• Home
  • »
  • News
  • »
  • entertainment
  • »
  • Hombale films: ಬಾಲಿವುಡ್‌ನತ್ತ ಹೊಂಬಾಳೆ ಚಿತ್ತ! ಹಿಂದಿ ಸಿನಿಮಾಕ್ಕೆ ರೆಡಿಯಾದ ಕೆಜಿಎಫ್ ನಿರ್ಮಾಪಕರು

Hombale films: ಬಾಲಿವುಡ್‌ನತ್ತ ಹೊಂಬಾಳೆ ಚಿತ್ತ! ಹಿಂದಿ ಸಿನಿಮಾಕ್ಕೆ ರೆಡಿಯಾದ ಕೆಜಿಎಫ್ ನಿರ್ಮಾಪಕರು

ಹೊಂಬಾಳೆ ಫಿಲ್ಮ್ಸ್​

ಹೊಂಬಾಳೆ ಫಿಲ್ಮ್ಸ್​

Vijay Kiragandur: ಹೌದು, ಇತ್ತೀಚೆಗೆ ನಿರ್ಮಾಪಕ ವಿಜಯ್ ಕಿರಗಂದೂರು ಒಂದು ಸಂದರ್ಶನದಲ್ಲಿ, ಬಾಲಿವುಡ್​ನಲ್ಲಿ ಸ್ಟಾರ್ ನಟರ ಒಬ್ಬರ ಜೊತೆ ಈಗಾಗಲೇ ಚರ್ಚೆ ನಡೆದಿದ್ದು, ಬಾಲಿವುಡ್​ನಲ್ಲಿ ಸದ್ಯದಲ್ಲಿಯೇ ಒಂದು ಚಿತ್ರ ಆರಂಭವಾಗಲಿದೆ ಎಂದಿದ್ದಾರೆ. 

  • Share this:

'ಕೆಜಿಎಫ್' (KGF) ಸರಣಿ ಸಿನಿಮಾಗಳ ಬಗ್ಗೆ ಬರೆದಷ್ಟು, ಬಗೆದಷ್ಟು ಹೊಸ ವಿಚಾರಗಳು ಬರುತ್ತವೆ. ಹಾಗೆಯೇ ಈ ಚಿತ್ರಗಳು ಸ್ಯಾಂಡಲ್​ವುಡ್​ಗೆ (Sandalwood) ಮೈಲುಗಲ್ಲು ಎನ್ನುವುದರಲ್ಲಿ ಅನುಮಾನವೇ ಇಲ್ಲ. ಬಹಳ ನಿರೀಕ್ಷೆ ಹುಟ್ಟಿಸಿದ್ದ ಈ ಚಿತ್ರಗಳು ಎಲ್ಲವನ್ನೂ ಮೀರಿ ದಾಖಲೆಗಳ ಮೇಲೆ ದಾಖಲೆ ಬರೆದಿದೆ. ಇದು ಚಿತ್ರದ ನಿರ್ಮಾಪಕರಿಗೂ (Producer) ಒಂದು ಧೈರ್ಯ ನೀಡಿದೆ. ಈ ಚಿತ್ರದ ಯಶಸ್ಸಿ ಕಾರಣ ಯಶ್​ಗೆ (yash)  ಹೇಗೆ ಬೇಡಿಕೆ ಬಂದಿದೆಯೋ ಹಾಗೆ ಅವರ ಚಿತ್ರಗಳಿಗೂ ಬೇಡಿಕೆ ಹೆಚ್ಚಿದೆ. ಹಲವಾರು ಚಿತ್ರಗಳು ತೆಲುಗು ಹಾಗು ಇತರ ಭಾಷೆಗೆ ಡಬ್​ ಆಗುತ್ತಿದೆ. ಇದು ಒಂದು ಖುಷಿಯ ವಿಚಾರವಾದರೆ ಇನ್ನೊಂದು ಖುಷಿ ವಿಚಾರವಿದೆ. ಅದು ಕೆಜಿಎಫ್  ನಿರ್ಮಾಣ ಮಾಡಿದ ಹೊಂಬಾಳೆ ಫಿಲ್ಮ್ಸ್​ (Hombale Films) ಬಾಲಿವುಡ್​ನಲ್ಲಿ (Bollywood) ಅದೃಷ್ಟ ಪರೀಕ್ಷೆಗೆ ಇಳಿದಿದೆ ಎಂಬುದು.  


ಹೌದು, ಇತ್ತೀಚೆಗೆ ನಿರ್ಮಾಪಕ ವಿಜಯ್ ಕಿರಗಂದೂರು ಒಂದು ಸಂದರ್ಶನದಲ್ಲಿ, ಬಾಲಿವುಡ್​ನಲ್ಲಿ ಸ್ಟಾರ್ ನಟರ ಒಬ್ಬರ ಜೊತೆ ಈಗಾಗಲೇ ಚರ್ಚೆ ನಡೆದಿದ್ದು, ಬಾಲಿವುಡ್​ನಲ್ಲಿ ಸದ್ಯದಲ್ಲಿಯೇ ಒಂದು ಚಿತ್ರ ಆರಂಭವಾಗಲಿದೆ ಎಂದಿದ್ದಾರೆ.  ನಾವು ಈಗಾಗಲೇ ದಕ್ಷಿಣ ಭಾರತದಲ್ಲಿ ಹಲವಾರು ಸಿನಿಮಾಗಳನ್ನು ಮಾಡುತ್ತಿದ್ದೇವೆ. ಇದರ ಜೊತೆಗೆ ಹಿಂದಿ ಸಿನಿಮಾಗಳನ್ನು ಮಾಡುವ ಆಲೋಚನೆ ಕೂಡ ಇದ್ದು,ಎಲ್ಲವೂ ಸರಿಯಾಗಿ ಹೊಂದಾಣಿಕೆ ಆದಲ್ಲಿ, ಇನ್ನು 3 ರಿಂದ 4 ತಿಂಗಳಲ್ಲಿ ಒಂದು ಸಿನಿಮಾ ಘೋಷಣೆ ಮಾಡಬಹುದು ಎಂದು ತಿಳಿಸಿದ್ದಾರೆ.


ಬಾಲಿವುಡ್​ನಲ್ಲಿ ಹೊಂಬಾಳೆ ಹೊಸ ಚಿತ್ರ ಸಾಧ್ಯತೆ


ಇನ್ನು ಈ ಬಗ್ಗೆ ಸ್ಟಾರ್ ಒಬ್ಬರ ಜೊತೆ ಚರ್ಚೆ ನಡೆಯುತ್ತಿದ್ದು, ನಾವು ಹಿಂದಿ ಚಿತ್ರರಂಗಕ್ಕೆ ಕಾಲಿಡಲಿದ್ದೇವೆ ಎಂದಿದ್ದಾರೆ.  ಇನ್ನು ಬಾಲಿವುಡ್​ ನಲ್ಲಿ ಹೊಂಬಾಳೆ ಸಿನಿಮಾ ಮಾಡುವ ಬಗ್ಗೆ ಸುದ್ದಿ ಬರುತ್ತಿದ್ದಂತೆಯೇ ಹಲವಾರು ಊಹಾಪೋಹಗಳು ಹಡಿದಾಡುತ್ತಿದ್ದು, ಶಾರೂಖ್ ಖಾನ್ ಜೊತೆ ಹೊಸ ಚಿತ್ರ ಮಾಡಲಿದೆ ಎನ್ನಲಾಗುತ್ತಿದೆ. ಒಂದರ ಹಿಂದೆ ಒಂದು ಹಿಟ್​​ ಚಿತ್ರಗಳನ್ನು ನೀಡುವುದರ ಜತೆಗೆ ಸಾಲು ಸಾಲಾಗಿ ಹೊಸ ಪ್ಯಾನ್​ ಇಂಡಿಯಾ ಸೇರಿದಂತೆ ಕನ್ನಡ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್​, ಇನ್ನೂ ಹಲವಾರು ಚಿತ್ರಗಳನ್ನು ಮಾಡುತ್ತಿದ್ದು, ತಮಿಳು ಹಾಗೂ ಮಲಯಾಳಂನಲ್ಲಿ ಸಹ ಚಿತ್ರ ಮಾಡಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ: ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ


ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ಮಾಡಲು ತಯಾರಿ


ಈಗಾಗಲೇ ಪ್ರಭಾಸ್​ ಜೊತೆ ತೆಲುಗಿನಲ್ಲಿ ಚಿತ್ರ ಮಾಡುತ್ತಿದ್ದು, ತಮಿಳು ಹಾಗೂ ಮಲಯಾಳಂನಲ್ಲಿ ಚಿತ್ರ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ ಎಂದು ವಿಜಯ್ ತಿಳಿಸಿದ್ದಾರೆ.  ಹೊಂಬಾಳೆ ಫಿಲಂಸ್​ ನಿರ್ಮಾಣದ ದ್ವಿತ್ವ ಸಿನಿಮಾವನ್ನು ಲೂಸಿಯಾ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ತ್ರಿಷಾ ಕೃಷ್ಣನ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.


ಇನ್ನು ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗಿನ ರಿಚರ್ಡ್​ ಆಂಟೋನಿ ಚಿತ್ರವು ಉಳಿದವರು ಕಂಡಂತೆ ಸಿನಿಮಾ ಮುಂದುವರೆದ ಭಾಗವಾಗಿದ್ದು, ಹೊಂಬಾಳೆ ಫಿಲಂಸ್​ ಈ ಪ್ರಾಜೆಕ್ಟ್​ ಪ್ರಕಟಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನು ಹೊಂಬಾಳೆ ನಿರ್ಮಾಣದ ಕೆಜಿಎಫ್ 2 ಥಿಯೆಟರ್​ನಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲಿ ಸಹ ದಾಖಲೆ ಮಾಡುತ್ತಿದ್ದು, ಹಲವಾರು ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ.


ಇದನ್ನೂ ಓದಿ: ಬಿಡುಗಡೆಗೆ ಸಿದ್ದವಾಯ್ತು ಕಾಂತಾರ, ಕಂಬಳದ ಕಿಚ್ಚು ಹತ್ತಿಸಲು ರೆಡಿಯಾದ ರಿಷಭ್


ಈ ಸಿನಿಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಪೇ ಪರ್ ವ್ಯೂ' ಅಪ್ಷನ್​ನಲ್ಲಿ ಬಿಡುಗಡೆಯಾದ ನಂತರ, ಚಿತ್ರದ ಕಲೆಕ್ಷನ್ ಹಿಟ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಒಟಿಟಿಯಲ್ಲಿ ಸಹ ಉತ್ತಮ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

Published by:Sandhya M
First published: