ಭಾರತೀಯ ಚಿತ್ರರಂಗದಲ್ಲಿ ವಿಶೇಷವಾಗಿ ಸೌತ್ ಇಂಡಸ್ಟ್ರಿಯಿಂದ (South Industry) ಬಾಹುಬಲಿ (Baahubali) ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ನಂತರ ಕೆಜಿಎಫ್ (KGF) ಹವಾ ಶುರುವಾಯಿತು. ಎಸ್ಎಸ್ ರಾಜಮೌಳಿ (SS Rajamouli) ಅವರ ಬಾಹುಬಲಿ ಸಿನಿಮಾಗಳು ಸೂಪರ್ ಹಿಟ್ ಆದ ನಂತರ ಪ್ರಶಾಂತ್ ನೀಲ್ (Prashant Neel) ಅವರ ಕೆಜಿಎಫ್ ಸಿನಿಮಾಗಳು (KGF Cinema) ಬೆಳ್ಳಿತೆರೆಯ ಮೇಲೆ ಅಬ್ಬರಿಸಲಾರಂಭಿಸಿದರು. ಕೆಜಿಎಫ್ 2 ಸಿನಿಮಾ ಅಂತೂ ರೆಕಾರ್ಡ್ಗಳನ್ನು (Record) ಬ್ರೇಕ್ ಮಾಡಿತು. ಹಲವಾರು ಹೊಸ ದಾಖಲೆಗಳನ್ನು ಬರೆಯಿತು.
ಹೊಂಬಾಳೆ ಫಿಲ್ಮ್ಸ್ ವಿಡಿಯೋ ಕ್ಲಿಪ್ ಒಂದನ್ನು ಶೇರ್ ಮಾಡಿಕೊಂಡಿದ್ದು ಇದರಲ್ಲಿ ತೆಲುಗು ಹಾಗೂ ಕನ್ನಡ ಡೈಲಾಗ್ಗಳಿವೆ. ಕೆಜಿಎಫ್ ಸಿನಿಮಾದ ವಿಡಿಯೋ ಕ್ಲಿಪ್ಗಳನ್ನು ಸೇರಿಸಿ ಇದನ್ನು ರೆಡಿ ಮಾಡಲಾಗಿದೆ.
ಅತ್ಯಂತ ಶಕ್ತಿಶಾಲಿ ವ್ಯಕ್ತಿ ಇಟ್ಟುಕೊಂಡಿರುವ ಅತ್ಯಂತ ಶಕ್ತಿಶಾಲಿ ಭರವಸೆ ಎಂದು ಕ್ಯಾಪ್ಶನ್ ಬರೆಯಲಾಗಿದೆ. ಕೆಜಿಎಫ್ 2 ನಮ್ಮನ್ನು ಮರೆಯಲಾಗದ ಪಾತ್ರಗಳು ಮತ್ತು ಕ್ರಿಯೆಯೊಂದಿಗೆ ಸಿನಿಮಾದ ದೊಡ್ಡ ಪ್ರಯಾಣಕ್ಕೆ ಕರೆದೊಯ್ದಿದೆ. ಸಿನಿಮಾದ ಸಂಭ್ರಮಾಚರಣೆ, ದಾಖಲೆಗಳನ್ನು ಮುರಿದ ರೀತಿ ಮತ್ತು ಹೃದಯಗಳನ್ನು ಗೆದ್ದ ಸಿನಿಮಾ ಆಗಿ ಗುರುತಿಸಿಕೊಂಡಿದೆ. ಈ ಕಥೆಗೆ ಮತ್ತೊಂದು ವರ್ಷ ಎಂದು ಬರೆದಿದ್ದಾರೆ.
ಕೆಜಿಎಫ್ 3 ಬಗ್ಗೆ ಹಿಂಟ್
ಕೆಜಿಎಫ್ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಇದೆ. ದಕ್ಷಿಣ ಚಿತ್ರರಂಗ ಮಾತ್ರವಲ್ಲದೆ ನಾರ್ತ್ ಬೆಲ್ಟ್ನಲ್ಲಿಯೂ ಸಿನಿಮಾ ಭರ್ಜರಿಯಾಗಿ ರೆಸ್ಪಾನ್ಸ್ ಪಡೆಯಿತು.
ಕೆಜಿಎಫ್ 1 ಸಿನಿಮಾಗಿಂತಲೂ ಕೆಜಿಎಫ್ 2 ಸಿನಿಮಾ ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು. ಕೆಜಿಎಫ್ ರಿಲೀಸ್ ಆಗಿ ಸುದ್ದಿಯಾದಾಗ ಕೆಜಿಎಫ್ 2 ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಸೃಷ್ಟಿಯಾಯಿತು. ಸಿನಿಮಾ ನೋಡಿ ನೆಟ್ಟಿಗರು ಮೆಚ್ಚಿಕೊಂಡರು.
ಇದನ್ನೂ ಓದಿ: Radhika Pandit: ರಾಕಿ ಭಾಯ್ ರಾಧಿಕಾ ಅವರನ್ನು ಭೇಟಿಯಾದಾಗ ಹೀಗಿತ್ತು! ನಟಿ ಶೇರ್ ಮಾಡಿದ್ರು ಕ್ಯೂಟ್ ವಿಡಿಯೋ
ಕೆಜಿಎಫ್ 2 ಸಿನಿಮಾ ಬಿಡುಗಡೆಯಾದಾಗ ಪಡೆದ ರೆಸ್ಪಾನ್ಸ್ ಅಷ್ಟಿಷ್ಟಲ್ಲ. ಸಿನಿಮಾ ವೈರಲ್ ಆಗಿ ಎಲ್ಲೆಡೆ ರಾಕಿ ಭಾಯ್ ಹವಾ ಹೆಚ್ಚಾಯಿತು. ಈ ಸಿನಿಮಾದಲ್ಲಿ ನಟಿಸಿದ ಕಲಾವಿದರು ಕೂಡಾ ಫೇಮಸ್ ಆದರು. ಹಾಗೆಯೇ ಕೆಜಿಎಫ್ 2 ಸಿನಿಮಾದ ಕೊನೆಯಲ್ಲಿ ಕೆಜಿಎಫ್ 3 ಸಿನಿಮಾದ ಒಂದು ಹಿಂಟ್ ಕೂಡಾ ಕೊಟ್ಟಿತ್ತು ಚಿತ್ರತಂಡ. ಕೆಜಿಎಫ್ 3 ಸಿನಿಮಾ ಬರಲಿದೆ ಎನ್ನುವ ಹಿಂಟ್ ಸಿಕ್ಕಾಗ ದೇಶಾದ್ಯಂತ ಪ್ರೇಕ್ಷಕರ ಕುತೂಗಲ ಮತ್ತಷ್ಟು ಹೆಚ್ಚಾಯಿತು. ಸಿನಿಮಾ ಕುರಿತು ಚಿಕ್ಕಪುಟ್ಟ ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.
ಕೆಜಿಎಫ್ 3 ಸಿನಿಮಾ ಯಾವಾಗ ಬರುತ್ತೆ?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-3 ಚಿತ್ರ ರಿಲೀಸ್ ಯಾವಾಗ ಅನ್ನೋ ಕುತೂಹಲ ಜಾಸ್ತಿನೇ ಇದೆ. ಈಗ ಇದಕ್ಕೆ ಉತ್ತರ ಸಿಕ್ಕಿದೆ. ಇದರ ಬಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಸಿನಿಮಾದ ಬಗ್ಗೆ ಭಾರೀ ನಿರೀಕ್ಷೆ ಇದೆ. ಆದರೆ ವರ್ಷಕ್ಕೆ ಒಂದೇ ಚಿತ್ರ ಅನ್ನೋಮಟ್ಟಿಗೆ ಯಶ್ ಫುಲ್ ಡೇಡಿಕೇಟೆಡ್ ಆಗಿಯೇ ಚಿತ್ರ ಮಾಡ್ತಿದ್ದಾರೆ. ಕೆಜಿಎಫ್ ಚಿತ್ರದ ಮೂರನೇ ಸರಣಿ ಚಿತ್ರ 2025ಕ್ಕೆ ಸೆಟ್ಟೇರಲಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು "ದೈನಿಕ್ ಭಾಸ್ಕರ್" ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾಗಿ ವರದಿಯಾಗಿದೆ. ಜೇಮ್ಸ್ ಬಾಂಡ್ ಸಿನಿಮಾ ರೀತಿನೇ ಕೆಜಿಎಫ್ ಸಿನಿಮಾ ಸರಣಿಯಲ್ಲಿಯೇ ಸಾಗಲಿದೆ. ಐದು ಭಾಗದಲ್ಲಿಯೇ ಕೆಜಿಎಫ್ ಸಿನಿಮಾ ಬರಲಿದೆ. ಐದನೇ ಭಾಗವಾದ್ಮೇಲೆ ಹೀರೋ ಬದಲಾಗೋ ಸಾಧ್ಯತೆನೂ ಇದೆ ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ. ಕೆಜಿಎಫ್-3 ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಸಲಾರ್ ಸಿನಿಮಾದ ಕೆಲಸದಲ್ಲಿಯೆ ಬ್ಯುಸಿಯಿದ್ದಾರೆ.
ಇದಾದ್ಮೇಲೆ ಜೂನಿಯರ್ ಎನ್ಟಿಆರ್ ಚಿತ್ರವನ್ನ ಪ್ರಶಾಂತ್ ನೀಲ್ ಮಾಡಲಿದ್ದಾರೆ. ಪ್ರಶಾಂತ್ ನೀಲ್ ಈಗಾಗಲೇ ಒಪ್ಪಿಕೊಂಡಿರೋ ಚಿತ್ರ ಮುಗಿಸೋಕೆ 2025 ಆಗುತ್ತದೆ. ಆಗಲೇ ಕೆಜಿಎಫ್-3 ಸಿನಿಮಾ ಸೆಟ್ಟೇರುತ್ತದೆ. 2026ಕ್ಕೆ ಸಿನಿಮಾ ರಿಲೀಸ್ ಆಗುತ್ತದೆ ಅಂತಲೂ ವಿಜಯ್ ಕಿರಗಂದೂರು ಪತ್ರಿಕೆಗೆ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ