Hombale Films: ಹೊಂಬಾಳೆ ಫಿಲಂಸ್​ನಲ್ಲಿ ವಿಶ್ವ ಸುಂದರಿ! ಮಾನುಷಿ ಚಿಲ್ಲರ್ ಜೊತೆ ಸಿನಿಮಾ ಮಾಡ್ತಾರಾ ವಿಜಯ್ ಕಿರಗಂದೂರು?

ಬೆಂಗಳೂರು ಫಿಲಂಸ್ ಕಚೇರಿಗೆ ಭೇಟಿ ನೀಡಿರುವುದಾಗಿ ವರದಿಯಾಗಿದೆ. ಮಾನುಷಿ ಚಿಲ್ಲರ್ ಮತ್ತು ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರ್ ಅವರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

ವಿಜಯ್ ಕಿರಗಂದೂರ್ ಜೊತೆ ಮಾನುಷಿ ಚಿಲ್ಲರ್

ವಿಜಯ್ ಕಿರಗಂದೂರ್ ಜೊತೆ ಮಾನುಷಿ ಚಿಲ್ಲರ್

 • Share this:
  ವಿಜಯ್ ಕಿರಗಂದೂರು ಒಡೆತನದ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆ ಬ್ಯಾಕ್ ಟು ಬ್ಯಾಕ್ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿಯೂ ಕೂಡ ಹೊಂಬಾಳೆ ಫಿಲಂಸ್ (Hombale Films) ಪ್ರಾಜೆಕ್ಟ್​ಗಳನ್ನು ಕೈಗೆತ್ತಿಕೊಳ್ಳುತ್ತಿದೆ. ಹೊಂಬಾಳೆ ಫಿಲಂಸ್ ಜೊತೆ ಇದರೊಂದಿಗೆ ಪರ ಭಾಷೆಯ ಸ್ಟಾರ್ ನಟರು ಕೈ ಜೋಡಿಸುತ್ತಿದ್ದಾರೆ. ಈ ನಡುವೆ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು (owner Vijay Kirgandur) ಬಾಲಿವುಡ್ ಮಾಜಿ ಮಿಸ್ ಇಂಡಿಯಾ, ನಟಿ ಮಾನುಷಿ ಚಿಲ್ಲರ್ ಅವರನ್ನು (Manushi Chiller) ಭೇಟಿ ಮಾಡಿದ್ದಾರೆ. ಇದು ಭಾರೀ ಕುತೂಹಲ ಮೂಡಿಸಿದೆ.

  ಕೆಜಿಎಫ್ ಚಾಪ್ಟರ್ 2 ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಹೊಂಬಾಳೆ ಫಿಲಂಸ್ ಬಾಲಿವುಡ್ ಸಿನಿಮಾ ನಿರ್ಮಾಣದ ಕುರಿತು ನಿರೀಕ್ಷೆ ಹುಟ್ಟಿಕೊಂಡಿದೆ. ಹೀಗಾಗಿ ಮಾನುಷಿ ಚಿಲ್ಲರ್ ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರು ಅವರ ಭೇಟಿ ಹೊಸ ನಿರೀಕ್ಷೆಗಳನ್ನು ಹುಟ್ಟಿಸಿದೆ.

  ಹೊಂಬಾಳೆ ಫಿಲಂಸ್ ಖಾತೆಯಲ್ಲಿ ಇವೆ ಭಾರೀ ಸಿನಿಮಾಗಳು
  ಹೊಂಬಾಳೆ ಫಿಲಂಸ್ ಇದುವರೆಗೆ ಹಲವು ಪ್ರಖ್ಯಾತ ಸಿನಿಮಾಗಳನ್ನು ನಿರ್ಮಿಸಿದೆ. ‘ನಿನ್ನಿಂದಲೇ’ ಸಿನಿಮಾದಿಂದ ಶುರುವಾಗಿ, ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್: ಅಧ್ಯಾಯ 1’, ‘ಯುವರತ್ನ’, ‘ಕೆಜಿಎಫ್: ಚಾಪ್ಟರ್ 2’ ಚಿತ್ರಗಳನ್ನು ನಿರ್ಮಿಸಿದೆ ಹೊಂಬಾಳೆ ಫಿಲಂಸ್.ಅಲ್ಲದೇ ಇದೇ ನಿರ್ಮಾಣ ಸಂಸ್ಥೆಯ ಮತ್ತೆರಡು ಸಿನಿಮಾಗಳಾಧ ‘ಕಾಂತಾರ’ ಮತ್ತು ‘ರಾಘವೇಂದ್ರ ಸ್ಟೋರ್ಸ್’ ಬಿಡುಗಡೆಗೆ ಸಿದ್ಧವಾಗಿದೆ. ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ‘ಸಲಾರ್’, ‘ಬಘೀರಾ’, ‘ರಿಚರ್ಡ್ ಆಂಟನಿ’, ‘ಟೈಸನ್’ ಮತ್ತು ಒಂದು ತಮಿಳು ಸಿನಿಮಾ ನಿರ್ಮಾಣ ಹಂತದಲ್ಲಿದೆ.

  ಮಾನುಷಿ ಚಿಲ್ಲರ್ ಪ್ರಖ್ಯಾತಿ ಕಡಿಮೆಯೇನಿಲ್ಲ
  ಅಂದಹಾಗೆ ಮಾನುಷಿ ಚಿಲ್ಲರ್ 2017 ರಲ್ಲಿ ಫೆಮಿನಾ ಮಿಸ್ ಇಂಡಿಯಾ ಆಗಿದ್ದರು. ಅಲ್ಲದೇ ಮಾನುಷಿ ಚಿಲ್ಲರ್ ವಿಶ್ವ ಸುಂದರಿ 2017 ಕಿರೀಟವನ್ನೂ ಪಡೆದುಕೊಂಡಿದ್ದರು. ಇದರ ನಂತರ ಮಾನುಷಿ ಚಿಲ್ಲರ್ ಪ್ರಖ್ಯಾತಿ ಶರವೇಗದಲ್ಲಿ ಬೆಳೆದಿತ್ತು. ಮಾನುಷಿ ಚಿಲ್ಲರ್ ಖ್ಯಾತಿ ವಿಶ್ವ ಮಟ್ಟದಲ್ಲಿ ಬೆಳೆದಿದ್ದರು.

  ಇದನ್ನೂ ಓದಿ: Rashmika Mandanna: ಸಲ್ಲು ಭಾಯ್​ಗಾಗಿ ರಶ್ಮಿಕಾ-ಸಮಂತಾ ನಡುವೆ ಬಿಗ್​ ಫೈಟ್, ಯಾರಿಗೆ ಸಿಗಲಿದೆ ಗೋಲ್ಡನ್ ಚಾನ್ಸ್?

  ರಾತ್ರಿ ಕಳೆದು ಬೆಳಗಾಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ತಾರೆಯಾಗಿ ಬಿಟ್ಟಿದ್ದರು. Instagram ನಲ್ಲಿ ಲಕ್ಷಾಂತರ ಜನರು ಅವರನ್ನು ಅನುಸರಿಸಲು ಪ್ರಾರಂಭಿಸಿದ್ದರು. ಇತ್ತೀಚೆಗಷ್ಟೇ ಅವರ ಮೊದಲ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’ ತೆರೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ವಿಜಯ್ ಕಿರಗಂದೂರು ಅವರನ್ನು ಭೇಟಿ ಮಾಡಿದ್ದಾರೆ.  ಇದನ್ನೂ ಓದಿ: Kannada Serial: ಮಂಗಳಾ ರಾಘವೇಂದ್ರ ರಾಜ್‌ಕುಮಾರ್ ನಿರ್ಮಾಣದ ಅದ್ದೂರಿ ಧಾರಾವಾಹಿ ವಿಜಯದಶಮಿ ಶೀಘ್ರವೇ ಪ್ರಸಾರ

  ಬೆಂಗಳೂರು ಕಚೇರಿಯಲ್ಲೇ ಭೇಟಿ?
  ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರ್ ಅವರನ್ನು ಭೇಟಿ ಮಾಡಿದ ಚಿತ್ರವನ್ನು ಮಾಜಿ ಮಿಸ್ ಇಂಡಿಯಾ, ವಿಶ್ವ ಸುಂದರಿ ಮಾನುಷಿ ಚಿಲ್ಲರ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಾನುಷಿ ಚಿಲ್ಲರ್ ಹೊಂಬಾಳೆ ಫಿಲಂಸ್​ನ ಬೆಂಗಳೂರು ಫಿಲಂಸ್ ಕಚೇರಿಗೆ ಭೇಟಿ ನೀಡಿರುವುದಾಗಿ ವರದಿಯಾಗಿದೆ. ಮಾನುಷಿ ಚಿಲ್ಲರ್ ಮತ್ತು ಹೊಂಬಾಳೆ ಫಿಲಂಸ್​ನ ವಿಜಯ್ ಕಿರಗಂದೂರ್ ಅವರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ ಹೊಂಬಾಳೆ ಫಿಲಂಸ್ ಸಿನಿಮಾದಲ್ಲಿ ಮಾನುಷಿ ಚಿಲ್ಲರ್ ನಟಿಸಲಿದ್ದಾರಾ ಎಂದು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
  Published by:guruganesh bhat
  First published: