Salaar Update: ಸಿನಿಮಾದಲ್ಲಿ ಆಕ್ಷನ್ ಹೇಗೆ ಪ್ಲಾನ್ ಮಾಡ್ತಾರೆ ನೋಡಿ, ಖುದ್ದು ಪ್ರಶಾಂತ್ ನೀಲ್ ಹೇಳಿದ್ದಾರೆ

Prabhas Films: ಪ್ರಭಾಸ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ 'ಬಾಹುಬಲಿ' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಅಂತಹದ್ದೇ ದಾಖಲೆಯನ್ನು 'ಸಲಾರ್' ಸಿನಿಮಾ ಮಾಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದೆ.

ಸಲಾರ್​ ಚಿತ್ರ

ಸಲಾರ್​ ಚಿತ್ರ

  • Share this:
ಕೆಜಿಎಫ್ 2 (KGF 2) ಸಿನಿಮಾದ ಬಳಿಕ ಪ್ರಶಾಂತ್ ನೀಲ್ (Prashanth Neel) ವಿಶ್ವದಾದ್ಯಂತ ಫೇಮಸ್ ಆಗಿದ್ದಾರೆ. ಇವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು (Fans) ಕಾದು ಕುಳಿತಿದಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಈಗಾಗಲೇ ಪ್ರಭಾಸ್ ಜೊತೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಇನ್ನೂ ಶೂಟಿಂಗ್ ಹಂತದಲ್ಲಿ ಸಿನಿಮಾ ಇದೆ. ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್, ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್ (Prabhas)  ಕಾಂಬಿನೇಷನ್‌ ನೋಡುವುದಕ್ಕೆ ಇಡೀ ವಿಶ್ವವೇ ಕಾದು ಕೂತಿದೆ. ಇದೀಗ ಈ ಚಿತ್ರದ ಶೂಟಿಂಗ್ ಸೆಟ್ನಿಂದ ವಿಡಿಯೋವೊಂದು ವೈರಲ್ ಆಗಿದ್ದು, ಜನರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.

ಸಲಾರ್ ಸಿನೆಮಾದ ನಿರ್ಮಾಣದ ಹೊಣೆ ಹೊತ್ತಿರುವ ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ, ಆರ್ಟ್ ಡೈರೆಕ್ಟರ್ ಶಿವಕುಮಾರ್ ಆಕ್ಷನ್ ಸೀನ್ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರೊಡಕ್ಷನ್ ಸಂಸ್ಥೆ ಬರೆದುಕೊಂಡಿದೆ.

ವಿಡಿಯೋ ವೈರಲ್​

ಸಲಾರ್ ಫಿಲ್ಮ್ ಕುರಿತಾದ ಅಪ್ಡೇಟ್ಗಾಗಿ ಅಭಿಮಾನಿಗಳು ಸಹ ಕಾಯುತ್ತಿದ್ದರು, ಈ ಸಣ್ಣ ಅಪ್ಡೇಟ್ ಸಹ ಅಭಿಮಾನಿಗಳ ಸಂತಸ ಹೆಚ್ಚು ಮಾಡಿದ್ದು, ಕುತೂಹಲವನ್ನು ಸಹ ಹೆಚ್ಚಿಸಿದೆ ಎಂದರೆ ತಪ್ಪಲ್ಲ.ಈ ಕೆಲ ದಿನಗಳ ಹಿಂದೆ ಪ್ರಭಾಸ್ ಅಭಿಮಾನಿ ಸಲಾರ್ ಶೂಟಿಂಗ್ ಯಾವ ಹಂತದಲ್ಲಿದೆ? ಯಾವಾಗ ರಿಲೀಸ್ ಮಾಡ್ತೀರಾ? ಅಪ್ಡೇಟ್ ಕೊಡಿ ಇಲ್ಲದಿದ್ದರೆ ನಾನು ಸಾಯುತ್ತೇನೆ ಎಂದು ಆತ್ಮಹತ್ಯೆ ಬೆದರಿಕೆ ಪತ್ರ ಬರೆದಿದ್ದು ಸುದ್ದಿಯಾಗಿತ್ತು. ಈ ಮಟ್ಟಿ ಪ್ರಭಾಸ್ ಅಭಿಮಾನಿಗಳು ಸಹ ಸಲಾರ್ ರಿಲೀಸ್ಗೆ ಕಾಯುತ್ತಿದ್ದಾರೆ.

ಇನ್ನು ಕೆಲ ಮಾಹಿತಿಗಳ ಪ್ರಕಾರ ಕೆಜಿಎಫ್ ರೀತಿಯೇ ಸಲಾರ್ ಚಿತ್ರವನ್ನು ಸಹ ಎರಡು ಭಾಗಗಳಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಪ್ರಶಾಂತ್ ನೀಲ್ 'ಸಲಾರ್' ಸಿನಿಮಾವನ್ನು ಮತ್ತೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರಶಾಂತ್ ನೀಲ್ ಜನರಿಗೆ ಅದ್ಧೂರಿಯಾಗಿ ಸಿನಿಮಾಗಳನ್ನು ತೋರಿಸುತ್ತಾರೆ. ಇದಕ್ಕೆ 'ಕೆಜಿಎಫ್' ಸಿನಿಮಾನೇ ಸಾಕ್ಷಿ.

ಇದನ್ನೂ ಓದಿ: ಮಾರುವೇಷದಲ್ಲಿ ಮಹೇಶ್​ ಬಾಬು ಫಿಲ್ಮ್​ ನೋಡಿದ ಗಾರ್ಗಿ ಸುಂದರಿ - ಫೋಟೋ ಫುಲ್ ವೈರಲ್​

ಕೆಜಿಎಫ್ 2 ಸಹ ಹಿಟ್ ಆದ ಬೆನ್ನಲ್ಲೆ ಪ್ರಭಾಸ್ ಜೊತೆ ಮಾಡುತ್ತಿರುವ 'ಸಲಾರ್' ಸಿನಿಮಾವನ್ನೂ ಎರಡು ಭಾಗಗಳಲ್ಲಿ ರಿಲೀಸ್ ಮಾಡಲು ಆಲೋಚಿಸಿದ್ದು, 'ಕೆಜಿಎಫ್' ನಂತೆ ಬ್ರ್ಯಾಂಡ್ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳಿಗೆ ಮತ್ತೊಮ್ಮೆ ರೆಕ್ಕೆ ಪುಕ್ಕ ಬಂದಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಆಗಲಿ, ಪ್ರಭಾಸ್ ಆಗಲಿ, ಇಲ್ಲಾ ಪ್ರಶಾಂತ್ ನೀಲ್ ಆಗಲಿ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ, ಟಾಲಿವುಡ್ ಕೆಲ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಮಾಡಿದ್ದವು, ಇದೀಗ ಕೆಜಿಎಫ್ 2 ಸಕ್ಸಸ್ ನಂತರ ಮತ್ತೆ ಮಾತು ಕೇಳಿ ಬಂದಿದೆ ಎನ್ನಲಾಗುತ್ತಿದೆ.

ಕಾತರದಿಂದ ಕಾಯುತ್ತಿದ್ದಾರೆ ಪ್ರಭಾಸ್​ ಅಭಿಮಾನಿಗಳು

ಇನ್ನು ಬಾಹುಬಲಿ ಹಾಗೂ ಸಾಹೋ ಸಿನಿಮಾದ ನಂತರ ಪ್ರಭಾಸ್ ಸಾಲು ಸಾಲು ಪ್ಯಾನ್ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ನಿರ್ದೇಶಕ ಓಂ ರಾವತ್ ಜೊತೆ ಆದಿಪುರುಷ್ ಚಿತ್ರ ಒಂದೆಡಸೆ ನಡೆಯುತ್ತಿದ್ದು, ಸಲಾರ್ ಚಿತ್ರೀಕರಣ ಸಹ ಇನ್ನೊಂದೆಡೆ ನಡೆಯುತ್ತಿದೆ. ಆದರೆ ರಾಧೆ ಶ್ಯಾಮ್ ಚಿತ್ರದ ಸೋಲಿನ ನಂತರ ಹೊರ ಬರಲು ಪ್ರಭಾಸ್ಗೆ ಈ ಚಿತ್ರ ಸಹಾಯ ಮಾಡಲಿದೆ ಎಂಬ ನಿರೀಕ್ಷೆಯಲ್ಲಿ ಪ್ರಭಾಸ್ ಅಭಿಮಾನಿಗಳಿದ್ದಾರೆ.

ಇದನ್ನೂ  ಓದಿ: ಬಡ ಬಾಲಕನ ಶಿಕ್ಷಣಕ್ಕೆ ಸಹಾಯಹಸ್ತ ಚಾಚಿದ ನಟಿ, ಟ್ವಿಟ್ಟರ್​ನಲ್ಲಿ ವಿದ್ಯಾರ್ಥಿ ನಂಬರ್​ಗಾಗಿ ಹುಡುಕಾಟ

ಪ್ರಭಾಸ್ ವೃತ್ತಿ ಬದುಕಿಗೆ ಹೊಸ ತಿರುವು ಕೊಟ್ಟ 'ಬಾಹುಬಲಿ' ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಅಂತಹದ್ದೇ ದಾಖಲೆಯನ್ನು 'ಸಲಾರ್' ಸಿನಿಮಾ ಮಾಡಬಹುದು ಎನ್ನುವ ಮಾತುಗಳು ಕೇಳಿಬರುತ್ತಿದ್ದೆ.
Published by:Sandhya M
First published: