ಮಾರ್ವೆಲ್ ಮತ್ತು ಡಿ.ಸಿ ಎರಡೂ ಸಿನಿಮಾ ಸಂಸ್ಥೆಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ 11 ಹಾಲಿವುಡ್​​ ಸೂಪರ್​​ಹೀರೋಸ್​​​ ಇವರೇ..

ಕಾಲ್​ ಎಲ್ ಅಥವಾ ಸೂಪರ್ ಮ್ಯಾನ್​​ನಲ್ಲಿ ಕ್ರೋವ್ ಪಾತ್ರ ನಿರ್ವಹಿಸಿದ್ದು, ಜ್ಯಾಕ್ ಸ್ನೈಡರ್ ಅವರ ಜಸ್ಟೀಸ್​ ಲೀಗ್​ನಲ್ಲೂ ನಟಿಸಿದ್ದರು. ಆದ್ದರಿಂದ ಕ್ರೋವ್​​ ಎಮ್​ಸಿಯು ಸೇರಿದ ಗೌರವದ ಹಿನ್ನೆಲೆಯಲ್ಲಿ ಮಾರ್ವೆಲ್ ಮತ್ತು ಡಿ ಸಿ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಮಾಡಿದ ಇನ್ನಿತರ ಕಲಾವಿದರ ಸಣ್ಣ ಪರಿಚಯ ಇಲ್ಲಿದೆ.

ಹಾಲಿವುಡ್​​ ಸೂಪರ್​​ಹೀರೋಸ್​​​

ಹಾಲಿವುಡ್​​ ಸೂಪರ್​​ಹೀರೋಸ್​​​

  • Share this:
2022 ರ ಬಹು ನಿರೀಕ್ಷಿತ ಥೋರ್: ಲವ್ ಅಂಡ್​ ಥಂಡರ್​​ ಸಿನಿಮಾಗೆ ನಟ ರಸೆಲ್ ಕ್ರೋವ್ ಸೇರ್ಪಡೆಯಾಗಿರೋದು ಸೂಪರ್​ಹೀರೋಸ್ ಅಭಿಮಾನಿಗಳಲ್ಲಿ ಸಂತಸ ಹೆಚ್ಚಿಸಿದೆ. ಮಾರ್ವೆಲ್​ ಹೀರೋಗೆ ಇದು 4ನೇ ಸೋಲೋ ಮೂವಿಯಾಗಿದ್ದು, ಥೋರ್​: ಲವ್ ಅಂಡ್​ ಥಂಡರ್​​ ಸಿನಿಮಾ ಟೈಕಾ ವಾಟಿಟಿ ಅವರ ನಿರ್ದೇಶನವನ್ನು ಒಳಗೊಂಡಿದೆ. ಕ್ರಿಸ್​ ಹರ್ಮಸ್​ವರ್ತ್, ನಟಾಲಿಯಾ ಪೋರ್ಟ್​ಮ್ಯಾನ್ , ಕ್ರಿಸ್ ಪ್ರ್ಯಾಟ್ ಮತ್ತು ಕ್ರಿಸ್ಟಿಯಾನ್ ಬೇಲ್ ಪ್ರಮುಖ ಪಾತ್ರ ನಿರ್ವಹಣೆ ಮಾಡಿದ್ದಾರೆ. ಮ್ಯಾಟ್ ಡ್ಯಾಮೋನ್, ಮೆಲಿಸ್ಸಾ ಮೆಕಾರ್ಥಿ ಮತ್ತು ಲ್ಯೂಕ್​ ಹೆಮ್ಸ್​ವರ್ತ್ ಕ್ಯಾಮಿಯೋ ಅಪಿಯರೆನ್ಸ್ ಮಾಡಿದ್ದಾರೆ.

ಕ್ರೋವ್​ ಪಾತ್ರ ಏನಾಗಿರುತ್ತದೆ? ಅದು ಹೇಗಿರಲಿದೆ? ಎನ್ನುವುದನ್ನು ಇಲ್ಲಿ ತನಕ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೆ ಅದು ಎಲ್ಲರ ನೆನಪಿನಲ್ಲಿ ಉಳಿಯುವಂತಹ ಅದ್ಭುತ ಪಾತ್ರವಾಗಿರುತ್ತದೆ ಅನ್ನುವುದು ಎಲ್ಲರ ನಿರೀಕ್ಷೆಯಾಗಿದೆ. ಥೋರ್: ರಾಗ್ನಾರ್ಕ್​ ದಾಖಲೆಯೆ ಇಲ್ಲಿ ಸ್ಮರಣೀಯ.

ಕಾಲ್​ ಎಲ್ ಅಥವಾ ಸೂಪರ್ ಮ್ಯಾನ್​​ನಲ್ಲಿ ಕ್ರೋವ್ ಪಾತ್ರ ನಿರ್ವಹಿಸಿದ್ದು, ಜ್ಯಾಕ್ ಸ್ನೈಡರ್ ಅವರ ಜಸ್ಟೀಸ್​ ಲೀಗ್​ನಲ್ಲೂ ನಟಿಸಿದ್ದರು. ಆದ್ದರಿಂದ ಕ್ರೋವ್​​ ಎಮ್​ಸಿಯು ಸೇರಿದ ಗೌರವದ ಹಿನ್ನೆಲೆಯಲ್ಲಿ ಮಾರ್ವೆಲ್ ಮತ್ತು ಡಿ ಸಿ ಸಿನಿಮಾಗಳಲ್ಲಿ ನೆನಪಿನಲ್ಲಿ ಉಳಿಯುವಂತಹ ಪಾತ್ರಗಳನ್ನು ಮಾಡಿದ ಇನ್ನಿತರ ಕಲಾವಿದರ ಸಣ್ಣ ಪರಿಚಯ ಇಲ್ಲಿದೆ.

ಕ್ರಿಸ್ಟಿಯಾನ್ ಬೇಲ್

ಕ್ರಿಸ್ಟಿಯಾನ್​ ಬೇಲ್ ಥೋರ್ : ಲವ್ ಅಂಡ್​ ಥಂಡರ್​ನಲ್ಲಿ ವಿಲನ್ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೂ ಕ್ರಿಸ್ಟೋಫರ್ ನೋಲನ್​ರ 'ದಿ ಡಾರ್ಕ್​ ನೈಟ್'​ ಟ್ರೈಲಾಜಿಯಲ್ಲಿ ಬ್ರೂಸ್​ವೇನ್​​ ಅಥವಾ ಬ್ಯಾಟ್ಸ್​ಮನ್ ಆಗಿ ಗಮನ ಸೆಳೆದಿದ್ದರು.​ 'ನೀನೊಬ್ಬ ನಾಯಕನಾಗಿ ಸಾಯುವೆ. ಇಲ್ಲ ನೀನೊಬ್ಬ ಖಳನಾಯಕನಾಗುವುದನ್ನು ನೋಡುವೆ' ಎನ್ನುವ ಮಾತು ಬೇಲ್​ಗೆ ಹೊಂದುತ್ತದೆ.

ರಿಯಾನ್ ರೆನಾಲ್ಡ್ಸ್

ರಿಯಾನ್​ ರೆನಾಲ್ಡ್ 2011 ರ ಡಿಸಿಯಲ್ಲಿ ಗ್ರೀನ್ ಲ್ಯಾಂಟರ್ನ್ ಪಾತ್ರ ನಿರ್ವಹಣೆಯ ತಮ್ಮ ನಿರ್ಧಾರದ ಬಗ್ಗೆ ಪ್ರತಿಬಾರಿ ತಮಾಷೆ ಮಾಡುತ್ತಿದ್ದರು. ಫೌಲ್​ ಮೌತ್​ ಮಾರ್ವೆಲ್, ಡೆಡ್​ಪೂಲ್​ ಪಾತ್ರ, ಡೆಡ್​​ಪೂಲ್​2 ರ ಎಕ್ಸ್​ ಮೆನ್ಸ್​ ಫ್ರ್ಯಾಂಚೈಸಿಯಾಗಿದ್ದು, ರೆನಾಲ್ಡ್ ಡಿ.ಸಿ ಗಿಂತಲೂ ಮಾರ್ವೆಲ್​ನ ಹೀರೋ ಆಗಲು ಬಹಳ ಖುಷಿಪಡುತ್ತಾರೆ.

ಟಾಮ್​ ಹಾರ್ಡಿ

'ದಿ ಡಾರ್ಕ್​ ನೈಟ್​ ರೈಸಸ್' (2012)​ ನಲ್ಲಿ ಟಾಮ್​ ಹಾರ್ಡಿ ಮಾಸ್ಕ್​​​ ಧರಿಸಿದ ವಿಲನ್​ ಪಾತ್ರ ನಿರ್ವಹಿಸಿದರು. ಮಾರ್ವೆಲ್​ನಲ್ಲಿ ಆ್ಯಂಟಿ ಹೀರೋ ಪಾತ್ರ ನಿರ್ವಹಿಸಿದರು. 2018 ಸೋನಿ ಫಿಲಂನ ಎಡಿ ಬ್ರೋಕ್, ಏಲಿಯನ್​ ಪಾತ್ರ ಮತ್ತು ಸ್ಪ್ಲಿಟ್​ ಪರ್ಸನಾಲಿಟಿಯ ಪಾತ್ರಗಳು ಯಶಸ್ವಿಯಾಗಿ ಎಲ್ಲರನ್ನು ಗೆದ್ದಿವೆ. ಡಿಸಿಯಲ್ಲಿ ಅಭಿನಯಿಸುವುದಕ್ಕೂ ಮುನ್ನ ಥೋರ್​: ದಿ ಡಾರ್ಕ್​ ವರ್ಲ್ಡ್​ ನಲ್ಲಿ ಸ್ನೇಹಿತನ ಪಾತ್ರ ನಿರ್ವಹಿಸಿದ್ದರು. ಆದರೆ ಥೋರ್​2 ನಲ್ಲಿ ಅವರ ಪಾತ್ರ ಸ್ವಲ್ಪವೇ ಇತ್ತು.

ಹ್ಯಾಲಿ ಬೆರ್ರಿ

54 ವರ್ಷದ ಅಮೆರಿಕದ ನಟಿ ಹ್ಯಾಲಿಯ ಎಕ್ಸ್​ ಮೆನ್ ಸೀರಿಸ್​ಗಳು ಯಶಸ್ಸಿನ ಉತ್ತುಂಗಕ್ಕೆ ಏರಿಸಿದವು. ಎಕ್ಸ್​ ಮೆನ್ (2000)​ ಮತ್ತು ಎಕ್ಸ್​2: ಎಕ್ಸ್​ ಮೆನ್ ಯುನೈಟೈಡ್(2003) ಆ ನಂತರ ಡಿ.ಸಿ ಯುನಿವರ್ಸ್​ನಲ್ಲಿ ಕ್ಯಾಟ್​ ವುಮನ್(2004) ​ ಪಾತ್ರ ನಿರ್ವಹಿಸಿದ್ದರು. ಸಿನಿಮಾ ಸೋತ ಬಳಿಕ ಮಾರ್ವೆಲ್​ನ ತನ್ನ ಎಕ್ಸ್​ ಮೆನ್​ ರೋಲ್​ಗಳಿಗೆ ಮರಳಿದರು. ಎಕ್ಸ್​ ಮೆನ್​ : ದಿ ಲಾಸ್ಟ್ ಸ್ಟ್ಯಾಂಡ್​(2006) ನಲ್ಲಿ ಹ್ಯಾಲಿಬೆರ್ರಿ ಸ್ಟಾರ್ಮ್ ಪಾತ್ರ ನಿರ್ವಹಿಸಿದ್ದರು.

ಬೆನ್​ ಅಫ್ಲೆಕ್​

ಬೆನ್ ಡೇರ್​ ಡೆವಿಲ್​ನಲ್ಲಿ ತಮ್ಮ ಈಗಿನ ಮಾಜಿ ಪತ್ನಿ ಜೆನಿಫರ್ ಗಾರ್ನರ್ ಜೊತೆಗೆ ಮಾರ್ವೆಲ್ ಪಾತ್ರಗಳನ್ನು ನಿರ್ವಹಿಸಿದ್ದರು. ಡೇರ್​ ಡೆವಿಲ್ ಮೀಡಿಯಂ ಹಿಟ್​ ಆಗಿತ್ತು. ಬ್ಯಾಟ್​ಮ್ಯಾನ್​ ವರ್ಸಸ್​ ಸೂಪರ್​ ಮ್ಯಾನ್​ನಲ್ಲಿ ತಮ್ಮ ಸೂಪರ್​ ಹೀರೋ ಕನಸ್ಸು ನನಸಾಗಿತ್ತು. ಡಾನ್ ಆಫ್ ಜಸ್ಟೀಸ್ (2016), ಜಸ್ಟೀಸ್​ ಲೀಗ್​ (2017) ಹಾಗೂ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾದ ಜಾಕ್​ ಸ್ನೈಡರ್​ ಅವರ ಜಸ್ಟೀಸ್​ ಲೀಗ್ ​(2021) ನಲ್ಲೂ ಅಭಿನಯಿಸಿದ್ದರು. ವಾರ್ನರ್ ಬ್ರದರ್ಸ್ ಒಪ್ಪಿದರೆ ಮತ್ತೊಮ್ಮೆ ಜಸ್ಟೀಸ್​ ಲೀಗ್​ನಲ್ಲಿ ಕಾಣಬಹುದು.

ಮೈಕೆಲ್ ಕೀಟನ್

ಡಿ.ಸಿಯ ಸೂಪರ್​​ ಹೀರೋಗಳಲ್ಲಿ ಸಖತ್​ ಇತಿಹಾಸ ಸೃಷ್ಟಿಸಿದ ಬ್ಯಾಟ್​ಮನ್ ಮತ್ತು ಬ್ಯಾಟಮನ್​ ರಿಟರ್ನ್ಸ್​​ ನಲ್ಲಿ ಡಿ.ಸಿಯ ಸೂಪರ್​ ಹೀರೋ ಕಾಣಿಸಿಕೊಂಡಿದ್ದು, ಭವಿಷ್ಯದ ನಟರ ಕನಸ್ಸಾಗಿದ್ದು ಕೀಟನ್. ಸ್ಪೈಡರ್​ ಮ್ಯಾನ್ಸ್​ ಎನಿಮಿಸ್ ​ನಲ್ಲಿ ರಣಹದ್ದುವಾಗಿ, ಪೀಟರ್ ಪಾರ್ಕರ್ಸ್​, ಸ್ಪೈಡರ್​ ಮ್ಯಾನ್​ ಹೋಂ ಕಮಿಂಗ್​ನಲ್ಲೂ ತಮ್ಮ ಚಾರ್ಮ್ ಮೂಡಿಸಿದ್ದಾರೆ.

ಜೆ ಕೆ ಸಿಮ್ಮನ್ಸ್

ಜೆ ಜೋನಾ ಜ್ಯಾಮ್ಸನ್​, ಸ್ಪೈಡರ್​ ಮ್ಯಾನ್ ಮಾರ್ವೆಲ್ ಇವು ಜೆ ಕೆ ಸಿಮ್ಮನ್ಸ್ ಯಶಸ್ಸಿನ ಹಿಂದಿನ ಗುಟ್ಟು. ಸ್ಪೈಡರ್​ ಮ್ಯಾನ್ ಫಾರ್​ ಫ್ರಮ್​ ಹೋಂ ನಲ್ಲಿ ಪಾತ್ರದ ಪುನಾರವರ್ತನೆಯಿಂದ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಜಸ್ಟೀಸ್​ ಲೀಗ್​ನಲ್ಲಿ ಕಮಿಷ್ನರ್ ಜೇಮ್ಸ್​ ಗಾರ್ಡನ್ ಇದರಲ್ಲಿ ಪ್ರೇಕ್ಷಕರ ಮನಗೆದ್ದರು.

ಡ್ಯಾನಿ ಹಸ್ಟನ್

ಎಕ್ಸ್​ ಮೆನ್‌​ ಓರಿಜಿನ್​ ವಿಲಿಯಮ್ ಸ್ಟ್ರೈಕರ್. ಡಿಸಿಇಯು ಫಿಲ್ಂ ವಂಡರ್​ ವುಮನ್ ನಲ್ಲೂ ಜರ್ಮನ್ ರಾಜಕಾರಣಿಯಾಗಿ ಮನಗೆದ್ದರು.

ಟಾವೋ ಓಕಾಮೋಟೋ

ಜಪಾನ್‌ ಮೂಲದ ನಟಿ ಮಾರಿಕೋ ಯಶಿದಾ ಪಾತ್ರ ನೋಡುಗರನ್ನು ಸೆಳೆದಿತ್ತು. ಜಪಾನ್‌ನ ಯಶಿದಾ ಕಂಪನಿಯ ಉತ್ತರಾಧಿಕಾರಿ ಜೀವ ಅಪಾಯದಲ್ಲಿದ್ದಾಗ ವೊಲ್ವೆರಿನ್ ಆಕೆಯನ್ನು ರಕ್ಷಣೆ ಮಾಡಿ ಆ ನಂತರ ಪ್ರೀತಿಗೆ ಬೀಳುವ ಪಾತ್ರವಾಗಿರುತ್ತದೆ. ಅತ್ಯಂತ ಯಶಸ್ವಿ ಸೂಪರ್​ ಹೀರೋ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ, 2016 ರ ಚಲನಚಿತ್ರ ಬ್ಯಾಟ್‌ಮ್ಯಾನ್ Vs ಸೂಪರ್‌ಮ್ಯಾನ್: ದಿ ಡಾನ್ ಆಫ್ ಜಸ್ಟೀಸ್‌ನಲ್ಲಿ ಲೆಕ್ಸ್ ಲೂಥರ್ ಅವರ ಕಾರ್ಯದರ್ಶಿಯಾಗಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು ಟಾವೋ ಓಕಾಮೋಟೋ.

ವಿಲ್ಲೆಮ್ ಡ್ಯಾಫೋ

ಕಾಮಿಕ್ ಪುಸ್ತಕಗಳ ಅಭಿಮಾನಿಗಳಿಗೆ ವಿಲ್ಲೆಮ್ ಡ್ಯಾಫೋ ಗ್ರೀನ್ ಗೋಬ್ಲಿನ್​​ ಆಗಿ ಪರಿಚಯವಿರುತ್ತದೆ. ಸ್ಪೈಡರ್​ಮ್ಯಾನ್​ ಸಿನಿಮಾಗಳಲ್ಲಿ ಕಾಣಿಸಿಕೊಂಡ ವಿಲ್ಲೆಮ್ ಡ್ಯಾಫೋ, ಡಿ ಸಿ ಯ ಅಕ್ವಾಮೆನ್ ಆಗಿ ಇತ್ತಿಚೆಗೆ ಕಾಣಿಸಿಕೊಂಡಿದ್ದರು. ಜ್ಯಾಕ್​ ಸ್ನೈಡರ್ಸ್​ ಜಸ್ಟೀಸ್​ ಲೀಗ್​ನಲ್ಲೂ ಕಾಣಿಸಿಕೊಂಡರು.
First published: