Titanic Re-Release: ಹಳೆ ಸಿನಿಮಾ ಹೊಸ ಸ್ಪರ್ಶ! ಫೆ-10 ಕ್ಕೆ ಟೈಟಾನಿಕ್ ಮತ್ತೊಮ್ಮೆ ರಿಲೀಸ್!

ಟೈಟಾನಿಕ್ ಚಿತ್ರಕ್ಕೆ 3D-4K ಹೊಸ ಸ್ಪರ್ಶ

ಟೈಟಾನಿಕ್ ಚಿತ್ರಕ್ಕೆ 3D-4K ಹೊಸ ಸ್ಪರ್ಶ

ಟೈಟಾನಿಕ್ ಸಿನಿಮಾ ನಿಜಕ್ಕೂ ಅತ್ಯದ್ಭುತ ಚಿತ್ರ. ಮತ್ತೆ ಮತ್ತೆ ನೋಡಬೇಕೆನ್ನುವ ಗುಣವನ್ನು ಈ ಚಿತ್ರ ಹೊಂದಿದೆ. ಜೇಮ್ಸ್ ಕ್ಯಾಮರೂನ್ ಆ ಒಂದು ಸೆಳೆತವನ್ನು ಈ ಚಿತ್ರದಲ್ಲಿ ಇಟ್ಟಿದ್ದಾರೆ.

  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಹಾಲಿವುಡ್​​ನಲ್ಲಿ ಆ (Hollywood Movie) ಕಾಲದಿಂದಲೂ ಅದ್ಭುತ ಸಿನಿಮಾಗಳು ಬರುತ್ತಿವೆ. ವಿಶ್ವ ಸಿನಿಮಾಗಳಿಗೆ ಸ್ಫೂರ್ತಿ ಕೂಡ ಆಗುತ್ತಿದೆ. ಭಾರತದ ಪ್ರತಿಯೊಬ್ಬ ಸಿನಿಮಾ ಪ್ರೇಮಿಗೂ ಹಾಲಿವುಡ್ ಸಿನಿಮಾದ ಬಗ್ಗೆ ಒಂದು ಮೋಹ (Titanic Movie) ಇದ್ದೇ ಇದೆ. ಹಾಲಿವುಡ್ ಚಿತ್ರಗಳು ಅಂದರೆ ಇದೇ ರೀತಿ ಎನ್ನುವ ಭರವಸೆ ಇದೆ. ಅದೇ ಭರವಸೆಯೊಂದಿಗೆ 25 ವರ್ಷದ ಹಿಂದೆ ಬಂದಿದ್ದ ಟೈಟಾನಿಕ್ (Titanic Film) ಸಿನಿಮಾ ಈಗಲೂ ಹಲವು ಕಾರಣಗಳಿಂದ ಎಲ್ಲರನ್ನೂ ಕಾಡುತ್ತದೆ. ವಿಶ್ವದ ಸಿನಿಮಾ ಆಗಿ ಎಲ್ಲರಲ್ಲೂ ಒಂದು ಸೆಳೆತ ಉಳಿಸಿ ಬಿಟ್ಟಿದೆ. 1997 ರಲ್ಲಿ ರಿಲೀಸ್ ಆದ ಟೈಟಾನಿಕ್ (Titanic Movie Complets 25 Years) ಸಿನಿಮಾ 25 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಈಗ ಇದೇ ಚಿತ್ರ ಮತ್ತೆ ರಿಲೀಸ್ ಆಗುತ್ತಿದೆ.


ಹಳೆ ಕಥೆ ಹಳೆ ಸೆಳೆತ-ಹೊಸ ರೂಪದಲ್ಲಿ ಬರ್ತಿದೆ ಟೈಟಾನಿಕ್
ಹಾಲಿವುಡ್​ನ ಟೈಟಾನಿಕ್ ಸಿನಿಮಾ ದುರಂತ ಅಂತ್ಯದ ಚಿತ್ರ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಇದರ ಸೆಳೆತ ಮಾತ್ರ ಇನ್ನೂ ಇದೆ. ಟೈಟಾನಿಕ್ ಮುಳುಗಿದ ಅಸಲಿ ಕಥೆಯನ್ನೆ ಡೈರೆಕ್ಟರ್ ಜೇಮ್ಸ್ ಕಾಮರೂನ್ ಬೆಳ್ಳಿ ತೆರೆ ಮೇಲೆ ತಂದಿದ್ದರು. ಈ ಚಿತ್ರದಲ್ಲಿ ಒಂದು ಅದ್ಭುತ ಲವ್ ಸ್ಟೋರಿಯನ್ನು ಇಟ್ಟಿದ್ದರು.


Hollywood Titanic Movie Re Release on Feb-10 This Year
ಫೆಬ್ರವರಿ-10 ರಂದು ಟೈಟಾನಿಕ್ ಸಿನಿಮಾ ರಿಲೀಸ್


ಚಿತ್ರದ ಜಾಕ್ ಮತ್ತು ರೋಸ್ ಪಾತ್ರಧಾರಿಗಳು ಈಗಲೂ ಕಾಡುತ್ತವೆ. ಲವ್ ಸ್ಟೋರಿಗೆ ಒಂದು ರೀತಿ ಈ ಪಾತ್ರಗಳು ಸ್ಪೂರ್ತಿನೂ ಆಗಿವೆ. ಇದೇ ಪಾತ್ರಗಳು ಕನ್ನಡದ ಹಾಸ್ಯ ಸ್ಕಿಟ್​ಗಳಿಗೆ ಸ್ಪೂರ್ತಿ ಕೂಡ ಆಗಿವೆ.




ಟೈಟಾನಿಕ್ ಚಿತ್ರಕ್ಕೆ 3D-4K ಹೊಸ ಸ್ಪರ್ಶ
ಟೈಟಾನಿಕ್ ಸಿನಿಮಾದಲ್ಲಿ ಜಾಕ್ ಪಾತ್ರವನ್ನ ಲಿಯೊನಾರ್ಡೋ ಡಿಕಾಪ್ರಿಯೋ ನಿರ್ವಹಿಸಿದ್ದರು. ರೋಸ್ ರೋಲ್​ನಲ್ಲಿ ಕೇಟ್ ವಿನ್ಸ್ಲೆಟ್ ಅಭಿನಯಿಸಿದ್ದರು. ಇವರ ಪೇಮ ಕಥೆಯ ಪ್ರತಿ ಸೀನ್ ಅದ್ಬುತವಾಗಿಯೇ ಮೂಡಿ ಬಂದಿದೆ.


ಟೈಟಾನಿಕ್ ಚಿತ್ರ ನೈಜವಾದ ಕಥೆಯನ್ನೆ ಆಧರಿಸಿತ್ತು. ಆ ಕಥೆಗೆ ಡೈರೆಕ್ಟರ್ ಜೇಮ್ಸ್ ಕಾಮರೂನ್ ಸಿನಿಮ್ಯಾಟಿಕ್ ಟಚ್ ಕೊಟ್ಟಿದ್ದರು. 111 ವರ್ಷಗಳ ಹಿಂದೆ ಮುಳುಗಿದ್ದ ಟೈಟಾನಿಕ್ ಹಡಗಿನ ಕಥೆಯನ್ನೆ ಜೇಮ್ಸ್ ಕಾಮರೂನ್ ಇಲ್ಲಿ ಸಿನಿಮಾ ಮಾಡಿ ಗೆದಿದ್ದಾರೆ.


ಫೆಬ್ರವರಿ-10 ರಂದು ಟೈಟಾನಿಕ್ ಸಿನಿಮಾ ರಿಲೀಸ್
ಟೈಟಾನಿಕ್ ಚಿತ್ರಕ್ಕೆ ಹೊಸ ಸ್ಪರ್ಶ ಬಂದಿದೆ. 3D ಮತ್ತು 4K ಸ್ಪರ್ಶವೂ ಇದಕ್ಕೆ ಬಂದಿದೆ. ಇದನ್ನ ಮತ್ತೆ ರಿಲೀಸ್ ಮಾಡಬೇಕು ಅನ್ನೋದು ಈ ಹಿಂದಿಯೇ ನಿರ್ಧಾರ ಆಗಿತ್ತು. ಟೈಟಾನಿಕ್ ಸಿನಿಮಾಕ್ಕೆ ಸಾವಿಲ್ಲ ಅನ್ನೋದು ಗೊತ್ತೇ ಇದೆ. ಇದನ್ನ ತಿಳಿದಿರೋ ಡೈರೆಕ್ಟರ್ ಜೇಮ್ಸ್ ಕಾಮರೂನ್, ಚಿತ್ರ ತೆರೆ ಕಂಡು 25 ವರ್ಷ ಆಗಿರೋ ಹಿನ್ನೆಲೆಯಲ್ಲಿ ರಿ ರಿಲೀಸ್ ಮಾಡುವ ನಿರ್ಧಾರ ಮಾಡಿದ್ದರು. ಆ ನಿರ್ಧಾರ ಈಗ ಕಾರ್ಯರೂಪಕ್ಕೆ ಬರುತ್ತಿದೆ.


Hollywood Titanic Movie Re Release on Feb-10 This Year
25 ವರ್ಷ ಪೂರೈಸಿರೋ ಟೈಟಾನಿಕ್ ಫೆ-10 ಕ್ಕೆ ಮತ್ತೆ ರಿಲೀಸ್!


ಇದೇ ತಿಂಗಳ 10 ರಂದು ಟೈಟಾನಿಕ್ ಚಿತ್ರ 3D ಮತ್ತು 4K ಎಫೆಕ್ಟ್​ನೊಂದಿಗೆ ಮತ್ತೊಮ್ಮೆ ರಿಲೀಸ್ ಆಗುತ್ತಿದೆ. ಈ ಚಿತ್ರ ಮೊದಲ ಬಾರಿಗೆ ರಿಲೀಸ್ ಆಗಿದ್ದ ಸಮಯದಲ್ಲಿ ಚಿಕ್ಕಮಕ್ಕಳಾಗಿದ್ದವರು ಈಗ ಈ ಚಿತ್ರವನ್ನ ನೋಡಬಹುದಾಗಿದೆ.


ಟೈಟಾನಿಕ್ ಸಿನಿಮಾ ನಿಜಕ್ಕೂ ಅತ್ಯದ್ಭುತ ಚಿತ್ರವೇ ಆಗಿದೆ. ಮತ್ತೆ ಮತ್ತೆ ನೋಡಬೇಕೆನ್ನು ಗುಣವನ್ನು ಈ ಚಿತ್ರ ಹೊಂದಿದೆ. ಜೇಮ್ಸ್ ಕಾಮರೂನ್ ಆ ಒಂದು ಸೆಳೆತವನ್ನ ಈ ಚಿತ್ರದಲ್ಲಿ ಇಟ್ಟಿದ್ದಾರೆ.


ಇದನ್ನೂ ಓದಿ: Rocking Star Yash: ಬೆಳ್ಳಂಬೆಳಗ್ಗೆ ಅಭಿಮಾನಿಗಳನ್ನು ಭೇಟಿ ಮಾಡಿದ ಯಶ್! ಶೀಘ್ರ ಸಿನಿಮಾ ಅನೌನ್ಸ್ ಮಾಡ್ತೀನಿ ಎಂದ ರಾಕಿ ಭಾಯ್


ಇದರ ಫಲ 25 ವರ್ಷ ಆದರೂ ಕೂಡ ಟೈಟಾನಿಕ್ ಚಿತ್ರ ತನ್ನ ಸೆಳೆತವನ್ನ ಉಳಿಸಿಕೊಂಡಿದೆ. ಇನ್ನು ಈ ಚಿತ್ರಕ್ಕೆ ಹೊಸ ಸ್ಪರ್ಶ ಬಂದಿದೆ ಅಂದ್ರೆ ಅಲ್ಲಿ ಇನ್ನೂ ಒಂದು ಕುತೂಹಲ ಇದ್ದೇ ಇರುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು