಾಳೆ ಪ್ರೊಡಕ್ಷನ್ ‘ಕೂ’ ಮಾಡಿದೆ. ವಿಡಿಯೋನ ಕೊನೆಯಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ತಿಳಿಸಲಾಗಿದ್ದು, ಮುಂದಿನ ವರ್ಷ ಏಪ್ರಿಲ್ 14ರಂದು ಕೆಜಿಎಫ್ ಚಾಪ್ಟರ್-2 ಸಿನಿಮಾ ಎಲ್ಲೆಡೆ ತೆರೆಕಾಣಲಿದೆ.ಇತ್ತೀಚೆಗಷ್ಟೇ ಕೆಜಿಎಪ್​ ನಿರ್ದೇಶಕ ಪ್ರಶಾಂತ್ ನೀಲ್ (Prashanth neel) ಕೆಜಿಎಫ್​ ಚಾಪ್ಟರ್-2ನಲ್ಲಿ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್​ ನಟ ಸಂಜಯ್ ​ದತ್​ (Sanjay Dutt) ಅವರ ಡಬ್ಬಿಂಗ್ ಮುಕ್ತಾಯಗೊಳ್ಳುವ ಮೂಲಕ ಎಲ್ಲಾ ಭಾಷೆಗಳ ಡಬ್ಬಿಂಗ್ ಕೆಲಸ ಮುಕ್ತಾಯಗೊಂಡಿದೆ, ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಏಪ್ರಿಲ್​ 14ಕ್ಕೆ ಪಕ್ಕಾ ಬಾಕ್ಸಾಫೀಸ್​ ಉಡೀಸ್​ ಆಗುವುದರಲ್ಲಿ ಅನುಮಾನವೇ ಇಲ್ಲ. ಐದು ಭಾಷೆಗಳಲ್ಲಿ ಕೆಜಿಎಫ್​-2 ಸಿನಿಮಾ ವಿಶ್ವದಾದ್ಯಂತ ತೆರೆಕಾಣಲಿದೆ. ಯಾವಾಗ ಏಪ್ರಿಲ್​ 14 ಆಗುತ್ತೆ ಅಭಿಮಾನಿಗಳು ಉಗುರು ಕಚ್ಚುತ್ತಾ ಕಾಯುತ್ತಿದ್ದಾರೆ. 

ಸಲಾಂ ರಾಕಿ ಭಾಯ್​ 4k ವಿಡಿಯೋ ಸಾಂಗ್​ ರಿಲೀಸ್​!

ಕೆಜಿಎಫ್​ ಪಾರ್ಟ್ 1 ಮಾಡಿದ ದಾಖಲೆಯನ್ನು ಯಾರೂ ಮರೆಯುವಂತಿಲ್ಲ. ಇಡಿ ವಿಶ್ವವೇ ಕೆಜಿಎಫ್​ ಸಿನಿಮಾ ನೋಡಿ ದಂಗಾಗಿ ಹೋಗಿತ್ತು. ಕನ್ನಡ ಚಿತ್ರರಂಗದತ್ತ ಇಡೀ ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದು, ಕೆಜಿಎಫ್​ ನಿರ್ದೇಶಕ ಪ್ರಶಾಂತ್​ ನೀಲ್​, ರಾಕಿಂಗ್​ ಸ್ಟಾರ್​ ಯಶ್​​ ಹಾಗೂ ಹೊಂಬಾಳೆ ಅವರಿಗೆ ಸೇರಬೇಕು. ಈಗಲೂ ಅದರ ಹವಾ ಹಾಗೇ ಇದೆ. ಕೆಜಿಎಫ್​ ಸಿನಿಮಾದ ಹಾಡುಗಳನ್ನು ಕೇಳಿದರೇ ಫ್ಯಾನ್ಸ್​ ಫುಲ್​ ಥ್ರಿಲ್​ ಆಗುತ್ತಾರೆ. ಹೊಂಬಾಳೆ ಯೂಟ್ಯೂಬ್​ ಚಾನೆಲ್​ನಲ್ಲಿ ಇದೀಗ ಸಲಾಂ ರಾಕಿ ಭಾಯ್​ 4K ವಿಡಿಯೋ ಸಾಂಗ್​ ರಿಲೀಸ್​ ಆಗಿದೆ. ಈ ಬಗ್ಗೆ ಹೊಂಬಾಳೆ ಕೂಡ ಪೋಸ್ಟ್​ ಮಾಡಿದೆ
ಇದನ್ನು ಓದಿ : ಸಿಲಿಕಾನ್​ ಸಿಟಿಯಲ್ಲಿ `ಪುಷ್ಪ’ ಪ್ರಮೋಷನ್​: ಕನ್ನಡದಲ್ಲಿ ಡಬ್​ ಮಾಡೋಕೆ ಟೈಂ ಸಿಕ್ಲಿಲ್ಲ ಅಂದ್ರು ರಶ್ಮಿಕಾ ಮಂದಣ್ಣ!

ಡಬ್ಬಿಂಗ್​ ಮುಗಿಸಿದ ಸಂಜಯ್​ ದತ್​!

ಕೆಜಿಎಫ್​ 2 ಸಿನಿಮಾದಲ್ಲಿ ಸಂಜಯ್​ ದತ್​ ಅಧೀರನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗಾಗಲೇ ಕೆಜಿಎಫ್​ 2 ಸಿನಿಮಾದ ಶೂಟಿಂಗ್​ ಬಹುತೇಕ ಮುಗಿದಿದೆ. ಪೋಸ್ಟ್​ ಪ್ರೋಡೋಕ್ಷನ್​ ಕೆಲಸಗಳು ಉಳಿದಿತ್ತು. ಸಂಜಯ್​ ದತ್​ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಹೀಗಾಗಿ ಕೆಜಿಎಫ್​ 2 ಡಬ್ಬಿಂಗ್​ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಪ್ರಶಾಂತ್​​ ನೀಲ್​​ ಟ್ವೀಟರ್​ನಲ್ಲಿ ಸಂಜಯ್​ ದತ್​​ ಜೊತೆಗಿನ ಫೋಟೋವೊಂದನ್ನು ಅಪ್​​ಲೋಡ್​ ಮಾಡಿದ್ದಾರೆ. ಅಧೀರ ಈಸ್​ ಬ್ಯಾಕ್​, ವೆಲ್​ಕಮ್​ಬ್ಯಾಕ್​ ಸರ್​. ಏಪ್ರಿಲ್​ 14ರಂದು ಎಲ್ಲರೂ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ನಟ ಸಂಜಯ್​ ದತ್​ ಕೆಜಿಎಫ್​ 2 ಸಿನಿಮಾದ ಡಬ್ಬಿಂಗ್​ ಮುಗಿಸಿದ್ದಾರೆ.

ಇದನ್ನು ಓದಿ : ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮಂಜು ಭಾಷಿಣಿ: ಬಡ್ಡಿ ಬಂಗಾರಮ್ಮ ಪಾತ್ರದಲ್ಲಿ `ಸಿಲ್ಲಿ ಲಲ್ಲಿ’ ಲಲಿತಾಂಬ ಮಿಂಚಿಂಗ್​!

ಏಪ್ರಿಲ್​ 14ಕ್ಕೆ ತೆರೆ ಮೇಲೆ ರಾಕಿ ಭಾಯ್​ ಅಬ್ಬರ!

ಅಧೀರನ ಪಾತ್ರದಲ್ಲಿ ಕಾಣಿಸಕೊಳ್ಳುತ್ತಿರುವ ಸಂಜಯ್​ ದತ್​ ಜೊತೆ ಡಬ್ಬಿಂಗ್​ ಸ್ಟುಡಿಯೋದಲ್ಲಿ ನಿಂತಿರುವ ಫೋಟೋ ಹಂಚಿಕೊಳ್ಳುವ ಮೂಲಕ ಡಬ್ಬಿಂಗ್​ ಕಾರ್ಯ ಮುಕ್ತಾಯಗೊಂಡಿದೆ ಎಂದು ನಿರ್ದೇಶಕ ಪ್ರಶಾಂತ್​ ನೀಲ್ ತಿಳಿಸಿದ್ದಾರೆ. ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್​ ಚಾಪ್ಟರ್-1 ಹೊಸ ಸಂಚಲನ ಮೂಡಿಸಿತ್ತು. ಇದೀಗ ಕೆಜಿಎಫ್​ ಚಾಪ್ಟರ್ -2 ಎಪ್ರಿಲ್​ 14 ಕ್ಕೆ ಬಿಡುಗಡೆಯಾಗುತ್ತಿದೆ. ಹೀಗಾಗಿ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್​ರೊಂದಿಗೆ ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಸಂಜಯ ದತ್​ ಸೇರಿದಂತೆ ದೊಡ್ಡ ತಾರಾಗಣವೇ ಕಾಣಿಸಿಕೊಳ್ಳುತ್ತಿದೆ.
Published by:Vasudeva M
First published: