Harry Styles: ನಾನು ಏನು ಮಾಡುತ್ತಿದ್ದೆನೆಂದು ನನಗೆ ಯಾವ ಐಡಿಯಾ ಕೂಡ ಇಲ್ಲ ಎಂದ ಖ್ಯಾತ ಸಿನಿಮಾ ನಟ!

ಇಟಲಿಯ ವೆನಿಸ್‌ನಲ್ಲಿ ಸೋಮವಾರ, ಸೆಪ್ಟೆಂಬರ್ 5, 2022 ರಂದು ವೆನಿಸ್ ಚಲನಚಿತ್ರೋತ್ಸವದ 79 ನೇ ಆವೃತ್ತಿ ನಡೆಯಿತು. ಆ ಸಂದರ್ಭದಲ್ಲಿ 'ಡೋಂಟ್ ವರಿ ಡಾರ್ಲಿಂಗ್' ಚಲನಚಿತ್ರದ ನಟ ಮತ್ತು ಪಾಪ್‌ ತಾರೆ ಆಗಿರುವ ಹ್ಯಾರಿ ಸ್ಟೈಲ್‌ ಅವರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ನಟನೆಯ ಕುರಿತು “ನಾನು ಏನು ಮಾಡುತ್ತಿದ್ದೇನೆಂದು ನನಗೆ ಯಾವ ಐಡಿಯಾ ಕೂಡ ಇಲ್ಲ” ಎಂದು ಹೇಳಿದರು.

ಹ್ಯಾರಿ ಸ್ಟೈಲ್ಸ್‌

ಹ್ಯಾರಿ ಸ್ಟೈಲ್ಸ್‌

  • Share this:
ಹಾಲಿವುಡ್‌ (Hollywood) ಖ್ಯಾತಿಯ ನಿರ್ದೇಶಕ ಕ್ರಿಸ್ಟೋಫರ್ ನೋಲನ್‌ ಅವರ 'ಡನ್‌ಕಿರ್ಕ್‌' ಎಂಬ ಯುದ್ದ ಸಿನಿಮಾದಿಂದ ಈಗ ಮೂಡಿ ಬರುತ್ತಿರುವ ʼಡೋಂಟ್ ವರಿ ಡಾರ್ಲಿಂಗ್ʼ (Don't worry darling) ಮತ್ತು ʼಮೈ ಪೋಲೀಸ್‌ ಮ್ಯಾನ್‌ʼ ಚಲನಚಿತ್ರಗಳಲ್ಲಿ ಹಾಲಿವುಡ್‌ನ ಪ್ರಸಿದ್ಧ ನಟ ಹ್ಯಾರಿ ಸ್ಟೈಲ್ಸ್ (Harry Styles) ಅವರ ನಟನೆ ಹೊಸಬರಿಗೆ ಸ್ಪೂರ್ತಿದಾಯಕವಾಗಿದೆ. ಇಟಲಿಯ (Italy) ವೆನಿಸ್‌ನಲ್ಲಿ ಸೋಮವಾರ, ಸೆಪ್ಟೆಂಬರ್ 5, 2022 ರಂದು ವೆನಿಸ್ ಚಲನಚಿತ್ರೋತ್ಸವದ 79ನೇ ಆವೃತ್ತಿ ನಡೆಯಿತು. ಆ ಸಂದರ್ಭದಲ್ಲಿ 'ಡೋಂಟ್ ವರಿ ಡಾರ್ಲಿಂಗ್' ಚಲನಚಿತ್ರದ ನಟ ಮತ್ತು ಪಾಪ್‌ ತಾರೆ (Pop star) ಆಗಿರುವ ಹ್ಯಾರಿ ಸ್ಟೈಲ್‌ ಅವರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ನಟನೆಯ ಕುರಿತು “ನಾನು ಏನು ಮಾಡುತ್ತಿದ್ದೇನೆಂದು ನನಗೆ ಯಾವ ಐಡಿಯಾ ಕೂಡ ಇಲ್ಲ” ಎಂದು ಹೇಳಿದರು.

 ವಿಜೃಂಭಣೆಯಿಂದ ತೆರೆ ಮೇಲೆ ಕಾಣಿಸಿಕೊಂಡ 'ಡೋಂಟ್ ವರಿ ಡಾರ್ಲಿಂಗ್' ಪ್ರೀಮಿಯರ್‌ ಶೋ
ʼಡೋಂಟ್ ವರಿ ಡಾರ್ಲಿಂಗ್ʼ ಚಲನಚಿತ್ರದ ಮೊದಲ ಪ್ರೀಮಿಯರ್‌ ಶೋ ಸೋಮವಾರ ರಾತ್ರಿ ಲೀಡೋನಲ್ಲಿ ವಿಜೃಂಭಣೆಯಿಂದ ತೆರೆ ಮೇಲೆ ಕಾಣಿಸಿಕೊಂಡಿದೆ. ಈ ಪ್ರೀಮಿಯರ್‌ ಶೋ ಒಂದು ರೀತಿಯ ಉತ್ಸವದಂತೆ ಇತ್ತು. ʼಡೋಂಟ್‌ ವರಿ ಡಾರ್ಲಿಂಗ್‌ʼ ಚಲನಚಿತ್ರದ ಮೊದಲ ಶೋ ಗೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ, ಹ್ಯಾರಿ ಸ್ಟೈಲ್ಸ್ ಅವರ ಅಭಿಮಾನಿಗಳು “ಅವರ ವೃತ್ತಿಜೀವನ ಮತ್ತು ನಿರ್ದೇಶಕ ಒಲಿವಿಯಾ ವೈಲ್ಡ್ ಅವರೊಂದಿಗೆ ಮತ್ತೆ ಕೆಲಸ ಮಾಡುತ್ತೀರಾ ಅಥವಾ ಇಲ್ಲವೇ” ಎಂಬ ಅನೇಕ ಪ್ರಶ್ನೆಗಳನ್ನು ಕೇಳಿದರು. ಆದರೆ ಹ್ಯಾರಿ ಸ್ಟೈಲ್ಸ್‌ ಅಭಿಮಾನಿಗಳ ಯಾವ ಪ್ರಶ್ನೆಗಳಿಗೂ ಉತ್ತರ ನೀಡಲಿಲ್ಲ.

ಇದನ್ನೂ ಓದಿ: Samantha: ಸಮಂತಾ ಆರೋಗ್ಯದ ಬಗ್ಗೆ ಗಾಸಿಪ್! ವದಂತಿ ಹಬ್ಬಿಸಿದವರ ಮೇಲೆ ಬೀಳುತ್ತೆ ಕೇಸ್!

ಈ ಬಗ್ಗೆ ಖ್ಯಾತ ನಟ ಹ್ಯಾರಿ ಸ್ಟೈಲ್‌ ಏನು ಹೇಳಿದ್ರು?
"ಈ ಜಗತ್ತು ಯಾರ ಸ್ವಂತದ್ದು ಅಲ್ಲವೇ ಅಲ್ಲ. ಆದ್ದರಿಂದ ಇಲ್ಲಿ ಯಾವುದೇ ಆಟವನ್ನು ಬಹಳ ವಿನೋದದಿಂದ ಆಡಬಹುದು. ಈ ಪ್ರಪಂಚವು ತುಂಬಾ ಪರಿಪೂರ್ಣವಾಗಿದೆ. ಈ ಜಗತ್ತಿನಲ್ಲಿ ನಟನೆ ಮಾಡುವುದು ಅತ್ಯಂತ ಖುಷಿಯ ವಿಚಾರ ಆಗಿದೆ. ನಾನೇನು ಹೆಚ್ಚು ನಟನೆ ಮಾಡಿಲ್ಲ” ಎಂದು ಹಾಲಿವುಡ್‌ನ ಖ್ಯಾತ ನಟ ಹ್ಯಾರಿ ಸ್ಟೈಲ್‌ ಹೇಳಿದರು.

ವೆನಿಸ್‌ನಲ್ಲಿ ಪ್ರದರ್ಶನ ಕಾಣುತ್ತಿರುವ ʼಡೋಂಟ್ ವರಿ ಡಾರ್ಲಿಂಗ್ʼ ಮೊದಲ ಶೋ ಸಲುವಾಗಿ ಹ್ಯಾರಿ ಸ್ಟೈಲ್ಸ್‌ ಅವರು ತಮ್ಮ ಸಂಗೀತ ಪ್ರದರ್ಶನವಾದ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಪ್ರದರ್ಶನಗಳಿಂದ ಹಲವಾರು ದಿನಗಳ ಕಾಲ ರಜೆ ತೆಗೆದುಕೊಂಡಿದ್ದಾರೆ. ಇವರು ನಟನೆ ಮತ್ತು ಸಂಗೀತ ಎರಡು ಕ್ಷೇತ್ರಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.

ಸಂಗೀತ ಬರೀ ವೈಯಕ್ತಿಕ ಸಂತೋಷಕ್ಕಾಗಿ ಅಷ್ಟೆ
"ವೈಯಕ್ತಿಕವಾಗಿ ಹೇಳುವುದಾದರೆ ಸಂಗೀತ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿರುವುದು ನನ್ನ ವೈಯಕ್ತಿಕ ಸಂತೋಷಕ್ಕಾಗಿ ಅಷ್ಟೆ. ನನ್ನಲ್ಲಿ ನಟನೆಯ ಅಂಶಗಳು ಕೂಡ ಇವೆ. ನಟನೆಯು ನನ್ನ ಪ್ರವೃತ್ತಿ ಆಗಿದೆ. ನಟಿಸುವುದರಲ್ಲಿ ನಾನು ಹೆಚ್ಚು ಸಂತೋಷವನ್ನು ಪಡೆಯುತ್ತೇನೆ. ಅದು ನನಗೆ ಅತ್ಯಂತ ಮೋಜಿನ ಸಂಗತಿ ಆಗಿದೆ” ಎಂದು ಸ್ಟೈಲ್ಸ್‌ ಹೇಳಿದರು.

ಇದನ್ನೂ ಓದಿ:  Rashmika Mandanna Goodbye: ಅಮಿತಾಭ್​, ರಶ್ಮಿಕಾ ನಡುವೆ ಫ್ಯಾಮಿಲಿ ಫೈಟ್​! ಗುಡ್​ ಬೈ ಚಿತ್ರದ ಟ್ರೈಲರ್​ ಔಟ್​!

"ನಾವು ಏನು ಕೆಲಸ ಮಾಡುತ್ತಿದ್ದೇವೆ ಎಂದು ನಮಗೆ ತಿಳಿದಿಲ್ಲ ಎಂದರೆ ಅದು ಅತ್ಯಂತ ಮೋಜಿನ ಸಂಗತಿ ಆಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ನಾನು ಹೆಚ್ಚು ಕಾಲ ಸಂಗೀತ ಕ್ಷೇತ್ರಕ್ಕೆ ದುಡಿದಿರಬಹುದು ಆದರೆ ನಾನು ನಟನೆಯನ್ನು ಹೆಚ್ಚು ಇಷ್ಟಪಡುತ್ತೇನೆ. ಆದರೆ ನಾನು ನಟನೆಯಲ್ಲಿ ಏನು ಮಾಡುತ್ತಿದ್ದೇನೆ ಎಂದು ನನಗೆ ತಿಳಿದಿಲ್ಲ” ಎಂದು ಹೇಳಿದರು.

ಅಮೇರಿಕನ್ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರ
ಡೋಂಟ್ ವರಿ ಡಾರ್ಲಿಂಗ್ ಮುಂಬರುವ ಅಮೇರಿಕನ್ ಸೈಕಲಾಜಿಕಲ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಒಲಿವಿಯಾ ವೈಲ್ಡ್ ಅವರು ನಿರ್ದೇಶಿಸಿರುವ ಕೇಟೀ ಸಿಲ್ಬರ್‌ಮನ್ ಅವರು ಚಿತ್ರಕಥೆ ಬರೆದಿದ್ದಾರೆ. ಇದು ಕ್ಯಾರಿ ವ್ಯಾನ್ ಡೈಕ್, ಶೇನ್ ವ್ಯಾನ್ ಡೈಕ್ ಮತ್ತು ಸಿಲ್ಬರ್‌ಮ್ಯಾನ್ ಅವರ ಕಥೆಯನ್ನು ಆಧರಿಸಿದೆ. ಚಲನಚಿತ್ರದಲ್ಲಿ ಫ್ಲಾರೆನ್ಸ್ ಪಗ್ ಮತ್ತು ಹ್ಯಾರಿ ಸ್ಟೈಲ್ಸ್ ಅವರು ಸುಂದರ ಜೋಡಿಯಾಗಿ ನಟಿಸಿದ್ದಾರೆ. ಗೆಮ್ಮಾ ಚಾನ್, ಕಿಕಿ ಲೇನ್, ನಿಕ್ ಕ್ರೋಲ್, ಕ್ರಿಸ್ ಪೈನ್ ಮತ್ತು ವೈಲ್ಡ್ ಸಹ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Published by:Ashwini Prabhu
First published: