Kantara Film: ಬಿಡುಗಡೆಗೆ ಸಿದ್ದವಾಯ್ತು ಕಾಂತಾರ, ಕಂಬಳದ ಕಿಚ್ಚು ಹತ್ತಿಸಲು ರೆಡಿಯಾದ ರಿಷಭ್

Kantara Fil release Date: ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆಗೆ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಪ್ಯಾನ್​ ಇಂಡಿಯಾ ಚಿತ್ರಗಳ ನಿರ್ಮಾಣದಲ್ಲೂ ಈಗ ಮುಂದಿದೆ. ಇನ್ನು ಸದ್ಯದ ಮಾಹಿತಿ ಪ್ರಕಾರ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗ ಬಾಲಿವುಡ್‌ನಲ್ಲಿ ಹೆಜ್ಜೆ ಇಡಲು ಸಿದ್ದವಾಗಿದೆ.

ಕಾಂತಾರ ಸಿನಿಮಾ

ಕಾಂತಾರ ಸಿನಿಮಾ

  • Share this:
ಹೊಂಬಾಳೆ ಫಿಲಂಸ್ (Hombale Films)​ ಜತೆ ರಿಷಭ್ ಶೆಟ್ಟಿ ಕೈ ಜೋಡಿಸಿರುವ ಕಾಂತಾರಾ ( Kantara) ಸಿನಿಮಾ ನಿರೀಕ್ಷೆ ಮೂಡಿಸಿದ್ದು, ಸದ್ಯ ಅದರ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್​ ಬಿಡುಗಡೆಯಾಗಿದೆ. ಹೊಸ ಪ್ಯಾನ್​ ಇಂಡಿಯಾ ಸಿನಿಮಾ ಸೇರಿದಂತೆ ಕನ್ನಡ ಚಿತ್ರಗಳನ್ನು ಪ್ರಕಟಿಸುತ್ತಿರುವ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ನ 11ನೇ ಚಿತ್ರ ಇದಾಗಿದ್ದು, ರಿಷಭ್​ ಶೆಟ್ಟಿ ನಿರ್ದೇಶಿಸಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಇದು.  ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​  ಟ್ವಿಟ್ಟರ್​ನಲ್ಲಿ ಮಾಹಿತಿ ನೀಡಿದ್ದು, ದಸರಾದ ಜೊತೆಗೆ  ಕಾಡ್ಗಿಚ್ಚಿನ ಬಯಲಾಟಕ್ಕೆ ಸಾಕ್ಷಿಯಾಗಿ, ಸೆಪ್ಟೆಂಬರ್ 30ರಂದು ಕಾಂತಾರ ಅನಾವರಣವಾಗಿದೆ ಎಂದು ಮಾಹಿತಿ ನೀಡಿದೆ.

ದಸರಾ ಹಬ್ಬಕ್ಕೆ ಗಿಫ್ಟ್

ಹೌದು, ಇದೇ ದಸರಾ ಸಮಯದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಟೀಸರ್​ ಮೂಲಕ ಜನರಲ್ಲಿ ಕಿಚ್ಚು ಹಚ್ಚಿದ್ದು, ಕಾತರದಿಂತ ಚಿತ್ರ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಯೂಟ್ಯೂಬ್​ನಲ್ಲಿ 21 ಅಧಿಕ ವೀಕ್ಷಣೆಯನ್ನು ಈ ಚಿತ್ರದ ಟ್ರೇಲರ್ ಕಂಡಿದ್ದು, ಈ ಚಿತ್ರ ಮತ್ತೊಂದು ದಾಖಲೆ ಬರೆಯುವ ನಿರೀಕ್ಷೆ ಇದೆ. ಇನ್ನು ಈ ಚಿತ್ರದಲ್ಲಿ ರಿಷಬ್​ ಶೆಟ್ಟಿ ಜೊತೆ ಅಚ್ಯುತ್ ಕುಮಾರ್, ಪ್ರಮೋದ್​ ಶಟ್ಟಿ ಮುಂತಾದವರು ನಟಿಸುತ್ತಿದ್ದು, ರಿಷಬ್ ಅವರ ಬಹುತೇಕ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್​ ಲೋಕ್​ನಾಥ್​ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ಒಂದರ ಹಿಂದೆ ಒಂದು ಹಿಟ್​​ ಚಿತ್ರಗಳನ್ನು ನೀಡುವುದರ ಜತೆಗೆ ಸಾಲು ಸಾಲಾಗಿ ಹೊಸ ಪ್ಯಾನ್​ ಇಂಡಿಯಾ ಸೇರಿದಂತೆ ಕನ್ನಡ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್​, ಇನ್ನೂ ಹಲವಾರು ಚಿತ್ರಗಳನ್ನು ಮಾಡುತ್ತಿದ್ದು, ಮತ್ತೊಂದು ನಿರೀಕ್ಷೆಯ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ.    ಇನ್ನು ಚಿತ್ರದ ಪೋಸ್ಟರ್ ರಿಲೀಸ್​ ಆದಗಲೇ ಬಹಳ ಸದ್ದು ಮಾಡಿದ್ದ ಚಿತ್ರ ಇದು.ಬಾಲಿವುಡ್​ನಲ್ಲಿ  ಹೊಂಬಾಳೆ ಚಿತ್ರ

ಹೊಂಬಾಳೆ ಫಿಲಂಸ್​ ನಿರ್ಮಾಣದ ದ್ವಿತ್ವ ಸಿನಿಮಾವನ್ನು ಲೂಸಿಯಾ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ತ್ರಿಷಾ ಕೃಷ್ಣನ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ತ್ರಿಷಾ ಅವರನ್ನು ದ್ವಿತ್ವ ಚಿತ್ರಕ್ಕೆ ಬರ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ಮತ್ತೆ ಕಿರಿಕ್ ಮಾಡಲು ರಕ್ಷಿತ್ ಶೆಟ್ಟಿ ರೆಡಿ, ಹೇಗಿರಲಿದೆ ಪಾರ್ಟಿ ಸೀಕ್ವೆಲ್?

ಇನ್ನು ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗಿನ ರಿಚರ್ಡ್​ ಆಂಟೋನಿ ಚಿತ್ರವು ಉಳಿದವರು ಕಂಡಂತೆ ಸಿನಿಮಾ ಮುಂದುವರೆದ ಭಾಗವಾಗಿದ್ದು, ಹೊಂಬಾಳೆ ಫಿಲಂಸ್​ ಈ ಪ್ರಾಜೆಕ್ಟ್​ ಪ್ರಕಟಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆಗೆ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಪ್ಯಾನ್​ ಇಂಡಿಯಾ ಚಿತ್ರಗಳ ನಿರ್ಮಾಣದಲ್ಲೂ ಈಗ ಮುಂದಿದೆ. ಇನ್ನು ಸದ್ಯದ ಮಾಹಿತಿ ಪ್ರಕಾರ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗ ಬಾಲಿವುಡ್‌ನಲ್ಲಿ ಹೆಜ್ಜೆ ಇಡಲು ಸಿದ್ದವಾಗಿದೆ. ಹೌದು ಹೊಂಬಾಳೆ ಸಂಸ್ಥೆ ಸದ್ಯ ಬಾಲಿವುಡ್‌ನಲ್ಲಿ ಚಿತ್ರ ನಿರ್ಮಿಸಲು ಸಜ್ಜಾಗಿದ್ದು, ಸ್ಟಾರ್ ಹೀರೋ ಜೊತೆಗೆ ಮಾತು ಕಥೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪರಭಾಷೆಯಲ್ಲಿ ಮಿಂಚಲು ರೆಡಿಯಾದ ಮತ್ತೋರ್ವ ಕನ್ನಡತಿ, ತೆಲುಗಿನಲ್ಲಿ ಅಣ್ಣಾವ್ರ ಮೊಮ್ಮಗಳ ಧನ್ಯಾ ಅಭಿನಯ

ಇನ್ನು ಹೊಂಬಾಳೆ ನಿರ್ಮಾಣದ ಕೆಜಿಎಫ್ 2 ಥಿಯೆಟರ್​ನಲ್ಲಿ ಮಾತ್ರವಲ್ಲದೇ ಒಟಿಟಿಯಲ್ಲಿ ಸಹ ದಾಖಲೆ ಮಾಡುತ್ತಿದ್ದು, ಹಲವಾರು ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದೆ.  ಈ ಸಿನಿಮಾ ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಪೇ ಪರ್ ವ್ಯೂ' ಅಪ್ಷನ್​ನಲ್ಲಿ ಬಿಡುಗಡೆಯಾದ ನಂತರ, ಚಿತ್ರದ ಕಲೆಕ್ಷನ್ ಹಿಟ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಒಟಿಟಿಯಲ್ಲಿ ಸಹ ಉತ್ತಮ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.
Published by:Sandhya M
First published: