ತಮಿಳು ಖ್ಯಾತ ನಟ ಧನುಷ್​​, ವಿಜಯಕಾಂತ್​ ಮನೆಗೆ ಬಾಂಬ್ ಬೆದರಿಕೆ ಕರೆ; ಫೋನ್ ಮಾಡಿದ್ದು ಯಾರು ಗೊತ್ತಾ?

ನಟ ಧನುಷ್ ಅಭಿರಾಮ್​ಪುರದಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ವಿಜಯಕಾಂತ್ ವಿರಂಬಕಮ್​ ಮನೆಯಲ್ಲಿ ನೆಲೆಸಿದ್ದಾರೆ.

ನಟ ಧನುಷ್​​, ವಿಜಯಕಾಂತ್

ನಟ ಧನುಷ್​​, ವಿಜಯಕಾಂತ್

 • Share this:
  ಕಳೆದ ಮೂರು ತಿಂಗಳ ಹಿಂದೆ ತಮಿಳಿನ ಖ್ಯಾತ ನಟ ವಿಜಯ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಹುಸಿ ಬಾಂಬ್ ಬೆದರಿಕೆಯ ಕರೆಯೊಂದು ಬಂದಿತ್ತು. ಇದೀಗ ನಟ ಧನುಷ್​ ಮತ್ತು ವಿಜಯಕಾಂತ್​​ಗೂ  ಕೂಡ ಅಂತಹದೇ ಬೆದರಿಕೆ ಕರೆ ಬಂದಿದೆ. ಈ ವಿಚಾರ ಕಾಲಿವುಡ್ ಚಿತ್ರ ನಟರನ್ನ ಭಯಬೀತರನ್ನಾಗಿದೆ. ನಟ ರಜನಿಕಾಂತ್, ಸೂರ್ಯ ಕೂಡ ಹುಸಿ ಬಾಂಬ್ ಬೆದರಿಕೆ ಕರೆಯನ್ನು ಎದುರಿಸಿದ್ದರು. ಮಾತ್ರವಲ್ಲದೆ ಪೊಲೀಸರಿಗೆ ತಿಳಿಸಿದ್ದರು. ಇದೀಗ ಧನುಷ್ ಮತ್ತು ನಟ ವಿಜಯಕಾಂತ್​  ಅವರ ಮನೆಗೆ ಬಾಂಬ್ ಇಡುವುದಾಗಿ ಕರೆ ಬಂದಿದೆ. ಮಾನಸಿಕ ವ್ಯಕ್ತಿಯೊಬ್ಬ ಈ ಹುಸಿ ಬಾಂಬ್​ ಕರೆ ಮಾಡಿದ್ದು, ಬೆದರಿಸಿದ್ದಾನೆ ಎಂದು ತಿಳಿದುಬಂದಿದೆ.

  ನಟ ಧನುಷ್ ಅಭಿರಾಮ್​ಪುರಂನಲ್ಲಿ ವಾಸಿಸುತ್ತಿದ್ದಾರೆ. ಅಂತೆಯೇ ವಿಜಯಕಾಂತ್ ವಿರಂಬಕಮ್​ ಮನೆಯಲ್ಲಿ ನೆಲೆಸಿದ್ದಾರೆ. ಈ ವೊದಲು ನಟ ರಜನಿಕಾಂತ್​ಗೆ ಕರೆ ಮಾಡಿದ್ದ ಮಾನಸಿಕ ವ್ಯಕ್ತಿಯೂ ಈ ಇಬ್ಬರು ನಟರಿಗೆ ಹುಸಿ ಬಾಂಬ್ ಬೆದರಿಕೆಯ ಕರೆ ಮಾಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

  ಸದ್ಯ ಹುಸಿ ಬಾಂಬ್ ಕರೆ ಮಾಡಿದ್ದ ಮಾನಸಿಕ ವ್ಯಕ್ತಿ ಪೊಲೀಸರಿಂದ ತಲೆಮರೆಸಿಕೊಂಡಿದ್ದಾನೆ.  ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
  Published by:Harshith AS
  First published: