Naya Rivera: ಬೋಟ್​ನಲ್ಲಿ ತೆರಳಿದ ಹಾಲಿವುಡ್​ ನಟಿ ನಯಾ ರಿವೇರಾ ನಾಪತ್ತೆ; ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ

ಪೊಲೀಸ್​ ಮೂಲಗಳ ಪ್ರಕಾರ ನಯಾ ನೀರಿನಲ್ಲಿ ಈಜುತ್ತಿದ್ದರಂತೆ. ಈ ವೇಳೆ ಅವರು ಮುಳುಗಿರುವ ಸಾಧ್ಯತೆ ಇದೆ. ಹೀಗಾಗಿ, ಅವರಿಗಾಗಿ ಹುಡುಕಾಟ ಮುಂದುವರಿದಿದೆ.

news18-kannada
Updated:July 9, 2020, 3:16 PM IST
Naya Rivera: ಬೋಟ್​ನಲ್ಲಿ ತೆರಳಿದ ಹಾಲಿವುಡ್​ ನಟಿ ನಯಾ ರಿವೇರಾ ನಾಪತ್ತೆ; ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಶಂಕೆ
ನಯಾ ರಿವೇರಾ
  • Share this:
ಹಾಲಿವುಡ್​ ನಟಿ ನಯಾ ರಿವೇರಾ ಕಾಣೆಯಾಗಿದ್ದು, ಅವರು ಮೃತಪಟ್ಟಿರಬದೆಂದು ಶಂಕಿಸಲಾಗಿದೆ. ಸಾಕಷ್ಟು ಹಾಲಿವುಡ್​ ಚಿತ್ರಗಳಲ್ಲಿ ಅವರು ನಟಿಸಿದ್ದು, ಗ್ಲೀ ಮ್ಯಸಿಕಲ್​ ಸಿರೀಸ್​ ಮೂಲಕ ಅವರು ಹೆಚ್ಚು ಖ್ಯಾತಿ ಪಡೆದಿದ್ದರು.

ಕ್ಯಾಲಿಫೋರ್ನಿಯಾದ ಲೇಕ್​ ಪಿರು ಜಲಾಯಶದಲ್ಲಿ ನಾಲ್ಕು ವರ್ಷದ ಮಗು ಜೋಸೆ ಜತೆ ನಯಾ ತೆರಳಿದ್ದರು. ಸದ್ಯ, ಬೋಟ್​ನಲ್ಲಿ ಜೋಸ್​ ಮಾತ್ರ ಪತ್ತೆ ಆಗಿದ್ದು, ನಯಾ ಕಾಣುತ್ತಿಲ್ಲ. ಜಲಾಯಶದಲ್ಲಿ  ಮುಳುಗಿ ಅವರು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ನಯಾ ಬೋಟ್​ ಒಂದನ್ನು ಬಾಡಿಗೆ ಪಡೆದು ಜಲಾಯಶದಲ್ಲಿ ಸಾಗಿದ್ದರು. ಆದರೆ, ಸರಿಯಾದ ಸಮಯಕ್ಕೆ ಬೋಟ್​ ಹಿಂದುರುಗಿಲ್ಲ. ಹೀಗಾಗಿ ಅನುಮಾನಗೊಂಡ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಜಲಾಯಶದ ಮಧ್ಯೆ ಬೋಟ್​ ನಿಂತಿತ್ತು. ಈ ವೇಳೆ ಮಗು ಒಂಟಿಯಾಗಿತ್ತು. ಸದ್ಯ, ಅಗ್ನಿಶಾಮಕ ದಳದ ಸಿಬ್ಬಂದಿ ನಯಾಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಪೊಲೀಸ್​ ಮೂಲಗಳ ಪ್ರಕಾರ ನಯಾ ನೀರಿನಲ್ಲಿ ಈಜುತ್ತಿದ್ದರಂತೆ. ಈ ವೇಳೆ ಅವರು ಮುಳುಗಿರುವ ಸಾಧ್ಯತೆ ಇದೆ. ಹೀಗಾಗಿ, ಅವರಿಗಾಗಿ ಹುಡುಕಾಟ ಮುಂದುವರಿದಿದೆ. 
View this post on Instagram
 

just the two of us


A post shared by Naya Rivera (@nayarivera) on


ಜುಲೈ 7ರಂದು ನಯಾ ಮಗುವಿನ ಜೊತೆ ಫೋಟೋ ಹಾಕಿದ್ದರು. ನಾವು ಇಬ್ಬರು ಮಾತ್ರ ಎನ್ನುವ ಕ್ಯಾಪ್ಶನ್​ ಕೂಡ ನೀಡಲಾಗಿತ್ತು.
Published by: Rajesh Duggumane
First published: July 9, 2020, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading