Hombale Films: ಕೆಜಿಎಫ್ ಗೆದ್ದಾಯ್ತು, ಈಗ ಮತ್ತೆರಡು ಪ್ಯಾನ್ ಇಂಡಿಯಾ ಸಿನಿಮಾಕ್ಕೆ ರೆಡಿಯಾದ ಹೊಂಬಾಳೆ ಫಿಲಂಸ್, ಶೀಘ್ರದಲ್ಲೇ ಘೋಷಣೆ!

ಮುಂದಿನ ಎರಡು ವರ್ಷಗಳಲ್ಲಿ ಎರಡು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂಬಾಳೆ ಫಿಲ್ಮ್ಸ್ ಪಾಲುದಾರ/ನಿರ್ಮಾಪಕ ವಿಜಯ್ ಕಿರಗಂದೂರು ಬಹಿರಂಗಪಡಿಸಿದ್ದಾರೆ. ಈ ಪ್ರಮುಖ ಚಲನಚಿತ್ರಗಳಲ್ಲಿ ಒಂದನ್ನು ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಘೋಷಿಸಲಾಗುತ್ತದೆ ಎಂದಿದ್ದಾರೆ.

ಹೊಂಬಾಳೆ ಫಿಲ್ಮ್ಸ್

ಹೊಂಬಾಳೆ ಫಿಲ್ಮ್ಸ್

  • Share this:
ಸಿನಿಮಾ (Cinema) ಉದ್ಯಮದಲ್ಲಿಯೇ ಇತಿಹಾಸ ಸೃಷ್ಠಿಸಿ, ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕೆಜಿಎಫ್ ಸಿನಿಮಾದ (KGF Movie) ತಯಾರಕರು ಸದ್ಯ ಮತ್ತೊಂದು ಬಿಗ್ ಬ್ರೇಕಿಂಗ್ ನೀಡಿದ್ದಾರೆ. ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು ನಿರ್ಮಾಣ ಮಾಡಿರುವ ಈ ಸಂಸ್ಥೆಯಿಂದ ಮತ್ತಷ್ಟು ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಸೂಪರ್ ಹಿಟ್ (Super hit) ಮತ್ತು ಪ್ಯಾನ್ ಇಂಡಿಯಾ (Pan India) ಚಿತ್ರ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ ಹೊಂಬಾಳೆ ಫಿಲ್ಮ್ಸ್ (Hombale films) ಮತ್ತೆರೆಡು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಕೈಗೆತ್ತಿಕೊಂಡಿದೆ ಎಂದು ಹೇಳಿದೆ. ಮುಂದಿನ ಎರಡು ವರ್ಷಗಳಲ್ಲಿ ಎರಡು ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನು ಹೊಂಬಾಳೆ ಫಿಲ್ಮ್ಸ್ ಪಾಲುದಾರ/ನಿರ್ಮಾಪಕ ವಿಜಯ್ (Vijay) ಕಿರಗಂದೂರು ಬಹಿರಂಗಪಡಿಸಿದ್ದಾರೆ. ಈ ಪ್ರಮುಖ ಚಲನಚಿತ್ರಗಳಲ್ಲಿ ಒಂದನ್ನು ಈ ವರ್ಷ ಆಗಸ್ಟ್ ಮತ್ತು ಸೆಪ್ಟೆಂಬರ್ ನಡುವೆ ಘೋಷಿಸಲಾಗುತ್ತದೆ ಎಂದಿದ್ದಾರೆ.

ಧೂಳೆಬ್ಬಿಸಿದ ಕೆಜಿಎಫ್: ಚಾಪ್ಟರ್ 2
ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್ ಮತ್ತು ಸಂಜಯ್ ದತ್ ಪ್ರಮುಖ ಈ ಚಿತ್ರವು ಈಗಾಗಲೇ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ರೂಪಾಯಿಗಳನ್ನು ಗಳಿಸಿದ್ದು, ಹಿಂದಿ ಅವತರಣಿಕೆಯೊಂದರಲ್ಲೇ 500 ಕೋಟಿ ರೂ. ಗಳಿಕೆ ಮಾಡಿದೆ.

ದಿನೇ ದಿನೇ ಹೊಸ ದಾಖಲೆಗಳನ್ನು ಬರೆಯುತ್ತ, ಭರ್ಜರಿ ಕಲೆಕ್ಷನ್ ಮಾಡುತ್ತ ನಿರ್ಮಾಪಕ ಖಜಾನೆಯನ್ನು ತುಂಬಿಸುತ್ತಿರುವ 'ರಾಕಿ ಭಾಯ್'ಗೆ ಅಭಿಮಾನಿಗಳು ಫುಲ್ ಮಾರ್ಕ್ ನೀಡಿದ್ದಾರೆ. ಬಾಲಿವುಡ್ ಚಿತ್ರಗಳು ಹುಟ್ಟುಹಾಕಿದ್ದ ದಾಖಲೆಗಳನ್ನೆಲ್ಲಾ ಪುಡಿಪುಡಿ ಮಾಡಿರುವ ಕೆಜಿಎಫ್ 2 ಭಾರತೀಯ ಚಿತ್ರರಂಗದಲ್ಲದೇ ಇಡೀ ವಿಶ್ವದಲ್ಲಿಯೇ ಮೈಲಿಗಲ್ಲು ಸೃಷ್ಠಿಸಿದೆ.

ಮತ್ತೆರೆಡು ಪಾನ್ ಇಂಡಿಯಾ ಸಿನೆಮಾಗಳು, ಸದ್ಯದಲ್ಲಿಯೇ ಅನೌನ್ಸ್
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾವೂ ಪ್ರಸ್ತುತ ಯಶಸ್ಸಿನ ಉತ್ತುಂಗದಲ್ಲಿದೆ. ಅದರ ಯಶಸ್ಸಿನ ಬಗ್ಗೆ ಪ್ರತ್ಯೇಕವಾಗಿ ಮಾತನಾಡುವಾಗ ಕೆಜಿಎಫ್‌ನ 1 ಮತ್ತು 2ರ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್, ನಿರ್ಮಾಪಕ ವಿಜಯ್ ಕಿರಗಂದೂರು ಅವರುಮತ್ತೆರೆಡು ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ 2024 ಮತ್ತು 2025 ರಲ್ಲಿ ಬಿಡುಗಡೆಯಾಗಲಿರುವ ಇತರ ಎರಡು ಪ್ಯಾನ್-ಇಂಡಿಯಾ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾಗಿ ಬಹಿರಂಗಪಡಿಸಿದರು.

ಮುಂಬರುವ ಪ್ರಾಜೆಕ್ಟ್‌ಗಳ ಕುರಿತು ವಿವರಗಳನ್ನು ಹಂಚಿಕೊಂಡ ವಿಜಯ್
ಕೆಜಿಎಫ್ 2 ರ ನಂತರ, ಇನ್ನೂ ಎರಡು ಪ್ಯಾನ್-ಇಂಡಿಯಾ ಚಲನಚಿತ್ರಗಳು ಕೆಲಸದಲ್ಲಿವೆ
ಮುಂಬರುವ ಪ್ರಾಜೆಕ್ಟ್‌ಗಳ ಕುರಿತು ವಿವರಗಳನ್ನು ಹಂಚಿಕೊಂಡ ವಿಜಯ್ “ಮುಂದಿನ ಮೂರು ವರ್ಷಗಳವರೆಗೆ ನಾವು ಸುಮಾರು 14 ಚಲನಚಿತ್ರಗಳನ್ನು ಕೈನಲ್ಲಿ ಹೊಂದಿದ್ದೇವೆ. ನಾವು ಎರಡು ಪ್ಯಾನ್-ಇಂಡಿಯಾ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಈಗಾಗಲೇ ಒಂದು ಚಿತ್ರಕ್ಕೆ ಸ್ಕ್ರಿಪ್ಟ್ ಅನ್ನು ಫೈನಲ್ ಮಾಡಿದ್ದೇವೆ, ಅದು 2024 ರಲ್ಲಿ ಬಿಡುಗಡೆಯಾಗಲಿದೆ. ಎರಡೂ ಚಿತ್ರಗಳ ವಿಷಯ ಮತ್ತು ಕಥಾಹಂದರವು ಕೆಜಿಎಫ್‌ನಂತೆಯೇ ಸಾರ್ವತ್ರಿಕವಾಗಿರುತ್ತದೆ.

ಇದನ್ನೂ ಓದಿ:  Cannes Film Festival 2022: ಕ್ಯಾನ್​ ಸಿನಿಮೋತ್ಸವದಲ್ಲಿ ಪ್ರಶಸ್ತಿ ಗೆದ್ದು ಬೀಗಿದ ಭಾರತದ 10 ಚಿತ್ರಗಳಿವು

ಆಗಸ್ಟ್ ಅಥವಾ ಸೆಪ್ಟೆಂಬರ್‌ನಲ್ಲಿ 2024ರಲ್ಲಿ ಬಿಡುಗಡೆಯಾಗುವ ಒಂದು ಚಿತ್ರವನ್ನು ನಾವು ಘೋಷಿಸುತ್ತೇವೆ. ನಾವು ಮುಂದಿನ ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇವೆ ಮತ್ತು ಅದನ್ನು 2025ರಲ್ಲಿ ಬಿಡುಗಡೆ ಮಾಡಲು ಯೋಜಿಸುತ್ತೇವೆ” ಎಂಬ ಮಾಹಿತಿಯನ್ನು ಬಿಟ್ಟಕೊಟ್ಟಿದ್ದಾರೆ. ಸಹಜವಾಗಿ, ನಿರ್ಮಾಪಕರು ಕಥಾಹಂದರದ ಬಗ್ಗೆ ಹೆಚ್ಚು ಬಹಿರಂಗಪಡಿಸಲಿಲ್ಲ, ಆದರೆ ಸಿನಿ ಪ್ರೇಕ್ಷಕರು ದೊಡ್ಡ ಮಟ್ಟದ ಯೋಜನೆಯನ್ನು ಇವರಿಂದ ನೀರಿಕ್ಷಿಸಬಹುದಾಗಿದೆ.

ಉತ್ತರ VS ದಕ್ಷಿಣ ಸಿನಿಮಾ
ಪ್ರಸ್ತುತ ಉತ್ತರ ಮತ್ತು ದಕ್ಷಿಣದ ಚರ್ಚೆಯ ಕುರಿತು ಮಾತನಾಡಿದ ವಿಜಯ್ “ಉತ್ತರ ಮತ್ತು ದಕ್ಷಿಣದ ನಡುವೆ ಯಾವುದೇ ತಡೆಗೋಡೆ ಇರಬಾರದು ಎಂದಲ್ಲ. ನಾವೆಲ್ಲರೂ ಹಿಂದಿ ಚಲನಚಿತ್ರಗಳನ್ನು ನೋಡುತ್ತೇವೆ ಮತ್ತು ಅವರು ನಮ್ಮ ಚಲನಚಿತ್ರಗಳನ್ನು ನೋಡುತ್ತಾರೆ. ಕಂಟೆಂಟ್ ಚೆನ್ನಾಗಿದ್ದರೆ ಎಲ್ಲರೂ ನೋಡುತ್ತಾರೆ. ನಾವು ದಕ್ಷಿಣ ಕೊರಿಯನ್, ಜಪಾನೀಸ್ ಮತ್ತು ಸ್ಪ್ಯಾನಿಷ್ ಚಲನಚಿತ್ರಗಳನ್ನು ವೀಕ್ಷಿಸುತ್ತೇವೆ ಮತ್ತು ಯಾವುದೇ ಅಡ್ಡಿಯಿಲ್ಲ.

ಇದನ್ನೂ ಓದಿ: Sanjjanaa Galrani: ಸಂಜನಾ ಮಡಿಲು ತುಂಬಿದ ಕಂದಮ್ಮ ಈಗ ಮನೆ ತುಂಬಿತು! ಈ ವಿಡಿಯೋ ನೋಡಿ ನೀವೂ ಮನ ತುಂಬಿ ಹಾರೈಸಿ

ನಾವು ಅಂತರರಾಷ್ಟ್ರೀಯ ವಿಷಯವನ್ನು ನೋಡಿದಾಗ, ನಾವು ಉತ್ತರ ಮತ್ತು ದಕ್ಷಿಣದ ಬಗ್ಗೆ ವಾದಿಸುವುದಿಲ್ಲ. ಅದೇ ರೀತಿ ಈ ಬಗ್ಗೆ ವಾದ-ವಿವಾದವೂ ಬೇಡ. ಈಗ, ಭೂಲ್ ಭುಲೈಯಾ 2 ಭಾರತದ ದಕ್ಷಿಣ ಭಾಗದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದೆ. ಇದು ಎಲ್ಲಾ ವಿಷಯವನ್ನು ಅವಲಂಬಿಸಿರುತ್ತದೆ. ಕಂಟೆಂಟ್ ಚೆನ್ನಾಗಿಲ್ಲದಿದ್ದರೆ ಜನ ತಿರಸ್ಕರಿಸುತ್ತಾರೆ ಎಂದು ಕೂಲ್ ಆಗಿ ಪ್ರತಿಕ್ರಿಯಿಸಿದ್ದಾರೆ.
Published by:Ashwini Prabhu
First published: