• Home
  • »
  • News
  • »
  • entertainment
  • »
  • Kantara Tulu Trailer: ಕಾಂತಾರ ತುಳು ಟ್ರೈಲರ್ ರಿಲೀಸ್! ಭರ್ಜರಿ ರೆಸ್ಪಾನ್ಸ್, ರಿಲೀಸ್ ಡೇಟ್ ಇಲ್ಲಿದೆ

Kantara Tulu Trailer: ಕಾಂತಾರ ತುಳು ಟ್ರೈಲರ್ ರಿಲೀಸ್! ಭರ್ಜರಿ ರೆಸ್ಪಾನ್ಸ್, ರಿಲೀಸ್ ಡೇಟ್ ಇಲ್ಲಿದೆ

ಕಾಂತಾರ ಸಿನಿಮಾ

ಕಾಂತಾರ ಸಿನಿಮಾ

ಬಹುನಿರೀಕ್ಷಿತ ಕಾಂತಾರ ಸಿನಿಮಾ ತುಳು ಟ್ರೈಲರ್ ಬಿಡುಗಡೆಯಾಗಿದೆ. ಶೇರ್ ಆಗಿ ಒಂದೇ ಗಂಟೆಗೆ ಲಕ್ಷಗಟ್ಟಲೆ ವ್ಯೂಸ್ ಪಡೆದುಕೊಂಡಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

  • News18 Kannada
  • Last Updated :
  • Bangalore, India
  • Share this:

ಹೊಂಬಾಳೆ ಫಿಲ್ಮ್ಸ್ ಕಾಂತಾರ ತುಳು ವರ್ಷನ್ ಟ್ರೈಲರ್ (Kantara Tulu Trailer) ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಟ್ರೈಲರ್​ ಅನ್ನು ಹೊಂಬಾಳೆ ಫಿಲ್ಮ್ಸ್ (Hombale Films) ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಮಾಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಿಷಬ್ ಶೆಟ್ಟಿ (Rishab Shetty) ಬರೆದು, ನಿರ್ದೇಶಿಸಿ ನಟಿಸಿರುವ ಕಾಂತಾರ ಸಿನಿಮಾ ಈಗಾಗಲೇ ಹಿಂದಿ, ಮಲಯಾಳಂ, ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿದೆ. ತುಳುನಾಡಿನ ಕಥೆಯನ್ನೇ ಒಳಗೊಂಡಿದ್ದರೂ ತುಳು ಭಾಷೆಯಲ್ಲಿ ಸಿನಿಮಾ ಟ್ರೈಲರ್ ತಡವಾಗಿ ರಿಲೀಸ್ ಆಗಿದೆ. ಈ ಬಗ್ಗೆ ಸಿನಿಪ್ರೇಕ್ಷರು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ವಿಶೇಷವಾಗಿ ಕರಾವಳಿ ಮಂದಿಗೆ ಕಾಂತಾರ ತುಳು ವರ್ಷನ್ ಬಗ್ಗೆ ಭಾರೀ ಕುತೂಹಲ ಇತ್ತು. ಇದೀಗ ಟ್ರೈಲರ್ ರಿಲೀಸ್ ಆಗಿದ್ದು ಭರ್ಜರಿಯಾಗಿ ಮೆಚ್ಚುಗೆ ಪಡೆಯುತ್ತಿದೆ.


ಕಾಂತಾರ ತುಳು ಟ್ರೈಲರ್


ಕಾಂತಾರ ತುಳು ಟ್ರೈಲರ್​​ನಲ್ಲಿ ರಿಷಬ್ ಶೆಟ್ಟಿ ಅವರ ಡೈಲಾಗ್ ಸಹಜವಾಗಿ ಮೂಡಿ ಬಂದಿದ್ದರೂ ನಟ ಕಿಶೋರ್, ಅಚ್ಯುತ್ ಕುಮಾರ್ ಸೇರಿದಂತೆ ಕನ್ನಡದ ನಟರ ಡಯಲಾಗ್ ಸ್ವಲ್ಪ ವಿಶೇಷ ಎನಿಸುತ್ತದೆ. ಆದರೆ ಟ್ರೈಲರ್ ಯಾವುದೇ ದೋಷವಿಲ್ಲದೆ ಸುಂದರವಾಗಿಯೇ ಮೂಡಿ ಬಂದಿದೆ.




ಕಿಶೋರ್, ನಟಿ ಸಪ್ತಮಿ ಗೌಡ ಅವರ ಪಾತ್ರಗಳು ತುಳು ಡಯಲಾಗ್ ಹೇಳುವುದು ವಿಶೇಷ ಎನಿಸುತ್ತದೆ. ಉಳಿದಂತೆ ಇತರ ಭಾಷೆಗಳಲ್ಲಿ ಬಂದಂತೆಯೇ ಟ್ರೈಲರ್ ಸೊಗಸಾಗಿ ಮೂಡಿ ಬಂದಿದೆ.


ಬದಲಾದ ಮ್ಯೂಸಿಕ್


ಈಗಾಗಲೇ ಕಾಂತಾರ ಒಟಿಟಿಯಲ್ಲಿ ಜನರು ಬದಲಾದ ಮ್ಯೂಸಿಕ್ ಕೇಳಿದ್ದಾರೆ. ಈಗ ತುಳು ಟ್ರೈಲರ್​​ನಲ್ಲಿಯೂ ಮ್ಯೂಸಿಕ್, ಬಿಜಿಎಂಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದರೂ ಇದು ಆಡ್ ಆಗಿ ಕೇಳಿಸುತ್ತಿಲ್ಲ. ತುಳು ನಾಡಿನ ಸಿನಿಮಾ ಕುರಿತ ಕಥೆ ಆದ್ದರಿಂದ ಅದಕ್ಕೆ ಬೇಕಾದ ರೀತಿಯಲ್ಲಿ ಮ್ಯೂಸಿಕ್ ಸ್ವಲ್ಪ ಬದಲಾವಣೆ ಮಾಡಿದ್ದರೂ ಈ ಬದಲಾವಣೆ ಪ್ರೇಕ್ಷಕರಿಗೆ ಕಿರಿಕಿರಿಯಾಗುವಂತೆ ಇಲ್ಲ.


ವೈರಲ್ ಆಯ್ತು ಟ್ರೈಲರ್


ಟ್ರೈಲರ್ ರಿಲೀಸ್ ಆಗಿ ಒಂದು ಗಂಟೆಯೊಳಗೆ ಅರ್ಧ ಲಕ್ಷಕ್ಕೂ ಹೆಚ್ಚು ವ್ಯೂಸ್ ಪಡೆದಿರುವುದು ವಿಶೇಷ. ವಿಡಿಯೋಗೆ 8 ಸಾವಿರಕ್ಕೂ ಹೆಚ್ಚು ಲೈಕ್ಸ್ ಕೂಡಾ ಬಂದಿದೆ.


ಇದನ್ನೂ ಓದಿ: Kantara: ಕಾಂತಾರ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕಿಡ್ನಾಪ್!


ಟ್ರೈಲರ್ ಶೇರ್ ಮಾಡಿದ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಬಗ್ಗೆ ಬರೆದುಕೊಂಡಿದೆ. ಹೊಂಬಾಳೆ ಫಿಲ್ಮ್ಸ್ ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಾಂತಾರದ ಅಧಿಕೃತ ತುಳು ಟ್ರೈಲರ್ ಅನ್ನು ಪ್ರಸ್ತುತಪಡಿಸುತ್ತದೆ. ರಿಷಬ್ ಶೆಟ್ಟಿ ಬರೆದು ನಿರ್ದೇಶನ, ವಿಜಯ್ ಕಿರಗಂದೂರು ನಿರ್ಮಾಣ ಮತ್ತು ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ತುಳು ನಾಡಿನ ದಂತಕಥೆಯನ್ನು ನಮ್ಮ ತುಳುಭಾಷೆಯಲ್ಲಿಯೇ ನೋಡುವ ಸಮಯ ಬಂದಿದೆ (ತುಳುವನಾಡ ದಂತಕಥೆನ್ ನಮ್ಮ ತುಳು ಭಾಷೆಡೇ ತೂಪುನ ಪೊರ್ತು ಬೈದ್ಂಡ್) ಎಂದು ಬರೆಯಲಾಗಿದೆ.




ಯಾವಾಗ ರಿಲೀಸ್?


ಕಾಂತಾರ ತುಳು ಸಿನಿಮಾ ಡಿಸೆಂಬರ್ 2, 2022ರಂದು ಭಾರತದಲ್ಲಿ ಹಾಗೂ ನವೆಂಬರ್ 25ರಂದು ವಿದೇಶಗಳಲ್ಲಿ ರಿಲೀಸ್ ಆಗಲಿದೆ.


ಜನರ ರೆಸ್ಪಾನ್ಸ್ ಹೇಗಿದೆ?


ಟ್ರೈಲರ್ ನೋಡಿ ನೇಪಾಳದಿಂದಲೂ ಜನರು ಕಾಮೆಂಟ್ ಮಾಡುತ್ತಿದ್ದಾರೆ. ಟ್ರೈಲರ್ ಮೆಚ್ಚಿಕೊಂಡ ಜನ ಸಿನಿಮಾ ಈಗ ತಾಯಿ ಮಡಿಲು ಸೇರಿಕೊಂಡ ಹಾಗೆ ಆಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಜಪಾನೀಸ್ ಮತ್ತು ಚೈನೀಸ್ ಹಾಗೂ ಇತರ ಎಲ್ಲ ಭಾಷೆಗಳಲ್ಲಿ ಡಬ್ ಆಗಬೇಕು. ಜಗತ್ತು ಈ ಮಾಸ್ಟರ್ ಪೀಸ್ ಸಿನಿಮಾ ನೋಡಬೇಕು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

Published by:Divya D
First published: