ಕೆಜಿಎಫ್ನಲ್ಲಿ (KGF) ಒಂದಲ್ಲ ಅಂತ ಎರಡು ಬಾರಿ ಬಂಗಾರದ ಗಣಿ ಶೋಧಿಸಿದ್ದ ಹೊಂಬಾಳೆ ಫಿಲ್ಮ್ಸ್ (Hombale Films) ಈಗ ಕೇರಳದತ್ತ (Kerala) ದೃಷ್ಟಿ ನೆಟ್ಟಿದೆ. ಹೌದು, ಹೊಂಬಾಳೆ ಫಿಲ್ಮ್ಸ್ ಈಗ ಮಲಯಾಳಂ ಸಿನಿಮಾ (Malayalam Cinema) ನಿರ್ಮಾಣಕ್ಕೆ ಮುಂದಾಗಿದೆ. ಮಲಯಾಳಂ ಖ್ಯಾತ ನಟ, ಸೂಪರ್ ಸ್ಟಾರ್ (Super Star) ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರ ನಾಯಕತ್ವದಲ್ಲಿ ಹೊಂಬಾಳೆಯ ಚೊಚ್ಚಲ ಮಲಯಾಳಂ ಸಿನಿಮಾ ಮೂಡಿ ಬರಲಿದೆ. ಇದು ಪ್ಯಾನ್ ಇಂಡಿಯಾ (Pan India) ಸಿನಿಮಾವಾಗಿದ್ದು, ಮಲಯಾಳಂ, ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಅಂದಹಾಗೆ ಈ ಚಿತ್ರಕ್ಕೆ ‘ಟೈಸನ್’ (Tyson) ಅಂತ ಹೆಸರಿಡಲಾಗಿದೆ.
ಮಲಯಾಳಂನಲ್ಲಿ ಹೊಂಬಾಳೆ ಫಿಲ್ಮ್ಸ್ ಸಿನಿಮಾ ನಿರ್ಮಾಣ
ಕೆಜಿಎಫ್ ಹಾಗೂ ಕೆಜಿಎಫ್ ಚಾಪ್ಟರ್ 2 ಸಿನಿಮಾಗಳ ಮೂಲಕ ಭಾರತೀಯ ಸಿನಿರಂಗದಲ್ಲಿ ಸುನಾಮಿ ಎಬ್ಬಿಸಿದ ಹೊಂಬಾಳೆ ಫಿಲ್ಮ್ಸ್ ಈಗ ಮಲಯಾಳಂ ಸಿನಿಮಾ ನಿರ್ಮಾಣಕ್ಕೂ ಮುಂದಾಗಿದೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಮಲಯಾಳಂ ಸಿನಿಮಾ ನಿರ್ಮಿಸಲಿದ್ದಾರೆ.
ಪೃಥ್ವಿರಾಜ್ ನಾಯಕತ್ವದಲ್ಲಿ ಟೈಸನ್
ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರ್ ನಾಯಕರಾಗಲಿದ್ದು, ಇದಕ್ಕೆ ಟೈಸನ್ ಅಂತ ಹೆಸರಿಡಲಾಗಿದೆ. ಟೈಸನ್ ಆಕ್ಷನ್-ಪ್ಯಾಕ್ಡ್ ಸೋಶಿಯೋ ಥ್ರಿಲ್ಲರ್ ಆಗಿದ್ದು, ಪೃಥ್ವಿರಾಜ್ ಸುಕುಮಾರನ್ ನಿರ್ದೇಶಿಸಲಿದ್ದಾರೆ ಮತ್ತು ಮುರಳಿ ಗೋಪಿ ಚಿತ್ರಕಥೆ ಮಾಡಿದ್ದಾರಂತೆ.
ಇದನ್ನೂ ಓದಿ: 777 Charlie: ಸಿನಿಮಾದಿಂದ ಸ್ಫೂರ್ತಿ ಪಡೆದು ನಾಯಿಗೆ ಚಾರ್ಲಿ ಎಂದು ನಾಮಕರಣ, ಮಂಗಳೂರಿನಲ್ಲೊಂದು ವಿಶೇಷ ಘಟನೆ
ಟೈಸನ್ಗೆ ಪೃಥ್ವಿರಾಜ್ ನಿರ್ದೇಶನ
ಎಂಪುರಾನ್ ನಂತರ, ದಾಖಲೆ ಮುರಿಯುವ ಮಲಯಾಳಂ ಬ್ಲಾಕ್ಬಸ್ಟರ್ ಲೂಸಿಫರ್ನ ಮುಂದುವರಿದ ಭಾಗವಾಗಿದೆ. ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ಲೂಸಿಫರ್ ಕೂಡ ಮೆಗಾ ಹಿಟ್ ಆಗಿತ್ತು. ಇದೀಗ ಟೈಸನ್ ಅವರ ನಿರ್ದೇಶನ ಮತ್ತು ನಾಯಕತ್ವದಲ್ಲಿ ಮೂಡಿ ಬರಲಿದೆ. ಈ ಸಿನಿಮಾ 2023ರ ಮಾರ್ಚ್ ವೇಳೆಗೆ ರಿಲೀಸ್ ಆಗಲಿದೆ.
ವಿಜಯ್ ಕಿರಗಂದೂರ್ ಜೊತೆ ಪೃಥ್ವಿರಾಜ್ ಸ್ನೇಹ
ಮಲಯಾಳಂನ ಖ್ಯಾತ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ಗಾಯಕರೂ ಆಗಿರುವ ಪೃಥ್ವಿರಾಜ್ ಸುಕುಮಾರನ್ ಕೆಜಿಎಫ್ 2 ಸಿನಿಮಾವನ್ನು ಮಲಯಾಳಂನಲ್ಲಿ ಪ್ರೆಸೆಂಟ್ ಮಾಡಿದ್ದರು. ಈ ಸಿನಿಮಾದ ವಿತರಕರೂ ಕೂಡ ಅವರೇ ಆಗಿದ್ದರು. ಬೆಂಗಳೂರಿನಲ್ಲಿ ನಡೆದ ಕೆಜಿಎಫ್ 2 ಸಿನಿಮಾದ ಟೀಸರ್ ರಿಲೀಸ್ ಕಾರ್ಯಕ್ರಮಕ್ಕೂ ಆಗಮಿಸಿದ್ದರು. ಇದೀಗ ಹೊಂಬಾಳೆ ಬ್ಯಾನರ್ನಲ್ಲಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈಗಾಗಲೇ ಪೃಥ್ವಿರಾಜ್ ನಟನೆ ಮತ್ತು ನಿರ್ದೇಶನ ಎರಡರಲ್ಲೂ ಸಕ್ಸಸ್ ಆಗಿದ್ದಾರೆ. ಇದೀಗ ಕನ್ನಡದ ನಿರ್ಮಾಣ ಸಂಸ್ಥೆ ಜೊತೆ ಸಿನಿಮಾ ಮಾಡುತ್ತಿರುವುದು ಅವರ ಅಭಿಮಾನಿಗಳಿಗೆ ಖುಷಿಯ ವಿಚಾರವಾಗಿದೆ.
Happy to announce our next venture #Tyson with @PrithviOfficial.
Get ready to be astonished by our brave defender. Time to unshackle the chains and resuscitate the system!@VKiragandur @hombalefilms #MuraliGopy@TysonOffl @HombaleGroup #HombaleFilms pic.twitter.com/VO7g2chMi4
— Hombale Films (@hombalefilms) June 10, 2022
ವಿಶ್ವಾದ್ಯಂತ ಕೆಜಿಎಫ್ ಚಾಪ್ಟರ್ 2ರ ಯಶಸ್ವಿ ಪ್ರದರ್ಶನದ ನಂತರ ಹೊಂಬಾಳೆ ಫಿಲ್ಮ್ಸ್ ಚಿತ್ರರಂಗದ ಮುಂಚೂಣಿಯಲ್ಲಿದೆ. ಕೆಜಿಎಫ್ ಬಿಡುಗಡೆ ಒಂದು ತಿಂಗಳ ಅವಧಿಯಲ್ಲಿ 6 ಮೆಗಾ ಚಲನಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ.
ಸಿನಿಮಾದಲ್ಲಿ ಘಟಾನುಘಟಿಗಳ ಸಮ್ಮಿಲನ
ಮೂಲಗಳ ಪ್ರಕಾರ, ಟೈಸನ್ ಚಿತ್ರದ ಬಜೆಟ್ ವ್ಯಾಪ್ತಿ ಬೃಹತ್ ಆಗಿ ಇರಲಿದೆ. ಈ ಚಿತ್ರವು ಟಾಪ್ ನಟರು ಮತ್ತು ತಂತ್ರಜ್ಞರ ಪಟ್ಟಿಯನ್ನು ಒಳಗೊಂಡಿರುತ್ತದೆ. ಅದರ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುತ್ತದೆ.
ಇದನ್ನೂ ಓದಿ: Actor Prabhas: ಕೊನೆಗೂ ಫಿಕ್ಸ್ ಆಯ್ತು ಪ್ರಭಾಸ್ ಮದುವೆ, ಹುಡುಗಿ ಅನುಷ್ಕಾ ಶೆಟ್ಟಿ ಅಲ್ಲ!?
ಚಿತ್ರರಂಗದ ಖ್ಯಾತನಾಮರೊಂದಿಗೆ ಸಿನಿಮಾ ನಿರ್ಮಾಣ
ಹೊಂಬಾಳೆ ಫಿಲ್ಮ್ಸ್ ಭಾರತೀಯ ಚಿತ್ರರಂಗದ ಖ್ಯಾತನಾಮರೊಂದಿಗೆ ಸಿನಿಮಾ ನಿರ್ಮಾಣಕ್ಕೆ ಉತ್ಸುಕತೆ ತೋರಿಸುತ್ತಿದೆ. ಈಗಾಗಲೇ ರಾಕಿಂಗ್ ಸ್ಟಾರ್ ಯಶ್, ಸುಧಾ ಕೊಂಗೂರ, ಪ್ರಶಾಂತ್ ನೀಲ್, ರಕ್ಷಿತ್ ಶೆಟ್ಟಿ, ಪೃಥ್ವಿರಾಜ್ ಸುಕುಮಾರನ್ ಮುಂತಾದವರ ಜೊತೆ ಸಿನಿಮಾ ನಿರ್ಮಾಣ ಮಾಡಿದೆ, ಮಾಡುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ