ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದ ವಿಜಯ್ ಕಿರಗಂದೂರು: 11ನೇ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲಂಸ್​..!

ಹೊಂಬಾಳೆ ಫಿಲಂಸ್​ ಶುಕ್ರವಾರ ಅಂದರೆ ನಾಳೆ ಆ.6 ರಂದು ತನ್ನ 11ನೇ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್​ ಅನ್ನು ರಿಲೀಸ್​ ಮಾಡಲಿದೆ. ನಾಳೆ ಬೆಳಿಗ್ಗೆ 11.43ಕ್ಕೆ ಈ ಚಿತ್ರದ ಕುರಿತಾದ ಸರ್ಪ್ರೈಸ್ ರಿವೀಲ್​ ಆಗಲಿದೆ. ಹೀಗೆಂದು ಹೊಂಬಾಳೆ ಫಿಲಂಸ್​ ತಮ್ಮ ಅಧಿಕೃತ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

ಹೊಂಬಾಳೆ ಫಿಲಂಸ್​ನ 11ನೇ ಸಿನಿಮಾ ಪ್ರಕಟಣೆ

ಹೊಂಬಾಳೆ ಫಿಲಂಸ್​ನ 11ನೇ ಸಿನಿಮಾ ಪ್ರಕಟಣೆ

  • Share this:
ಕೆಜಿಎಫ್​  (KGF) ಸಿನಿಮಾದಂತಹ ಪ್ಯಾನ್​ ಇಂಡಿಯಾ ಚಿತ್ರವನ್ನು ನಿರ್ಮಿಸಿರುವ ಕನ್ನಡದ ಖ್ಯಾತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ (Hombale Films) ಒಂದರ ಹಿಂದೆ ಒಂದರಂತೆ ಹೊಸ ಸಿನಿಮಾಗಳನ್ನು ಪ್ರಕಟಿಸುತ್ತಿದೆ. ಪುನೀತ್​ ರಾಜ್​ ಕುಮಾರ್​ ಅವರ ಅಭಿನಯದ ದ್ವಿತ್ವ ಸಿನಿಮಾ ಅನೌನ್ಸ್​ ಮಾಡಿದ ಕೆಲ ಸಮಯದಲ್ಲೇ ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್​ ಆಂಟೋನಿ ಸಿನಿಮಾ ಪ್ರಕಟಿಸಿದರು. ದ್ವಿತ್ವ ಸಿನಿಮಾವನ್ನು ಲೂಸಿಯಾ ಪವನ್ ಕುಮಾರ್ ನಿರ್ದೇಶನ ಮಾಡುತ್ತಿದ್ದು, ತ್ರಿಷಾ ಕೃಷ್ಣನ್ ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆಯಷ್ಟೆ ತ್ರಿಷಾ ಅವರನ್ನು ದ್ವಿತ್ವ ಚಿತ್ರಕ್ಕೆ ಬರ ಮಾಡಿಕೊಳ್ಳಲಾಯಿತು. ಇನ್ನು ಸಿಂಪಲ್​ ಸ್ಟಾರ್ ರಕ್ಷಿತ್ ಶೆಟ್ಟಿ ಜೊತೆಗಿನ ರಿಚರ್ಡ್​ ಆಂಟೋನಿ ಚಿತ್ರವು ಉಳಿದವರು ಕಂಡಂತೆ ಸಿನಿಮಾ ಮುಂದುವರೆದ ಭಾಗವಾಗಿದ್ದು, ಹೊಂಬಾಳೆ ಫಿಲಂಸ್​ ಈ ಪ್ರಾಜೆಕ್ಟ್​ ಪ್ರಕಟಿಸಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದಾಗಿ ತಿಂಗಳು ಕಳೆಯುವ ಮುನ್ನವೇ ಈಗ  ಮತ್ತೊಂದು ಪ್ರಾಜೆಕ್ಟ್​ ಅನೌನ್ಸ್​ ಮಾಡುವ ಮೂಲಕ  ಕಿಚ್ಚು ಹೊತ್ತಿಸಿದ್ದಾರೆ. 

ಹೊಂಬಾಳೆ ಫಿಲಂಸ್​ ತನ್ನ 11ನೇ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದೆ. ದೊಡ್ಡ ದೊಡ್ಡ ಸ್ಟಾರ್​ ನಟರ ಜೊತೆಗೆ ಸಿನಿಮಾಗಳನ್ನು ಮಾಡುತ್ತಿರುವ ಹೊಂಬಾಳೆ ಪ್ಯಾನ್​ ಇಂಡಿಯಾ ಚಿತ್ರಗಳ ನಿರ್ಮಾಣದಲ್ಲೂ ಈಗ ಮುಂದಿದೆ. ಹೀಗಿರುವಾಗಲೇ ಹೊಸ ಸಿನಿಮಾ ಪ್ರಕಟಿಸಿದ್ದು, ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದೆ.


ಹೊಂಬಾಳೆ ಫಿಲಂಸ್​ ಶುಕ್ರವಾರ ಅಂದರೆ ನಾಳೆ ಆ.6 ರಂದು ತನ್ನ 11ನೇ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್​ ಅನ್ನು ರಿಲೀಸ್​ ಮಾಡಲಿದೆ. ನಾಳೆ ಬೆಳಿಗ್ಗೆ 11.43ಕ್ಕೆ ಈ ಚಿತ್ರದ ಕುರಿತಾದ ಸರ್ಪ್ರೈಸ್ ರಿವೀಲ್​ ಆಗಲಿದೆ. ಹೀಗೆಂದು ಹೊಂಬಾಳೆ ಫಿಲಂಸ್​ ತಮ್ಮ ಅಧಿಕೃತ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೂ ಓದಿ:  Bellbottom Trailer: ಬೆಲ್​ ಬಾಟಮ್​ ಸಿನಿಮಾದಲ್ಲಿ ಇಂದಿರಾ ಗಾಂಧಿ ಪಾತ್ರದಲ್ಲಿ ನಟಿಸಿರುವ ಈ ಖ್ಯಾತ ನಟಿ ಯಾರು ಗೊತ್ತಾ..?

ಹೊಂಬಾಳೆ ಫಿಲಂಸ್ ಶೇರ್ ಮಾಡಿರುವ ಪೋಸ್ಟರ್​ನಲ್ಲಿ ಹೊಂಬಾಳೆ11 ಹಾಗೂ ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ ಎಂಬ ಸಾಲನ್ನು ಬರೆಯಲಾಗಿದೆ. ಈ ಸಾಲು ಈಗ ನೆಟ್ಟಿಗರ ಗಮನ ಸೆಳೆಯುವುದರೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ. ಕಿಚ್ವು ಎನ್ನು ಪದವನ್ನು ಹೈಟೈಲ್​ ಮಾಡಿರುವ ಕಾರಣದಿಂದಾಗಿ ಈ ಸಿನಿಮಾವನ್ನು ಕಿಚ್ಚ ಸುದೀಪ್ ಜತೆ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಇನ್ನು ಈ ಸಿನಿಮಾವನ್ನು ಹೊಂಬಾಳೆ ಫಿಲಂಸ್​ ಅವರು ರಿಷಭ್ ಶೆಟ್ಟಿ ಹಾಗೂ ಶಿವರಾಜ್​ ಕುಮಾರ್ ಅವರ ಜತೆ ಮಾಡುತ್ತಿದ್ದಾರೆ ಎಂದು ಮತ್ತೆ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾ ಯಾರ ಜೊತೆ ಮಾಡುತ್ತಿದ್ದಾರೆ ಅನ್ನೋದು ಮಾತ್ರ ನಾಳೆ ಬಹಿರಂಗವಾಗಲಿದೆ. ಆದರೆ ಈ ಸಿನಿಮಾದಲ್ಲಿ ನಾಯಕ ಯಾರು ಅನ್ನೋ ಕುತೂಹಲ ನೆಟ್ಟಿಗರಲ್ಲಿ ಹೆಚ್ಚಿದೆ.

ಇದನ್ನೂ ಓದಿ: BBK8-Divya Suresh: ಮಧ್ಯರಾತ್ರಿ ಮನೆಯಿಂದ ಹೊರ ನಡೆದ ದಿವ್ಯಾ ಸುರೇಶ್: ಕಣ್ಣೀರಿಟ್ಟ ಮಂಜು ಪಾವಗಡ​..!

ಹೊಂಬಾಳೆ ಫಿಲಂಸ್​ ನಿರ್ಮಾಣದ ಸಲಾರ್​ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್ 2 ರಿಲೀಸ್​ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ಕೊಟ್ಟಿಲ್ಲ. ಈ ಬಗ್ಗೆಯೂ ನೆಟ್ಟಿಗರು ಕಮೆಂಟ್​ ಮಾಡುವ ಮೂಲಕ ಸಿನಿಮಾದ ಬಗ್ಗೆ ಅಪ್ಡೇಟ್​ ಕೊಡುವಂತೆ ಆಗ್ರಹಿಸುತ್ತಿದ್ದಾರೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:Anitha E
First published: