ಹೊಂಬಾಳೆ ಫಿಲ್ಮ್ಸ್ (Hombale Films) ಸದ್ಯಕ್ಕೆ ಕನ್ನಡ (Kannada) ಚಿತ್ರರಂಗದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಎಲ್ಲಾ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ಪ್ರೇಕ್ಷಕ ಮಹಾಪ್ರಭುಗಳ ಮುಂದೆ ಇಡುತ್ತಿದ್ದಾರೆ ಹೊಂಬಾಳೆ ಫಿಲ್ಮ್ಸ್. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power Star Puneeth Rajkumar) ಅಭಿನಯದ 'ನಿನ್ನಿಂದಲೆ' ಸಿನಿಮಾದಿಂದ ಹೊಂಬಾಳೆ ಫಿಲ್ಮ್ಸ್ ಚಿತ್ರರಂಗಕ್ಕೆ ಎಂಟ್ರಿಯಾಗಿತ್ತು. ಇದಾದ ಬಳಿಕ ಮತ್ತೆ ಅಪ್ಪು ಹಾಗೂ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಬಂದ ರಾಜಕುಮಾರ (Rajakumara) ಸಿನಮಾಗೆ ಬಂಡವಾಳ ಹೂಡಿತ್ತು. ನಂತರ, ಕೆಜಿಎಫ್, ಯುವರತ್ನ, ಕೆಜಿಎಫ್ 2, ಸಲಾರ್, ಶ್ರೀ ರಾಘವೇಂದ್ರ ಸ್ಟೋರ್ಸ್, ಕಾಂತಾರ ಸಿನಿಮಾ ಸೇರಿ ಹಲವು ಸಿನಿಮಾಗಳನ್ನು ನಿಮಾರ್ಣ ಮಾಡುತ್ತಿದೆ ಹೊಂಬಾಳೆ ಫಿಲ್ಮ್ಸ್. ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ ನಿರ್ಮಾಣ ಮಾಡುವ ಮೂಲಕ ಹೊಂಬಾಳೆ ಫಿಲ್ಮ್ಸ್ ಚಿತ್ರರಂಗದಲ್ಲಿ ಹೊಸ ಅಧ್ಯಾ ಬರೆಯಿತು. ಈ ಚಿತ್ರ ಸ್ಯಾಂಡಲ್‌ವುಡ್ (Sandalwood) ಅನ್ನು ಮತ್ತೊಂದು ಲೆವಲ್‌ಗೆ ಕೊಂಡೊಯ್ಯಿತು.
ಮತ್ತೊಂದು ದೊಡ್ಡ ಸಿನಿಮಾಗೆ ಹೊಂಬಾಳೆ ಬಂಡವಾಳ!
ಇದಾದ ಬಳಿಕ ಮತ್ತೊಂದು ಬಿಗ್ ಬಜೆಟ್ ಸಿನಿಮಾಗೆ ಹೊಂಬಾಳೆ ಫಿಲ್ನ್ಸ್ ಬಂಡವಾಳ ಹೂಡುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ 2 ಸದ್ಯ ಬಾಕ್ಸ್ ಆಫೀಸ್‌ನಲ್ಲಿ ತೂಫಾನ್ ಎಬ್ಬಿಸಿದೆ. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 7 ದಿನಗಳಲ್ಲಿ 723.15 ಕೋಟಿ ರೂಪಾಯಿಗಳನ್ನು ಕಲೆ ಹಾಕಿದೆ. ಈ ಸಿನಿಮಾ ಬಳಿಕ ಇದೀಗ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಸಿನಿಮಾ ಮಾಡಲು ಮುಂದಾಗಿದೆ. ಈ ಹಿಂದೆ ತಮಿಳು ನಟ ಸೂರ್ಯ, ಅಪರ್ಣಾ ಬಾಲಮುರಳಿ ಅಭಿನಯದ 'ಸೂರರೈ ಪೊಟ್ರು' ಗೆ ಆಕ್ಷನ್ ಕಟ್ ಹೇಳಿದ್ದ ಸುಧಾ ಕೊಂಗಾರ ಅವರ ಮುಂದಿನ ಸಿನಿಮಾಗೆ ಹೊಂಬಾಳೆ ಬಂಡವಾಳ ಹೂಡುತ್ತಿದೆ.
ತಮಿಳು ನಿರ್ದೇಶಕಿಗೆ ಅವಕಾಶ ಕೊಟ್ಟ ಹೊಂಬಾಳೆ!
ತಮಿಳಿನ ನಿರ್ದೇಶಕಿ ಸುಧಾ ಕೊಂಗರಾ ಅವರೊಟ್ಟಿಗೆ ಹೊಸ ಸಿನಿಮಾವನ್ನು ಹೊಂಬಾಳೆ ಘೋಷಿಸಿದೆ. ಈ ಹಿಂದೆ 'ಸೂರರೈ ಪೊಟ್ರು' ಹಾಗೂ 'ಇರುದಿ ಸುತ್ರು' ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುಧಾ ಕೊಂಗರಾ ಇದೀಗ ಹೊಂಬಾಳೆ ಜೊತೆ ಕೈಜೋಡಿಸಿದ್ದು, ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಇದಾಗಿರಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಆ ಮಗು ಛತ್ರಿ ತಂದಿದ್ದು ಏಕೆ? ಭಾವನಾತ್ಮಕ ಕಥೆ ಹೇಳಿ ಧನ್ಯವಾದ ಅರ್ಪಿಸಿದ ಯಶ್
ರಿಯಲ್ ಸ್ಟೋರಿ ರೆಡಿ ಮಾಡಿಕೊಡಿದ್ದಾರಂತೆ ಸುಧಾ!
ಈ ಬಗ್ಗೆ ಪೋಸ್ಟರ್ ಹಂಚಿಕೊಂಡಿರುವ ಹೊಂಬಾಳೆ ಫಿಲಮ್ಸ್, ''ಕೆಲವು ಸತ್ಯ ಘಟನೆಗಳನ್ನು ಹೇಳಲೇ ಬೇಕು ಮತ್ತು ಸರಿಯಾಗಿ ಹೇಳಬೇಕು. ಹೊಂಬಾಳೆ ಫಿಲ್ಮ್ಸ್ ನಮ್ಮ ಮುಂದಿನ ಸಿನಿಮಾವನ್ನು ನಿರ್ದೇಶಕಿ ಸುಧಾ ಕೊಂಗರ ಜೊತೆ ಮಾಡುತ್ತಿದ್ದೇವೆ ಎಂದು ಘೋಷಿಸಲು ಸಂತಸ ಪಡುತ್ತೇವೆ. ನಾವು ಈಗ ಹೇಳಲು ಹೊರಟಿರುವ ಕತೆ ಭಾರತದ ಗಮನವನ್ನು ಸೆಳೆಯಲಿದೆ, ನಮ್ಮ ಹಿಂದಿನ ಸಿನಿಮಾಗಳಂತೆ'' ಎಂದು ತಿಳಿಸಿದೆ. ಈ ಪೋಸ್ಟ್ನಲ್ಲೆ ಸತ್ಯ ಘಟನೆ ಆಧಾರಿತ ಸಿನಿಮಾ ಮಾಡುವುದಾಗಿ ಹೊಂಬಾಳೆ ಹೇಳಿಕೊಂಡಿದೆ. ಈ ಸಿನಿಮಾದ ನಾಯಕ-ನಾಯಕಿಯನ್ನು ಇನ್ನೂ ಘೋಷಿಸಲಾಗಿಲ್ಲ. ಆದರೆ ಈ ಸಿನಿಮಾ ಪ್ಯಾನ್ ಇಂಡಿಯಾ ಆಗಿರುವುದಂತೂ ಪಕ್ಕಾ.
ಕನ್ನಡ, ತೆಲುಗು ಬಳಿಕ ತಮಿಳಿನಲ್ಲಿ ದೊಡ್ಡ ಸಿನಿಮಾ!
ಹೊಂಬಾಳೆ ಫಿಲ್ಮ್ಸ್ ಕನ್ನಡದಲ್ಲಿ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗಿಳಿಗೆ ಬಂಡವಾಳ ಹೂಡಿದೆ. ಕನ್ನಡ ಬಳಿಕ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಪ್ರಭಾಸ್ ಜೊತೆ ಸಿನಿಮಾ ಸಲಾರ್ ಸಿನಿಮಾ ಮಾಡುತ್ತಿದೆ. ಇದೀಗ ತಮಿಳು ಚಿತ್ರರಂಗಕ್ಕೆ ಹೊಂಬಾಳೆ ಕಾಲಿಟ್ಟಿದೆ. ತಮಿಳಿನ ಹೆಸರಾಂತ ನಟ ಈ ಸಿನಿಮಾದಲ್ಲಿ ನಟಿಸಲಿದ್ದಾರಂತೆ.
ಇದನ್ನೂ ಓದಿ: KGF Chapter 2 ಸಿನಿಮಾಗೆ ಉಪ್ಪಿ ಬಹುಪರಾಕ್; 'ರಾಕಿಂಗ್ ಸ್ಟಾರ್' ಬಗ್ಗೆ 'ರಿಯಲ್ ಸ್ಟಾರ್' ಹೇಳಿದ್ದೇನು ಗೊತ್ತಾ?
2008ರಲ್ಲಿ ಎಂಟ್ರಿಯಾಗಿದ್ದ ಸುಧಾ ಕೊಂಗಾರ!
ನಿರ್ದೇಶಕಿ ಮತ್ತು ಚಿತ್ರಕಥೆಗಾರರಾಗಿರುವ ಸುಧಾ ಕೊಂಗಾರ ಪ್ರಸಾದ್ ಪ್ರಧಾನವಾಗಿ ತಮಿಳು ಚಿತ್ರರಂಗದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2008 ರಲ್ಲಿ ತೆಲುಗು ಚಿತ್ರ ಆಂಧ್ರ ಅಂದಗಾಡು ಮೂಲಕ ನಿರ್ದೇಶನಕ್ಕೆ ಪ್ರವೇಶ ಮಾಡಿದರು ಮತ್ತು ನಂತರ ತಮಿಳು ಚಿತ್ರ ದ್ರೋಹಿ ನಿರ್ದೇಶಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ