• Home
  • »
  • News
  • »
  • entertainment
  • »
  • Kantara Movie: ರೀಲ್ ಅಲ್ಲ ರಿಯಲ್, ಕಾಂತಾರ ತಂಡ ಹರಕೆ ತೀರಿಸಿದ ಕ್ಷಣ ಹೀಗಿತ್ತು

Kantara Movie: ರೀಲ್ ಅಲ್ಲ ರಿಯಲ್, ಕಾಂತಾರ ತಂಡ ಹರಕೆ ತೀರಿಸಿದ ಕ್ಷಣ ಹೀಗಿತ್ತು

ದೈವ ಕೋಲದಲ್ಲಿ ಚಿತ್ರತಂಡ

ದೈವ ಕೋಲದಲ್ಲಿ ಚಿತ್ರತಂಡ

ಕಾಂತಾರ ಚಿತ್ರತಂಡ ನಿಜವಾಗಿಯೂ ದೈವಕ್ಕೆ ಭಕ್ತಿಯಿಂದ ಕೋಲ ಸೇವೆ ಮಾಡಿಸಿದ್ದರು. ಈಗ ಹೊಂಬಾಳೆ ಫಿಲ್ಮ್ಸ್ ಇದರ ವಿಡಿಯೋವನ್ನು ಶೇರ್ ಮಾಡಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಕಾಂತಾರ (Kantara) ಚಿತ್ರತಂಡ ದೈವವನ್ನು ನಂಬಿಕೊಂಡೇ ಸಿನಿಮಾ  (Cinema) ಆರಂಭಿಸಿತ್ತು. ಶೂಟಿಂಗ್ ಸೆಟ್​ನಲ್ಲಿ ಚಪ್ಪಲಿ ಧರಿಸದೆ, ಮಾಂಸಾಹಾರ ತ್ಯಜಿಸಿ ಹೀಗೆ ಹಲವಾರು ಕ್ರಮಗಳನ್ನು ಅನುಸರಿಸಿ ಸಿನಿಮಾ ಮಾಡಿದ್ದರು. ಎಷ್ಟೇ ನಂಬಿಕೆ ಇದ್ದರೂ ಸಿನಿಮಾ ಮಾಡುವಾಗ ಇಷ್ಟೆಲ್ಲ ಮಾಡುವ ಅಗತ್ಯವಿರಲಿಲ್ಲ. ಆದರೆ ಚಿತ್ರತಂಡ (Team) ಅತ್ಯಂತ ಭಕ್ತಿ ಭಾವದಿಂದ ಎಲ್ಲವನ್ನೂ ಅನುಸರಿಸಿಕೊಂಡು ಬಂದು ಸಿನಿಮಾ ಮಾಡಿ ದೊಡ್ಡ ಯಶಸ್ಸನ್ನು ಪಡೆದಿದೆ. ಸಿನಿಮಾ (Cinema) ಸಕ್ಸಸ್ ನಂತರ ಚಿತ್ರತಂಡ ನಿವಾಗಿಯೂ ಕೋಲ ಮಾಡಿಸಿದ ಘಟನೆ ನಡೆದಿದೆ.


ಚಿತ್ರತಂಡ ಎಲ್ಲವೂ ಒಟ್ಟಾಗಿ ಭಕ್ತಿಯಿಂದ ಕೋಲವನ್ನು ಮಾಡಿ ಕಾಂತಾರ 2 (Kantara 2) ಸಿನಿಮಾ ಮಾಡುವುದಕ್ಕೂ ಅನುಮತಿಯನ್ನು ಕೇಳಿದ್ದರು. ಇದೀಗ ಈ ಕೋಲ ಕಾರ್ಯಕ್ರಮದ ವಿಡಿಯೋವನ್ನು (Video) ಹೊಂಬಾಳೆ ಫಿಲ್ಮ್ಸ್ ತಮ್ಮ ಯೂಟ್ಯೂಬ್ ಚಾನೆಲ್​ನಲ್ಲಿ ಶೇರ್ ಮಾಡಿದ್ದಾರೆ.




ಕಾಂತಾರ ಸಿನಿಮಾ ಮಾಡಿದ್ದರೂ ಕೂಡಾ ಚಿತ್ರತಂಡ ರಿಯಲ್ ಆಗಿ ಕೋಲಸೇವೆ ಕೊಟ್ಟಿರುವುದು ತುಂಬಾ ವಿಶೇಷ ಎನ್ನಬಹುದು. ಇದೀಗ ಹೊಂಬಾಳೆ ಫಿಲ್ಮ್ಸ್ ಶೇರ್ ಮಾಡಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ.


ದೈವಕ್ಕೆ ಹೂವಿನ ಹಾರವನ್ನು ಹಾಕಿದ ನಿರ್ಮಾಪಕ ವಿಜಯ್ ಕಿರಗಂದೂರು


ದೈವಕೋಲದ ವಿಡಿಯೋ


ಈ ದೈವಕೋಲದಲ್ಲಿ ರಿಷಬ್ ಶೆಟ್ಟಿ ಪತ್ನಿ ಹಾಗೂ ಮಕ್ಕಳೊಂದಿಗೆ ಭಾಗಿಯಾಗಿದ್ದು ವಿಜಯ್ ಕಿರಗಂದೂರು, ಪ್ರಮೋದ್ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಚಿತ್ರತಂಡದ ಕಲಾವಿದರು ಭಾಗಿಯಾಗಿದ್ದರು. ಅದ್ಧೂರಿಯಾಗಿ ನಡೆದ ಈ ಕೋಲದ ವಿಡಿಯೋವನ್ನು ಮಾಡಲಾಗಿದ್ದು ಎಲ್ಲವನ್ನೂ ಚಿಕ್ಕ ವಿಡಿಯೋದಲ್ಲಿ ಕ್ವಿಕ್ ಆಗಿ ಕಾಣಬಹುದು.




8 ಸಾವಿರಕ್ಕೂ ಹೆಚ್ಚು ಲೈಕ್ಸ್


ಈ ವಿಡಿಯೋ ಸಖತ್ ವೈರಲ್ ಆಗಿದ್ದು ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಶೇರ್ ಮಾಡಿರುವ ವಿಡಿಯೋಗೆ ಎರಡೇ ಗಂಟೆಯಲ್ಲಿ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ.


ದೈವಕೋಲದಲ್ಲಿ ಭಕ್ತಿಯಿಂದ ಕೈಮುಗಿದ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ


ಇದನ್ನೂ ಓದಿ: Kartik Aaryan: ಸಾಮಾನ್ಯ ವ್ಯಕ್ತಿಯ 2 ವರ್ಷದ ಸಂಪಾದನೆಯನ್ನು 1 ತಿಂಗಳ ರೆಂಟ್​ಗೆ ಕೊಡ್ತಾರೆ ಈ ಬಾಲಿವುಡ್ ನಟ


ಇದರಲ್ಲಿ ಕೆಲವು ಸಿನಿಮಾದ ಕ್ಲೈಮ್ಯಾಕ್ಸ್ ನೆನಪಿಸುವ ಸೀನ್​ಗಳೂ ಇದ್ದವು. ಕಾಂತಾರ ಸಿನಿಮಾದಲ್ಲಿ ಕೊನೆಗೆ ದೈವಕೋಲದ ದೃಶ್ಯ ಹೇಗಿರುತ್ತದೋ ಅದೇ ರೀತಿ ಇದರಲ್ಲೂ ದೈವ ಪ್ರೀತಿಯಿಂದ ಎಲ್ಲರನ್ನು ಬಾಚಿ ಹತ್ತಿರ ಸೆಳೆಯುವ ದೃಶ್ಯ, ನಗುವ, ತೃಪ್ತಿಯಲ್ಲಿ ನೋಡುವ ಹಾಗೆಯೇ  ವಿಶೇಷ ಧ್ವನಿ ಮಾಡುವ ಎಲ್ಲ ದೃಶ್ಯಗಳು ರಿಯಲ್ ಕೋಲದಲ್ಲಿಯೂ ಕಂಡುಬಂದಿದೆ.




ಕಾಂತಾರ ಸಿನಿಮಾ ಸಕ್ಸಸ್


ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶನ ಮಾಡಿ, ನಟಿಸಿದ ಕಾಂತಾರ ಸಿನಿಮಾ ಭರ್ಜರಿಯಾಗಿ ಸಕ್ಸಸ್ ಆಗಿದೆ. 16 ಕೋಟಿ ಬಜೆಟ್​ನಲ್ಲಿ ಸಿದ್ಧವಾದ ಕಾಂತಾರ ಸಿನಿಮಾ ಬರೋಬ್ಬರಿ 450 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಸಿನಿಮಾ ಕನ್ನಡ ಭಾಷೆಯಲ್ಲಿ ಮಾತ್ರ ಮೊದಲು ರಿಲೀಸ್ ಆಗಿತ್ತು. ನಂತರ ಬೇಡಿಕೆ ಮೇರೆಗೆ ಸಿನಿಮಾವನ್ನು ಹಿಂದಿ, ಮಲಯಾಳಂ, ತೆಲುಗು ಹಾಗೂ ತಮಿಳಿನಲ್ಲಿಯೂ ರಿಲೀಸ್ ಮಾಡಲಾಗಿದೆ.


ಭಕ್ತಿಯಿಂದ ಕೈ ಮುಗಿದು ನಿಂತ ಚಿತ್ರತಂಡ


ಯಾರೆಲ್ಲ ನಟಿಸಿದ್ದಾರೆ?


ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಅವರ ಪತ್ನಿ ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ, ಕಿಶೋರ್ ಕುಮಾರ್, ಅಚ್ಯುತ್ ಕುಮಾರ್, ಸಪ್ತಮಿ ಗೌಡ, ಮಾನಸಿ ಸುಧೀರ್ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇನ್ನು ಬಹಳಷ್ಟು ಜನರು ಸ್ಥಳೀಯ ಕಲಾವಿದರೇ ಸಿನಿಮಾದಲ್ಲಿ ಹಲವು ಪಾತ್ರಗಳನ್ನು ಮಾಡಿದ್ದಾರೆ.

Published by:Divya D
First published: