Jennifer Lopez: ಮತ್ತೆ ಒಂದಾದ ಹಳೇ ಲವರ್ಸ್​.. `ಬ್ಯಾಟ್​ಮ್ಯಾನ್​’ ಪ್ರೀತಿ ಸುಳಿಯಲ್ಲಿ ಸಿಲುಕಿದ್ದು ಹೇಗೆ ಜೆನ್ನಿಫರ್​?

ಜೆನ್ನಿಫರ್‌ ಲೋಪೆಜ್‌(Jennifer Lopez)ಅವರ ಪರಿಚಯ ಇದ್ದೇ ಇರುತ್ತದೆ. ಆಕೆ, ಹಾಲಿವುಡ್‌ನ ಪ್ರಸಿದ್ಧ ನಟಿಯಷ್ಟೇ ಅಲ್ಲದೆ, ಪ್ರಸಿದ್ಧ ಗಾಯಕಿ(Singer) ಕೂಡಾ. ಇಂಗ್ಲೀಷ್‌ ಚಿತ್ರಗಳ ಜತೆ ಅನೇಕ ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆ ಈಕೆಯ ವಾಯ್ಸ್‌(Voice)ಗೆ ಫಿದಾ ಆದವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ.

ಬೆನ್ ಅಫ್ಲೆಕ್, ಜೆನ್ನಿಫರ್‌ ಲೋಪೆಜ್‌

ಬೆನ್ ಅಫ್ಲೆಕ್, ಜೆನ್ನಿಫರ್‌ ಲೋಪೆಜ್‌

  • Share this:
ನಿಮಗೆ ಹಾಲಿವುಡ್‌(Hollywood) ಚಿತ್ರಗಳನ್ನು ನೋಡುವ ಅಭ್ಯಾಸವಿದ್ದರೆ ಜೆನ್ನಿಫರ್‌ ಲೋಪೆಜ್‌(Jennifer Lopez)ಅವರ ಪರಿಚಯ ಇದ್ದೇ ಇರುತ್ತದೆ. ಆಕೆ, ಹಾಲಿವುಡ್‌ನ ಪ್ರಸಿದ್ಧ ನಟಿಯಷ್ಟೇ ಅಲ್ಲದೆ, ಪ್ರಸಿದ್ಧ ಗಾಯಕಿ(Singer) ಕೂಡಾ. ಇಂಗ್ಲೀಷ್‌ ಚಿತ್ರಗಳ ಜತೆ ಅನೇಕ ಆಲ್ಬಂಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಟನೆಯ ಜತೆ ಈಕೆಯ ವಾಯ್ಸ್‌(Voice)ಗೆ ಫಿದಾ ಆದವರ ಸಂಖ್ಯೆಯೇನೂ ಕಡಿಮೆ ಇಲ್ಲ ಬಿಡಿ. ಈಗ ಜೆನ್ನಿಫರ್‌ ಲೋಪೆಜ್‌ ತಾನು ಡೇಟಿಂಗ್(Dating) ಮಾಡುತ್ತಿರುವವರ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಅದೂ, ಆಕೆ ಆ ವ್ಯಕ್ತಿ ಜತೆ ಒಮ್ಮೆ ಬ್ರೇಕಪ್‌(Breakup) ಆಗಿ ಈಗ ಮತ್ತೊಮ್ಮೆ ಒಂದಾಗಿ ಎರಡನೇ ಬಾರಿ ಡೇಟಿಂಗ್ ಮಾಡುತ್ತಿದ್ದಾರೆ. ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್(Ben Affleck), ಅಥವಾ ಬೆನ್ನಿಫರ್ ಎಂದೂ ಕರೆಯಲ್ಪಡುವ ಅವರು ಏಪ್ರಿಲ್ 2021ರಲ್ಲಿ ತಮ್ಮ ಪ್ರಣಯವನ್ನು ಪುನರುಜ್ಜೀವನಗೊಳಿಸಿದರು ಎಂದು ನೀವು ಹೇಳಬಹುದು. ಕಳೆದ ವರ್ಷ ಜುಲೈನಲ್ಲಿ ಜೆನ್ನಿಫರ್ ಲೋಪೆಜ್‌ ಅವರ ಜನ್ಮದಿನದಂದು ದಂಪತಿಗಳು ತಮ್ಮ ಸಂಬಂಧವನ್ನು ಮತ್ತೊಮ್ಮೆ ಅಂದರೆ ಎರಡನೇ ಬಾರಿ ಅಧಿಕೃತಗೊಳಿಸಿದರು.

2002ರಲ್ಲಿ ಬ್ರೇಕಪ್​, 2022 ಮತ್ತೆ ಒಂದಾದ್ರು!

ಹೌದು, ಜೆನ್ನಿಫರ್ ಮತ್ತು ಬೆನ್ ಈ ಹಿಂದೆ 2002ರಲ್ಲಿ ಎಂಗೇಜ್‌ಮೆಂಟ್‌ ಮಾಡಿಕೊಂಡರು, ಆದರೆ ನಂತರ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ ಬೇರೆಯಾದರು. ಆದರೀಗ ಮತ್ತೆ ಒಮದಾಗಿದ್ದಾರೆ. ಈ ಬಗ್ಗೆ ನಟಿ ಮತ್ತು ಗಾಯಕಿ ಜೆನ್ನಿಫರ್ ಲೋಪೆಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮ್ಮ ಸಂಬಂಧದ ಬಗ್ಗೆ ತೆರೆದುಕೊಂಡರು ಮತ್ತು ನಟನೊಂದಿಗೆ ಇರಲು ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ಹೇಳಿದರು."ನಾನು ಅವನೊಂದಿಗೆ ಇರಲು ತುಂಬಾ ಅದೃಷ್ಟವಂತಳು ಮತ್ತು ಸಂತೋಷ ಹಾಗೂ ಹೆಮ್ಮೆಯನ್ನು ಅನುಭವಿಸುತ್ತೇನೆ" ಎಂದು ಪೀಪಲ್ ಜೊತೆಗಿನ ಸಂದರ್ಶನದಲ್ಲಿ ಜೆನ್ನಿಫರ್ ಹೇಳಿದರು.

ಇದೊಂದು ಸುಂದರವಾದ ಪ್ರೇಮ ಕಥೆ ಎಂದ ಜೆನ್ನಿಫರ್​!

"ಇದೊಂದು ಸುಂದರವಾದ ಪ್ರೇಮಕಥೆಯಾಗಿದೆ, ಅದು ನಮಗೆ ಎರಡನೇ ಅವಕಾಶ ಸಿಕ್ಕಿತು," ಎಂದು ಅಮೆರಿಕದ ನಟಿ ಹಾಗೂ ಗಾಯಕಿ ಬೆನ್ ಅಫ್ಲೆಕ್ ಅವರೊಂದಿಗಿನ ಪ್ರಣಯದ ಬಗ್ಗೆ ಮಾತನಾಡುವಾಗ ಸೇರಿಸುವುದನ್ನು ಮರೆಯಲಿಲ್ಲ.‘ಸಂತೋಷ ಮತ್ತು ಪ್ರೀತಿಯ ಸಂಬಂಧದಲ್ಲಿರಲು ನಾನು ತುಂಬಾ ಸಂತೋಷ ಮತ್ತು ಅದೃಷ್ಟಶಾಲಿಯಾಗಿದ್ದೇನೆ ಮತ್ತು ಅದನ್ನು ರಕ್ಷಿಸಲು ಹಾಗೂ ಅದನ್ನು ಸುರಕ್ಷಿತವಾಗಿರಿಸಲು ನಾನು ಎಲ್ಲವನ್ನೂ ಮಾಡಲು ಬಯಸುತ್ತೇನೆ’ ಎಂದು ಜೆನ್ನಿಫರ್ ಲೋಪೆಜ್ ಹೇಳಿದರು.

ಇದನ್ನೂ ಓದಿ: ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಸಿನಿಮಾ ಜೀವನ ಹಾಳು ಮಾಡಿಕೊಂಡ ಬಾಲಿವುಡ್ ನಟಿಯರು

ಡೇಟಿಂಗ್​​ ಮಾಡುವಾಗ ಭಯ ಪಟ್ಟಿದ್ರಂತೆ ನಟಿ!

ಕಳೆದ ವರ್ಷ ಮತ್ತೆ ಇಬ್ಬರೂ ಡೇಟಿಂಗ್ ಮಾಡಲು ಆರಂಭಿಸಿದಾಗ ತಾನು "ಸ್ವಲ್ಪ ಭಯವನ್ನು ಹೊಂದಿದ್ದೆ" ಎಂದು ಜೆನ್ನಿಫರ್ ಲೋಪೆಜ್‌ ಒಪ್ಪಿಕೊಂಡರು. ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ಮೂಲತಃ ತಮ್ಮ ಗಿಗ್ಲಿ ಚಿತ್ರದ ಸೆಟ್‌ಗಳಲ್ಲಿ ಭೇಟಿಯಾದ ನಂತರ 2002ರಲ್ಲಿ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ನವೆಂಬರ್ 2002ರಲ್ಲಿ ಅವರ ನಿಶ್ಚಿತಾರ್ಥದ ನಂತರ ಜೆನ್ನಿಫರ್ ಹಾಗೂ ಬೆನ್‌ ಅಫ್ಲೆಕ್‌ ಸೆಪ್ಟೆಂಬರ್ 2003ರಲ್ಲಿ ವಿವಾಹವಾಗುವುದಾಗಿ ಹೇಳಿಕೊಂಡಿದ್ದರು. ಆದರೆ, ಅದನ್ನು ನಂತರ ಮುಂದೂಡಲಾಯಿತು. ಬಳಿಕ ಈ ಸ್ಟಾರ್‌ ಜೋಡಿಗಳು ಜನವರಿ 2004ರಲ್ಲಿ ತಮ್ಮ ನಿಶ್ಚಿತಾರ್ಥವನ್ನು ರದ್ದುಗೊಳಿಸಿದ್ದರು.

ಇದನ್ನೂ ಓದಿ : ಹಾಫ್ ಸೆಂಚುರಿ ಬಾರಿಸಿದ್ರಪ್ಪಾ ನಮ್ Sandalwood 'ಅಧ್ಯಕ್ಷ'ರು!

ಇನ್ನು, ಕಳೆದ ವರ್ಷ, ಜೆನ್ನಿಫರ್ ಲೋಪೆಜ್‌ ಹಾಗೂ ಬೆನ್‌ ಅಫ್ಲೆಕ್‌ ಇಬ್ಬರೂ ತಮ್ಮ ಪಾರ್ಟ್‌ನರ್‌ರೊಂದಿಗೆ ಬ್ರೇಕಪ್‌ ಆಗಿದ್ದರು. ಜೆನ್ನಿಫರ್ ಲೋಪೆಜ್ ಅಲೆಕ್ಸ್ ರೋಡ್ರಿಗಸ್ ಜೊತೆ ಡೇಟಿಂಗ್ ಮಾಡುತ್ತಿದ್ದರೆ, ಬೆನ್ ಅಫ್ಲೆಕ್ ನಟಿ ಅನಾ ಡಿ ಅರ್ಮಾಸ್ ಅವರ ಜತೆ ಸುತ್ತಾಡುತ್ತಿದ್ದರು. ಆ ಬ್ರೇಕಪ್‌ಗಳ ಬಳಿಕ ಈಗ ಈ ಸ್ಟಾರ್‌ ಜೋಡಿ ಮತ್ತೆ ಒಂದಾಗಿದ್ದು ಈ ಬಾರಿ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ವಿಶ್ವಾಸ ಹೊಂದಿದ್ದಾರೆ.
Published by:Vasudeva M
First published: