Hombale 12: ಹೊಂಬಾಳೆ ಫಿಲಂಸ್​ನ 12ನೇ ಸಿನಿಮಾ: ಕುತೂಹಲ ಮೂಡಿಸಿದ ಪೋಸ್ಟರ್​..!

ಹೊಂಬಾಳೆ ಫಿಲಂಸ್​ ತನ್ನ 12ನೇ ಸಿನಿಮಾ ಪ್ರಕಟಿಸಿದೆ. ನಾಳೆ ಈ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ ಲುಕ್​ ಪೋಸ್ಟರ್​ ರಿಲೀಸ್ ಆಗಲಿದೆ. ಇನ್ನು ಈ ಚಿತ್ರದ ನಾಯಕ ಯಾರು ಅನ್ನೋ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

ಹೊಂಬಾಳೆ ಫಿಲಂಸ್​ನ 12ನೇ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್​

ಹೊಂಬಾಳೆ ಫಿಲಂಸ್​ನ 12ನೇ ಸಿನಿಮಾದ ಟೈಟಲ್​ ಪೋಸ್ಟರ್​ ರಿಲೀಸ್​

  • Share this:
ಸಾಲು ಸಾಲು ಸಿನಿಮಾಗಳನ್ನು ಪ್ರಕಟಿಸುವ ಮೂಲಕ ಸುದ್ದಿಯಲ್ಲಿರುವ ಕನ್ನಡದ ಸಿನಿಮಾ ನಿರ್ಮಾಣ ಸಂಸ್ಥೆ ಈಗ 12ನೇ ಚಿತ್ರವನ್ನು ಅನೌನ್ಸ್​ ಮಾಡಿದೆ. ಹೌದು, ನಿರ್ಮಾಪಕ ವಿಜಯ್ ಕಿರಗಂದೂರು (Vijay Kiraganduru) ಅವರು ಸಾರಥ್ಯದಲ್ಲಿ ಹೊಂಬಾಳೆ ಫಿಲಂಸ್​  (Hombale Films) ಮತ್ತೊಂದು ಹೊಸ ಚಿತ್ರ ಸೆಟ್ಟೇರಲಿದೆ. ಕೆಜಿಎಫ್​ ಚಾಪ್ಟರ್ 2 (KGF Chapter 2) ಸಿನಿಮಾ ಕುರಿತಾಗಿ ಏನಾದರೂ ಅಪ್ಡೇಟ್ ಕೊಡುವಂತೆ ಸಿನಿಪ್ರಿಯರು ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹೇರುತ್ತಿದ್ದಾರೆ. ಆದರೆ, ಕೊರೋನಾ ಕಾರಣಕ್ಕೆ ಆ ಸಿನಿಮಾದ ಅಪ್ಡೇಟ್​ ಕೊಡದೆ, ಹೊಸ ಸಿನಿಮಾಗಳನ್ನು ಒಂದರ ಹಿಂದೆ ಒಂದರಂತೆ ಪ್ರಕಟಿಸುತ್ತಿದೆ ಹೊಂಬಾಳೆ ಫಿಲಂಸ್​. ಕೊರೋನಾ ಕಾರಣದಿಂದಾಗಿ ಸಾಕಷ್ಟು ಸಿನಿಮಾಗಳ ಕೆಲಸಗಳು ಇನ್ನು ಆರಂಭವಾಗಿಲ್ಲ. ಆದರೆ, ಹೊಂಬಾಳೆ ಫಿಲಂಸ್​ ಮಾತ್ರ ಮೂರು ಹೊಸ ಪ್ರಾಜೆಕ್ಟ್​ಗಳನ್ನು ಪ್ರಕಟಿಸಿದೆ. ಆ ಸಿನಿಮಾಗಳ ಟೈಟಲ್​ ಪೋಸ್ಟರ್ ಸಹ ಲಾಂಚ್​ ಮಾಡಿದೆ. 

ಕೆಜಿಎಫ್​ ಚಾಪ್ಟರ್​ 2 ಸಿನಿಮಾಗಾಗಿ ಕನ್ನಡದ ಜೊತೆಗೆ ಇತರೆ ಭಾಷೆಗಳ ಸಿನಿಪ್ರಿಯರು ಕಾಯುತ್ತಿದ್ದಾರೆ. ಕೊರೋನಾ ಕಾರಣದಿಂದಾಗಿ ಇನ್ನು ಚಿತ್ರಮಂದಿರಗಳು ಸಂಪೂರ್ಣವಾಗಿ ಬಾಗಿಲು ತೆರೆದಿಲ್ಲ. ಈ ಕಾರಣದಿಂದಲೇ ಹೊಂಬಾಳೆ ಫಿಲಂಸ್​ ಕೆಜಿಎಫ್​ ಚಾಪ್ಟರ್ 2 ಚಿತ್ರದ ಕುರಿತಾಗಿ ಹೊಸ ಅಪ್ಡೇಟ್​ ಕೊಡುತ್ತಿಲ್ಲ. ಆದರೆ, ಹೊಸ ಸಿನಿಮಾಗಳನ್ನು ಮಾತ್ರ ಪ್ರಕಟಿಸುತ್ತಿದೆ.

Avinash Starts Dubbing for KGF, KGF Chapter 2 Update, KGF Chapter 2, Malavika Avinash in KGF, Malavika Avinash twitter, ಹಿರಿಯ ನಟಿ ಮಾಳವಿಕಾ ಅವಿನಾಶ್, ಕೆಜಿಎಫ್ ಚಾಪ್ಟರ್ 2, ಮಾಳವಿಕಾ ಅವಿನಾಶ್ ಕೆಜಿಎಫ್ ಡಬ್ಬಿಂಗ್, KGF Chapter 2 new update Malavika Avinash started dubbing for her role ae
ಕೆಜಿಎಫ್​ ಚಾಪ್ಟರ್ ಸಿನಿಮಾದ ಪೋಸ್ಟರ್​


ಇತ್ತೀಚೆಗಷ್ಟೆ ರಿಷಭ್​ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಕಾಂತಾರ ಸಿನಿಮಾದ ಪೋಸ್ಟರ್​ ಅನ್ನು ಹೊಂಬಾಳೆ ಫಿಲಂಸ್ ಲಾಂಚ್​ ಮಾಡಿತ್ತು. ಈಗ ತಮ್ಮ 12ನೇ ಸಿನಿಮಾದ ಕುರಿತಾಗಿ ಮಾಹಿತಿ ನೀಡಿದೆ. ಹೌದು, ಇಂದು ಹೊಂಬಾಳೆ ಫಿಲಂಸ್​ನ 12ನೇ ಚಿತ್ರದ ಟೈಟಲ್​ ಹಾಗೂ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್ ಆಗಲಿದೆ.

ಇದನ್ನೂ ಓದಿ: KGF Chapter 2 Release Date: ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್​..!

ನಾಳೆ ಅಂದರೆ ಸೆ. 22ರಂದು ಮಧ್ಯಾಹ್ನ 3.10ಕ್ಕೆ ಹೊಸ ಸಿನಿಮಾದ ಟೈಟಲ್​ ಹಾಗೂ ಫಸ್ಟ್​ಲುಕ್ ಪೋಸ್ಟರ್ ರಿಲೀಸ್ ಆಗಲಿದೆ. ಈ ಕುರಿತಾಗಿ ತಮ್ಮ ಅಧಿಕೃತ ಖಾತೆಯಲ್ಲಿ ಒಂದು ಪೋಸ್ಟರ್​ ಅನ್ನು ಹಂಚಿಕೊಂಡಿದ್ದಾರೆ.
#Hombale12.... ಹಸಿರು ಬಾಳೆ ಎಲೆಯ ಪೋಸ್ಟರ್​ ಮೇಲೆ ಪ್ರತಿಯೊಬ್ಬರಲ್ಲೂ ಹಸಿವಿದೆ. ಪ್ರತಿ ಅಗಳಿನಲ್ಲೂ ತಿನ್ನುವವರ ಹೆಸರಿದೆ. ಅನ್ನದಾತೋ ಸುಖೀಭವ... ಎಂದು ಬರೆಯಲಾಗಿದೆ. ಇದನ್ನು ಓದಿದರೆ, ಇದು ಹಸಿವನ್ನು ನೀಗಿಸುವ ರೈತನ ಕುರಿತಾದ ಸಿನಿಮಾ ಇರಬಹುದು ಎಂದು ಅಂದಾಜಿಸಲಾಗುತ್ತಿದೆ.

ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದ ವಿಜಯ್ ಕಿರಗಂದೂರು: 11ನೇ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲಂಸ್​..!

ಇನ್ನು 12ನೇ ಸಿನಿಮಾದಲ್ಲಿ ನಾಯಕ ಯಾರು, ಇದು ಪ್ಯಾನ್​ ಇಂಡಿಯಾ ಸಿನಿಮಾ ಇರಬಹುದಾ,,? ನಾಯಕಿ ಯಾರು. ಕನ್ನಡದವರೇ ನಾಯಕರಾಗಲಿದ್ದಾರಾ..? ಎಂಬೆಲ್ಲ ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಇದಕ್ಕೆಲ್ಲ ಉತ್ತರ ನಾಳೆ ಮಧ್ಯಾಹ್ನ ಸಿಗಲಿದೆ.

ಹೊಂಬಾಳೆ ಫಿಲಂಸ್​ ಇತ್ತೀಚೆಗಷ್ಟೆ ತಮ್ಮ ಬ್ಯಾನರ್​ನ 11ನೇ ಸಿನಿಮಾ ಕಾಂತಾರವನ್ನು ಪ್ರಕಟಿಸಿದೆ. ಈ ಸಿನಿಮಾದಲ್ಲಿ ನಾಯಕನಾಗಿರುವ ರಿಷಭ್​ ಶೆಟ್ಟಿ ಅವರೇ ಈ ಚಿತ್ರದ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಪೋಸ್ಟರ್​ ನೋಡಿದರೆ ಸಾಕು ಇದು ಕರಾವಳಿಯ ಜನಪ್ರಿಯ ಕ್ರೀಡೆ ಕಂಬಳದ ಕುರಿತು ಎಂದು ಅರ್ಥವಾಗುತ್ತದೆ. ಈ ಸಿನಿಮಾದ ಮುಹೂರ್ತ ಸಹ ಇತ್ತೀಚೆಗಷ್ಟೆ ರಿಷಭ್ ಶೆಟ್ಟಿ ಅವರ ಊರಿನಲ್ಲಿ ನೆರವೇರಿತು.


ಉಳಿದಂತೆ ಹೊಂಬಾಳೆ ಈಗಾಗಲೇ ಪುನೀತ್​ ರಾಜ್​ ಕುಮಾರ್​, ಪವನ್ ಕುಮಾರ್​ ಜತೆ ದ್ವಿತ್ವ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಜೊತೆ ರಿಚರ್ಡ್​ ಆಂಟನಿ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದೆ. ಹೊಂಬಾಳೆ ಫಿಲಂಸ್​ ನಿರ್ಮಾಣದ ಸಲಾರ್​ ಸಿನಿಮಾ ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ಶ್ರುತಿ ಹಾಸನ್ ನಟಿಸುತ್ತಿದ್ದಾರೆ. ಕೆಜಿಎಫ್​ ಚಾಪ್ಟರ್ 2 ರಿಲೀಸ್​ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ಕೊಟ್ಟಿಲ್ಲ.
Published by:Anitha E
First published: