• Home
  • »
  • News
  • »
  • entertainment
  • »
  • Avatar Trailer Viral: ಹಾಲಿವುಡ್ ಅವತಾರ್ ಟ್ರೈಲರ್ ವೈರಲ್! ಒಂದೇ ದಿನಕ್ಕೆ 16 ಮಿಲಿಯನ್ ವೀವ್ಸ್

Avatar Trailer Viral: ಹಾಲಿವುಡ್ ಅವತಾರ್ ಟ್ರೈಲರ್ ವೈರಲ್! ಒಂದೇ ದಿನಕ್ಕೆ 16 ಮಿಲಿಯನ್ ವೀವ್ಸ್

ಅವತಾರ್ ಸಿನಿಮಾದ ಅವತಾರ್ ಈಗ ಬದಲು

ಅವತಾರ್ ಸಿನಿಮಾದ ಅವತಾರ್ ಈಗ ಬದಲು

ಅವತಾರ್-2 ಸಿನಿಮಾದ ಟ್ರೈಲರ್ ಜೋರಾಗಿಯೇ ಇದೆ. ನೀಲಿ ಜಗತ್ತಿನ ಅಸಲಿ ಕಥೆಯನ್ನೆ ಇದು ತೆರೆದಿಟ್ಟಂತಿದೆ. ಒಮ್ಮೆ ಇದನ್ನ ನೋಡಿದ್ರೆ, ಮತ್ತೆ ನಾವು-ನೀವು ಮತ್ತೊಮ್ಮೆ ಪಂಡೋರಾಗೆ ಹೋಗಿ ಬಂದ ಅನುಭವ ಆಗುತ್ತದೆ.

  • News18 Kannada
  • Last Updated :
  • Bangalore [Bangalore], India
  • Share this:

ಹಾಲಿವುಡ್ ಸಿನಿ ಅಂಗಳದಲ್ಲಿ ಅವತಾರ್ (Avatara Trailer Viral) ಮಾಡಿರೋ ಮೋಡಿ ಇನ್ನೂ ಇದೆ. ಈ ಚಿತ್ರದ ಕ್ರೇಜ್ ಎಂದೂ ಮುಗಿಯೋ ಹಾಗೆ ಕಾಣೋದಿಲ್ಲ. ಸುಮಾರು ವರ್ಷಗಳೇ ಕಳೆದು ಹೋಗಿವೆ. ಅವತಾರ್ ಪಾರ್ಟ್ ಒನ್ ಚಿತ್ರ ನೋಡಿ ಜನ ಇನ್ನೂ ಅದೇ ಗುಂಗಿನಲ್ಲಿಯೇ ಇದ್ದಾರೆ. ಅದರ ನಡುವೇನೆ ಅವತಾರ್ (Avatara Cinema) ಸಿನಿಮಾದ ಪಾರ್ಟ್ ಟು ಸಿನಿಮಾ ಇದೇ ಡಿಸೆಂಬರ್-16 ರಂದು ರಿಲೀಸ್ ಆಗುತ್ತಿದೆ. ಇದನ್ನ ಹೇಳಲಿಕ್ಕೆ ಡೈರೆಕ್ಟರ್ ಜೇಮ್ಸ್​ ಕಾಮೆರಾನ್ ಚಿತ್ರದ ಅಧಿಕೃತ ಟ್ರೈಲರ್ (Trailer) ಕೂಡ ಹಂಚಿಕೊಂಡಿದ್ದಾರೆ. ಹಾಗೆ ಹಂಚಿಕೊಂಡ ಅವತಾರ್ ಸಿನಿಮಾದ ಟ್ರೈಲರ್ ಈಗ ಟ್ರೆಂಡಿಂಗ್ ನಲ್ಲೂ ಓಡುತ್ತಿದೆ. ರಿಲೀಸ್ ಆಗಿರೋ ಟ್ರೈಲರ್​ಗೆ ಮಿಲಿಯನ್ ಗಟ್ಟಲೆ ವೀವ್ಸ್ ಕೂಡ ಈ ಟ್ರೈಲರ್​ಗೆ ಬಂದಿದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.


ಒಂದು ದಿನ-ಒಂದು ಟ್ರೈಲರ್-ಮಿಲಿಯನ್ ಗಟ್ಟಲೆ ವೀವ್ಸ್​


ಹಾಲಿವುಡ್​​ನಲ್ಲಿ ಅವತಾರ್ ಸಿನಿಮಾ ಮಾಡಿದ ಕಮಾಲ್ ದೊಡ್ಡಮಟ್ಟದಲ್ಲಿಯೇ ಇದೆ. ಅದು ಬಂದು ಹೆಚ್ಚು ಕಡಿಮೆ 13 ವರ್ಷಗಳೇ ಉರುಳಿ ಹೋಗಿವೆ. ಆದರೆ ಆ ಚಿತ್ರದ ಸೆಳೆತ ಕಡಿಮೆ ಆಗಿಲ್ಲ.


ಡೈರೆಕ್ಟರ್ ಜೇಮ್ಸ್ ಕ್ಯಾಮರೂನ್ ತಮ್ಮ ಕಲ್ಪನೆಯ ಈ ಚಿತ್ರವನ್ನ 2009 ರಲ್ಲಿ ಅದ್ಭುತಾಗಿಯೇ ತೆರೆಗೆ ತಂದಿದ್ದರು. ಇದನ್ನ ನೋಡಿದ ಪ್ರೇಕ್ಷಕರು ಚಕಿತಗೊಂಡಿದ್ದರು. ಅಷ್ಟೇ ಅಲ್ಲ, ಸಿನಿಮಾದ ಬಗ್ಗೆ ಎಲ್ಲೆಡೆ ಚರ್ಚೆ ಕೂಡ ಮಾಡಿದ್ದರು.


ಇದನ್ನೂ ಓದಿ: Priyanka Chopra In India: 3 ವರ್ಷಗಳ ನಂತರ ಭಾರತಕ್ಕೆ ಬಂದ ದೇಸಿ ಗರ್ಲ್! ಅಭಿಮಾನಿಗಳು ಖುಶ್


ಅವತಾರ್ ಸಿನಿಮಾದ ಅವತಾರ್ ಈಗ ಬದಲು


ಅವತಾರ್ ಸಿನಿಮಾದ ಕಥೆ ಅದ್ಭುತವಾಗಿಯೇ ಇದೆ. ಕೊನೆಯಲ್ಲಿ ಅಷ್ಟೇ ಕುತೂಹಲವನ್ನ ಕೂಡ ಉಳಿಸಿದೆ. ಹಾಗೆ 13 ವರ್ಷದ ಬಳಿಕ ಬರ್ತಿರೋ ಅವತಾರ್-2 ಚಿತ್ರದಲ್ಲಿ ಕಥೆ ಬೇರೆ ರೂಪ ಪಡೆದಿದೆ. ಅದಕ್ಕೇನೆ ಈ ಚಿತ್ರಕ್ಕೆ ಅವತಾರ್ ದಿ ವೇ ಆಫ್ ವಾಟರ್ ಅಂತಲೇ ಶೀರ್ಷಿಕೆ ಕೂಡ ಇಡಲಾಗಿದೆ.


Hollywood Avatara-2 Film Trailer Got Viral
ಒಂದೇ ದಿನಕ್ಕೆ 16 ಮಿಲಿಯನ್ ಜನರಿಂದ ಟ್ರೈಲರ್ ವೀಕ್ಷಣೆ


ಹೌದು, ಚಿತ್ರ ಪಾತ್ರಗಳ ಖದರ್ ಬೇರೆ ರೀತಿನೇ ಇದೆ. ಪಂಡೋರಾದಲ್ಲಿದ್ದ ಜನ ಈಗ ನೀರಿನಲ್ಲಿ ಯುದ್ಧ ಮಾಡೋ ಸ್ಥಿತಿಗೆ ಬಂದಿದ್ದಾರೆ. ಅಂದ್ರೆ, ಪಂಡೋರಾದಿಂದಲೇ ಜಲ ಮಾರ್ಗದ ಮೂಲಕ ಅವತಾರ್ ಪಾತ್ರಗಳು ಇಲ್ಲಿ ಸಾಗುತ್ತಿವೆಯೇನೋ ಅಂತ ಫೀಲ್ ಮಾಡಿಕೊಳ್ಳಬಹುದು.


ಅವತಾರ್-2 ಚಿತ್ರದ ಅಧಿಕೃತ ಟ್ರೈಲರ್​ ನಲ್ಲಿ ಕಥೆ ರಿವೀಲ್?


ಅವತಾರ್-2 ಸಿನಿಮಾದ ಟ್ರೈಲರ್ ಗಮನ ಸೆಳೆಯುತ್ತಿದೆ. ಇಡೀ ಚಿತ್ರದ ಪಾತ್ರಗಳೆಲ್ಲ ನೀರಿನಲ್ಲಿಯೇ ಇರೋದು ವಿಶೇಷ. ಟೈಟಲ್​ಗೂ ಇರೋ ಕಥೆಗೂ ಸೂಕ್ತ ಅನ್ನೋ ಹಾಗೇನೆ ಇದೇ ಇಡೀ ಟ್ರೈಲರ್. ಇದನ್ನ ಅಷ್ಟೇ ಕುತೂಹಲದಿಂದಲೇ ಜನ ವೀಕ್ಷಿಸುತ್ತಲೇ ಇದ್ದಾರೆ.




ಅವತಾರ್ ಸಿನಿಮಾ ಟ್ರೈಲರ್ ನವೆಂಬರ್​-02 ರಂದು ರಿಲೀಸ್ ಆಗಿದೆ. ಅಷ್ಟರಲ್ಲಿಯೇ ಇದು ಟ್ರೆಂಡಿಂಗ್​ ನಲ್ಲೂ ಓಡುತ್ತಿದೆ. ಇದನ್ನ ಗಮನಸಿದ್ರೆ ನಿಜಕ್ಕೂ ಇದು ಟಾಪ್ ಅಲ್ಲಿಯ ಓಡುವ ಟ್ರೈಲರ್ ಅಂತಲೇ ಯಾರು ಬೇಕಾದ್ರೂ ಹೇಳಬಹುದು. ಹಾಗಿದೆ ಸಿನಿಮಾದ ಈ ಟ್ರೈಲರ್


ಇದನ್ನೂ ಓದಿ: Sandalwood Queen Ramya: ಸ್ಯಾಂಡಲ್​ವುಡ್ ಕ್ವೀನ್ ರಮ್ಯಾ ಹಿಂದೆ ಬಿದ್ದ ಹಾಸ್ಟೆಲ್ ಹುಡುಗರು! ಯಾಕೆ? ಏನಾಯ್ತು?


ಒಂದೇ ದಿನಕ್ಕೆ 16 ಮಿಲಿಯನ್ ಜನರಿಂದ ಟ್ರೈಲರ್ ವೀಕ್ಷಣೆ


ಅವತಾರ್-2 ಸಿನಿಮಾದ ಟ್ರೈಲರ್ ಜೋರಾಗಿಯೇ ಇದೆ. ನೀಲಿ ಜಗತ್ತಿನ ಅಸಲಿ ಕಥೆಯನ್ನೆ ಇದು ತೆರೆದಿಟ್ಟಂತಿದೆ. ಒಮ್ಮೆ ಇದನ್ನ ನೋಡಿದ್ರೆ, ಮತ್ತೆ ನಾವು-ನೀವು ಮತ್ತೊಮ್ಮೆ ಪಂಡೋರಾಗೆ ಹೋಗಿ ಬಂದ ಅನುಭವ ಆಗುತ್ತದೆ.


ಅಷ್ಟು ಅದ್ಭುತವಾಗಿಯೇ ಬಂದಿರೋ ಅವತಾರ್-2 ಟ್ರೈಲರ್ ಜನರನ್ನ ಸೆಳೆಯುತ್ತಿದೆ. ಟ್ರೈಲರ್​ ಅನ್ನ ಒಂದೇ ದಿನಕ್ಕೆ ಈಗಾಗಲೇ 16 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ.



ಡಿಸೆಂಬರ್ 16ಕ್ಕೆ ಸಿನಿಮಾ ರಿಲೀಸ್-ಜೇಮ್ಸ್ ಕ್ಯಾಮರೂನ್
ಅವತಾರ್-2 ಸಿನಿಮಾ ಇದೇ ವರ್ಷ ರಿಲೀಸ್ ಆಗುತ್ತಿದೆ. ವರ್ಷದ ಕೊನೆಯ ತಿಂಗಳಾಗಿರೋ ಡಿಸೆಂಬರ್​-16ಕ್ಕೆ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಅವತಾರ್-1 ರಂತೆನೇ ಈ ಚಿತ್ರವೂ ಕಮಾಲ್ ಮಾಡುವಂತಿದೆ. ಚಿತ್ರದ ಟ್ರೈಲರ್ ಆ ಒಂದು ಭರವಸೆಯನ್ನ ಈಗಲೇ ಮೂಡಿಸಿದೆ.

First published: