ಸ್ಯಾಂಡಲ್ವುಡ್ ಕಡೆ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡುವ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ ಹೊಂಬಾಳೆ ಫಿಲಂಸ್. ಇಂತಹ ಪ್ರತಿಷ್ಠಿತ ಸಂಸ್ಥೆ ಕೆಜಿಎಫ್ ನಂತರ ಇತ್ತೀಚೆಗಷ್ಟೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾವನ್ನು ಪ್ರಕಟಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಸಲಾರ್ ಎಂದು ಟೈಟಲ್ ಇಟ್ಟಿರುವ ಚಿತ್ರದಲ್ಲಿ ಪ್ರಭಾಸ್ ಮೋಸ್ಟ್ ವೈಲೆಂಟ್ ಮ್ಯಾನ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಕಿರಂಗದೂರು ಅವರ ಹೊಂಬಾಳೆ ಫಿಲಂಸ್ ಮತ್ತೊಂದು ಘೋಷಣೆಗೆ ಸಜ್ಜಾಗಿದೆ. ಡಿಸೆಂಬರ್ 17, ಬೆಳಿಗ್ಗೆ 11.59ಕ್ಕೆ ಹೊಸ ಚಿತ್ರವೊಂದನ್ನು ಘೋಷಿಸಲಿದ್ದಾರೆ. ಇದು ಹೊಂಬಾಳೆ ಫಿಲಂಸ್ ನ 8ನೇ ಚಿತ್ರ.
ಹೌದು, ಡಿಸೆಂಬರ್ 17 ರೋರಿಂಗ್ ಸ್ಟಾರ್ ಮುರಳಿಯವರ ಹುಟ್ಟಿದ ಹಬ್ಬ. ಆದ್ದರಿಂದ, ಮುರಳಿ ಯವರ ಮುಂದಿನ ಚಿತ್ರಕ್ಕೆ ಹೊಂಬಾಳೆ ಫಿಲಂಸ್ ಬಂಡವಾಳ ಹೂಡಲಿದ್ದಾರ? ಎಂಬುದು ಕುತೂಹಲ. ಜೊತೆಗೆ ಇನ್ನೊಂದು ಮೂಲಗಳ ಪ್ರಕಾರ ಹೊಂಬಾಳೆ ಫಿಲಂಸನ 8ನೇ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
We are super excited to announce our next vision, #HombaleFilms8.
Watch out our handles on 17th December at 11:59am. @VKiragandur pic.twitter.com/fM0CYS5k2g
— Hombale Films (@hombalefilms) December 15, 2020
ಹೊಂಬಾಳೆ ಫಿಲಂನ ವಾರಸುದಾರಾ ವಿಜಯ್ ಕಿರಂಗದೂರು. ಇವರು ಮೊದಲು ನಿರ್ಮಾಣ ಮಾಡಿದ ಚಿತ್ರ ಪುನೀತ್ ರಾಜ್ ಕುಮಾರ್ ಆಕ್ಟ್ ಮಾಡಿರೋ ನಿನ್ನಿಂದಲೇ. ಈ ಚಿತ್ರ ಬಾಕ್ಸ್ ಆಫೀಸ್ ಫೇಲ್ಯೂರ್. ನಂತರ ಹೊಂಬಾಳೆ ಫಿಲಂಸ್ ಯಶ್ ಅಭಿನಯದ ಮಾಸ್ಟರ್ ಪೀಸ್ ನಿರ್ಮಾಣ ಮಾಡಿದರು. ಈ ಚಿತ್ರ ಬಾಕ್ಸ್ ಆಫೀಸ್ ಹಿಟ್ ಆಯಿತು. ನಂತರ ರಾಜ್ ಕುಮಾರ್ ಅಭಿನಯದ, ಸಂತೋಷ್ ಆನಂದ್ ರಾಮ್ ನಿರ್ದೇಶನದ ರಾಜಕುಮಾರ. ಇದು ಬಾಕ್ಸ್ ಆಫೀಸ್ ನಲ್ಲಿ 75 ಕೋಟಿ ಗಳಿಸಿ ಇಂಡಸ್ಟ್ರಿ ಹಿಟ್ ಆಗಿತ್ತು.
ನಂತರ ಹೊಂಬಾಳೆ ಫಿಲಂಸ್ ಗೆ ನ್ಯಾಷನಲ್ ಫೇಮ್ ತಂದು ಕೊಟ್ಟಿದ್ದು ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆ ಜಿ ಎಫ್ ಚಾಪ್ಟರ್ 1. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ 225 ಕೋಟಿಗಿಂತಲೂ ಹೆಚ್ಚು ಗಳಿಸಿತು. ಕನ್ನಡ ಮಾತ್ರವಲ್ಲದೆ, ತೆಲುಗು, ಹಿಂದಿ ಹಾಗು ತಮಿಳಿನಲ್ಲೂ ಕೂಡ ಡಬ್ ಆಗಿ ಸೂಪರ್ ಹಿಟ್ ಆಯಿತು. ಈಗ ದೇಶಾದ್ಯಂತ ಜನ ಕೆ ಜಿ ಎಫ್ ಚಾಪ್ಟರ್ 2 ಗಾಗಿ ಕಾಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ